ಬೊಯಿಸರ್ ನಿತ್ಯಾನಂದ ಮಂದಿರದ ಪ್ರತಿಷ್ಠಾಪನ ದಿನಾಚರಣೆ
Team Udayavani, Jan 2, 2018, 3:35 PM IST
ಮುಂಬಯಿ: ಬೊಯಿಸರ್‌ನ ಸದ್ಗುರು ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ಏಳನೇ ವಾರ್ಷಿಕ ಪ್ರತಿಷ್ಠಾಪನ ದಿನಾಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಡಿ. 27ರಂದು ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು. ಸ್ಥಳೀಯ ನಿತ್ಯಾನಂದ ಭಜನ ಮಂಡಳಿ ಹಾಗೂ ಆಮಂತ್ರಿತ ಭಜನ ತಂಡಗಳಿಂದ ಭಕ್ತಿ ಭಜನ ಕಾರ್ಯಕ್ರಮ ನೆರವೇರಿತು. ಸಂಜೆ 6ರಿಂದ ಸದ್ಗುರು ಸ್ವಾಮಿ ನಿತ್ಯಾನಂದರ ಪಲ್ಲಕ್ಕಿಯ ಶೋಭಾಯಾತ್ರೆಯು ಸ್ಥಳೀಯ ಬುಡಕಟ್ಟು ವಾರಲಿ ಜನಾಂಗದ ತಾರಾಪ ನೃತ್ಯ, ಯಕ್ಷಗಾನ, ಚೆಂಡೆ-ಬಳಗದೊಂದಿಗೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಥಾಣೆ ಮಹಾನಗರ ಪಾಲಿಕೆಯ ಮೇಯರ್ ಮೀನಾಕ್ಷೀ ರಾಜೇಂದ್ರ ಶಿಂಧೆ ಅವರು ಉಪಸ್ಥಿತರಿದ್ದರು. ಅವರನ್ನು ಸದ್ಗುರು ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿಯ ಪರವಾಗಿ ಸುಹಾಸಿನಿ ದಾಮೋದರ ನೈಕ್, ನವನೀತಾ ಎಸ್. ಕೋಟ್ಯಾನ್ ಹಾಗೂ ಶಕುಂತಲಾ ವಿ. ಶೆಟ್ಟಿ ಅವರು ಶಾಲು ಹೊದೆಸಿ, ಮರಾಠ ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮೀನಾಕ್ಷೀ ರಾಜು ಶಿಂಧೆ ಅವರು, ಸಣ್ಣ ಊರು ಇದಾಗಿರಬಹುದು ಎಂದು ಭಾವಿಸಿದರೂ, ಬೊಯಿಸರ್ ಪರಿಸರವು ಬಹಳಷ್ಟು ಬೆಳವಣಿಗೆಯನ್ನು ಕಂಡಿದೆ. ಥಾಣೆಯ ಮೇಯರ್ ಆಗಿ ಆಯ್ಕೆಯಾಗುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೂಲದ ಮಹಿಳೆಯಾದ ನನ್ನ ಕಾರ್ಯಕ್ಷಮತೆಯ ಬಗ್ಗೆ ಹಲವಾರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಿವಸೇನಾ ನಗರ ಸೇವಕಿಯಾಗಿ ಮೂರು ಬಾರಿ ಆಯ್ಕೆಯಾಗಿ ಬಂದ ನನ್ನ ಸಮಾಜ ಸೇವೆ ಹಾಗೂ ಜನ ಸಂಪರ್ಕವನ್ನು ನೋಡಿ ಸಚಿವರಾದ ಏಕನಾಥ ಖಡ್ಸೆಜೀ, ಶಿಂಧೆಯವರ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನವು ಲಭಿಸಿದ್ದು, ಈ ವಿಶೇಷ ಹುದ್ಧೆಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗಿದೆ. ಥಾಣೆ ನಗರ ವಾಸಿಗಳ ಪ್ರೀತಿ ಹಾಗೂ ವಿಶ್ವಾಸ ಲಭಿಸಿದೆ. ಪಾಲ^ರ್ ಜಿಲ್ಲೆಯಲ್ಲಿ ಇಷ್ಟೊಂದು