ಬಂಟ್ಸ್ ಫೋರಂ ಮೀರಾ-ಭಾಯಂದರ್ 7ನೇ ವಾರ್ಷಿಕ ಭಜನೋತ್ಸವ
Team Udayavani, Jan 17, 2018, 3:17 PM IST
ಮುಂಬಯಿ: ಬಂಡಸಾಲೆಯಂತಹ ವಿಶಾಲ ಮನೆಗಳು ನಮ್ಮ ಪೂರ್ವಜರ ನ್ಯಾಯಾಲಯವಾಗಿತ್ತು. ಕೌಟುಂಬಿಕ ಕಲಹಗಳನ್ನು ಸಮಾಧಾನದ ಮೂಲಕ ಇತ್ಯಾರ್ಥಪಡಿಸುತ್ತಿದ್ದರು. ಹಬ್ಬಹರಿದಿನಗಳಲ್ಲಿ ಉತ್ಸವಗಳನ್ನು ಒಂದೇ ಚಾವಡಿಯಲ್ಲಿ ಆಚರಿಸಿ ದೇವಾಲಯವನ್ನಾಗಿ ಮಾರ್ಪಡಿಸುತ್ತಿದ್ದರು. ಅಂದಿನ ಕಷ್ಟಕರ ಬದುಕಿನಲ್ಲೂ ನೆಮ್ಮದಿ ರಾರಾಜಿಸುತ್ತಿದ್ದು, ಕೂಡುಕುಟುಂಬದ ಸಂಬಂಧ ಅನ್ಯೋನ್ಯವಾಗಿತ್ತು. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಒತ್ತಡ ಹೆಚ್ಚಾಗಿ ಸಾಂಸಾರಿಕ ಜೀವನ ವ್ಯಾವಹಾರಿಕವಾಗಿದೆ. ಅದನ್ನು ನಿವಾರಿಸಲು ಭಜನೆ, ಸಂಗೀತ, ಕ್ರೀಡೆ ಮೊದಲಾದ ಜನರನ್ನು ಒಗ್ಗೂಡಿಸುವ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಬಂಟ್ಸ್ ಫೋರಂ ಮೀರಾ-ಭಾಯಂದರ್‌ನ ಅಧ್ಯಕ್ಷ ಜಯಪ್ರಕಾಶ್ ಭಂಡಾರಿ ಅವರು ನುಡಿದರು.
ಜ. 14 ರಂದು ಮೀರಾರೋಡ್ ಪೂರ್ವದ ಶಾಂತಿಪಾರ್ಕ್‌ನಲ್ಲಿರುವ ಸೆಂಟರ್ ಪ್ಲಾಜಾ ಸಭಾಂಗಣ ದಲ್ಲಿ ಬಂಟ್ಸ್ ಫೋರಂ ಮೀರಾ- ಭಾಯಂದರ್ ಇದರ ಏಳನೇ ವಾರ್ಷಿಕ ಭಜನ ಮಂಗಳ್ಳೋತ್ಸವ, ಅರಸಿನ ಕುಂಕುಮ ಕಾರ್ಯಕ್ರಮದ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೌಟುಂಬಿಕ ವಲಯದಲ್ಲಿ ಅಕ್ಕರೆಯಿಂದ ಆರೈಕೆ ಮಾಡಿದ ಮಹಿಳೆಯರು ಬಂಟ್ಸ್ ಫೋರಂನ ಮಹಿಳಾ ಘಟಕ ವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕುಣಿತ ಭಜನೆಯ ಮೂಲಕ ಸನಾತನ ಪರಂಪರೆಯನ್ನು ಅನಾವರಣಗೊಳಿಸಿದ್ದಾರೆ ಎಂದು ನುಡಿದರು.
