ಬಂಟರ ಆರ್ಥಿಕ ಸದೃಢತೆಗೆ ಐಬಿಸಿಸಿಐ ಸಂಸ್ಥೆ ಶಕ್ತಿ ತುಂಬುತ್ತಿದೆ: ಕೆ. ಸಿ. ಶೆಟ್ಟಿ 


Team Udayavani, Nov 1, 2021, 12:18 PM IST

Untitled-1

ಮುಂಬಯಿ: ಐಬಿಸಿಸಿಐ ಸಂಸ್ಥೆಯು ರಾಷ್ಟ್ರೀಯ ಉದ್ಯಮ ಸ್ಥರ ಪ್ರೇರಣ ಶಕ್ತಿಯಾಗಿದೆ. ಸಮಗ್ರ ಭಾರತೀಯ ಉದ್ಯಮಿ ಗಳ ಸಹಯೋಗದೊಂದಿಗೆ ಬಂಟ ಸಮಾಜದ ಉದ್ಯಮಿಗಳನ್ನು ಪ್ರೇರೇಪಿಸಿ ಆರ್ಥಿಕವಾಗಿ ಸದೃಢ ರಾಗಲು ಸಹಕಾರಿಯಾಗಿದೆ. ಬಂಟರ ಸದೃಢತೆಗೆ ಐಬಿಸಿಸಿಐ ಶಕ್ತಿಯಾಗಿದ್ದು, ನಮ್ಮವರು ಇದರ ಸದುಪಯೋಗ ಪಡೆದರೆ ನಮ್ಮ ಪ್ರಯತ್ನ ಸಫಲವಾಗಲಿದೆ ಎಂದು ಬಂಟ್ಸ್‌ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ (ಐಬಿಸಿಸಿಐ) ಕಾರ್ಯಾಧ್ಯಕ್ಷ ಕುತ್ಪಾಡಿ ಕೆ. ಸಿ. ಶೆಟ್ಟಿ  ತಿಳಿಸಿದರು.

ಬಂಟರ ಉದ್ಯಮಸ್ಥರ ಪ್ರತಿಷ್ಠಿತ ಸಂಸ್ಥೆ ಇಂಡಿಯನ್‌ ಐಬಿಸಿಸಿಐ ರವಿವಾರ ಸಂಜೆ ಅಂಧೇರಿ ಅಲ್ಲಿನ ಜೆ. ಡಬ್ಲ್ಯು. ಮರಿಯೊಟ್‌ (ಜುಹೂ) ಇದರ ಸಭಾಗೃಹದಲ್ಲಿ ಯುನಿಟಾಪ್‌ ಸಮೂಹ, ಆರ್ಗ್ಯಾನಿಕ್‌ ಪ್ರೈ. ಇಂಡಸ್ಟ್ರೀಸ್‌ ಲಿ. ಮತ್ತು ಹೆರಂಬಾ ಇಂಡಸ್ಟ್ರೀಸ್‌ ಲಿ. ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಜ್ಞಾನ ಶೃಂಗಸಭೆ 2021 ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಯೋಜನೆ, ಕಾರ್ಯಕ್ರಮಗಳ ಸದುಪಯೋಗವನ್ನು ಸದಸ್ಯ ಬಾಂಧವರು ಪಡೆಯುವಂತೆ ಮನವಿ ಮಾಡಿದರು.

ಚಾನ್ನೆಲ್‌ ಫ್ತೈಟ್‌ ಸರ್ವಿಸಸ್‌ ಇಂಡಿಯಾ ಪ್ರೈ. ಲಿ., ಅದಿತಿ ಎಸೆನ್ಶಿಯಲ್ಸ್‌ ಹಾಗೂ ಮಹೀದ್ರ ಮನುಲೈಫ್‌ ಮ್ಯೂಚಲ್‌ ಫಂಡ್ಸ್‌ ಸಂಸ್ಥೆಗಳ ಪ್ರಾಯೋಜಕತ್ವಲ್ಲಿ  ನೇರ ವ್ಯಾಪಾರ ಅಧಿವೇಶನ ನಡೆಸಲಾ

