ಮಳೆ: “ಬೊಂಬಾಯಿಡ್‌ ತುಳುನಾಡು’ ಸಮ್ಮೇಳನ ರದ್ದು


Team Udayavani, Nov 9, 2019, 6:05 PM IST

mumbai-tdy-1

ಮುಂಬಯಿ, ನ. 8: ಕಲಾಜಗತ್ತು ಮುಂಬಯಿ ಸಂಸ್ಥೆಯ ವತಿಯಿಂದ ನ. 8ರಂದು ಬೆಳಗ್ಗೆ ಕಾಂದಿವಲಿ ಪಶ್ಚಿಮದಪೊಯಿಸರ್‌ ಜಿಮ್ಖಾನದ ಸಮೀಪವಿರುವ ಸಪ್ತಾಹ ಮೈದಾನದಲ್ಲಿ ಆರಂಭಗೊಳ್ಳಬೇಕಾಗಿದ್ದ ಬಹುನಿರೀಕ್ಷಿತ “ಬೊಂಬಾಯಿಡ್‌ ತುಳುನಾಡು’ ವಿಶ್ವಮಟ್ಟದ ತುಳು ಸಮ್ಮೇಳನವು ಗುರುವಾರ ರಾತ್ರಿಯಿಂದ ಸುರಿದ ಮಹಾ ಮಳೆಯಿಂದಾಗಿ ರದ್ದುಗೊಂಡಿದೆ.

ಕಳೆದ ಹತ್ತು-ಹದಿನೈದು ದಿನಗಳಿಂದ ಮಾಯವಾಗಿದ್ದ ಮಳೆರಾಯ ಚಂಡಮಾರುತದ ಪರಿಣಾಮದಿಂದ ಮತ್ತೆ ನಗರಕ್ಕಾಗಮಿಸಿದ್ದು, ಪ್ರಕೃತಿಯ ಮುನಿಸು, ಹವಮಾನ ವೈಪರೀತ್ಯದ ಮುಂದೆ ಮನುಷ್ಯರು ಕುಬjರು, ಅಸಹಾಯಕರು ಎಂಬುವುದು ಸಾಬೀತಾಗಿದೆ. ಗುರುವಾರ ರಾತ್ರಿಯಿಂದೀಚೆಗೆ ಹಠಾತ್‌ ಸುರಿದ ಧಾರಾಕಾರ ಮಳೆಯಿಂದ ಮೈದಾನದಲ್ಲಿ ನೀರು ತುಂಬಿರುವುದರಿಂದ ಸಮ್ಮೇಳನವನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತು. ಮಳೆ ಇನ್ನೂ ಮುಂದುವರಿದಿದ್ದು, ಯೋಜಿತ ಕಾರ್ಯಗಳನ್ನು ಈ ಪರಿಸ್ಥಿತಿಯಲ್ಲಿ ನಡೆಸುವುದು, ತುಳುವರು ಬಂದು ಪಾಲ್ಗೊಳ್ಳುವುದು ಸಾಧ್ಯವಾಗದ ಮಾತಾಗಿದೆ. ಮುಂಬಯಿಯ ದೂರದ ಉಪನಗರ ಮತ್ತು ಪರ ಊರುಗಳಿಂದ ಬರಲಿದ್ದ ತುಳುವ ಬಂಧುಗಳಿಗೆ ತೊಂದರೆ ಎದುರಾಗಬಾರದೆಂಬ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಲಾಗಿದು ಎಂದು ಕಲಾಜಗತ್ತು ಮುಂಬಯಿ ಸಮಿತಿ ತಿಳಿಸಿದೆ.

