ಬಂಟರ ಸಂಘ ಅಂಧೇರಿ-ಬಾಂದ್ರಾ ಸಮಿತಿ:ಸೀರೆ,ವಜ್ರಾಭರಣ ಪ್ರದರ್ಶನ
Team Udayavani, Jan 16, 2018, 11:38 AM IST
ಮುಂಬಯಿ: ಮಕರ ಸಂಕ್ರಾಂತಿಯ ಶುಭಾವಸರದಂದು ನಾವೆಲ್ಲರೂ ಇಲ್ಲಿ ಸೇರಿ ಖುಷಿಯಿಂದ ಒಂದಷ್ಟು ಹೊತ್ತು ಕಳೆಯುವ ಅವಕಾಶವನ್ನು ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಒದಗಿಸಿಕೊಟ್ಟಿದೆ. ಅಂಧೇರಿಗೂ ನನಗೂ ಬಹಳ ನಿಕಟವಾದ ಸಂಬಂಧವಿದೆ. ನಾನು ಮದುವೆಯಾಗಿ ಬಂದಾಗಿನ ಮನೆಯಾಗಿರಬಹುದು ನಮ್ಮ ವ್ಯಾಪಾರ ಕ್ಷೇತ್ರವಾಗಿರಬಹುದು ಎಲ್ಲವೂ ಅಂಧೇರಿ ಸುತ್ತಮುತ್ತಲಿನಲ್ಲಿದೆ. ಇಂದು ಮಹಿಳೆಯರಿಗೆ ಅತ್ಯಂತ ಪ್ರೀತಿಯ ಸೀರೆ ಹಾಗೂ ವಜ್ರಾಭರಣಗಳ ಪ್ರದರ್ಶನ, ಮಾರಾಟವನ್ನು ಈ ಸಮಿತಿಯಿಂದ ಆಯೋಜಿಸಿದ್ದೀರಿ. ಮುಂದೆಯೂ ನಿಮ್ಮ ಸಮಿತಿಯಿಂದ, ಮಹಿಳಾ ವಿಭಾಗದಿಂದ ಉತ್ತಮ ಕಾರ್ಯಗಳು ನಡೆಯಲಿ ಎಂದು ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರು ನುಡಿದರು.
ಜ. 14 ಮಕರ ಸಂಕ್ರಾಂತಿಯಂದು ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಪೊವಾಯಿ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಕುಲದ ಅಡಿಟೋರಿಯಂನಲ್ಲಿ ಏರ್ಪಡಿಸಿದ್ದ ಸೀರೆ ಹಾಗೂ ವಜ್ರಾಭರಣ ಪ್ರದರ್ಶನ ಹಾಗೂ ಮಾರಾಟದ ಉದ್ಘಾಟನೆಗೈದು ಅವರು ಶುಭಹಾರೈಸಿದರು.
ಅತಿಥಿಯಾಗಿ ಪಾಲ್ಗೊಂಡ ಭಿವಂಡಿಯ ಮಾಜಿ ನಗರ ಸೇವಕಿ ಶಶಿಕಲಾ ಸಂತೋಷ ಶೆಟ್ಟಿ ಅವರು ಮಾತನಾಡಿ, ಇಂದಿನ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಸುಂದರ ವಾಗಿ ಆಯೋಜಿಸಿದ್ದೀರಿ. ಮಹಿಳೆಯರ ಪ್ರೀತಿ ಪಾತ್ರ ಸೀರೆ ಆಭರಣಗಳು ಇವೆ ಅಂದಾಕ್ಷಣ ನಾನು ಇಲ್ಲಿಗೆ ಬರಲು ಒಪ್ಪಿಕೊಂಡಿದ್ದೇನೆ. ಅತಿಥಿಯಾಗಿ ಆಮಂತ್ರಿಸಿದ ನಿಮಗೆ ವಂದನೆಗಳು. ನಿಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ನುಡಿದು, ಭವಿಷ್ಯದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಲಿನಿ ಪದ್ಮನಾಭ ಪಯ್ಯಡೆ, ವರ್ಷಾ ಸುಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದು ಸಮಯೋಚಿತವಾಗಿ ಮಾತನಾಡಿದರು. ಸಂಚಾಲಕರಾದ ಅಪ್ಪಣ್ಣ ಎಂ. ಶೆಟ್ಟಿ ಅವರು ಮಾತನಾಡಿ, ನಿಮ್ಮ ಎಲ್ಲ ಯೋಜನೆ ಯೋಚನೆಗಳು ಸಾಕಾರವಾಗಲಿ ಎಂದು ನುಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ನೋಂಡ ಅವರು ಪ್ರೀತಿಯ ಕರೆಯನ್ನು ಮನ್ನಿಸಿ ಆಗಮಿಸಿದವರೆಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ಬಂಟರ ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.
ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ ಅವರು ಕಾರ್ಯ ಕ್ರಮದ ಯಶಸ್ಸಿಗೆ ಶುಭಹಾರೈಸಿದರು.
ಅನಿತಾ ಆರ್.ಕೆ. ಶೆಟ್ಟಿ, ಆರ್.ಜಿ. ಶೆಟ್ಟಿ, ರಮೇಶ್ ರೈ, ಡಿ.ಕೆ. ಶೆಟ್ಟಿ, ಸುನಿಲ್ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶೋಭಾ ಎಸ್. ಶೆಟ್ಟಿ, ಸ್ಮಿತಾ ಶೆಟ್ಟಿ, ಪ್ರಶಾಂತಿ ಶೆಟ್ಟಿ, ಸವಿತಾ ಶೆಟ್ಟಿ, ವಿಂದ್ಯಾ ಬಲ್ಲಾಳ್, ನಿವೇದಿತಾ ಶೆಟ್ಟಿ, ಗೀತಾ ಶೆಟ್ಟಿ, ಪ್ರೇಮಾ ಶೆಟ್ಟಿ, ಜ್ಯೋತಿ ಶೆಟ್ಟಿ, ಶೈಲಾ ಶೆಟ್ಟಿ, ಸುಜಾತಾ ಶೆಟ್ಟಿ ಕಲಿನಾ, ವಜ್ರಾ ಶೆಟ್ಟಿ, ಶೋಭಾ ರೈ, ವಿನುತಾ ಶೆಟ್ಟಿ ಮೊದಲಾದವರು ಸಹಕರಿಸಿದರು.
ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಉಪ ಕಾರ್ಯಾಧಕ್ಷೆ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮ ಹೊಸ ಸಮಿತಿಯ ಮೊದಲ ಹೆಜ್ಜೆ ಇದು. ಮಹಿಳಾ ವಿಭಾಗದ ಕೆಲವು ವರ್ಷದ ಹಿಂದಿನ ಯೋಜನೆಯಾದರೂ ಇಂದು ಅದಕ್ಕೆ ಒಳ್ಳೆಯ ದಿನ ಕೂಡಿ ಬಂದಿದೆ. ಹಲವು ದಿನಗಳ ಪರಿಶ್ರಮದಿಂದ ಮಹಿಳಾ ವಿಭಾಗದವರ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ಸಮಿತಿಯ ಸದಸ್ಯರ ಸಹಕಾರ ಸದಾ ಇದೆ. ನಾವೆಲ್ಲರೂ ಒಂದು ಮನೆಯ ಸದಸ್ಯರಂತೆ ಒಗ್ಗಟ್ಟಿನಿಂದ ಸತ್ಕಾರ್ಯಗಳನ್ನು ಮಾಡೋಣ.
-ಡಾ| ಆರ್. ಕೆ. ಶೆಟ್ಟಿ, ನೂತನ ಕಾರ್ಯಾಧ್ಯಕ್ಷರು,
ಬಂಟರ ಸಂಘ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ
ನನ್ನ ಬಹುದಿನಗಳ ಕನಸೊಂದು ಇಂದು ನನಸಾಗಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಿದೆ. ಮುಂದೆಯೂ ಆಗುತ್ತದೆ ಎಂಬ ಭರವಸೆ ನನಗಿದೆ. ಇಂದು ಕಾರ್ಯ ನೆರವೇರಿದ ಸಂತೋಷ ನಮ್ಮ ಮಹಿಳಾ ವಿಭಾಗಕ್ಕಿದೆ. ನಾವೆಲ್ಲರು ಒಗ್ಗಟ್ಟು ಮತ್ತು ಒಮ್ಮತದಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಬಾಂಧವರಿಗೆ ಸಹಕರಿಸೋಣ.
– ಸುಜಾತಾ ಗುಣಪಾಲ್ ಶೆಟ್ಟಿ, ಸಂಚಾಲಕಿ, ಮಹಿಳಾ ವಿಭಾಗ, ಅಂಧೇರಿ ಬಾಂದ್ರಾ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.