ಗಿದ್ದು, ಕೆಮಿಕಲ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌ ವಿಚಾರಿತ ಚರ್ಚೆಯಲ್ಲಿ  ಬ್ಲೂ ಅಶ್ವಇನೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಪರೇಶ್‌ ತ್ರಿವೇದಿ, ರೋಸಾರಿ ಬಯೋಟೆಕ್‌ ಲಿ.ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಎಸ್‌. ಚಾರಿ, ಹೆರಾನಾº ಇಂಡಸ್ಟ್ರೀಸ್‌ ಪ್ರೈ. ಲಿ.ನ ಸಿಎಂಡಿ ಎಸ್‌. ಕೆ. ಶೆಟ್ಟಿ  ಪಾಲ್ಗೊಂಡು ತಮ್ಮ ಔದ್ಯೋಗಿಕ ಅನುಭವಗಳನ್ನು ಹಂಚಿಕೊಂಡರು. ವಿಶ್ವಾತ್‌ ಕೆಮಿಕಲ್ಸ್‌ ಲಿ.ನ ಕಾರ್ಯಾಧ್ಯಕ್ಷ ಬಿ. ವಿವೇಕ್‌ ಶೆಟ್ಟಿ  ಚರ್ಚಾಕೂಟ ನಿರ್ವಹಿಸಿದರು.

ಬಿ. ವಿವೇಕ್‌ ಶೆಟ್ಟಿ  ಮಾತನಾಡಿ, ಮಹಾಮಾರಿ ಕೊರೊನಾವನ್ನು ಹತೋಟಿಗೆ ತರಲು ಕೆಮಿಕಲ್‌ನ ಪಾತ್ರ ಮಹತ್ತರವಾಗಿತ್ತು. ಕೆಮಿಕಲ್‌ ಇದನ್ನು ನಿಭಾಯಿಸಿದ ಕಾರಣ ಈ ಕಾರ್ಯಕ್ರಮ ಅಯೋಜಿಸಲು ಅನುಕೂಲಕರವಾಗಿದೆ. ಕೆಮಿಕಲ್‌ ಉದ್ಯಮಕ್ಕೆ ಬಹಳ ಬೇಡಿಕೆಯಿದ್ದು, ಇದು ಜಾಗತಿಕವಾಗಿ ಬೆಳೆಯುತ್ತಿದೆ ಎಂದರು.

ಬಂಡವಾಳ ಮಾರುಕಟ್ಟೆ  ಮತ್ತು ಆಸ್ತಿ ನಿರ್ವಹಣೆ ವಿಚಾರಿತ ಚರ್ಚೆ ಯಲ್ಲಿ  ಮಹೀಂದ್ರಾ ಮನುಲೈಫ್‌ ಮ್ಯೂಚುಯಲ್‌ ಫಂಡ್ಸ್‌ನ ಸಿಎಂಡಿ ಅಶುತೋಷ್‌ ಬಿಷ್ಣೋಯ್‌, ಐಎಫ್‌ಎಫ್‌ಸಿಒ ಟೊಕಿಯೊ ಜನ ರಲ್‌ ಇನ್ಶೂರೆನ್ಸ್‌ ಕಂಪೆನಿ ಲಿ.ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಮಾರ್ಕೆಟಿಂಗ್‌) ಗುಣಶೇಖರ್‌ ಬೋಗಾ, ಜೆ. ಎಂ. ಫೈನಾನ್ಶಿಯಲ್‌ ಅಸೆಟ್‌ ರೀಕನ್‌ಸ್ಟ್ರಕ್ಷನ್‌ ಕಂಪೆನಿ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್‌ ಗ್ರೋವರ್‌ ತಮ್ಮ ವ್ಯವಹಾರಗಳ ಅನುಭವಗಳನ್ನು ಹಂಚಿಕೊಂಡರು. ಐಬಿಸಿಸಿಐ ನಿರ್ದೇಶಕ ಸಿಎ ಶಂಕರ್‌ ಬಿ. ಶೆಟ್ಟಿ  ಚರ್ಚಾಕೂಟ ನಿರೂಪಿಸಿದರು.