ಸಮ್ಮೇಳನಕ್ಕಾಗಿ ಭರದ ಸಿದ್ಧತೆ ನಡೆದಿತ್ತು ಕಲಾಜಗತ್ತು ಮುಂಬಯಿ ಸಂಸ್ಥಾಪಕಾಧ್ಯಕ್ಷ ಡಾ| ವಿಜಯ ಕುಮಾರ್‌ ಶೆಟ್ಟಿ ತೋನ್ಸೆ ಅವರ ಸಾರಥ್ಯದಲ್ಲಿ “ಬೊಂಬಾಯಿಡ್‌ ತುಳುನಾಡು’ವಿಶ್ವಮಟ್ಟದ ತುಳು ಸಮ್ಮೇಳನವು ನ. 8 ರಿಂದ ನ. 10 ರವರೆಗೆ ಅದ್ದೂರಿಯಾಗಿ ನಡೆಯಬೇಕಿತ್ತು. ಅದಕ್ಕಾಗಿ ಕಳೆದ ಆರು ತಿಂಗಳಿನಿಂದ ಎಲ್ಲ ಸಿದ್ದತೆಗಳು ಭರದಿಂದ ನಡೆದಿದೆ. ಸಮ್ಮೇಳನದ ಯಶಸ್ಸಿಗಾಗಿ ಮುಂಬಯಿ, ಪುಣೆ, ಗುಜರಾತ್‌ ಇನ್ನಿತರಡೆಗಳಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಊರಿನಿಂದ 7 ಕ್ಕೂ ಅಧಿಕ ಟ್ರಕ್‌ ಸಾಮಗ್ರಿಗಳನ್ನು ತರಲಾಗಿದೆ.

ಮೈದಾನದಲ್ಲಿ ಕಣ್ಮನ ಸೆಳೆಯುವ ದ್ವಾರ, ತುಳಸಿಕಟ್ಟೆ, ಮುಖ್ಯ ಪೂಜೆ ಮಂಟಪ, ವಿವಿಧ ಪೂಜೆಗಳ ಮಂಟಪ, ಗುತ್ತುದ ಇಲ್‌, ಜಗಮಗಿಸುವ ಮುಖ್ಯ ವೇದಿಕೆ, ಮಂಗಳೂರು ಸ್ಟೋರ್‌ಗಳಿಗೆ ಸ್ಟಾಲ್‌ಗ‌ಳು, ತುಳುನಾಡಿನ ಹಿಂದಿನ ಕಾಲದ ಸಾಮಗ್ರಿಗಳ ಪ್ರದರ್ಶನಕ್ಕಾಗಿ ವ್ಯವಸ್ಥೆ, ಪ್ರತ್ಯೇಕ ಸಮ್ಮಾನ ವೇದಿಕೆ, ವಸ್ತು ಪ್ರದರ್ಶನಗಳ ಸ್ಟಾಲ್‌ಗ‌ಳು, ಅಡುಗೆ ಕೋಣೆ, ಕ್ರೀಡಾಂಗಣ, ಮುಖ್ಯ ಸಭಾಂಗಣದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಕೂರಲು ತೆಂಗಿನ ಗರಿಯ ದೊಂಪ ಮತ್ತು ಪ್ರತ್ಯೇಕ ಶಾಮಿಯಾನದ ದೊಂಪವನ್ನು ನಿರ್ಮಿಸಲಾಗಿತ್ತು. ಊರು-ಪರವೂರುಗಳಿಂದ ಆಗಮಿಸಿದ ಗಣ್ಯರು ಬೊಂಬಾಯಿಡ್‌ ತುಳುನಾಡನ್ನು ಕಣ್ತುಂಬಿಕೊಳ್ಳಲು ವಿದೇಶಗಳಿಂದಲೂ ನೂರಾರು ಮಂದಿ ಗುರುವಾರ ಮತ್ತು ಶುಕ್ರವಾರ ಆಗಮಿಸಿದ್ದಾರೆ.

ದುಬೈ, ಬಹ್ರೈನ್‌ ಇನ್ನಿತರೆಡೆಗಳಿಂದಲ್ಲದೆ, ಬರೋಡಾ, ಸೂರತ್‌, ಪುಣೆ, ನಾಸಿಕ್‌ನಿಂದಲೂ ನೂರಾರು ಮಂದಿ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಸಮ್ಮೇಳನ ಮಳೆಯಿಂದ ರದ್ದಾಗಿದೆ ಎಂಬುವುದನ್ನು ಅರಿಯದ ಮುಂಬಯಿ ಸೇರಿದಂತೆ ಉಪನಗರಗಳಾದ ವಸಾಯಿ, ವಿರಾರ್‌, ನವಿಮುಂಬಯಿ, ಕಲ್ಯಾಣ್‌ ಇನ್ನಿತರೆಡೆಗಳಿಂದ ತುಳುವರು ಕುಟುಂಬ ಸಮೇತರಾಗಿ ಸಮ್ಮೇಳನದ ಸ್ಥಳಕ್ಕಾಗಮಿಸಿ   ಹಿಂತಿರುಗುತ್ತಿರುವ ಪ್ರಸಂಗಗಳು ನಡೆದಿವೆ. ಪ್ರಥಮ ದಿನ ಪಾಲ್ಗೊಳ್ಳುವವರಿಗೆ ಊಟೋಪಚಾರದ ವ್ಯವಸ್ಥೆಯ ಸಿದ್ಧತೆಯನ್ನು ಮಾಡಲಾಗಿತ್ತು.

