ಬೊರಿವಲಿ: ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾ ಮಹಾಯಾಗ
Team Udayavani, Oct 3, 2017, 1:22 PM IST
ಮುಂಬಯಿ: ಬೊರಿವಲಿ ಜಯರಾಜ ನಗರ ಪರಿಸರದ ಪ್ರತಿಷ್ಠಿತ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 28ನೇ ವಾರ್ಷಿಕ ನವರಾತ್ರಿ ಉತ್ಸವವು ಸೆ. 21ರಿಂದ ಸೆ. 30ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಸೆ. 28ರಂದು ಬೆಳಗ್ಗೆ 9.30ರಿಂದ ಸಾರ್ವಜನಿಕ ಚಂಡಿಕಾ ಹೋಮವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರಗಿತು.
ಪುರೋಹಿತ ವೃಂದದವರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅನಂತರ ಕ್ಷೀರಾಭಿಷೇಕ ನೆರವೇರಿತು. ಮಹಿಳೆಯರು ಚಂಡಿಕಾ ಹವನದ ಹೋಮಕುಂಡಕ್ಕೆ ಕಲ್ಪತರು-ಬಟ್ಟೆಯನ್ನು ಅರ್ಪಿಸಿ ವಿವಿಧ ಸೇವೆಗಳನ್ನಿತ್ತು ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪುರೋಹಿತ ಅಕ್ಷಯ ತಂತ್ರಿ ಅವರು, ನವರಾತ್ರಿ ಪರ್ವ ಕಾಲದಲ್ಲಿ ಭಗವಂತನನ್ನು ಆರಾಧಿಸುವ ಜೊತೆಗೆ ನವರಾತ್ರಿಯ ನವದುರ್ಗೆಯೊಂದಿಗೆ ಪ್ರಕೃತಿ ಆರಾಧನೆ ಕೂಡ ಜೀವನದ ಕಷ್ಟದ ದಿನಗಳಿಗೆ ದೇವಿಯ ಪೂಜೆಯಿಂದ ದಾರಿದ್ರÂ, ಆಲಸ್ಯ ನಿವಾರಣೆಯಾಗುತ್ತದೆ. ಪ್ರಕೃತಿ ಪಂಚಭೂತ ನಮ್ಮ ದಿನನಿತ್ಯದ ಜೀವನದಲ್ಲಿ ಅವಶ್ಯಕವಾದುದು. ದಿನಂಪ್ರತಿ ಬದುಕಿನಲ್ಲಿ ಪಂಚೇಂದ್ರಿಯ ಭೋಗದಲ್ಲೂ ಪ್ರಕೃತಿಯ ಪಂಚಭೂತಗಳ ಶಕ್ತಿ ಅಡಗಿದೆ. ಪ್ರಕೃತಿಗೆ ವಿಕೃತಿಯ ಕೆಲಸವಾದಾಗ ಸಕಲವೂ ಸರ್ವನಾಶವಾಗುತ್ತದೆ. ಪ್ರಕೃತಿಯನ್ನು ದೇವರೆಂದು ಪೂಜಿಸಿದಾಗ ಸರ್ವ ಆತ್ಮದೋಷಗಳ ನಿವಾರಣೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ವಂಶಸ್ಥ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ದಂಪತಿ, ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ದಂಪತಿ, ಮೊಕ್ತೇಸರರಾದ ಜಯಪಾಲ ಎ. ಶೆಟ್ಟಿ ದಂಪತಿ ಮೊದಲಾದವರು ಉಪಸ್ಥಿತರಿದ್ದರು. ಹವನದ ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಅರ್ಚಕ ವೃಂದದವರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಸದಸ್ಯೆಯರು, ಶ್ರೀ ಮಹಿಷ ಮರ್ದಿನಿ ಭಜನ ಮಂಡಳಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.