ಎರಡು ಚಿನ್ನ ಮುಡಿಗೇರಿಸಿಕೊಂಡ ಸುಚರಿತಾ ಶೆಟ್ಟಿ
Team Udayavani, Dec 6, 2017, 4:34 PM IST
ಮುಂಬಯಿ: ಬೋಂಬೆ ಯಂಗ್‌ಮೆನ್ಸ್ ಕ್ರಿಶ್ಚಿಯನ್ ಅಸೋಸಿ ಯೇಷನ್ (ವೈಎಂಸಿಎ) ವತಿಯಿಂದ ನ. 14ರಿಂದ ನ. 17ರವರೆಗೆ ನಗರದ ಮರೀನ್ ಲೈನ್ಸ್ ಯುನಿವರ್ಸಿಟಿ ನ್ಪೋಟ್ಸ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ 42ನೇ ಆ್ಯತ್ಲೆಟಿಕ್ ಮೀಟ್ -2017ರಲ್ಲಿತುಳು-ಕನ್ನಡತಿ ಸುಚರಿತಾ ಶೆಟ್ಟಿ ಕರೇಲಿಯಾ ಅವರು ದಾಖಲೆಯೊಂದಿಗೆ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೂವತ್ತೆ$çದು ವರ್ಷ ಮೇಲ್ಪಟ್ಟವರ ಮಹಿಳಾ ವಿಭಾಗದಲ್ಲಿ ನೂತನ ದಾಖಲೆ ಯೊಂದಿಗೆ 100 ಮೀ. ಓಟವನ್ನು 14.06 ಸೆಕೆಂಡಿನಲ್ಲಿ ಪೂರೈಸಿ ಚಿನ್ನದ ಪದಕ ಪಡೆದರೆ, ಶಾಟ್‌ಪುಟ್‌ನಲ್ಲಿ ನೂತನ ದಾಖಲೆಯೊಂದಿಗೆ ಚಿನ್ನವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅದೇ ರೀತಿ ನ. 19ರಂದು ನಗರದ ಮರೀನ್ ಲೈನ್ಸ್ ಯುನಿವರ್ಸಿಟಿ ನ್ಪೋಟ್ಸ್ ಮೈದಾನದಲ್ಲಿ ನಡೆದ ಮಾಸ್ಟರ್ಸ್ ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯಶಿಪ್ 2017ರಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 100 ಮೀ. ಓಟ, ಡಿಸ್ಕಸ್ ಥ್ರೋ ಮತ್ತು ಶಾಟ್‌ಪುಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
ಮಾಸ್ಟರ್ ಗೇಮ್ಸ್‌ನಲ್ಲಿ 1 ಚಿನ್ನ, 2ಬೆಳ್ಳಿ ಪದಕ
ಮೂಲತಃ ಪೊಸ್ರಾಲ್ ಕೊಟ್ರಪಾಡಿ ದಿ| ಶಂಕರ ಶೆಟ್ಟಿ ಮತ್ತು ತಾಳಿಪಾಡಿ ಪಾದೆಮನೆ ಕುಶಾಲ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸುಚರಿತಾ ಶೆಟ್ಟಿ ಅವರು ಆಸ್ಟ್ರೇಲಿಯದಲ್ಲಿ ನಡೆದ ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್-2015ರಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದು ಚಿನ್ನ, 2 ಬೆಳ್ಳಿಯೊಂದಿಗೆ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದರು.
2013-2014ನೇ ಸಾಲಿನಲ್ಲಿ ಜರಗಿದ ಮಾಸ್ಟರ್ಸ್ ನ್ಯಾಷನಲ್ ಅಥ್ಲೆಟಿಕ್ ಮೀಟ್‌ನಲ್ಲಿ 6 ಚಿನ್ನ, 2015 ರಲ್ಲಿ ಜರಗಿದ ಸ್ಟೇಟ್ ಮರ್ಕಂಟೈಲ್ ಆ್ಯತ್ಲೆಟಿಕ್ ಮೀಟ್‌ನಲ್ಲಿ 4 ಚಿನ್ನದ ಪದಕ, 2013 ರಲ್ಲಿ ನಡೆದ ರನ್ ಇಂಡಿಯಾರನ್ 10 ಕಿ. ಮೀ. ಮ್ಯಾರಥಾನ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರು ವರ್ಷ ಚಾಂಪಿಯನ್ ಆಗಿ ಮೂಡಿ ಬಂದಿರುವ ಇವರು ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರೀಡಾಳುಗಳಿಗೆ ತರಬೇತಿ
ಕ್ಯಾಥೆದ್ರಲ್ ಮತ್ತು ಜಾನ್ ಕೊನೊನ್ ಸ್ಕೂಲ್´‚ೊàರ್ಟ್ ಮುಂಬಯಿ ಇಲ್ಲಿ 13 ವರ್ಷಗಳ ಕಾಲ ಕ್ರೀಡಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯುನಿಕ್ಯೂ ನ್ಪೋಟ್ಸ್ ಅಕಾಡಮಿ ಎಂಬ ನ್ಪೋಟ್ಸ್ ಅಕಾಡಮಿಯನ್ನು ಸ್ಥಾಪಿಸಿ ಅದರ ಮುಖಾಂತರ ಯುವ ಕ್ರೀಡಾಳುಗಳಿಗೆ ಕ್ರೀಡಾ ಮಾರ್ಗ ದರ್ಶನದೊಂದಿಗೆ ತರಬೇತಿಯನ್ನು ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.