ದಾನಿ-ದಾನಗಳ ಬಂಟ ಸಮಾಜ ವಿಶ್ವವಿಖ್ಯಾತಿ: ಚಂದ್ರಹಾಸ್ ಕೆ. ಶೆಟ್ಟಿ
Team Udayavani, Mar 1, 2022, 11:39 AM IST
ಮುಂಬಯಿ: ಕೋವಿಡ್ ನಿಮಿತ್ತ ಎರಡು ವರ್ಷಗಳ ಬಳಿಕ ನಾವು ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಲು ಹೆಮ್ಮೆಯಾಗುತ್ತಿದೆ. ನಮ್ಮಲ್ಲಿನ ಸಾಧಕರನ್ನು ಗುರುತಿಸುವುದರಿಂದ ಯುವ ಜನಾಂಗಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಬಂಟರು ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕವಾಗಿ ಗುರುತಿಸಿಕೊ ಳ್ಳಲು ಸನ್ನದ್ಧರಾಗಿದ್ದು ಹೊಸ ಯುಗದತ್ತ ದಾಪು ಗಾಲಿಡುತ್ತಿದ್ದಾರೆ. ಸ್ವಸಮಾಜವನ್ನು ಸುಶಿಕ್ಷಿತರನ್ನಾಗಿಸಿ ಜಾಗತಿಕವಾಗಿ ಬಂಟ ರನ್ನು ಪರಿಚಯಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಬಂಟರು ಸ್ವಾಭಿಮಾನಿ ಗಳಾಗಿದ್ದು, ಈ ಮಧ್ಯೆ ಆರ್ಥಿಕವಾಗಿ ಹಿಂದುಳಿದ ಬಂಟರು ಶಿಕ್ಷಣದಿಂದ ವಂಚಿತರಾಗುವ ಪ್ರಶ್ನೆಯಿಲ್ಲ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ತಿಳಿಸಿದರು.
ಬಂಟರ ಸಂಘ ಮುಂಬಯಿ ಫೆ. 27ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮಿಲನ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರ ಸಂಘದ ಬೊರಿವಲಿ ಶಿಕ್ಷಣ ಯೋಜನೆ ಸಹಿತ 2-3 ಉನ್ನತ ಶಿಕ್ಷಣಾಲಯಗಳು ಸೇವೆಯಲ್ಲಿವೆ. ಬಂಟರ ಶೈಕ್ಷಣಿಕ ಸಂಸ್ಥೆ ಗಳು ಸೇವೆಯಲ್ಲಿ ಮುಂಬಯಿಯಲ್ಲೇ ಪ್ರಥಮ ಶ್ರೇಣಿಯಲ್ಲಿವೆ. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲದ ವ್ಯವಸ್ಥೆ ಮಾಡಿದ್ದೇವೆ. ಸದ್ಯದಲ್ಲೇ ಕಂಕಣ ಭಾಗ್ಯ ಯೋಜನೆ ಸೇವಾರ್ಪಣೆಗೊಳ್ಳಲಿದೆ. ರಾಷ್ಟ್ರೀಯ ನಾಗ ರಿಕ ಸೇವೆ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮಲ್ಲಿನ ಕ್ರೀಡಾಸಕ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿರಾಗ್ ಶೆಟ್ಟಿ ನ್ಪೋರ್ಟ್ಸ್ ಅಚೀವರ್ ಅವಾರ್ಡ್ ಅನ್ನು ವಾರ್ಷಿಕವಾಗಿ ಕೊಡ ಮಾಡುವ ಬಗ್ಗೆ ಚಿಂತಿಸಿದ್ದೇವೆ. ಒಂಬತ್ತು ಪ್ರಾದೇಶಿಕ ಸಮಿತಿಗಳ ಮೂಲಕ ಸಂಘದ ಸಮಾಜಪರ ಯೋಜನೆಗಳು ಬಂಟ ಬಾಂಧವರ ಮನೆ-ಮನಗಳಿಗೆ ತಲುಪುತ್ತಿವೆ. ಹಿರಿಯ ಮಾರ್ಗದರ್ಶನ, ದಾನಿಗಳ ಸಹಾಯ, ಸಂಸ್ಥೆಯ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಪದಾಧಿಕಾರಿಗಳು, ಸದಸ್ಯರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮಲ್ಲಿ ದಾನಿಗಳು ಬಹಳಷ್ಟು ಮಂದಿ ಇದ್ದು, ಅವರು ಸಹಕರಿಸುತ್ತಿರುವುದು ಬಂಟ ಸಮಾಜಕ್ಕೆ ಹೆಮ್ಮೆಯ ವಿಷಯ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸಂಘದ ವತಿಯಿಂದ ಪುರಸ್ಕಾರ, ಸಮ್ಮಾನ ವನ್ನಿತ್ತು ಗೌರವಿಸಲಾಗಿದೆ. ಅವರೆಲ್ಲರಿಗೂ ಅಭಿನಂದನೆಗಳು. ಇಂದಿನ ಸಂಭ್ರಮಕ್ಕಾಗಿ ಶ್ರಮಿಸಿದ ಎಲ್ಲ ಬಂಧುಗಳಿಗೆ ಕೃತಜ್ಞತೆಗಳು. ನಿಮ್ಮೆಲ್ಲರ ಸಹಕಾರ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ತಿಳಿಸಿದರು.
