ಪುಣ್ಯಕಲಶಗಳೊಂದಿಗೆ ಗೋಕುಲಕ್ಕೆ ಬಂದ ಗೋಪಾಲಕೃಷ್ಣ
Team Udayavani, May 9, 2022, 12:11 PM IST
ಮುಂಬಯಿ: ಬಾಂಬೇ ಸೌತ್ ಕೆನರಾ ಬ್ರಾಹ್ಮಿಣ್ಸ್ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸೇವೆಯೊಂದಿಗೆ ಪುನರಾಭಿವೃದ್ಧಿಗೊಳಿಸಿ ಸಾಯನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಗೋಕುಲ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಯೂ ಧಾರ್ಮಿಕ, ದೇವತಾ ಕಾರ್ಯಕ್ರಮಗಳು ಹಾಗೂ ಹೊರೆಕಾಣಿಕೆ ಶೋಭಾಯಾತ್ರೆ ರವಿವಾರ ಜರಗಿತು.
ನವಿಮುಂಬಯಿ ನೆರೂಲ್ ಆಶ್ರಯದಲ್ಲಿನ ಬಾಲಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬಚಾರ ಕಲಶ ಸಹಿತ ತತ್ವಹೋಮ ಇತ್ಯಾದಿಗಳನ್ನು ವೈಧಿಕರು ಶಾಸ್ತ್ರೋಕ್ತ ವಾದ ಪೂಜೆ ಪುರಸ್ಕಾರ ನೆರವೇರಿಸಿ ಕೃಷ್ಣೆ,ಕ್ಯರಾದ ಅದಮಾರು ಶ್ರೀ ವಿಬುಧೇಶ ತೀರ್ಥರು ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥರ ದೇಣಿಗೆ ಮತ್ತು ಅನುಗ್ರಹ ಸ್ಮರಿಸಿದರು. ಬಳಿಕ ಭಕ್ತರ ಭಕ್ತಿಪೂರ್ವಕ ಭಜನೆ, ಸುವಾಸಿನಿಯರ ಸಂಕೀರ್ತನೆ ಮತ್ತು ಪುಣ್ಯಕಲಶಗಳೊಂದಿಗೆ ಕೊಂಬು ಕಹಳೆ, ವಾದ್ಯಘೋಷ ನೀನಾದಗಳೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿಸಿ ಬಳಿಕ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಬಿಂಬ ಚಾಲನೆಯೊಂದಿಗೆ ಸ್ಥಳಾಂತರ ಕಾರ್ಯ ನಡೆಸಿ ಹಾಲು ಬಿಳುಪಿನ, ಹಸನ್ಮುಖೀ ಶ್ರೀ ಗೋಪಾಲ ಕೃಷ್ಣನ ಅಮೃತ ಶಿಲಾಮೂರ್ತಿಯನ್ನು ಸಕಲ ಪೂಜಾಧಿಗಳೊಂದಿಗೆ ಪವಿತ್ರೀಕರಿಸಿ ಸಾಯನ್‌ನ ಮೂಲಾಲಯ ಗೋಕುಲಕ್ಕೆ ನಿರ್ಗಮಿಸಲಾಯಿತು. ಬಿಎಸ್‌ಕೆಬಿಎ ಮತ್ತು ಜಿಪಿಟಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಗೋಕುಲದ ಆರಾಧ್ಯದೇವರಾದ ಶ್ರೀ ಗೋಪಾಲಕೃಷ್ಣ ದೇವರ ಉತ್ಸವಮೂರ್ತಿಯನ್ನು ಭಕ್ತಿಪೂರ್ವಕವಾಗಿ ಕರೆತಂದರು.
