ವಿಶ್ವ ಬಂಟರಲ್ಲಿ ಜಾಗೃತಿ ತರುವ ಸಂಘಟನೆಯ ಅಗತ್ಯವಿದೆ
Team Udayavani, Oct 11, 2017, 4:37 PM IST
ಮುಂಬಯಿ: ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಬಂಟರ ಭವನದಲ್ಲಿ ಆಯೋಜಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅತೀವ ಆನಂದವಾಗಿದೆ. ಮುಂಬಯಿ ಬಂಟರಿಗೆ ಧಾರ್ಮಿಕ-ಆಧ್ಯಾತ್ಮಿಕ ವಿಚಾರದಲ್ಲಿ ತುಂಬ, ಆಸಕ್ತಿ, ಶ್ರದ್ಧೆ ಇದೆ ಎಂಬುವುದು ಇಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮದಿಂದ ವ್ಯಕ್ತವಾಗಿದೆ. ಎಂದು ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾ ಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ನುಡಿದರು.
ಅ.7ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ವತಿಯಿಂದ ಜರಗಿದ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬಂಟರು ಶಕ್ತಿವಂತರು, ವಿದ್ಯಾವಂತರು ಜತೆಗೆ ಹೃದಯವಂತರೂ ಆಗಿದ್ದಾರೆ. ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಂಟ ಸಂಘಟನೆಗಳು ಕೇವಲ ಆಯಾಯ ಪ್ರದೇಶಗಳ ಬಂಟರಿಗೆ ಮಾತ್ರ ಸೀಮಿತಗೊಂಡಿವೆ. ಇಡೀ ವಿಶ್ವದಲ್ಲಿರುವ ಬಂಟರ ಸಂಘಟನೆಯೊಂದನ್ನು ಸ್ಥಾಪಿಸುವ ಅಗತ್ಯವಿದೆ. ವಿಶ್ವಬಂಟರಲ್ಲಿ ಜಾಗೃತಿ ತರುವ ಸಂಘಟನೆಯಾದರೆ ಬಂಟರ ಶಕ್ತಿಯ ಎದುರು ಯಾರ ಆಟವೂ ನಡೆಯಲು ಸಾಧ್ಯವಿಲ್ಲ. ಬಂಟ ಸಮಾಜದ ಸಂಘಟನೆಯೇ ನನ್ನ ಮೊದಲ ಧ್ಯೇಯವಾಗಿದೆ. ಐಕಳ ಹರೀಶ್ ಶೆಟ್ಟಿ ಅವರಂತಹ ಪ್ರಭಾವೀ ಸಂಘಟಕರಿರುವಾಗ ಈ ಕಾರ್ಯ ಅಷ್ಟೇನೂ ಕಷ್ಟಸಾಧ್ಯವಾಗಲಾರದು. ಬಂಟರಿಂದ ಆರ್ಥಿಕ ಲಾಭವನ್ನು ಗಳಿಸಿ, ಮೋಸ ಮಾಡುವವರ ಬಗ್ಗೆ ನಿಗಾ ಇಡೋಣ. ಬಾಕೂìರಿನಲ್ಲಿ ಒಂದು ಅದ್ಭುತ ದೇವಸ್ಥಾನ ನಿರ್ಮಾಣವಾಗಿದೆ. ಬಂಟರ ಕರವಳಿ ಮೂಲದ ದೈವ ಕುಂಡೋದರನ ಆರಾಧನೆ ಯೊಂದೇ ಇದೀಗ ಬಂಟರಿಗೆ ಉಳಿದಿರುವ ಸಂಪತ್ತು. ಇದರಿಂದ ಆಯುರಾರೋಗ್ಯ ವೃದ್ಧಿಯಾಗುತ್ತದೆ ಎಂಬುವುದರಲ್ಲಿ ಸಂಶಯ ವಿಲ್ಲ. ವರ್ಷಕ್ಕೆ ಒಂದು ಬಂಟ ಕುಟುಂಬ ಕುಂಡೋದರನ ಪೂಜೆ ಮಾಡುವ ಸಂಸ್ಕೃತಿ ಬೆಳೆಯಬೇಕು. ಮುಂದಿನ ವರ್ಷ ಶ್ರೀ ಅಯ್ಯಪ್ಪ ದೇವರ ಮಹಾಪೂಜೆ ಬಂಟರ ಭವನದಲ್ಲಿ ನಡೆಸಲು ಪ್ರಯತ್ನಿಸುವುದಲ್ಲದೆ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯನ್ನು ಬಾಕೂìರು ಸಂಸ್ಥಾನದ ಮುಂಬಯಿ ಘಟಕವೆಂದು ಬದಲಾಯಿಸಲಾಗುವುದು. ಸಂಸ್ಥಾನದ ಆರೋಗ್ಯ ಭಾರತಿ ಮತ್ತು ವಿದ್ಯಾಭಾರತಿ ಯೋಜನೆಗಳನ್ನು ಶೀಘ್ರ ಪ್ರಾರಂಭಿಸ ಲಾಗುವುದು ಎಂದು ನುಡಿದು ಶುಭಹಾರೈಸಿದರು.
ಆರಂಭದಲ್ಲಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಜ್ಯೋತಿ ಸಮಾರಂಭಕ್ಕೆ ಚಾಲನೆ ನೀಡಿ ದರು. ಮಲ್ಲಿಕಾ ಶೆಟ್ಟಿ ಪ್ರಾರ್ಥನೆಗೈದರು. ಸುಮತಿ ಶೆಟ್ಟಿ ಮತ್ತು ತಂಡದವರು ಗುರುವಂದನೆ ಪ್ರಾರ್ಥನೆಗೈದರು.
ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಬಂಟರ ಭವನವಿಂದು ಪಾವನಗೊಂಡಿದೆ. ಬಂಟರ ಸಂಘವು ಪ್ರತಿಯೊಂದು ಸಮಾಜಪರ ಕಾರ್ಯಕ್ರಮದಲ್ಲೂ ತೊಡಗಿ ಹೆಸರು ಮಾಡಿರುವಂತೆಯೇ ಮುಂದಿನ ದಿನಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲೂ ಹೆಚ್ಚೆಚ್ಚು ತೊಡಗುವ ಅವಶ್ಯಕತೆ ಇದೆ. ಧರ್ಮದ ಕಾರ್ಯ ಆಗಬೇಕಾಗಿದೆ. ಈ ನೆಲೆಯಲ್ಲಿ ಸಾಗಲು ನಾಯಕತ್ವ ಹೊಂದಿರುವ ವಿಶ್ವ ಸಂತೋಷ ಭಾರತಿಯವರಿದ್ದಾರೆ. ಅಪಾರ ವಿದ್ವತ್ ಶಕ್ತಿ, ಪಾಂಡಿತ್ಯ ಹೊಂದಿರುವ ಸ್ವಾಮೀಜಿ ಬಾಕೂìರು ಮಹಾಸಂಸ್ಥಾನವನ್ನು ಸ್ಥಾಪಿಸಿ, ಬಂಟ ಸಮಾಜಕ್ಕೆ ಮಾರ್ಗದರ್ಶಕರಾಗುವ ಜತೆಗೆ ಸಮಾಜದಲ್ಲಿ ಏಕತೆ ತರುವಲ್ಲೂ ಮುಂದಾಗಿರುವುದು ಸಂತಸದ ವಿಚಾರ. ಮುಂಬಯಿಯ ಸಮಸ್ತ ಬಂಟ ಬಾಂಧವರ ಪರವಾಗಿ ಸ್ವಾಮೀಜಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದರು.
ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷ, ಬಾಕೂìರು ಮಹಾಸಂಸ್ಥಾನದವಿಶ್ವಸ್ತ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬಯಿಯ ಜನತೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವೃತ್ತಿ ಬೆಳೆದಿದೆ ಎಂಬುದಕ್ಕೆ ಇಂದಿನ ಸಭೆಯೆ ಸಾಕ್ಷಿಯಾಗಿದೆ. ಗುರುಗಳಾದ ಸಂತೋಷ ಭಾರತಿ ಸ್ವಾಮೀಜಿ ಅವರ ಅಪಾರ ಜ್ಞಾನವನ್ನು ಮುಂಬಯಿಗರಿಗೆ ನೀಡುವ ಉದ್ಧೇಶದಿಂದ ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಹುಟ್ಟು ಹಾಕಲಾಗಿದೆ.
ಸುಮಾರು 22 ಲಕ್ಷ ಬಂಟರು ದೇಶ-ವಿದೇಶಗಳಲ್ಲಿದ್ದು, ಅವರೆಂದೂಜತೆಗೂಡಿ ಶಕ್ತಿ ಪ್ರದರ್ಶನ ಮಾಡಿದವರಲ್ಲ. ಇಂದು ಧಾರ್ಮಿಕ ವಾಗಿ, ಸಾಮಾಜಿಕವಾಗಿ ಶೋಷಣೆ ಯಾಗುತ್ತಿದೆ. ನಮ್ಮ ಸಮಾಜವು ಮೂಲ ನಂಬಿಕೆ ತೊರೆದು ಮೂಢನಂಬಿಕೆ ಯತ್ತ ವಾಲುತ್ತಿದೆ. ಬಂಟರ ಮೂಲ ಬಾಕೂìರು ಸಂಸ್ಥಾನವಾಗಿದೆ. ಮೂಲ ದೈವ ಕುಂಡೋದರ ದೈವವಾಗಿದೆ. ಅದಕ್ಕಾಗಿಯೇ ಸ್ವಾಮೀಜಿಯವರು ಬಾಕೂìರು ಸಂಸ್ಥಾನವನ್ನು ಸ್ಥಾಪಿಸಿ ದ್ದಾರೆ. ಇಂದಿನ ಪೀಳಿಗೆಗೆ ನಮ್ಮತನದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮದಾಗಿದೆ. ನಮ್ಮಲ್ಲಿ 108 ಬಂಟ ಸಂಘಟನೆಗಳಿವೆ. ಇದರ ಒಕ್ಕೂಟಕ್ಕಾಗಿ ಸಾಮಾಜಿಕ ಶಕ್ತಿಯ ನೇತೃತ್ವದ ಅಗತ್ಯವಿದೆ. ಐಕಳ ಹರೀಶ್ ಶೆಟ್ಟಿ ಅವರಲ್ಲಿ ಸಂಘಟನಾತ್ಮಕ ಗುಣವಿದೆ. ಅವರು ಇದಕ್ಕೆ ಅರ್ಹರಾಗಿದ್ದಾರೆ. ಸಮಾಜದ ಬಲಶಾಲಿ ಸಂಘಟನೆಗಾಗಿ ಯೋಜನೆ ಹಾಕಿಕೊಂಡರೆ ಬಂಟರು ಅವರನ್ನು ಬೆಂಬಲಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಜನಾರ್ಧನ ಪುರಿಯಾ ಸಂಪಾದಕತ್ವದ ಪರಿವರ್ತನ ಸುದ್ದಿಯ 5 ನೇ ವಾರ್ಷಿಕೋತ್ಸವ ಸಂಚಿಕೆಯನ್ನು ಡಾ| ವಿಶ್ವಸಂತೋಷ ಭಾರತಿ ಶ್ರೀಪಾದರು ಬಿಡುಗಡೆಗೊಳಿಸಿದರು.
