ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ

ಸ್ಕಾಟ್‌ಲ್ಯಾಂಡ್‌, ಐರ್ಲೆಂಡಿನ ಕನ್ನಡ ಬರಹಗಾರರು ಈ ಗುಂಪಿನಲ್ಲಿದ್ದಾರೆ

Team Udayavani, Jan 14, 2025, 10:15 AM IST

ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ

ಬ್ರಿಟನ್‌: ಇಂಗ್ಲಿಷರ ನಾಡಿನಲ್ಲಿ ನೆಲೆನಿಂತು ಕನ್ನಡದಲ್ಲಿ ಬರೆವ ಹಲವಾರು ಕನ್ನಡ ಪ್ರೀತಿಯ ಜನರಿದ್ದಾರೆ. ಇತ್ತೀಚೆಗಿನವರೆಗೆ ಬೆರಳೆಣಿಕೆಯ ಈ ಜನರು ಅಲ್ಲಲ್ಲಿ ಚದುರಿ ಹೋಗಿದ್ದರು. ಬೇರೆ, ಬೇರೆ ಊರು ಮತ್ತು ಪ್ರಾಂತದಲ್ಲಿದ್ದವರನ್ನೆಲ್ಲ ಒಂದು ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಅವರ ಸಾಹಿತ್ಯ ರಚನೆಯ ಉಡಾವಣೆ ಆಗುವಂತೆ ಮಾಡಬೇಕೆಂಬ ಆಸೆ ಬೆರಳೆಣಿಕೆಯ ಜನರಿಗೆ ಬಂದದ್ದು ಹತ್ತು ವರ್ಷಗಳ ಹಿಂದೆ.

ಇವರು ಇಂಗ್ಲೆಂಡಿನ ಯೂಟೋಕ್ಸಿಟರ್‌ ಎನ್ನುವ ಒಂದು ಸರ್ವೀಸ್‌ ಸ್ಟೇಷನ್ನಿನ ಕೆಫೆಟೇರಿಯದಲ್ಲಿ ಕುಳಿತು “ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ವಿಚಾರ ವೇದಿಕೆ’ (KSSVV) ಎನ್ನುವ ಒಂದು ಗುಂಪನ್ನು ಆರಂಭಿಸಿದರು. ಅವರಲ್ಲಿ ಅಂತರ್ಜಾಲ ಸಾಹಿತ್ಯ ಜಗುಲಿಯೊಂದನ್ನು ರೂಪಿಸಲು ಬೇಕಾದ ತಾಂತ್ರಿಕ ಅರಿವನ್ನು ಉಳ್ಳವರೊಬ್ಬರು ಇತರರಿಗೂ ತರಬೇತಿ ನೀಡಿ ಒಂದು ಸಾಹಿತ್ಯಕ ಜಾಲ ಜಗುಲಿ (ಬ್ಲಾಗ್‌)ಯೊಂದನ್ನು ನಿರ್ಮಿಸಿದರು. ಅನಂತರ ಸುಲಭವಾಗಲಿ ಎನ್ನುವ ಉದ್ದೇಶದಿಂದ “ಅನಿವಾಸಿ.ಕಾಂ’ ಎಂದು ಬ್ಲಾಗಿನ ಹೆಸರನ್ನು ಬದಲಾಯಿಸಲಾಯಿತು.

2014ರ ನವೆಂಬರಿನಲ್ಲಿ ಕನ್ನಡ ಬಳಗದವರು ನಡೆಸಿದ ದೀಪಾವಳಿ ಕಾರ್ಯಕ್ರಮಕ್ಕೆ ಚೆಸ್ಟರ್‌ ಫೀಲ್ಡ್‌ಗೆ ಬಂದಿದ್ದ ಡಾ|ಎಚ್‌.ಎಸ್‌. ವೆಂಕಟೇಶ ಮೂರ್ತಿಯವರ ಮೂಲಕ ಈ ಜಾಲಜಗುಲಿಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಬೆರಳೆಣಿಕೆಯ ಉತ್ಸಾಹಿಗಳು ಮಾತ್ರವೇ ಇದ್ದರೂ ಕಳೆದ ಹತ್ತು ವರ್ಷಗಳಿಂದ anivaasi.com ಸತತವಾಗಿ ವಾರಕ್ಕೊಂದರಂತೆ ಯು.ಕೆ.ನಿವಾಸಿಗಳ ಬರಹವೊಂದನ್ನು ಪ್ರಕಟಿಸುತ್ತ ಬಂದಿದೆ. ಕೆಲವೊಮ್ಮೆ ಭಾರತ ಮತ್ತು ಅಮೆರಿಕಾದವರ ಬರಹಗಳನ್ನೂ ಪ್ರಕಟಿಸಿದೆ. ಇಂಗ್ಲೆಂಡ್‌, ಸ್ಕಾಟ್‌ಲ್ಯಾಂಡ್‌, ಐರ್ಲೆಂಡಿನ ಕನ್ನಡ ಬರಹಗಾರರು ಈ ಗುಂಪಿನಲ್ಲಿದ್ದಾರೆ. ಇಂತಿಷ್ಟು ತಿಂಗಳು ಅಥವಾ ವಾರಗಳಿಗೊಮ್ಮೆ ಈ ಜಾಲಜಗುಲಿಯ ಸಂಪಾದಕೀಯ ಹೊಣೆ ಬದಲಾಗುತ್ತಾರೆ.

