ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು: ಶಕುಂತಳಾ ಶೆಟ್ಟಿ


Team Udayavani, Feb 1, 2017, 4:33 PM IST

31-Mum01.jpg

ಪುಣೆ: ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಸಮಾಜವನ್ನು ಪ್ರೀತಿಸುವ, ಸಂಘಟನೆಯೊಂದಿಗೆ ಸಾಂಸ್ಕೃತಿಕವಾಗಿ  ಒಗ್ಗೂಡಿಸುವ ಬಂಟರಿಂದಾಗಿಯೇ ಇಂದು ಬಂಟರ ಗೌರವವನ್ನು ಉಳಿಸಿದ ಕೀರ್ತಿ ಪುಣೆ ಬಂಟರದ್ದಾಗಿದೆ. ಇಂದು ದೇಶಾದ್ಯಂತ ಸಮಾನತೆಯ ಕೂಗು ಕೇಳುತ್ತಿದ್ದರೂ ಕೂಡಾ ನಮ್ಮ ಸಮಾಜದಲ್ಲಿ ಸಾವಿರ ವರ್ಷಕ್ಕಿಂತ ಮೊದಲೇ ಮಹಿಳೆಯರಿಗೆ ಕುಟುಂಬದಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನು ನೀಡಿದ್ದು,  ಗೌರವ ವನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಅದೇ ರೀತಿ ನನ್ನ ಕುಟುಂಬದ ಪ್ರೋತ್ಸಾಹ, ನಾನು ಸಮಾಜ ಮುಖೀಯಾಗಿ ಬೆಳೆಯಲು ಸಾಧ್ಯವಾಯಿತು. ಹಿಂದೆ ನಮ್ಮ ಸಮಾಜದಲ್ಲಿ  ಬಡವ ಬಲ್ಲಿದನೆಂಬ ತಾರತಮ್ಯ ನಮ್ಮಲ್ಲಿತ್ತು, ಆದರೆ ಈಗ ಸಮಾಜವನ್ನು ಪ್ರೀತಿಸುವ ಜನರಿಂದಾಗಿ ಸಂಘಟನೆಗಳ ಮೂಲಕ ಜನರ ತಪ್ಪು$ ಭಾವನೆ ದೂರವಾಗಿದೆ. ಇಂದಿನ ದಿನಗಳಲ್ಲಿ ನಮ್ಮ ಮಕ್ಕಳು ಬದುಕಿನ ಅರ್ಥವನ್ನು ತಿಳಿದುಕೊಳ್ಳದೆ ಸಂಸ್ಕಾರ ಹೀನರಾಗುತ್ತಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಇದಕ್ಕಾಗಿ ನಮ್ಮ ಮಕ್ಕಳಿಗೆ ಅವರು ಅರಿತುಕೊಳ್ಳುವ ಸಮಯದಲ್ಲೇ ಪ್ರೀತಿ ವಿಶ್ವಾಸದ ಹೊಂದಾಣಿಕೆಯ 

ಬದುಕನ್ನು ಕಟ್ಟುವ, ಸಮರ್ಥವಾಗಿ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಅವರಲ್ಲಿ ತುಂಬಬೇಕಾಗಿದೆ ಎಂದು ಪುತ್ತೂರಿನ ಶಾಸಕಿ  ಶಕುಂತಳಾ ಟಿ. ಶೆಟ್ಟಿ  ನುಡಿದರು.