ಸಂಪಾದಕ ಜನಾರ್ಧನ ಪುರಿಯಾ ಉಪಸ್ಥಿತರಿದ್ದರು. ಮೀರಾ-ಡಹಾಣೂ ಬಂಟ್ಸ್‌ನ ಅಧ್ಯಕ್ಷ, ಇತ್ತೀಚೆಗೆ ನಗರ ಸೇವಕರಾಗಿ ಆಯ್ಕೆಗೊಂಡ ಅರವಿಂದ ಎ. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಯಕ್ಷಗಾನ ಸಾಹಿತಿ, ವಾಸ್ತುತಜ್ಞ ಬಾಕೂìರು ರಘುನಾಥ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಸಂಪಾದಕ, ರಂಗನಟ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಪದ್ಮನಾಭ ಎಸ್. ಪಯ್ಯಡೆ, ಉಪ್ಪೂರು ಶೇಖರ್ ಶೆಟ್ಟಿ, ಬಾಕೂìರು ಸುಧಾಕರ ಶೆಟ್ಟಿ, ರಘುರಾಮ ಶೆಟ್ಟಿ ಅವೆನ್ಯೂ, ಕರ್ನಿರೆ ವಿಶ್ವನಾಥ ಶೆಟ್ಟಿ, ಜಯರಾಮ ಎನ್. ಶೆಟ್ಟಿ ರಿಜೆನ್ಸಿ, ವಿರಾರ್ ಶಂಕರ್ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಅರವಿಂದ ಶೆಟ್ಟಿ, ಶಿವರಾಮ ನಾಯ್ಕ, ಕುಶಲ ಸಿ. ಭಂಡಾರಿ, ಅಪ್ಪಣ್ಣ ಶೆಟ್ಟಿ ಪೊವಾಯಿ, ಕೃಷ್ಣ ವಿ. ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ಭಾಸ್ಕರ ಎಂ. ಶೆಟ್ಟಿ, ಶಶಿಧರ ಶೆಟ್ಟಿ, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಭಾಸ್ಕರ್ ಶೆಟ್ಟಿ ಖಾಂದೇಶ್, ಗುಣಪಾಲ್ ಶೆಟ್ಟಿ ಐಕಳ, ರಮೇಶ್ ಶೆಟ್ಟಿ, ಜಯಪ್ರಕಾಶ್ ಭಂಡಾರಿ, ಭುಜಂಗ ಶೆಟ್ಟಿ, ಶ್ರೀಧರ ಶೆಟ್ಟಿ, ಸಂಜೀವ ಎನ್. ಶೆಟ್ಟಿ ಅಶ್ವಿತ್, ಸುಶೀಲಾ ಸಿ. ಶೆಟ್ಟಿ, ಲತಾ ಜೆ. ಶೆಟ್ಟಿ, ಲತಾ ಪಿ. ಶೆಟ್ಟಿ, ಡಾ| ಸತ್ಯಾ ಶೆಟ್ಟಿ ಉಪಸ್ಥಿತರಿದ್ದರು.
ಖ್ಯಾತ ಭಾಗವತ ಗಾನ ಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಭಾಗವತಿಕೆಯಲ್ಲಿ ಪೆರ್ಡೂರು ಮೇಳದ ದವರಿಂದ ಬಾರುಕೂರು ಕ್ಷೇತ್ರ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. ಮಧ್ಯಾಹ್ನ, ರಾತ್ರಿ ಅನ್ನದಾನ ನಡೆಯಿತು.
