ಬೋಂಬೆ ಬಂಟ್ಸ್ ಅಸೋಸಿಯೇಶನ್: ಪದಗ್ರಹಣ
Team Udayavani, Nov 9, 2017, 2:56 PM IST
ಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್ ಇದರ 2017-2019ನೇ ಸಾಲಿನ ನೂತನ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮವು ನ. 5ರಂದು ಪೂರ್ವಾಹ್ನ ಸಯಾನ್‌ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ನಿರ್ಗಮನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ನೇಮಕ ಗೊಂಡ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ಅವರನ್ನು ನಿರ್ಗಮನ ಅಧ್ಯಕ್ಷರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ, ಅಧಿಕಾರ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಅಸೋಸಿಯೇಶನ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿಯಾಗಿ ಆಯ್ಕೆಗೊಂಡ ಸಿಎ ವಿಶ್ವನಾಥ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ನೇಮಕಗೊಂಡ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂ ಸುಂದರ್ ಶೆಟ್ಟಿ, ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆ
ಗೊಂಡ ಶಾರದಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಚರಣ್ ಆರ್. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಸ್ವಾಗತಿಸಿ, ಶುಭ ಹಾರೈಸಲಾಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ಅವರು, ನೂತನಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆಮಾಡಿದ ಅಸೋಸಿಯೇಶನ್‌ನಮಾಜಿ ಅಧ್ಯಕ್ಷರು, ಟ್ರಸ್ಟಿಗಳಿಗೆ ಹಾಗೂ ಸದಸ್ಯ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಬೋಂಬೆ ಬಂಟ್ಸ್ ಅಸೋಸಿ ಯೇಶನ್ ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಇನ್ನಿತರ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದಿದೆ. ನಮ್ಮ ಸಂಸ್ಥೆಯ ಸಾಧನೆ ನಿಂತ ನೀರಾಗದೆ ಹರಿವ ನದಿಯಾಗಬೇಕು. ಆದ್ದರಿಂದ ನೂತನ ಕಾರ್ಯಕಾರಿ ಸಮಿತಿಯು ಅಸೋಸಿಯೇಶನ್‌ನ ಯೋಜನೆ- ಯೋಚನೆಗಳಿಗೆ ಮತ್ತಷ್ಟು ಹೊಳಪು ನೀಡುವ ಕಾರ್ಯದಲ್ಲಿ ತೊಡಗಬೇಕು. ಸಂಸ್ಥೆಯ ಹೆಸರನ್ನು ವಿಶ್ವಮಟ್ಟದಲ್ಲಿ ಬೆಳಗುವಂತೆ ಮಾಡಬೇಕು.
ಒಗ್ಗಟ್ಟು ಮತ್ತು ಒಮ್ಮತದಿಂದ ನಾವೆಲ್ಲರು ಒಂದಾಗಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಹಿರಿಯ ಮಾರ್ಗದರ್ಶನ, ಮಾಜಿ ಅಧ್ಯಕ್ಷರ ಸಲಹೆಯ ಮೇರೆಗೆ ಅಸೋಸಿಯೇಶನ್‌ನ ಧ್ಯೇಯೋದ್ದೇಶಗಳನ್ನು ಈಡೇರಿಸೋಣ. ಅದಕ್ಕಾಗಿ ಕಾರ್ಯಕಾರಿ ಸಮಿತಿ, ಸದಸ್ಯ ಬಾಂಧವರ, ಹಿತೈಷಿಗಳ, ದಾನಿಗಳ ಪ್ರೋತ್ಸಾಹ ಸಹಕಾರ ಸದಾಯಿರಲಿ ಎಂದರು.