ಸಮಾರಂಭವನ್ನು ಬಂಟ ಸಮುದಾಯದ ಹಿರಿಯ ಧುರೀಣ, ಪ್ರತಿಷ್ಠಿತ ಉದ್ಯಮಿ, ಕೊಡುಗೈ ದಾನಿ ಎಸ್. ಎಂ. ಸಮೂಹದ ಕಾರ್ಯಾಧ್ಯಕ್ಷ ಎಸ್. ಎಂ. ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಚರಿಷ್ಮಾ ಬಿಲ್ಡ ರ್ಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸುಧೀರ್ ವಿ. ಶೆಟ್ಟಿ ಅವರು ಬಂಟ್ಸ್ ಫ್ಯಾಮಿಲಿ ಎಡಾಪ್ಶನ್ ಯೋಜನೆಯನ್ನು ನಾಮಫಲಕ ಅನಾವರಣಗೊಳಿಸಿ ಉದ್ಘಾಟಿ ಸಿದರು. ಗೌರವ ಅತಿಥಿಗಳಾಗಿ ಪಾಲ್ಗೊಂಡ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಬಂಟ್ಸ್ ಡಿಜಿಟಲ್ ವರ್ಲ್ಡ್ ಪ್ರವೇಶದ ಮೊಬೈಲ್ ಆ್ಯಪ್ ಮತ್ತು ಎಂಆರ್‌ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ. ಲಿ.ನ ಕಾರ್ಯಾಧéಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಅವರು ಬಂಟ್ಸ್ ಟ್ಯಾಲೆಂಟ್ ಎಡಾಪ್ಶನ್ ಯೋಜನೆಯನ್ನು ನಾಮಫಲಕ ಅನಾವರಣ ಗೊಳಿಸಿ ಉದ್ಘಾಟಿಸಿದರು. ಬೊರಿವಲಿ ಶಿಕ್ಷಣ ಯೋಜನೆಯ ಬಗ್ಗೆ ಕಿರಣ್ ಶೆಟ್ಟಿ ಹಾಗೂ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಬಗ್ಗೆ ನಿತ್ಯಾನಂದ ಶೆಟ್ಟಿ ಮಾಹಿತಿ ನೀಡಿದರು.
ಪ್ರಶಸ್ತಿ ಪ್ರದಾನ :
ಸಂಘದ ಜೀವಮಾನ ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ಖ್ಯಾತ ಉದ್ಯಮಿ, ಕೊಡುಗೈದಾನಿ ಎಸ್‌ಎಂ ಗ್ರೂಪ್ ಆಫ್ ಕಂಪೆನೀಸ್ ಕಾರ್ಯಾಧéಕ್ಷ, ಆಡಳಿತ ನಿರ್ದೇಶಕ ಎಸ್. ಎಂ. ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ದಿ| ರಮಾನಾಥ ಎಸ್. ಪಯ್ಯಡೆ ಸ್ಮಾರಕ ವರ್ಷದ ಅತ್ಯುತ್ತಮ ಬಂಟ ಸಾಧಕ ಪ್ರಶಸ್ತಿಯನ್ನು ಪ್ರಶಸ್ತಿಯ ಪ್ರಾಯೋಜಕ ಡಾ| ಪಿ. ವಿ. ಶೆಟ್ಟಿ ಮತ್ತು ಕುಟುಂಬಸ್ಥರ ಉಪಸ್ಥಿತಿಯಲ್ಲಿ ಪ್ರಸಿದ್ಧ ಉದ್ಯಮಿ, ಸಮಾಜ ಸೇವಕ, ವಿ. ಕೆ. ಗ್ರೂಪ್ ಆಫ್ ಕಂಪೇನಿಸ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿ.ನ ಕಾರ್ಯಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸದಾಶಿವ ಶೆಟ್ಟಿ ಅವರಿಗೆ ಪ್ರದಾನ ಮಾಡಯಿತು. ಶೆಫಾಲಿ ಮನೋಹರ್ ಹೆಗ್ಡೆ ಸ್ಮಾರಕ ವರ್ಷದ ಅತ್ಯುತ್ತಮ ಬಂಟ ಸಾಧಕಿ ಪ್ರಶಸ್ತಿಯನ್ನು ಪ್ರಶಸ್ತಿ ಪ್ರಾಯೋಜಕರಾದ ಡಾ| ಮನೋಹರ್ ಹೆಗ್ಡೆ ಮತ್ತು ಆಶಾ ಮನೋಹರ್ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ನೈಋತ್ಯ ರೈಲ್ವೇ ವಿಭಾಗದ ಉಪಮುಖ್ಯ ವಾಣಿಜ್ಯ ಪ್ರಬಂಧಕಿ ಪ್ರಿಯಾ ಶೆಟ್ಟಿ ಐಆರ್‌ಟಿಎಸ್ ಅವರಿಗೆ ಪ್ರದಾನ ಮಾಡಲಾಯಿತು.