ಅನ್ಯೋನ್ಯತೆ ಅಗತ್ಯ
ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪ್ಪಾಡಿ ಅವರು ಮಾತನಾಡಿ, ವಿವಿಧ ಸಮುದಾಯ ಸಂಘಟನೆಗಳೊಂದಿಗೆ ಅನ್ಯೋನ್ಯತೆಯಿಂದ ಇರಬೇಕು. ಮನುಕುಲದ ಶ್ರೇಯೋಭಿವೃದ್ಧಿ ನಮ್ಮ ಧ್ಯೇಯವಾಗಿರಬೇಕು. ನವೀನಾ ಜೆ. ಭಂಡಾರಿ ಅವರ ಮುಂದಾಳತ್ವದಲ್ಲಿ ಪ್ರಾರಂಭವಾದ ಭಜನ ಮಂಡಳಿ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ-ಬೆಳೆಸುವಲ್ಲಿ ಯಶಸ್ವಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೀರಾ-ಭಾಯಂದರ್‌ನ ಹಿರಿಯ ಉದ್ಯಮಿ ಕನ್ನಡ ಸೇವಾ ಸಂಘದ ಸ್ಥಾಪಕ, ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಂಡ ಆನಂದ ಶೆಟ್ಟಿ ದಂಪತಿಯನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಮೈಸೂರು ಪೇಟ ತೊಡಿಸಿ, ಮಲ್ಲಿಗೆ ಹಾರ ಹಾಕಿ ಸಮ್ಮಾನಿಸಿ ಗೌರವಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಆನಂದ ಶೆಟ್ಟಿ ಅವರು, ಮೀರಾ-ಭಾಯಂದರ್ ಪರಿಸರದ ತುಳು-ಕನ್ನಡಿಗರನ್ನು ಕನ್ನಡ ಸೇವಾ ಸಂಘ ಎಂಬ ಸೂರಿನಡಿ ಸಂಘಟಿಸಿ ಸುಮಾರು 48 ವರ್ಷಗಳ ಕಾಲ ಸಮಾಜ ಸೇವೆಗೈದ ತೃಪ್ತಿ ನನಗಿದೆ. ಅಧಿಕಾರ, ಅಂತಸ್ತು, ಪ್ರತಿಷ್ಠೆ, ಸ್ವಾರ್ಥಗಳಿಂದ ದೂರವಿದ್ದು, ದುಡಿದರೆ ನಮ್ಮ ಹೆಸರು ಶಾಶ್ವತವಾಗುತ್ತದೆ. ಪತ್ನಿ ಇಂದಿರಾ ಅವರು ತನ್ನ ಎಲ್ಲ ಸಮಾಜಪರ ಕಾರ್ಯಗಳಿಗೆ ಸಹಕರಿಸುತ್ತಿದ್ದು, ಅವರ ಹೊಂದಾಣಿಕೆ, ತಾಳ್ಮೆ, ಕ್ಷಮತೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ನುಡಿದರು.
ಸುಲೋಚನಾ ಶೆಟ್ಟಿ ಅವರು ಮಂಡಳಿಯ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ಪತ್ರಕರ್ತ ವೈ. ಟಿ. ಶೆಟ್ಟಿ ಹೆಜ್ಮಾಡಿ ಅವರು ಗಣ್ಯರನ್ನು ಪರಿಚಯಿಸಿದರು. ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮೀ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಹರ್ಷಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸೀತಾರಾಮ ಶೆಟ್ಟಿ ಅಮಾಸೆಬೈಲು, ಗೌರವ ಅತಿಥಿ ಪ್ರಭಾವತಿ ಶಿವರಾಮ ಶೆಟ್ಟಿ, ಭಜನ ಸಮಿತಿಯ ಕಾರ್ಯಾಧ್ಯಕ್ಷೆ ಸುಖವಾಣಿ ಡಿ. ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಕೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ದುರ್ಗಾ ಭಜನ ಮಂಡಲಿ ಸಿಲ್ವರ್‌ಪಾರ್ಕ್, ಹನುಮಾನ್ ಭಜನ ಮಂಡಳಿ ಭಾಯಂದರ್, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಸದ್ಗುರು ಭಜನ ಮಂಡಳಿ ಮೀರಾರೋಡ್ ಇವರು ಭಜನ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಂತಿಂಜ ಜನಾರ್ದನ ಭಟ್ ಅವರು ವಿವಿಧ ಪೂಜೆಗಳನ್ನು ನೆರವೇರಿಸಿ ಆಶೀರ್ವಚನ ನೀಡಿ, ಸಾಧಕರನ್ನು ಗುರುತಿಸಿ ಗೌರವಿಸಿದಾಗ, ಸಮಾಜ ಸೇವಕರ ಮೌಲ್ಯತೆ ವೃದ್ಧಿಯಾಗುತ್ತದೆ. ಸಂಪ್ರದಾಯ ಉಡುಗೆ ತೊಡುಗೆಗಳ ಮೂಲಕ ಸ್ತಿÅàಪುರುಷರು ಸಂಸ್ಕೃತಿಯೊಂದಿಗೆ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸ್ಮರಣೀಯವಾಗಿದೆ ಎಂದರು. ಮಹಿಳಾ ಸದಸ್ಯೆಯರು ಮಹಾಮಂಗಳಾರತಿಗೈದರು. ಕೊನೆಯಲ್ಲಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಪರಿಸರದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವೇಗದ ಬದುಕಿನಲ್ಲಿ ಮಾನಸಿಕ ನೆಮ್ಮದಿಯ ಸ್ಥಿರತೆ ಕುಂಠಿತಗೊಂಡಿದೆ. ಅದನ್ನು ಆಧ್ಯಾತ್ಮಿಕ ಚಿಂತನೆ ಮತ್ತು ಭಜನೆಯ ಮೂಲಕ ಪರಿಹರಿಸಬೇಕು.
– ಶಾರದಾ ಶ್ಯಾಮ್ ಶೆಟ್ಟಿ, ಮಹಿಳಾಧ್ಯಕ್ಷೆ, ಬೋಂಬೆ ಬಂಟ್ಸ್ ಅಸೋಸಿಯೇಶನ್
ಅರಸಿನ ಕುಂಕುಮ ಮಹಿಳಾ ಸಂಘಟನೆಯ ಸಮೃದ್ಧಿಯ ಸಂಕೇತವಾಗಿದೆ. ಭಜನೆ ಭಗ ವಂತನ ಸಾಮೀಪ್ಯ ಹೊಂದುವ ಸರಳ ಮಾಧ್ಯಮವಾಗಿದೆ
– ಶಾಂತಾ ಬಾಬು ಶೆಟ್ಟಿ, ಸಮಾಜ ಸೇವಕಿ
ತಾಂತ್ರಿಕ ಯುಗ ವ್ಯವಹಾರಿಕ ತಾಣವಾಗಿದೆ. ಸಂಬಂಧಗಳ ಅಂತರ ಹೆಚ್ಚಾಗುತ್ತಿದೆ. ಸಂಘ ಟನೆಯ ಮೂಲಕ ಮನಸ್ಸು ಮನಸ್ಸುಗಳ ಬೆಸುಗೆಯೊಂದಿಗೆ ಮಾನವ ಸಂಬಂಧಗಳನ್ನು ವಿಶಾಲಗೊಳಿಸಲು ಸಾಧ್ಯವಾಗುತ್ತದೆ.
– ಶೀತಲ್ ಅರುಣ್ ಪಕ್ಕಳ ,ಸಂಘಟಕಿ, ಮೀರಾ-ಭಾಯಂದರ್
ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ, ತಾಳ್ಮೆ ಮುಂತಾದ ಉತ್ತಮ ಗುಣಗಳ ಮೂಲಕ ಸಂಘಟನೆಯನ್ನು ಪ್ರಬಲಗೊಳಿಸಬೇಕು. ಹಲ ವಾರು ಮಂದಿ ಒಟ್ಟಾಗಿ ಬೆರೆತಾಗ ನಮ್ಮಲ್ಲಿ
ರುವ ನ್ಯೂನತೆಗಳನ್ನು ದೂರಿಕರಿಸಲು ಸಾಧ್ಯ.
-ಪ್ರತಿಭಾ ಆರ್. ಶೆಟ್ಟಿ,
ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ, ಬಂಟ್ಸ್ ಫೋರಂ ಮೀರಾ-ಭಾಯಂದರ್
ಚಿತ್ರ-ವರದಿ:ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.