ನೀರಲ್ಲಿಟ್ಟ ಹೋಮದಂತಾಯಿತು…!:  ಸಮ್ಮೇಳನಕ್ಕಾಗಿ ಕಳೆದ ಆರು ತಿಂಗಳುಗಳಿಂದ ಪೂರ್ವ ತಯಾರಿ ನಡೆದಿದ್ದು, ಗುರುವಾರ ರಾತ್ರಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿತ್ತು. ವಿಶೇಷತೆ ಎಂದರೆ 100 ವರ್ಷಗಳ ಹಿಂದಿನ ಕಾಲದ ತುಳುನಾಡಿನ ಕೃಷಿ ಉಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳ ಪ್ರದರ್ಶನಕ್ಕಾಗಿ ಮಂಗಳೂರಿನ ಪಿಲಿಕುಲದ ತಂಡದವರು ಆಗಮಿಸಿದ್ದು, ಅವರಿಗೆ ಸಾಕಷ್ಟು ನಷ್ಟ ಉಂಟಾಗಿದೆ ಎನ್ನಲಾಗಿದೆ. ಸುಮಾರು 950 ಕ್ಕೂ ಅಧಿಕ ಹಳೆಯ ಕಾಲದ ವಸ್ತುಗಳು ಅವರ ಸಂಗ್ರಹದಲ್ಲಿತ್ತು. ಗುರುವಾರ ರಾತ್ರಿ ಪೂರ್ವ ಸಿದ್ಧತೆ ಕೊನೆಗೊಂಡಿದ್ದು, ತಳಿರು-ತೋರಣಗಳಿಂದ ಮೈದಾನಪೂರ್ತಿ ಜಗಮಗಿಸುತ್ತಿದ್ದರೆ, ಶುಕ್ರವಾರ ಬೆಳಗ್ಗೆ ಮೈದಾನದ ಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಮೈದಾನಪೂರ್ತಿ ನೀರು ತುಂಬಿ ಹಾಕಿದ್ದ ಮಡಲಿನ ಚಪ್ಪರ ಸೇರಿದಂತೆ ಎಲ್ಲವೂ ಮಳೆ ನೀರಲ್ಲಿ ತೇಲುತ್ತಿತ್ತು.

ಗಣ್ಯರ ಟಿಕೆಟ್‌ಗಳು ರದ್ದು ಪೂರ್ವಸಿದ್ಧತೆಗಳಿಗಾಗಿ ಈಗಾಗಲೇ ಲಕ್ಷಾಂತರ ರೂ. ಗಳನ್ನು ವ್ಯಯಿಸಲಾಗಿದ್ದು, ಮೈದಾನದಲ್ಲಿ ಮೂರು ದಿನಗಳ ಊಟೋಪಚಾರಕ್ಕೆ ಸಂಗ್ರಹಿಸಲಾಗಿದ್ದ ಅಕ್ಕಿ ಇನ್ನಿತರ ಆಹಾರ ಪದಾರ್ಥಾಗಳು ಮಳೆಗೆ ತುತ್ತಾಗಿದೆ. ವಿವಿಧ ಪೂರ್ವ ಸಿದ್ಧತೆಗಾಗಿ ಹಾಗೂ ಮೈದಾನಕ್ಕಾಗಿ ಲಕ್ಷಾಂತರ ರೂ. ಳನ್ನು ಅಡ್ವಾನ್ಸ್‌ ನೀಡಲಾಗಿದೆ. ಪ್ರತೀ ದಿನ 30 ರಿಂದ 40 ಮಂದಿ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಮ್ಮೇಳನಕ್ಕಾಗಿ ಆಗಮಿಸಲಿರುವ ಪ್ರಮುಖ ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು, ಕಲಾಕಾರರು, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರುಗಳ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ.

