ಬೊರಿವಲಿ ದೇವುಲ್ಪಾಡಾ: ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮ


Team Udayavani, Jan 28, 2018, 4:21 PM IST

2701mum03a.jpg

ಮುಂಬಯಿ: ಬೊರಿವಲಿ ಪೂರ್ವ ದೇವುಲ್ಪಾಡಾದ ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ  ಜ. 25 ರಂದು  ರಾತ್ರಿ 44 ನೇ ವಾರ್ಷಿಕ ಬೈದರ್ಕಳ ನೇಮೋತ್ಸವವನ್ನು  ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಶೇಖರ್‌ ಇಂದು ಸಾಲ್ಯಾನ್‌ ಕಟಪಾಡಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ  ಅಶ್ವ ತ್ಥದಡಿ ಗರಡಿಯಲ್ಲಿ ಕಲಶ ಪ್ರತಿಷ್ಠೆ, ರಾತ್ರಿ ಅಗೆಲು ತಂಬಿಲ, ಬೈದರ್ಕಳ ದರ್ಶನದೊಂದಿಗೆ  ವಾರ್ಷಿಕ ನೇಮೋತ್ಸಕ್ಕೆ ಚಾಲನೆ ನೀಡಲಾಗಿದ್ದು ಜ. 25 ರಂದು ಬೆಳಗ್ಗೆ  ಗರಡಿಯಲ್ಲಿ ಗಣಹೋಮ, ದುರ್ಗಾಪೂಜೆ,  ರಾತ್ರಿ ಬೈದರ್ಕಳ ನೇಮೋತ್ಸವ,  ಜೋಗಿ ಪುರುಷರ ನೇಮೋತ್ಸವ‌ ಮತ್ತು ಮಾಯಂದಳ್‌ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು. ಸುಕುಮಾರ್‌ ಭಟ್‌ ಬೈಕಲ ಅವರ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಲಾಯಿತು.

ನೇಮೋತ್ಸವದಲ್ಲಿ ಪ್ರಸಾದ್‌ ಕಲ್ಯ ಮುಲುಂಡ್‌ ಅವರು ದೇವಿ ಪಾತ್ರಿಯಾಗಿ, ನರ್ಸಪ್ಪ ಕೆ. ಮಾರ್ನಾಡ್‌ ಮಧ್ಯಾಸ್ಥರಾಗಿ ಸಹಕರಿಸಿದರು.  ಬೂಬ ಪರವ, ನರಸಿಂಹ ಪರವ ಮತ್ತು ಗುಂಡು ಪರವ ಕೋಲ ಕಟ್ಟಿದರು. ಸೂಡಾ ಗರಡಿಯ ಕೋಟಿ ಪೂಜಾರಿ ಮತ್ತು ಸತೀಶ್‌ ಪೂಜಾರಿ ಪಕ್ಕಿಬೆಟ್ಟು ಅವರು ಬೈದರ್ಕಳರ ಪೂಜಾರಿಗಳಾಗಿ, ಸೂಡಾ ಗರಡಿಯ ಸತೀಶ್‌ ಮಡಿವಾಳ ದೀವಟಿಕೆಯಲ್ಲಿ, ವಸಂತ ಪೂಜಾರಿ ಬೇಲಾಡಿ ಹೂವು ಅವರು ಮುಕ್ಕಾಲ್ದಿಯಾಗಿ ಸೇವೆಗೈದರು. ಮುಂಜಾನೆ  ಮಂಗಳದೊಂದಿಗೆ ವಾರ್ಷಿಕ ನೇಮೋತ್ಸವ ಸಮಾಪ್ತಿಗೊಂಡಿತು.

ವಾರ್ಷಿಕ  ನೇಮೋತ್ಸವದಲ್ಲಿ ಭಾ ರತ್‌ ಬ್ಯಾಂಕ್‌ನ ನಿರ್ದೇ ಶಕರುಗಳಾದ ದಾಮೋದರ ಸಿ. ಕುಂದರ್‌, ಗಂಗಾಧರ್‌ ಜೆ. ಪೂಜಾರಿ, ಮಾಜಿ ನಿರ್ದೇಶಕ ಶಂಕರ್‌ ಡಿ. ಪೂಜಾರಿ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಆನಂದ್‌ ಪೂಜಾರಿ, ಅನಿಲ್‌ ಸಾಲ್ಯಾನ್‌, ಮೋಹನ್‌ ಎಂ. ಅಮೀನ್‌, ಸ್ಥಾನೀಯ ನಗರ ಸೇವಕ ಯೋಗೇಶ್‌ ಬೋಯಿರ್‌, ರಂಗಕರ್ಮಿ ಕರುಣಾಕರ್‌ ಕಾಪು, ಕೊರಿಯೋಗ್ರಾಫರ್‌ ಸನ್ನಿಧ್‌ ಪೂಜಾರಿ ಸೇರಿದಂತೆ ಮಹಾನಗರದ ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ  ಜಗದೀಶ್ವರಿ ಮತ್ತು ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಲಕ್ಷ¾ಣ್‌ ಬಿ. ಬೆಳುವಾಯಿ, ಗೌರವ  ಕೋಶಾಧಿಕಾರಿ ರಘು ಕೆ. ಕೋಟ್ಯಾನ್‌, ಜೊತೆ ಕಾರ್ಯದರ್ಶಿ ಸದಾಶಿವ ಡಿ. ಸಾಲ್ಯಾನ್‌, ಜೊತೆ ಕೋಶಾಧಿಕಾರಿ ದಿನೇಶ್‌ ಆರ್‌. ಶೆಟ್ಟಿ, ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ನರ್ಸಪ್ಪ ಕೆ. ಮಾರ್ನಾಡ್‌, ಕಾರ್ಯದರ್ಶಿ ಜಯರಾಮ ಎಸ್‌. ಪೂಜಾರಿ, ಟ್ರಸ್ಟಿಗಳಾದ, ವಾಸು ಕೆ. ಪೂಜಾರಿ, ಜಯರಾಮ ಎಸ್‌. ಪೂಜಾರಿ, ಆನಂದ್‌ ಜಿ. ಶೆಟ್ಟಿ, ದಿನಕರ್‌ ಜಿ. ಪವಾರ್‌, ಕಾರ್ಯಕಾರಿ ಸಮಿತಿಯ  ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿ ಜಯರಾಮ ಪೂಜಾರಿ, ಜೊತೆ ಕಾರ್ಯದರ್ಶಿ ಲಿಠಲ ಎಚ್‌. ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಪೂಜಾರಿ, ಗಣೇಶ್‌ ಆರ್‌. ಸುವರ್ಣ, ರಘು ಎಂ. ಬಂಗೇರ, ರಮೇಶ್‌ ಡಿ. ಕೋಟ್ಯಾನ್‌, ಮಹಾಬಲ ಉದ್ಯಾವರ, ದಾಮೋದರ ಪುತ್ರನ್‌ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್‌ ಮುಂ ಬಯಿ ಇದರ ಸೇವಾದಳವು ದಳಪತಿ ಗಣೇಶ್‌ ಕೆ. ಪೂಜಾರಿ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದರು. ಅಧ್ಯಕ್ಷ ಶೇಖರ್‌ ಇಂದು ಸಾಲ್ಯಾನ್‌ ಸ್ವಾಗತಿಸಿ, ಅತಿಥಿ ಗಳನ್ನು ಪುಷ್ಪಗುಚ್ಚ, ಪ್ರಸಾದವನ್ನಿತ್ತು ಗೌರವಿಸಿದರು.  
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಬಿ. ಬಂಗೇರ ಅವರು  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.    

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.