ನಿರ್ಗಮನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ ಅವರು ಮಾತನಾಡಿ, ನನ್ನ ಅವಧಿಯಲ್ಲಿ ಸಂಸ್ಥೆಯನ್ನು ಅಭಿವೃದ್ಧಿಯತ್ತ ಸಾಗಿಸಲು ಪ್ರಯತ್ನ ಮೀರಿ ಶ್ರಮಿಸಿದ್ದೇನೆ. ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕೃತಜ್ಞತೆಗಳು. ಭವಷ್ಯದಲ್ಲೂ ನೂತನ ಸಮಿತಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ. ನೂತನ ಸಮಿತಿಯಿಂದ ಅಸೋಸಿಯೇಶನ್ ಮತ್ತುಷ್ಟು ಪ್ರಕಾಶಮಾನವಾಗಿ ಕಂಗೊಳಿಸಲಿ ಎಂದು ನುಡಿದು ಶುಭ ಹಾರೈಸಿದರು.
ಮಾಜಿ ಅಧ್ಯಕ್ಷರು ಮತ್ತು ಸಂಸ್ಥೆಯ ಹಿರಿಯರಾದ ಬಾಬು ಎನ್. ಶೆಟ್ಟಿ ಎನ್. ಸಿ. ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ನ್ಯಾಯವಾದಿ ಆನಂದ ಶೆಟ್ಟಿ, ನ್ಯಾಯವಾದಿ ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸರಳಾ ಬಿ. ಶೆಟ್ಟಿ, ಸುಶೀಲಾ ಶೆಟ್ಟಿ, ಆಶಾ ಶೆಟ್ಟಿ, ಶೈಲಜಾ ಶೆಟ್ಟಿ, ವಿನುತಾ ಶೆಟ್ಟಿ, ಹೀರಾ ಶೆಟ್ಟಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವೈಶಾಲಿ ಎ. ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ನೂತನ ಗೌರವ ಪ್ರಧಾನ ಕಾರ್ಯ ದರ್ಶಿಯಾಗಿ ನೇಮಕಗೊಂಡ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಉತ್ತಮ ಕಾರ್ಯವೆಸಗಿದ ಆತ್ಮತೃಪ್ತಿ ನನಗಿದೆ. ಇದೀಗ ಮತ್ತೂಮ್ಮೆ ಅವಧಿಗೆ ನನ್ನನ್ನು ಗೌರವ ಪ್ರಧಾನ ಕಾರ್ಯದರ್ಶಿಯನ್ನಾಗಿ ಪುನರಾಯ್ಕೆ ಮಾಡಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ನುಡಿದು, ಎಲ್ಲರ ಸಹಕಾರವನ್ನು ಬಯಿಸಿದರು.
ನೂತನ ಗೌರವ ಪ್ರಧಾನ ಕೋಶಾಧಿಕಾರಿಯಾಗಿ ಆಯ್ಕೆ ಗೊಂಡ ಸಿಎ ವಿಶ್ವನಾಥ ಎಸ್. ಶೆಟ್ಟಿ ಮಾತನಾಡಿ, ಸಂಸ್ಥೆಯ ಮುಖಾಂತರ ಸಮಾಜ ಮತ್ತೂಮ್ಮೆ ಸಮಾಜ ಸೇವೆಗೆ ಅವಕಾಶಮಾಡಿ ಕೊಟ್ಟ ಎಲ್ಲರಿಗೂ ವಂದನೆಗಳು. ಮುಂದಿನ ಅವಧಿಯಲ್ಲಿ ನನ್ನಿಂದಾಗುವಷ್ಟು ಕಾರ್ಯಗೈಯಲು ಪ್ರಯತ್ನಿಸುತ್ತೇನೆ. ಸಮಾಜ ಬಾಂಧವರ, ಸದಸ್ಯ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.
ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ ಅವರಿಗೆ ಪುಷ್ಪಗುತ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ವೈಶಾಲಿ ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷ ಚರಣ್ ಆರ್. ಶೆಟ್ಟಿ ಅವರಿಗೆ ಪುಷ್ಪಗುತ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ನೂತನ ಸಮಿತಿಯ ಪದಾಧಿಕಾರಿ
ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ವಿಶೇಷ ಆಮಂತ್ರಿ ತರು, ನಿರ್ಗಮನ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