ಸಿಎ ಶಂಕರ್‌ ಬಿ. ಶೆಟ್ಟಿ  ಮಾತನಾಡಿ, ಆಧುನಿಕ ಜೀವನ ವ್ಯವಸ್ಥೆಯಲ್ಲಿ  ವಿಮಾ ವ್ಯವಸ್ಥೆಯ ಪಾತ್ರ ಮಹತ್ತರವಾದದ್ದು. ವಿಮಾ ಪದ್ಧತಿಯ ಪರಿಹಾರ ಕ್ರಮ ಜೀವನ ರಕ್ಷಣೆಗೆ ಪೂರಕವಾಗಿರುವ ಕಾರಣ ಪ್ರತಿಯೊ ಬ್ಬರು ಇದನ್ನು ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ರಿಯಲ್‌ ಎಸ್ಟೇಟ್‌ ಮತ್ತು ಹಾಸ್ಪಿ ಟಾಲಿಟಿ ವಿಚಾರಿತ ಚರ್ಚೆಯಲ್ಲಿ  ಹೆರಿಟೇಜ್‌ ಸಮೂಹದ ಕಾರ್ಯಾಧ್ಯಕ್ಷ ಪ್ರದೀಪ್‌ ಶೆಟ್ಟಿ, ವಿಟ್ಸ್‌ ಕಾಮತ್ಸ್ ಗ್ರೂಪ್‌ನ ಸಂಸ್ಥಾಪಕಾಧ್ಯಕ್ಷ ಡಾ| ವಿಕ್ರಮ್‌ ಕಾಮತ್‌, ಪ್ರೀತಮ್‌ ದಾ ಧಾಬಾ ಮತ್ತು ಗ್ರ್ಯಾಂಡ್‌ ಮಾಮಾಸ್‌ ಕೆಫೆ ಹಾಗೂ ಪ್ರೀತಮ್‌ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ಗುರ್ಬಕ್ಷೀಶ್‌ ಸಿಂಗ್‌ ಕೊಹ್ಲಿ  ತಮ್ಮ ವ್ಯಾಪಾರೋದ್ಯಮದಲ್ಲಿನ ಅನುಭವಗಳನ್ನು ಹಂಚಿಕೊಂಡರು. ಮಹಾರಾಜ ರೆಸ್ಟೋರೆಂಟ್‌ನ ನಿರ್ದೇಶಕ ಪ್ರದೀಪ್‌ ಶೆಟ್ಟಿ  ಸಂಯೋಜಕರಾಗಿ ಚರ್ಚಾಕೂಟ ನಡೆಸಿದರು. ಪ್ರದೀಪ್‌ ಶೆಟ್ಟಿ  ಮಾತನಾಡಿ, ಹೊಟೇಲ್‌ ಉದ್ಯಮ ಆದರಾತಿಥ್ಯದ ಪುಣ್ಯದ ಸೇವಾ ಉದ್ಯಮವಾಗಿದೆ. ಇದು ಉದ್ಯಮಕ್ಕಿಂತ ಪುಣ್ಯದ ಕಾಯಕ ಎಂದರು.

ಅತಿಥಿಗಳಾಗಿ ಶಶಿಕಿರಣ್‌ ಶೆಟ್ಟಿ, ರಾಜಕಿರಣ್‌ ರೈ, ಅಜಿತ್‌ ಕುಮಾರ್‌ ರೈ, ಚಾನ್ನೆಲ್‌ ಫ್ತೈನ್‌ ಸಿಎಂಡಿ ಕಿಶನ್‌ ಜೆ. ಶೆಟ್ಟಿ, ಅದಿತಿ ಎಸೆನ್ಶಿಯಲ್ಸ್‌ ಸಿಎಂಡಿ ಭರತ್‌ ಶೆಟ್ಟಿ, ಅತಿಥಿಗಳಾಗಿ ಐಬಿಸಿಸಿಐ ಉಪಾಧ್ಯಕ್ಷ ಎಸ್‌. ಬಿ. ಶೆಟ್ಟಿ, ಕೋಶಾಧಿಕಾರಿ ದುರ್ಗಾ ಪ್ರಸಾದ್‌ ಬಿ. ರೈ, ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ನಿರ್ದೇಶಕರಾದ ನಿಶಿತ್‌ ಶೆಟ್ಟಿ, ಹಿತೇಶ್‌ ಶೆಟ್ಟಿ, ಬಿ. ಬಿ. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪಾಂಡುರಂಗ ಎಲ್‌. ಶೆಟ್ಟಿ, ಸಿಎ ಶಂಕರ ಬಿ. ಶೆಟ್ಟಿ, ಶ್ರೀನಾಥ್‌ ಶೆಟ್ಟಿ, ಕಿಶನ್‌ ಜೆ. ಶೆಟ್ಟಿ  ಐಬಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸದಸ್ಯರು ಸಹಿತ ಐಬಿಸಿಸಿಐ ಪರಿವಾರ ಸದಸ್ಯರು ಉಪಸ್ಥಿತರಿದ್ದರು.

ಐಬಿಸಿಸಿಐ ಉಪಾಧ್ಯಕ್ಷ ಎಸ್‌. ಬಿ. ಶೆಟ್ಟಿ  ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿ. ವಿವೇಕ್‌ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ದರು. ಪ್ರಕಾಶ್‌ ಭಂಡಾರಿ, ಕೀರ್ತಿ ಶೆಟ್ಟಿ  ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಿದರು. ಐಬಿಸಿಸಿಐ ಕಾರ್ಯಾಚರಣ ವ್ಯವಸ್ಥಾಪಕಿ ನಮಿತಾ ಆರ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೆ. ಜಯ ಸೂಡಾ ವಂದಿಸಿದರು.

-ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.