![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 28, 2019, 11:42 AM IST
ಮುಂಬಯಿ: ಬೊರಿವಲಿ ಪಶ್ಚಿಮ ವಜೀರ್‌ನಾಕಾ ಜೈರಾಜ್ ನಗರದ ಕಾರಣಿಕ ಕ್ಷೇತ್ರ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ 29ನೇ ವಾರ್ಷಿಕ ಮಹೋತ್ಸವವು ಮೇ 31ರಿಂದ ಜೂ. 5 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ. ಮೇ 31ರಂದುಬೆಳಗ್ಗೆ 8ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ನವಕ ಕಲಶ ಹಾಗೂ ಪ್ರಧಾನ ಗಣಹೋಮ, ಸಾರ್ವಜನಿಕ ನವಗ್ರಹ ಹೋಮ, ಸಾರ್ವಜನಿಕ ಆಶ್ಲೇಷ ಬಲಿ, ಪ್ರಸನ್ನ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂರ್ಪಣೆ ನೆರವೇರಲಿದೆ.
ಸಂಜೆ 6.30ರಿಂದ ರಾತ್ರಿ 10ರವರೆಗೆ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯ ಬಲಿ ಜರಗಿದ ಬಳಿಕ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಹಾಗೂ ಇತರ ಆಹ್ವಾನಿತ ವಿವಿಧ ಭಜನಾ ಮಂಡಳಿಗಳಿಂದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಜೂ. 1 ರಂದು ಮುಂಜಾನೆ 6ರಿಂದ ದೀಪ ಬಲಿ, ಮಹಾಪೂಜೆ, ಸಂಜೆ 5ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸಂಜೆ 7ರಿಂದ ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರಗಿದ ಬಳಿಕ ನಿತ್ಯಬಲಿ ನಡೆಯಲಿದೆ.
ಜೂ. 2ರಂದು ಬೆಳಗ್ಗೆ 6ರಿಂದ ದೀಪ ಬಲಿ, ಮಹಾಪೂಜೆ, ಬೆಳಗ್ಗೆ 9.30ರಿಂದ ಚಂಡಿಕಾ ಹೋಮ, ಅನ್ನಸಂತರ್ಪಣೆ, ರಾತ್ರಿ 7ರಿಂದ ಉತ್ಸವ ಬಲಿ, ದೈನಂದಿನ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ರಾತ್ರಿ 9.30ರಿಂದ ಸಾರ್ವಜನಿಕ ಮಹಾರಂಗ ಪೂಜೆ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ. ಜೂ. 3ರಂದು ಮುಂಜಾನೆ 6ರಿಂದ ದೈನಂದಿನ ಪೂಜೆ, ಬೆಳಗ್ಗೆ 9.30ರಿಂದ ವಾಯುಸ್ತುತಿ ಪುರಶ್ಚರಣೆ ಹೋಮ, ಮಹಾಪೂಜೆ, ರಾತ್ರಿ 7ರಿಂದ ದೈನಂದಿನ ಧಾರ್ಮಿಕ ಕಾರ್ಯಕ್ರಮದ ಅನಂತರ ರಾತ್ರಿ 9 ರಿಂದ ಮಹಾಭೂತ ಬಲಿ, ಶಯ್ನಾಕಲ್ಪನಂ ಮತ್ತು ಕವಾಟ ಬಂಧನ ಜರಗಲಿದೆ.
ಜೂ. 4ರಂದು ಬೆಳಗ್ಗೆ 7.30ರಿಂದ ಕವಾಟೋದ್ಘಾಟನೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ತುಲಾಭಾರ ಸೇವೆ, ಬೆಳಗ್ಗೆ 9.30ರಿಂದ ಮಹಿಷಮರ್ದಿನಿ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಪೂರ್ವಾಹ್ನ 11.30ರಿಂದ ಮಹಾಪೂಜೆ, ಚೂರ್ಣೋತ್ಸವ ಹರಿವಾಣ ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ರಿಂದ ಯಾತ್ರಾಹೋಮ, ರಾತ್ರಿ 7 ರಿಂದ ಉತ್ಸವ ಬಲಿ, ವಿಶೇಷ ಉತ್ಸವ ಬಲಿಯು ಮೆರವಣಿಗೆಯಲ್ಲಿ ಯಾತ್ರಾ ಮಹೋತ್ಸವ, ಧರ್ಮದೈವ ಕೊಡಮಣಿತ್ತಾಯ ದರ್ಶನ ದೇವರ ಭೇಟಿ, ಹರಿವಾಣಾ ಕಾಣಿಕೆ ಜರಗಲಿದೆ.
ಜೂ. 5ರಂದು ಸಂಪ್ರೋಕ್ಷಣೆ, ಮಹಾಪೂಜೆ,ಮಹಾಮಂತ್ರಾಕ್ಷತೆಯೊಂದಿಗೆ ಉತ್ಸವವು ಸಂಪನ್ನ
ಗೊಳ್ಳಲಿದೆ. ಸತತವಾಗಿ ಆರು ದಿನಗಳ ಕಾಲ ಸನ್ನಿಧಾನದಲ್ಲಿ ನಿರಂತರವಾಗಿ ಜರಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಸರದ, ಮಹಾನಗರದ ಸರ್ವ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದೇವಸ್ಥಾನದ ಮೊಕ್ತೇಸರರು ಮತ್ತು ಸ್ಥಾಪಕ ಮೊಕ್ತೇಸರರ ವಂಶಸ್ಥರಾದ ಶ್ರೀಮತಿ ಮತ್ತು ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ದಂಪತಿ, ಮೊಕ್ತೇಸರರಾದ ಶ್ರೀಮತಿ ಜಯಪಾಲಿ ಅಶೋಕ್ ಶೆಟ್ಟಿ, ಬಿ. ವೆಂಕಟರಮಣ ತಂತ್ರಿ, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕವೃಂದ, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.