![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 16, 2019, 3:36 PM IST
ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸತತ 2ನೇ ಬಾರಿಗೆ ಪ್ರಚಂಡ ಬಹುಮತಗಳಿಂದ ಜಯ ಭೇರಿಗಳಿಸಿದ ಸಂಸದ ಗೋಪಾಲ್ ಸಿ. ಶೆಟ್ಟಿ ಅವರಿಗೆ ಬೊರಿವಲಿಯ ಸಮಸ್ತ ವ್ಯಾಪಾರಿ ಸಮುದಾಯದ ವತಿಯಿಂದ ಜೂ. 12ರಂದು ಬೊರಿವಲಿ ಪಶ್ಚಿಮದ ಮೆಗಾ ಮಧುರಮ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬೊರಿವಲಿಯ ಸಮಾಜ ಸೇವಕ ಬಾಲಾಜಿ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಶೆಟ್ಟಿ, ಬಿಜೆಪಿಯ ಉತ್ತರ ಮುಂಬಯಿ ಜಿಲ್ಲಾ ಕಾರ್ಯದರ್ಶಿ ವಸಂತ್ ಎಚ್. ಶೆಟ್ಟಿ ಹಾಗೂ ಪರಿಚಯ್ ಗ್ರೂಪ್‌ನ ಚಂದ್ರಕಾಂತ್ ಭಾಯಿ, ಆಶಾಪುರ ಸಾರೀಸ್‌ನ ಹರಕ್‌ಚಂದ್ ಭಾಯಿ, ಆದರ್ಶ್ ಸ್ವೀಟ್ಸ್‌ನ ಜಯೇಶ್ ಛೆಡ್ಡಾ ಭಾಯಿ, ರಾಜೇಂದ್ರ ಫುಡ್ ಇದರ ಉಮೇಶ್ ಕಾಮತ್ ಮತ್ತು ಬೊರಿವಲಿಯ ಸಮಸ್ತ ಚಿಲ್ಲರೆ ವ್ಯಾಪಾರಸ್ಥರು ಹಾಗೂ ಅಭಿಮಾನಿಗಳು ಸಂಸದ ಗೋಪಾಲ್ ಶೆಟ್ಟಿ ಮತ್ತು ಉಷಾ ಗೋಪಾಲ್ ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.
ಅಪಾರ ಸಂಖ್ಯೆಯಲ್ಲಿ ಗೋಪಾಲ್ ಶೆಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು, ಬಿಜೆಪಿಯ ಕಾರ್ಯಕರ್ತರು, ತುಳು-ಕನ್ನಡಿಗರು, ಇತರ ಭಾಷಿಗರು ಪಾಲ್ಗೊಂಡು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ದ್ವಿತೀಯ ಬಾರಿಗೆ ಭಾರೀ ಮತಗಳ ಅಂತರದಿಂದ ಜಯಗಳಿಸಿದ ಗೋಪಾಲ್ ಸಿ. ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ಪ್ರಶಂಶಿಸಿ ಅಭಿನಂದಿಸಿ ಗೌರವಿಸಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.