ಮೈದಾನದಲ್ಲಿ ಕಣ್ಣೀರಿಟ್ಟ ವಿಜಯ ಕುಮಾರ್‌ ಶೆಟ್ಟಿ ಸುಮಾರು ಹತ್ತು ವರ್ಷಗಳ ಹಿಂದೆ “ಬೊಂಬಾಯಿಡ್‌ ತುಳುನಾಡು’ ವೈಶಿಷ್ಟಪೂರ್ಣ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಜಗತ್ತು ಡಾ| ವಿಜಯ ಕುಮಾರ್‌ ಶೆಟ್ಟಿ ಅವರು ಕಳೆದ ಆರು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಸಮ್ಮೇಳನದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದರು. ತನ್ನ ಶ್ರಮವೆಲ್ಲವೂ ಒಂದೇ ಘಳಿಗೆಯಲ್ಲಿ ನೀರುಪಾಲಾಗಿರುವುದನ್ನು ಕಣ್ಣಾರೆ ಕಂಡ ವಿಜಯ ಕುಮಾರ್‌ ಶೆಟ್ಟಿ ಅವರು ಮೈದಾನದಲ್ಲೇ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ. ಚಂಡಮಾರುತದ ಗಾಳಿ-ಮಳೆಗೆ ಮೈದಾನದಲ್ಲಿ ನಿರ್ಮಿಸಿರುವ ಎಲ್ಲವೂ ನೆಲಸಮವಾಗಿರುವುದನ್ನು ಕಂಡು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಅವರನ್ನು ಸಮಾಧಾನಪಡಿಸಲು ಇತರರು ಹರಸಾಹಸ ಪಡಬೇಕಾಯಿತು. ಶುಕ್ರವಾರ ಬೆಳಗ್ಗೆಯಿಂದ ಜನರು ತಂಡೋಪತಂಡವಾಗಿ ಆಗಮಿಸಿ ಮೈದಾನದಲ್ಲಿ ನಡೆದ ಸಿದ್ಧತೆಯು ನೀರುಪಾಲಾಗಿರುವುದನ್ನು ಕಂಡು ಕಣ್ಣೀರಿಟ್ಟು ಮರುಕ ವ್ಯಕ್ತಪಡಿಸಿ ಹಿಂತಿರುಗುತ್ತಿದ್ದಾರೆ.