ಕ್ರೀಡಾ ಸಾಧಕ ಪ್ರಶಸ್ತಿಯನ್ನು ಇಂಡಿಯನ್ ಬ್ಯಾಡ್ಮಿಂಟನ್, ಒಲಿಂಪಿಕ್ ಆಟಗಾರ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಚಿರಾಗ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಬಂಟ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಬಂಟ ಸಾಧಕರಾದ ಸಾಹಿತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ| ಸುನೀತಾ ಎಂ. ಶೆಟ್ಟಿ, ಏರ್‌ಡಿಫೆನ್ಸ್ ಕಾರ್ಪೊರೇಶನ್, ಇಂಡಿಯನ್ ಆರ್ಮಿ ಮೇಜರ್ ಅಶ್ವಿನಿ ಶೆಟ್ಟಿ, ಹೊಟೇಲ್ ಗುರುದೇವ್ ಕಲ್ಯಾಣ್ ಇದರ ಭಾಸ್ಕರ್ ಶೆಟ್ಟಿ, ಚಾನೆಲ್ ಫ್ರೈಟ್ ಸರ್ವಿಸಸ್ ಇಂಡಿಯಾ ಪ್ರೈ. ಲಿ. ನ ಆಡಳಿತ ನಿರ್ದೇಶಕ ಕಿಶನ್ ಶೆಟ್ಟಿ, ಮೂಳೆ ಶಸ್ತ್ರಚಿಕಿತ್ಸೆ ತಜ್ಞ ಡಾ| ವಿ. ಎಂ. ಶೆಟ್ಟಿ, ಲೆಕ್ಕಪರಿಶೋಧಕ ಸಿಎ ಹರೀಶ್ ಎಚ್. ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಮತ್ತು ಸಮ್ಮಾನಿತರು ಮಾತನಾಡಿದರು.
ಬಂಟರ ಸಂಘದ ಎಸ್. ಎಂ. ಶೆಟ್ಟಿ ಶೈಕ್ಷಣಿಕ ಸಮಿತಿ ಪೊವಾಯಿ ಇದರ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಟಿ. ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ ಉಪಸ್ಥಿತರಿದ್ದರು.
ಆಲ್ ಕಾರ್ಗೋ ಲಾಜಿಸ್ಟಿಕ್ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರ ಸಂದೇಶವನ್ನು ಡಾ| ಆರ್. ಕೆ. ಶೆಟ್ಟಿ ವಾಚಿಸಿದರು. ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ದೃಶ್ಯ ಮಾಧ್ಯಮದ ಮೂಲಕ ಸಂದೇಶ ನೀಡಿದರು. ಅಧ್ಯಕ್ಷರು ಸಂಘದ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ದಾನಿಗಳನ್ನು, ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು.