ಬೆಳಗ್ಗೆ ಗೋಕುಲದಲ್ಲಿ ದೇವತಾ ಪ್ರಾರ್ಥನೆ, ತೋರಣ ಮಹೂರ್ತ, ಉಗ್ರಣ ಮುಹೂರ್ತ, ಆಚಾರ್ಯಾದಿ ಋತ್ವಿಗ್ರಹಣ, ಮಹಾ ಸಂಕಲ್ಪ, ಪುಣ್ಯಾಹವಾಚನ, ಅರಣಿ ಮಥನ, ಭದ್ರದೀಪ ಪ್ರತಿಷ್ಠೆ, ಬ್ರಹ್ಮ ಕೂರ್ಚ ಹೋಮ, ದೇವಾ ನಂದಿ, ಕಂಕಣ ಬಂಧ, ಗಣಹೋಮ ನಡೆಸಲಾಗಿ ಸಂಜೆ ಶ್ರೀಗೋಪಾಲ ಕೃಷ್ಣನ ಮೂರ್ತಿಯನ್ನು ಮೂಲಾಲಯ ಗೋಕುಲಕ್ಕೆ ಬರಮಾಡಿಕೊಳ್ಳಲಾಯಿತು. ಆ ಮೂಲಕ ಯು.ವಿ.ಉಪಾಧ್ಯಾಯ ಅವರ ಮೇಲುಸ್ತುವಾರಿ ಕೆಯಲ್ಲಿ (1962) ಸ್ಥಾಪಿತ ಶ್ರೀಕೃಷ್ಣ ಮಂದಿರದಲ್ಲಿ ರಾಜಸ್ಥಾನೀ ಭಕ್ತರೋರ್ವರು ಕೊಡಮಾಡಲ್ಪಟ್ಟ ಶ್ರೀಕೃಷ್ಣನ ಶಿಲಾಮೂರ್ತಿ ಮತ್ತೆ ತನ್ನ ಮೂಲಸ್ಥಾನ ಅಲಂಕರಿಸಿತು. ಗೋಕುಲದ ಹಿರಿಯ ಪುರೋಹಿತ ವಿದ್ವಾನ್ ವೇ| ಮೂ| ಎಡಪದವು ಮುರಳೀಧರ ತಂತ್ರಿ, ಪ್ರಧಾನ ಆರ್ಚಕರಾಗಿದ್ದು, ಪುರೋಹಿತರಾದ ಕೃಷ್ಣರಾಜ ಉಪಾಧ್ಯಾಯ, ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ಭಟ್, ವಿದ್ವಾನ್ ಪಂಜ ಭಾಸ್ಕರ್ ಭಟ್, ಗೋಪಾಲ ಭಟ್, ನಾಗರಾಜ ಐತಾಳ ಸಹ ಪುರೋಹಿತರಾಗಿ ಇತರ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು.
ಕಟೀಲು ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಉಗ್ರಣ ಪೂಜೆ ನೇರವೇರಿಸಿದರು. ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದರು.
ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ಅದಮಾರು ಕಿರಿಯ ಯತಿವರ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ತೀರ್ಥರು ದಿವ್ಯ ಉಪಸ್ಥಿತಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಾರಥ್ಯದಲ್ಲಿ, ತುಳು ಕೂಟ ಫೌಂಡೇಶನ್ ನಾಲಸೋಪಾರ ಅಧ್ಯಕ್ಷ ಶಶಿಧರ್ ಕೆ.ಶೆಟ್ಟಿ ಇನ್ನಂಜೆ ಸಹಯೋಗದಲ್ಲಿ ಅಪರಾಹ್ನ ಸಾಯನ್‌ನ ಸೋಮಯ್ಯ ಕ್ರೀಡಾ ಮೈದಾನದಿಂದ ಶೋಭಾಯಾತ್ರೆ ಆರಂಭಗೊಳಿಸಲಾಯಿತು. ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಐಕಳ ಹರೀಶ್ ಶೆಟ್ಟಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಶ್ರೀಫಲಗಳನ್ನು ಹೊಡೆದು ಶೋಭಾಯಾತ್ರೆಗೆ ಚಾಲನೆಯನ್ನಿತ್ತರು.