ಎಲ್ಲವೂ ಸರಿ ಇರುತ್ತಿದ್ದರೆ…! : ಎಲ್ಲರೂ ಸರಿಯಾಗಿ ನಡೆಯುತ್ತಿದ್ದರೆ ಮೂರು ದಿನಗಳ ಈ ಅದ್ದೂರಿ ತುಳು ಸಮ್ಮೇಳನದಲ್ಲಿ ಇಲ್‌ ಒಕ್ಕೆಲ್‌, ದೊಂಪ ಏರುನು, ಶ್ರೀ ಸತ್ಯನಾರಾಯಣ ಮಹಾಪೂಜೆ, ಚೌತಿ ಆಚರಣೆ, ಕೊರಲ್‌ ಕಟ್ಟುನು, ಯುಗಾದಿ ಪರ್ಬ, ಭಜನೆ, ಭಜನೆ ಕುಣಿ ಸ್ಪರ್ಧೆ, ಆಧ್ಯಾತ್ಮಿಕ ಪ್ರವಚನ, ವಾದ್ಯ ಸಂಗೀತ, ಸಂಗೀತ ರಸಮಂಜರಿ, ಪ್ರಶಸ್ತಿ ಪ್ರದಾನ, ತುಳು ನಾಟಕ, ಕೃತಿ ಬಿಡುಗಡೆ, ತುಳು ಚಲನಚಿತ್ರ ಪ್ರದರ್ಶನ, ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳು, ಶನಿಪೂಜೆ, ಅಟ್ಟೆಮಿ, ವಿಟ್ಲಪಿಂಡಿ, ಗೋಪೂಜೆ, ತುಳಸಿ ಪೂಜೆ, ಕವಿಗೋಷ್ಠಿ, ಸಾಂಸ್ಕೃತಿಕ ಉತ್ಸವ, ನೃತ್ಯೋತ್ಸವ, ನೃತ್ಯ ವೈಭವ, ಬಾಲಾಜಿ ವಾಹನ ಸೇನೆ, ಯಕ್ಷಗಾನ, ದೈವಾರಾಧನೆ, ಮಾರ್ನೆಮಿ, ಹರಿಕತೆ, ತಾಳಮದ್ದಳೆ, ಮಕ್ಕಳ ಉತ್ಸವ, ತುಳು ವಿಚಾರಗೋಷ್ಠಿ, ಖಾದ್ಯೋತ್ಸವ, ಕ್ರೀಡೋತ್ಸವ, ವಸ್ತುಪ್ರದರ್ಶನ, ಡೋಲು ಕುಣಿತ, ಜಾನಪದ ಕುಣಿಗಳು, ಗೊಂಬೆ ಕುಣಿತ, ಹಿರಿಯ ಸಾಧಕರ ನೆನಪಿನಲ್ಲಿ ಸಾಧಕ ಪ್ರಶಸ್ತಿ, ಚೆನ್ನೆಮಣೆ, ಕುಂಟುತ್ತಾ ಅವಸಾನದತ್ತ ಸಾಗುತ್ತಿರುವ ಕುಂಟೆಬಿಲ್ಲೆ, ಮೂಲೆ ಗುಂಪಾಗುತ್ತಿರುವ ಚಿನ್ನಿದಾಂಡು, ಲಗೋರಿ ಮೊದಲಾದ ಆಟಗಳು, ತುಳುನಾಡಿನ ವಿವಿಧ ಖಾದ್ಯಗಳ ಹಬ್ಬ, ನಮ್ಮೂರಿನ ಐಸಿರಿಯನ್ನು ಪರಿಚಯಿಸುವ ತರಬೇತಿ, ಕಾರ್ಯಗಾರ ಇನ್ನಿತರ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಮೇಳೈಸಲಿತ್ತು.

ಸಮ್ಮೇಳನಕ್ಕಾಗಿ ವಿಜಯ ಕುಮಾರ್‌ ಶೆಟ್ಟಿ ಅವರೊಂದಿಗೆ ಹಗಲಿರುಳು ದುಡಿದಿದ್ದೇವೆ. ಅರು ತಿಂಗಳಿಂದ ಪೂರ್ವತಯಾರಿ ನಡೆದಿದೆ. ಕೊನೆಯ ಕ್ಷಣದಲ್ಲಿ ಈ ರೀತಿಯಾದಾಗ ಮನಸಿಗೆ ಬಹಳಷ್ಟು ನೋವಾಗುತ್ತಿದೆ. ಇದು ನಮ್ಮ ದುರಾದೃಷ್ಟ. ಪ್ರಕೃತಿಯ ಎದುರು ಮನುಷ್ಯ ಏನೂ ಅಲ್ಲ. ಮೈದಾನದಿಂದ ಹಿಂತಿರುಗುವಾಗ ಕಣ್ಣೀರು ಧಾರಕಾರವಾಗಿ ಹರಿದು ಸ್ಮಶಾನದಿಂದ ಹಿಂತಿರುಗಿದ ಅನುಭವವಾಯಿತು. ನಾವು ಇಂದು ಪ್ರೃಕತಿಯ ಎದುರು ಬಿದ್ದಿದ್ದೇವೆ. ಮತ್ತೇ ಏಳುತ್ತೇವೆ. ಎದ್ದು ಜೋರಾಗಿ ಓಡುತ್ತೇವೆ. ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಸಮ್ಮೇಳನವನ್ನು ಮಾಡಲಿದ್ದೇವೆ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ (ಕಾರ್ಯಾಧ್ಯಕ್ಷರು : ಕಲಾಜಗತ್ತು ಮುಂಬಯಿ).

-ಡಾ| ದಿನೇಶ್‌ ಶೆಟ್ಟಿ ರೆಂಜಾಳ

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.