ಬಹಳ ಹಿಂದೆ ಈ ಬಳಗದ ಕೆಲವು ಸದಸ್ಯರು ಕೈಯಲ್ಲೇ ಬರೆದು “ಸಂದೇಶ’ ಎನ್ನುವ ಕನ್ನಡ ಪತ್ರಿಕೆಯನ್ನು ಕೆಲವು ಕಾಲ ನಡೆಸಿದ ಘಟಾನುಘಟಿಗಳು. ಇವರೆಲ್ಲ “ನುಡಿ’, “ಬರಹ’ ಇತ್ಯಾದಿ ತಂತ್ರಾಂಶಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಹಿರಿಯ-ಕಿರಿಯರೆಲ್ಲ ಕನ್ನಡ ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಪ್ರತೀ ಯುಗಾದಿ ಮತ್ತು ದೀಪಾವಳಿಗೆ ಇಲ್ಲಿನ ಕನ್ನಡ ಬಳಗದವರು ಕರೆಸುವ ಸಾಹಿತಿಗಳು, ಕವಿಗಳು, ಸಿನೆಮಾ ನಿರ್ದೇಶಕರು, ಚಿಂತಕರು, ಶಿಕ್ಷಣವಾದಿಗಳು, ಸಿನೆಮಾ ನಟರು, ಗಾಯಕರು, ಪತ್ರಕರ್ತರು ಇವರುಗಳ ಜತೆ ಒಂದೆರಡು ಗಂಟೆಗಳ ಸಂವಾದ, ಚರ್ಚೆ, ಕಾವ್ಯ ವಾಚನ, ಚಿತ್ರ ವಿಮರ್ಶೆ, ಚುಟುಕು ಸಾಹಿತ್ಯ, ರಂಗಪ್ರಪಂಚ ಇತ್ಯಾದಿ ರಸವತ್ತಾದ ಕಾರ್ಯಕ್ರಮಗಳನ್ನು ನಡೆಸುತ್ತ ಯು.ಕೆ.ಯಲ್ಲಿ ನೆಲೆಸಿರುವ ಸಾಹಿತ್ಯಾಸಕ್ತರ ಅಭಿರುಚಿಗಳನ್ನು ಪೋಷಿಸುತ್ತ ಬಂದಿದ್ದಾರೆ.

ಪರಸ್ಪರರ ಮನೆಗಳಲ್ಲಿ ಭೇಟಿಮಾಡಿ, ಯೋಜನೆಗಳನ್ನು ರೂಪಿಸಿ “ಅನಿವಾಸಿಗಳ ಅಂಗಳದಿಂದ’ ಎಂಬ ಸಂಗ್ರಹಿತ ಬರಹಗಳ ಪುಸ್ತಕವನ್ನು ಹೊರತಂದಿದ್ದಾರೆ. ಸ್ವರಚಿತ ಭಾವ (ಪ್ರೇಮ)ಗೀತೆಗಳಿಗೆ ಸಂಗೀತ ಹೊಂದಿಸಿ “ಪ್ರೀತಿಯೆಂಬ ಚುಂಬಕ’ ಎಂಬ ಧ್ವನಿಮುದ್ರಣವನ್ನು ಹೊರತಂದಿದ್ದಾರೆ. ಅದರಲ್ಲಿ ಹಾಡಿದವರು ಕೂಡ ಪ್ರತಿಭಾವಂತ ಅನಿವಾಸಿ ಕನ್ನಡಿಗರೇ ಆಗಿದ್ದಾರೆ. ಸ್ವಂತ ರಚನೆಯ “ಫೋನಾಯಣ’ ಎಂಬ ನಗೆ ನಾಟಕವನ್ನು ವೇದಿಕೆಗೆ ತಂದು ಜನರನ್ನು ರಂಜಿಸಿದ್ದಾರೆ.