ಕನ್ನಡಿಗರು ನೆಲೆಸಿರುವುದು ಗೊತ್ತಿರಲಿಲ್ಲ. ದಿ| ದಾಮೋದರ ನೈಕ್ ಅವರ ಸಂಕಲ್ಪದಂತೆ ಲೋಕಾರ್ಪಣೆಗೊಂಡ ಈ ಮಂದಿರವು ಒಂದು ಆಧ್ಯಾತ್ಮಿಕ-ಧಾರ್ಮಿಕ ಕೇಂದ್ರವೆನಿಸಿದೆ. ಸರ್ವ ಭಾಷಿಕ ಹಾಗೂ ಇತರ ಪ್ರಾಂತೀಯರು ಭಾಗವಹಿಸುವ ಒಂದು ಸಾಂಸ್ಕೃತಿಕ ಕೇಂದ್ರ ಆಗಿರುವುದನ್ನು ಗಮನಿಸಿ ಸಂತೋಷವಾಗುತ್ತಿದೆ. ಇಲ್ಲಿ ನೀವೆಲ್ಲರೂ ತೋರಿದ ಪ್ರೀತ್ಯಾಧರಗಳಿಂದ ಈ ದಿನವು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಅತಿಥಿಯಾಗಿ ಪಾಲ್ಗೊಂಡ ಥಾಣೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಅವರು ಮಾತನಾಡಿ, ನಮ್ಮವರಾದ ಮೇಯರ್ ಮೀನಾಕ್ಷೀ ಶಿಂಧೆಯವರ ಬಗ್ಗೆ ನಮಗೆ ಹೆಮ್ಮೆ-ಅಭಿಮಾನವಿದೆ. ವಿವಿಧ ಪ್ರಾಂತಗಳಿಂದ ಬಂದು ನೆಲೆಸಿರುವ ಜನರಿಗೆ ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ದರ್ಶನಭಾಗ್ಯದ ಅನುಕೂಲಕ್ಕೆ ಪ್ರೇರಣೆ ನೀಡಿದ ಸ್ಥಾಪಕ ದಿ| ದಾಮೋದರ ನೈಕ್ ಅವರ ಸೇವೆಯನ್ನು ಸ್ಮರಿಸಿದರು.
ಬೊಯಿಸರ್‌ನ ಪ್ರತಿಭಾವಂತ ವಿದ್ಯಾರ್ಥಿನಿ ವಿನಿಶಾ ವಿನಯ್ ಅಡಪ ಅವರ ಪರವಾಗಿ ಪಾಲಕರಾದ ಸುನೀತಾ ಮತ್ತು ವಿನಯ್ ಅಡಪ ದಂಪತಿಯನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿತ್ಯಾನಂದ ಭಕ್ತಮಂಡಳಿಯ ಸತ್ಯಾ ಕೋಟ್ಯಾನ್, ಶ್ರೀನಿವಾಸ ಕೋಟ್ಯಾನ್, ಉದ್ಯಮಿಗಳಾದ ರಘುನಾಥ ರೈ, ಭಾಸ್ಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ತಾರಾನಾಥ ಅಡಪ, ಭರತ್ ಶೆಟ್ಟಿ, ಬೊಯಿಸರ್-ತಾರಾಪುರ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಭುಜಂಗ ಕೆ. ಶೆಟ್ಟಿ, ಡಹಾಣೂ ಹೊಟೇಲಿಯರ್ ಅಸೋಸಿಯೇಶನ್‌ನ ಅಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಶ್ರೀ ನಿತ್ಯಾನಂದ ಮಹಿಳಾ ಭಜನ ಮಂಡಳಿಯ ಸದಸ್ಯರು, ವಿವಿಧ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗುರುಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಂದರ ಸ್ವಾಮಿ, ರಮಾನಂದ ಪೂಜಾರಿ, ಸುಪ್ರೀತ್ ಶೆಟ್ಟಿ ಹಾಗೂ ಗಣೇಶ್ ಆಳ್ವ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಪಿ.ಆರ್.ರವಿಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.