ಬಂಟ ಸಮಾಜಕ್ಕೆ ಸಾಮೂಹಿಕ ಕಾರ್ಯಕೈಗೊಳ್ಳಲು ಎಲ್ಲ ಸಂಘಟನೆ ಗಳು ಜತೆ ಸೇರಿ ಸೇವೆಗೈಯುವ ಅಗತ್ಯತೆವಿದೆ. ಇಂದು ಬಂಟ ವ್ಯಕ್ತಿಗಳು ಬೆಳೆದಿದ್ದಾರೆ. ಆದರೆ ಬಂಟ ಸಮಾಜ ಬೆಳೆಸುವ ಪ್ರಯತ್ನ ನಡೆದಿಲ್ಲ. ನಮ್ಮಲ್ಲಿ ಶ್ರೀಮಂತರು ಹಾಗೂ ಅತೀ ಶ್ರೀಮಂತರ ಸಂಖ್ಯೆ ಶೇ. 15ರಷ್ಟಿದೆ. ಮಧ್ಯಮ ವರ್ಗದವರು ಶೇ. 20, ಶೇ. 60ರಷ್ಟು ಹಿಂದುಳಿದವರಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಮೇಲಕ್ಕೆತ್ತಲು ಬಂಟ ಸಮಾಜದ ವಿಶ್ವ ಸಂಘಟನೆಯ ಅಗತ್ಯವಿದೆ. ಧಾರ್ಮಿಕ ಪ್ರವೃತ್ತಿಯಿಂದ ಮನಃಶಾಂತಿ ದೊರಕುತ್ತದೆ. ಇಂದು ಜರಗಿದ ಶ್ರೀನಿವಾಸ ಕಲ್ಯಾಣದಂತಹ ಭಕ್ತಿ, ಶ್ರದ್ದೆಯ ಕಾರ್ಯಕ್ರಮಗಳು ಇನ್ನಷ್ಟು ನಡೆಯುವಂತಾಗಬೇಕು
– ಸಿಎ ಎಸ್. ಬಿ. ಶೆಟ್ಟಿ ,ಲೆಕ್ಕ ಪರಿಶೋಧಕರು ಹುಬ್ಬಳ್ಳಿ.
ವರ್ಷದಿಂದ ವರ್ಷಕ್ಕೆ ಜ್ಞಾನಭಾರತಿಯ ಚಿಂತರ ಸಂಖ್ಯೆ ಹೆಚ್ಚಾಗುತ್ತಿದೆ. ಬಂಟ ಸಮಾಜದಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿರುವ ಶ್ರೀಗಳು ಸ್ಥಾಪಿಸಿದ ಬಾರಕೂರು ಮಹಾಸಂಸ್ಥಾನದ ಮೂಲಕ ಉತ್ತಮ ಕಾರ್ಯಯೋಜನೆ ಗಳು ಜಾರಿಗೆ ಬರುತ್ತಿರುವುದು ಅಭಿನಂದನೀಯ. ಎಲ್ಲ ಸಂಘಟನೆಗಳು ಒಂದಾಗಿ ಸಂಪೂರ್ಣ ಸಮಾಜದ ಅಭಿವೃದ್ಧಿ, ಏಕತೆಗಾಗಿ ಒಂದು ಗೂಡುವುದು ಅಗತ್ಯವಾಗಿದೆ.
– ಸಿಎ ಶಂಕರ್ ಬಿ. ಶೆಟ್ಟಿ
ಗೌರವಾಧ್ಯಕ್ಷರು : ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ.
ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯು ಬಂಟರ ಸಂಘದಲ್ಲಿ ಆಯೋಜಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಸಂಘದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನಡೆದಿದೆ. ಇಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸಂಘದ ಸಂಪೂರ್ಣ ಸಹಕಾರವಿದೆ. ಶ್ರೀಗಳು ಸಮಾಜದ ಮೇಲಿಟ್ಟಿರುವ ಪ್ರೀತಿ, ಗೌರವ, ಕಳಕಳಿ ಅನನ್ಯವಾಗಿದೆ. ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಶ್ರೀಗಳಿಗೆ ಬಂಟ ಬಾಂಧವರು ಸಹಕರಿಸಬೇಕು. – ಪ್ರಭಾಕರ ಎಲ್. ಶೆಟ್ಟಿ ಅಧ್ಯಕ್ಷರು : ಬಂಟರ ಸಂಘ ಮುಂಬಯಿ.
ಚಿತ್ರ-ವರದಿ : ಪ್ರೇಮನಾಥ ಶೆಟ್ಟಿ, ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.