ಸಮಾಜ ಸೇವಕರ ಸೇರುವಿಕೆ, ಭಕ್ತರ ಕೂಡುವಿಕೆ ಯೊಂದಿಗೆ ಸಾರ್ವಜನಿಕವಾಗಿ ಶ್ರೀ ಗೋಪಾಲಕೃಷ್ಣ ದೇವರನ್ನು ಸಾಂಸ್ಕೃತಿಕ ಕಲಾ ಪ್ರಕಾರಗಳೊಂದಿಗೆ ಹನುಮಾನ್ ಮಂದಿರಕ್ಕೆ ಆದರಿಸಿ ಅಲ್ಲಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಸಂಜೆ ಶ್ರೀ ಗೋಪಾಲ ಕೃಷ್ಣನನ್ನು ಭಕ್ತಿಪೂರ್ವಕವಾಗಿ ಗೋಕುಲಕ್ಕೆ ಬರಮಾಡಿ ಕೊಳ್ಳಲಾಯಿತು. ನಂತರ ಪಂಚಗವ್ಯ ಮಿಲನ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ಅಂಕುರಾರ್ಪಣೆ, ಅಸ್ತ್ರಕಲಶ ಪ್ರತಿಷ್ಠೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ಮಹಾಪೂಜೆಗಳು ನೆರವೇರಿಸಲ್ಪಟ್ಟವು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಉಪಾಧ್ಯಕ್ಷ ಅಶೋಕ್ ಎ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ರಾಮಣ್ಣ ದೇವಾಡಿಗ, ಭಂಡಾರಿ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಉದ್ಯಮಿಗಳಾದ ರವಿ ಎಸ್.ಶೆಟ್ಟಿ, ಸುರೇಶ್ ಕಾಂಚನ್, ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ರವೀಂದ್ರನಾಥ ಎಂ.ಭಂಡಾರಿ, ಚಿತ್ರಾ ಆರ್.ಶೆಟ್ಟಿ , ಮಾಜಿ ನಗರ ಸೇವಕ ವಿಜಯ್ ತಾಂಡೆಲ್ ಸೇರಿದಂತೆ ವಿವಿಧ ಸಂಘಗಳ ಮುಖ್ಯಸ್ಥರು ಉಪಸ್ಥಿತರಿದ್ದು, ಐಕಳ ಹರೀಶ್ ಶೆಟ್ಟಿ ಅವರು ಗೌರವಿಸಿದರು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಸಂಸ್ಥೆಗಳ ಪಾಲಿನ ಹೊರೆಕಾಣಿಕೆಯನ್ನು ಗೋಕುಲಕ್ಕೆ ಒಪ್ಪಿಸಿದರು. ಶ್ರೀ ನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನದ ಪ್ರತ್ಯಕ್ಷಿತೆ ನಡೆಯಿತು.
ಬಿಎಸ್‌ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ ಮತ್ತು ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿ ಪಿ.ಬಿ ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್‌ನ
ವಿಶ್ವಸ್ಥ ಸದಸ್ಯರುಗಳಾದ ಎ. ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಎಸ್.ಎನ್. ಉಡುಪ ಜೆರಿಮೆರಿ, ಮಾಜಿ ಅಧ್ಯಕ್ಷ ಸುಬ್ಬಣ್ಣ ರಾವ್, ಗುರುರಾಜ ಭಟ್, ಜಿತೇಂದ್ರ ಗೌಡ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.
ನಗರಗಳ ಹಲವಾರು ಸಂಘಸಂಸ್ಥೆಗಳು, ಅಪಾರ ಸಂಖ್ಯೆಯ ಭಕ್ತಾದಿಗಳು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಹೊರೆಕಾಣಿಕೆಯನ್ನು ಶ್ರೀಕೃಷ್ಣನಿಗೆ ಒಪ್ಪಿಸಿ ಗೋಕುಲದ ಬ್ರಹ್ಮ ಕಲಶೋತ್ಸವದ ಚಾಲನೆಗೆ ಸಾಕ್ಷಿಯಾದರು.
-ಚಿತ್ರ ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.