ಅನಿವಾಸಿಯ ವ್ಯಾಟ್ಸ್‌ ಆ್ಯಪ್‌ ಗುಂಪಿನಲ್ಲಿಯೂ ಸಾಹಿತ್ಯ ಕಟ್ಟುವ ಆಟ ನಡೆಯುತ್ತಿರುತ್ತದೆ. ಇಲ್ಲಿನ ಸದಸ್ಯರು ಮುಖ್ಯವಾಹಿನಿ ಕನ್ನಡ ವೃತ್ತಪತ್ರಿಕೆ, ವಾರಪತ್ರಿಕೆ, ಮಾಸಿಕಗಳಿಗೆ ಲೇಖನ, ಕಥೆಗಳು, ಪ್ರಬಂಧಗಳು, ಕವನಗಳು, ವೈಚಾರಿಕ ವಿಮರ್ಶೆಗಳು, ಪ್ರವಾಸಿ ಲೇಖನಗಳು, ವೈದ್ಯಕೀಯ ಬರಹಗಳು ಇತ್ಯಾದಿಗಳನ್ನು ಬರೆಯುತ್ತ ಬಂದಿದ್ದಾರೆ. ಕರ್ನಾಟಕದ ಪ್ರಕಾಶಕರ ಜತೆಗೂಡಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮುಖ್ಯವಾಹಿನಿ ಕನ್ನಡ ಸಾಹಿತ್ಯ ಕ್ಷೇತ್ರದ ಹಲವಾರು ಬಹುಮಾನಗಳನ್ನು ಮತ್ತು ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2024ರ ನವೆಂಬರಿಗೆ, ಈ ಜಾಲತಾಣದ ಗುಂಪಿಗೆ ದಶಮಾನೋತ್ಸವದ ಸಂಭ್ರಮ. ವೈದ್ಯ ಜೋಡಿಗಳಾದ ರಾಜಶ್ರೀ ಮತ್ತು ವೀರೇಶ್‌ ಅವರ ಮನೆಯಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು. ಹತ್ತು ವರ್ಷದ ಹಾದಿಯ ಅವಲೋಕನ, ಪ್ರಬಂಧ, ಕಥೆ, ಕವನಗಳ ವಿಮರ್ಶೆ/ವಾಚನ, ಮುಂದಿನ ವರ್ಷಗಳಿಗೆ ಯೋಜನೆ/ಸಿದ್ಧತೆ ಇತ್ಯಾದಿ ಚಟುವಟಿಕೆಗಳ ಮೂಲಕ ಹೊಸ ಹುರುಪನ್ನು ತುಂಬಿಕೊಂಡು, ದಶಮಾನೋತ್ಸವದ ಸಂಭ್ರಮವನ್ನು ಆಚರಿಸಿ ಹೊಸ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದ್ದಾರೆ. ವಿದೇಶದ ಅಲ್ಪ ಸಂಖ್ಯಾಕ ಕನ್ನಡಿಗರ ನಡುವಿನ ಬೆರಳೆಣಿಕೆಯ ಸಾಹಿತ್ಯ ಪ್ರೇಮಿಗಳ ಈ ನಿರಂತರ ಬದ್ಧತೆ ಸುಲಭವಾದ ಮಾತೇನಲ್ಲ. ಇಂಗ್ಲಿಷರ ನಾಡಿನ ಕನ್ನಡ ಬರಹಗಾರರ ಈ ಸಾಹಿತ್ಯೋತ್ಸಾಹ ನಿರಂತರ ಮುಂದುವರೆಯಲೆಂದು ಶುಭಹಾರೈಸೋಣ.

ವರದಿ: ಡಾ| ಪ್ರೇಮಲತ ಬಿ., ಲಿಂಕನ್‌

ಟಾಪ್ ನ್ಯೂಸ್

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

Varroru-Sumeru

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿನ 405 ಅಡಿ ಎತ್ತರದ “ಸುಮೇರು ಪರ್ವತ’ ಲೋಕಾರ್ಪಣೆ

Dhr–Dhankar

Agriculture University: ಕೃಷಿ ಕೈಗಾರಿಕೆ ಲಾಭಾಂಶ ರೈತರಿಗೆ ಸಿಗಲಿ: ಉಪರಾಷ್ಟ್ರಪತಿ ಧನಕರ್‌

tirupati

Tirupati; ಇನ್ನೊಂದು ದುರಂತ: ಜಾರಿ ಬಿದ್ದು 3 ವರ್ಷದ ಮಗು ಸಾವು

BJP Symbol

Delhi: 9 ಅಭ್ಯರ್ಥಿಗಳ ಬಿಜೆಪಿ ಕೊನೇ ಪಟ್ಟಿ ಬಿಡುಗಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ

ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ

ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ

ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ

Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ

Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ

Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

Varroru-Sumeru

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿನ 405 ಅಡಿ ಎತ್ತರದ “ಸುಮೇರು ಪರ್ವತ’ ಲೋಕಾರ್ಪಣೆ

Dhr–Dhankar

Agriculture University: ಕೃಷಿ ಕೈಗಾರಿಕೆ ಲಾಭಾಂಶ ರೈತರಿಗೆ ಸಿಗಲಿ: ಉಪರಾಷ್ಟ್ರಪತಿ ಧನಕರ್‌

tirupati

Tirupati; ಇನ್ನೊಂದು ದುರಂತ: ಜಾರಿ ಬಿದ್ದು 3 ವರ್ಷದ ಮಗು ಸಾವು

BJP Symbol

Delhi: 9 ಅಭ್ಯರ್ಥಿಗಳ ಬಿಜೆಪಿ ಕೊನೇ ಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.