ಜ. 28ರಂದು ನಗರದ ಆಲ್ಪಾ$ ಬಚತ್‌ ಸಾಂಸ್ಕೃತಿಕ ಸಂಕುಲದಲ್ಲಿ ನಡೆದ ಬಂಟ್ಸ್‌ ಅಸೋಸಿಯೇಶನ್‌  ಇದರ ಆರನೇ ವಾರ್ಷಿ ಕೋತ್ಸವವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಂಟ ಸಮಾಜದ ಹೆಣ್ಮಕ್ಕಳು ಆದರ್ಶ ದಾಂಪತ್ಯದ ಬದುಕನ್ನು  ಪ್ರೀತಿ ವಿಶ್ವಾಸದೊಂದಿಗೆ ಕಂಡುಕೊಳ್ಳಬೇಕು. ಸಮಾಜದ ಹೆಣ್ಮಕ್ಕಳು ಮೂಢನಂಬಿಕೆಯಿಂದ ಹೊರಬರಬೇಕು. ಸಂಸ್ಕೃತಿ ನಮ್ಮ ಬಾಲ್ಯ ದಿಂದಲೇ ಅಳವಡಿಸಿಕೊಂಡಿರುತ್ತೇವೆ. ಇದಕ್ಕೆ ಮದುವೆಯೊಂದೇ ಮಾನದಂಡವಲ್ಲ, ಅದನ್ನು ನಮ್ಮಿಂದ ಕಿತ್ತೆಸೆಯುವ ಹಕ್ಕು ಯಾರಿಗೂ ಇಲ್ಲ ಎಂಬ ದಿಟ್ಟತನದ ನಿರ್ಧಾರವನ್ನು  ಪ್ರತಿಯೊಬ್ಬ ಮಹಿಳೆಯೂ ಹೊಂದಬೇಕಾದ ಆವಶ್ಯಕತೆ ಇದೆ. ಹೆಣ್ಣು ಸಮಾಜಮುಖೀಯಾಗಿಯೂ ಗುರುತಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಅವರು, ಬಂಟ್ಸ್‌ ಅಸೋಸಿಯೇಶನ್‌ ಪುಣೆಯಲ್ಲಿ ಬಂಟ ಬಾಂಧವರನ್ನು ಒಗ್ಗೂಡಿಸಿ ನಡೆಸುವ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಕಳೆದ 7  ವರ್ಷದ ಹಿಂದೆ ಪೂಜ್ಯ ಒಡಿಯೂರು ಗುರುದೇವಾನಂದ ಸ್ವಾಮಿಗಳ ಆಶೀರ್ವಾದದೊಂದಿಗೆ ಸಮಾಜಸೇವೆಯ ಮಾಧ್ಯಮವಾಗಿ ಆರಂಭಗೊಂಡ ನಮ್ಮ ಸಂಘ ಪುಣೆಯಲ್ಲಿನ ಎಲ್ಲಾ ಬಂಟ ಬಾಂಧವರ ಸಹಕಾರದೊಂದಿಗೆ ಸಂಸ್ಕೃತಿ, ಸದ್ಭಾವನೆ  ಸಮಾನತೆಯ ಉದ್ದೇಶವನ್ನು ಈಡೇರಿಸುವತ್ತ ಪ್ರಾಮಾಣಿಕವಾಗಿ ಸಾಗಿದೆ. ಸಂಘದ ಅಭಿವೃದ್ಧಿಯಲ್ಲಿ ಪ್ರತಿ ಯೊಂದು ಕಾರ್ಯಕ್ರಮಗಳನ್ನು ಆಯೋ ಜಿಸು ವಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಮತ್ತು ಸರ್ವ ಸಮಾಜ ಬಾಂಧವರ ಪ್ರೋತ್ಸಾಹ  ಸಂಘ ಚಿರಋಣಿಯಾಗಿದೆ. ಅಂತೆಯೇ ಪುಣೆಯಲ್ಲಿ ಬಂಟ ಸಮಾಜ ಬಾಂಧವರಿಗೆ ಸುವರ್ಣಾಕ್ಷರದಲ್ಲಿ ದಾಖಲಾಗುವಂತಹ ಭವನವೊಂದು ಸಂತೋಷ್‌ ಶೆಟ್ಟಿ ಅವರ ನೇತೃತ್ವದಲ್ಲಿ ಆಗುತ್ತಿರುವುದಕ್ಕೆ ಅಭಿಮಾನ ವೆನಿಸುತ್ತಿದ್ದು,  ಸಮಾಜ ಬಾಂಧವರೆಲ್ಲರೂ ಈ ಕಾರ್ಯಕ್ಕೆ  ಕೈಜೋಡಿಸಬೇಕು ಎಂದರು.

ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಜಯ ಶೆಟ್ಟಿ ಮಿಯ್ನಾರ್‌, ಪ್ರಧಾನ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು, ಕೋಶಾಧಿಕಾರಿ ಅರವಿಂದ ರೈ, ಉಪಾಧ್ಯಕ್ಷರುಗಳಾದ ಸುರೇಶ್‌ ಎಸ್‌. ಶೆಟ್ಟಿ, ಆನಂದ್‌ ಶೆಟ್ಟಿ ಮಿಯ್ನಾರ್‌, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ  ಸರೋಜಿನಿ ಶೆಟ್ಟಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್‌ ಶೆಟ್ಟಿ, ಕಾರ್ಯದರ್ಶಿ ಉಷಾ ಉಲ್ಲಾಸ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್‌ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ವತಿಯಿಂದ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಮತ್ತು ರಾಮ್‌  ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪ, ಸಮ್ಮಾನ ಪತ್ರಗಳನ್ನು ನೀಡಿ ಸಮ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಸತ್ಕರಿಸಿದರು. ಅತಿಥಿಧಿಗಣ್ಯರು ದೀಪ ಪ್ರಜ್ವಲಿಸಿ ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಈ ಸಂದರ್ಭ ಸಂಘದ ನೂತನ ವೆಬ್‌ಸೈಟ್‌ನ್ನು ಶಕುಂತಳಾ ಶೆಟ್ಟಿ  ಉದ್ಘಾಟಿಸಿದರು. ಅತಿಥಿಗಳನ್ನು ಹಿಂಗಾರ ಮತ್ತು ವೀಳ್ಯದೆಲೆ ನೀಡಿ ಸ್ವಾಗತಿಸಲಾಯಿತು. ಪ್ರಫುಲ್ಲಾ ವಿ. ಶೆಟ್ಟಿ ಮತ್ತು ಶಾಲಿನಿ ಮಹೇಶ್‌ ಶೆಟ್ಟಿ ಪ್ರಾರ್ಥನೆಗೈದರು.

ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಜತೆ ಕಾರ್ಯದರ್ಶಿ ಲೋಹಿತ್‌ ಶೆಟ್ಟಿ ವಾಚಿಸಿದರು. 

ಕೆಮೂ¤ರು ಸುಧಾಕರ ಶೆಟ್ಟಿ ಮತ್ತು ಸಂಕಯ್ಯ ಶೆಟ್ಟಿ ಸಮ್ಮಾನ ಪತ್ರವನ್ನು ವಾಚಿಸಿದರು. ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನಗಳನ್ನು ಅತಿಥಿಗಳ ಹಸ್ತದಿಂದ ವಿತರಿಸಲಾಯಿತು. 

ಬಹುಮಾನ ವಿಜೇತರ ಹೆಸರನ್ನು ಸ್ನೇಹಲ… ನಾರಾಯಣ ಶೆಟ್ಟಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಲೋಹಿತ್‌ ಶೆಟ್ಟಿ ಮತ್ತು ಸಭಾ ಕಾರ್ಯಕ್ರಮವನ್ನು ಶಿವಾನಾಥ ರೈ ಮೇಗಿನಗುತ್ತು ನಿರೂಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ ಅತಿಥಿಗಳಾದ ಶಕುಂತಳಾ ಶೆಟ್ಟಿ ಅವರನ್ನು ಪರಿಚಯಿಸಿದರು. ಶಾಲಿನಿ ಮಹೇಶ್‌ ವಂದಿಸಿದರು. 
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಸದಸ್ಯರುಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು, ನೃತ್ಯರೂಪಕ ಹಾಗೂ ವಿಸ್ಮಯ ವಿನಾಯಕ ಬಳಗ ಮಂಗಳೂರು ತಂಡದಿಂದ ಹಾಸ್ಯ ಕಾರ್ಯಕ್ರಮ ಕಡೆಕೊಡಿ  ಹಾಗೂ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. 

ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪುಣೆಯ ಬಂಟ ಸಮಾಜದ ಈ ಗೌರವ ನಿಜವಾಗಿಯೂ ಮನಸ್ಸಿಗೆ ಅಭಿಮಾನಪಡುವಂತೆ ಮಾಡಿದೆ. ನಾವು ಬಂಟರು ಹೊಟ್ಟೆಪಾಡಿಗಾಗಿ ಹೊರನಾಡಿನಲ್ಲಿ ನೆಲೆಸಿ ಬಹಳ ಕಷ್ಟದ ದುಡಿಮೆಯಿಂದ ಯಶಸ್ಸನ್ನು ಗಳಿಸಿದ್ದೇವೆ. ಅದೇ ರೀತಿ ನಾವು ಬಂಟರು ಹೆಚ್ಚಾಗಿ ಹೊಟೇಲ್‌ ಉದ್ಯಮದಲ್ಲಿ ತೊಡಗಿಕೊಂಡಿದ್ದು ಚಲನಚಿತ್ರದಂತಹ ರಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದು ಸಾಧಾರಣ ಮದ್ರಾಸಿಗಳೆಂದು ಕರೆಸಿಕೊಳ್ಳುತ್ತಿದ್ದು, ಈ ಜನರಿಗಿರುವ ಕೀಳರಿಮೆಯನ್ನು ತೊಡೆದು ಹಾಕುವಲ್ಲಿ ಸಾಧನೆಯ ಮೂಲಕ  ಸಫಲತೆಯನ್ನು ಸಾಧಿಸಿರುವೆ. ಜೀವನದಲ್ಲಿ ಉನ್ನತ ಗುರಿಯೊಂದಿಗೆ ಸಾಧಿಸುವ ಛಲವೊಂದಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು 
ಧಿ ರಾಮ್‌ ಶೆಟ್ಟಿ (ಖ್ಯಾತ ಚಲನಚಿತ್ರ ನಿರ್ಮಾಪಕ).

ಚಿತ್ರಧಿವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.