ಸಂಘದ ವಿಶ್ವಸ್ತರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಉಪ ಸಮಿತಿಗಳ ಪದಾಧಿಕಾರಿಗಳು, ಎಲ್ಲ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸಮನ್ವಯಕರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಂಟ್ಸ್ ಗಾಟ್ ಟ್ಯಾಲೆಂಟ್ ಪ್ರತಿಭಾನ್ವೇಷಣೆ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿ ಸಲಾಯಿತು. ಮಧ್ಯಾಂತರದಲ್ಲಿ ಸಂಘದ 98 ವರ್ಷಗಳ ನಡೆ ಹಾಗೂ ಬಂಟರ ಸಂಘ ಬೊರಿವಲಿ ಶಿಕ್ಷಣ ಯೋಜನೆಯ ತ್ರೀಡಿ ವಾಕ್ ಸಾಕ್ಷ Âಚಿತ್ರ ಪ್ರದರ್ಶಿಸಲಾಯಿತು. ಶೈಲಜಾ ಶೆಟ್ಟಿ, ಜಯಲತಾ ಶೆಟ್ಟಿ, ರಜನಿ ಆರ್. ಶೆಟ್ಟಿ ಪ್ರಾರ್ಥನೆಗೈದರು. ಚಂದ್ರಹಾಸ ಕೆ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘದ ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಯನ್ನಿತ್ತು ಗೌರವಿಸಿದರು. ಅಶೋಕ್ ಪಕ್ಕಳ ಮತ್ತು ಅನುಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಳೂ¤ರು ಮೋಹನ್‌ದಾಸ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಅರ್ಥಪೂರ್ಣ-ವೈಶಿಷ್ಟ್ಯಪೂರ್ಣ :
ಬಂಟರ ಭವನವು ಜನಸ್ತೋಮದಿಂದ ತುಂಬಿ ಜಾತ್ರೆಯಾಗಿ ಕಂಗೊಳಿಸುತ್ತಿತ್ತು. ತಿರುಪತಿ ವೆಂಕಟೇಶ್ವರನ ಅಲಂಕಾರದಿಂದ ರೂಪಿತ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಪ್ರತಿಕೃತಿಯ ದ್ವಾರಕಕ್ಷೆ ಆಮಂತ್ರಿತರಿಗೆ ಸಾಕ್ಷಾತ್ ಅಮ್ಮನ ದರ್ಶನ ನೀಡುತ್ತಿತ್ತು. ವಿಶಾಲವಾದ ಪರದೆ, ಶೃಂಗಾರಗೊಂಡಿದ್ದ ಭವನದ ವೇದಿಕೆ ಆಕರ್ಷಣೀಯವಾಗಿತ್ತು. ಕಿಕ್ಕಿರಿದು ತುಂಬಿದ್ದ ಸಭಿಕರಿಂದ ಸ್ಪರ್ಧಿಗಳಿಗೆ ಸೀಟಿ, ಚಪ್ಪಾಳೆಯ ಸ್ವಾಗತ ವಿಶೇಷತೆಯಾಗಿತ್ತು. ದೇಶದ ಸ್ವಾತಂತ್ರÂ ಅಮೃತ ಮಹೋತ್ಸವದ ಗೌರವಾರ್ಪಣೆಯ ನೃತ್ಯರೂಪಕದೊಂದಿಗೆ ಸಭಾಂಗಣದ ವಿಸ್ತಾರವುಳ್ಳ ತ್ರಿವರ್ಣ ಧ್ವಜವು ವೇದಿಕೆಯಿಂದ ಸಭಾಗೃಹದ ಮೇಲಿಂದ ಒಯ್ದು ಎಲ್ಲರಲ್ಲೂ ರಾಷ್ಟ್ರಪ್ರೇಮ ಮೂಡಿಸಿದ ಪರಿ ರೋಮಾಂಚಕವಾಗಿತ್ತು. ದೇಶಭಕ್ತ ಕ್ರಾಂತಿಕಾರಿ ಭಗತ್ ಸಿಂಗ್ ಪ್ರಧಾನ್ಯತೆಯ ನೃತ್ಯರೂಪಕವು ಪ್ರೇಕ್ಷಕರಲ್ಲಿ ದೇಶಭಕ್ತಿ ಪುಟಿದೇಳುವಂತೆ ಮಾಡಿತು. ಬ್ಯಾಂಡು – ವಾದ್ಯದ ನಿನಾದದಿಂದ ಅತಿಥಿಗಳ ಆಗಮನ ವಿಶೇಷವಾಗಿತ್ತು. ತೊಂಬತ್ತರ ಸುನೀತಕ್ಕ ನಿರಂತರ ಒಂಬತ್ತು ಗಂಟೆಗಳ ಕಾಲ ಸಭಿಕರೊಂದಿಗೆ ಕಾರ್ಯಕ್ರಮವನ್ನು ವೀಕ್ಷಿಸಿ ಯುವಜನತೆಗೆ ಪ್ರೇರಣೆಯಾದರು. ಪಿ. ಧನಂಜಯ ಶೆಟ್ಟಿ ಅವರ ಅತಿಥಿ ಸತ್ಕಾರ ಮತ್ತು ಸಭಾಗೃಹದೊಳಗೆ ಅತಿಥಿಗಳ ಆಸನ ವ್ಯವಸ್ಥೆಗೈದ ವಿಟuಲ್ ಆಳ್ವರ ಕಾರ್ಯವೈಖರಿ ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಇಂದಿನ ಎಸ್. ಎಂ. ಶೆಟ್ಟಿ ಅವರ ಸಮ್ಮಾನ ನಮ್ಮ ದೊಡ್ಡ ಸಾಧನೆಯಾಗಿದೆ. ಅವರು ಸಹೃದಯದ ವ್ಯಕ್ತಿ. ಮನಮೋಹನ್ ಶೆಟ್ಟಿ ಈ ಸಂಘದ ಬಹುದೊಡ್ಡ ದಾನಿಯಾಗಿದ್ದು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ಪೊವಾಯಿಯ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 8,000 ವಿದ್ಯಾರ್ಥಿಗಳಿದ್ದು, ಎಸ್. ಎಂ. ಶೆಟ್ಟಿ ಬಂಟರ ಎಜುಕೇಶನ್ ಬ್ರ್ಯಾಂಡ್ ಆಗಿದೆ.–ಸುಧೀರ್ ವಿ. ಶೆಟ್ಟಿ, ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕರು, ಚರಿಷ್ಮಾ ಬಿಲ್ಡರ್ಸ್ ಮುಂಬಯಿ
ಅಸಾಧಾರಣ ಮತ್ತು ವೈಶಿಷ್ಟ್ಯ ಮಯ ಸಂಭ್ರಮ ಇದಾಗಿದೆ. ಎಸ್. ಎಂ. ಶೆಟ್ಟಿ ಅವರು ಪರಿವಾರ ಸಹಿತ ಬಂದು ಪಡೆದ ಗೌರವದಿಂದ ಈ ಕಾರ್ಯಕ್ರಮ ಪರಿಪೂರ್ಣವಾಗಿದೆ. ಆರಂಭದಿಂದ ಈವರೆಗೆ ನಮ್ಮಲ್ಲಿನ ಕೊಡುಗೈ ದಾನಿಗಳ ಸಹಕಾರದಿಂದ ಬಂಟರ ಸಂಘವು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಸಮುದಾಯದ ಋಣ ಪೂರೈಸಲು ಇದೊಂದು ಅವಕಾಶವಾಗಿದೆ. ಸಂಘವು ಮತ್ತಷ್ಟು ಎತ್ತರಕ್ಕೇರಲಿ. ಅದಕ್ಕಾಗಿ ಇನ್ನಷ್ಟು ಕೊಡುಗೈ ದಾನಿಗಳೂ ಹುಟ್ಟಲಿ. ಸಂಘದೊಂದಿಗೆ ಅಖಂಡ ಬಂಟರಲ್ಲಿ ಏಕತೆ ಮೂಡಿ ಬರಲಿ.–ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಎರಡು ವರ್ಷಗಳ ಬಳಿಕ ಈ ಸಭಾಗೃಹದಲ್ಲಿ ಸುದೀರ್ಘವಾಗಿ ನಡೆಸಲ್ಪಟ್ಟ ಕಾರ್ಯಕ್ರಮದಿಂದ ಹಳೆಯ ಎಲ್ಲ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಪೂರೈಸಿ ಇತಿಹಾಸ ನಿರ್ಮಿಸಿದಂತಾಗಿದೆ. ಇದೇ ಬಂಟರ ಶಕ್ತಿಯಾಗಿದೆ. ಬಂಟರ ಸಂಘವು ಇಂದು ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆಗಳನ್ನು ಮಾಡುತ್ತಿದೆ. ಇಂದಿನ ಪ್ರಶಸ್ತಿ ಪ್ರದಾನ, ಸಮ್ಮಾನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಹಿರಿಯರು-ಕಿರಿಯರ ಸಮ್ಮಿಲನವನ್ನು ಇಂದಿನ ಸಮಾರಂಭದಲ್ಲಿ ಕಾಣುವಂತಾಯಿತು. ಸಮಾಜದ ಅಭಿವೃದ್ಧಿಗೆ ನನ್ನ ಸಹಕಾರ ಸದಾಯಿದೆ.–ಪ್ರಕಾಶ್ ಕೆ. ಶೆಟ್ಟಿ, ಕಾರ್ಯಾಧéಕ್ಷ ಮತ್ತು ಆಡಳಿತ ನಿರ್ದೇಶಕರು, ಎಂಆರ್‌ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ. ಲಿ.
–ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.