ಬಂಟ್ಸ್‌ ನ್ಯಾಯ ಮಂಡಳಿ ಮುಂಬಯಿ:17ನೇ ವಾರ್ಷಿಕ ಮಹಾಸಭೆ


Team Udayavani, Oct 14, 2017, 11:55 AM IST

6.jpg

ಮುಂಬಯಿ: ಯಾವುದೇ ಜಾತಿ ಅಥವಾ ಕುಟುಂಬಗಳಲ್ಲಿ ಕಲಹ, ಭಿನ್ನಾಭಿಪ್ರಾಯಗಳು ಸಹಜವೇ ಆಗಿದೆ. ಆಸ್ತಿ ಸಂಬಂಧದ ವಿಚಾರದಲ್ಲಂತೂ ಇದು ತಾರಕಕ್ಕೇರಿದೆ. ಬಂಟ ಸಮಾಜದ ಇಂತಹ ಸಮಸ್ಯೆಗಳಿಗಾಗಿಯೇ ಖರ್ಚು-ವೆಚ್ಚವಿಲ್ಲದೆ, ಅತೀ ಶೀಘ್ರದಲ್ಲೇ ಇತ್ಯರ್ಥ ಪಡಿಸುವಂತಹ ಬಂಟ್ಸ್‌ ನ್ಯಾಯ ಮಂಡಳಿಯ ಸ್ಥಾಪನೆಯಾಗಿದೆ. ಕಳೆದ ಹದಿನೇಳು ವರ್ಷಗಳಿಂದ ಇಲ್ಲಿ 630ಕ್ಕೂ ಅಧಿಕ ದೂರುಗಳ ಇತ್ಯರ್ಥವಾಗಿದೆ. ಸಮಾಜದಲ್ಲಿ ಆಸ್ತಿ ಕಲಹ, ವಿವಾಹ ವಿಚ್ಛೇದನದಂತಹ ದೂರುಗಳು ಇಂದು ಅತೀ ಹೆಚ್ಚಾಗಿದೆ ಎಂದು ಬಂಟ್ಸ್‌ ನ್ಯಾಯ ಮಂಡಳಿ ಮುಂಬಯಿ ಕಾರ್ಯಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

ಅ.11ರಂದು ಬಂಟರ ಭವನದ ಲತಾ ಪ್ರಭಾಕರ ಶೆಟ್ಟಿ ಮತ್ತು ಕಬೆತ್ತಿಗುತ್ತು ಕಾಶಿ ಸಿದ್ದು ಶೆಟ್ಟಿ ಸಭಾ ಗೃಹದಲ್ಲಿ ಜರಗಿದ ಬಂಟ್ಸ್‌ ನ್ಯಾಯಮಂಡಳಿಯ 17ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋರ್ಟು, ಕಚೇರಿಗಳಲ್ಲಿ ನ್ಯಾಯ ತೀರ್ಮಾನವೆಂಬುವುದು ಕಬ್ಬಿಣದ ಕಡಲೆಯಂತಾಗಿದೆ. ಹಲವಾರು ವರ್ಷಗಳ ತನಕ ಇದರ ಹಿಂದೆ ಅಲೆದು ಲಕ್ಷಗಟ್ಟಲೆ ಹಣವ್ಯಯಿಸಿ, ನೆಮ್ಮದಿಯನ್ನು ಕೆಡಿಸಿಕೊಳ್ಳುವುದಕ್ಕಿಂತ ನಮ್ಮದೇ ಆದ ನ್ಯಾಯಮಂಡಳಿಯಲ್ಲಿ ಯಾವುದೇ ಖರ್ಚಿ ಲ್ಲದೆ ಇತ್ಯಾರ್ಥ ಮಾಡಿಸಿಕೊಳ್ಳುವುದು ಸೂಕ್ತ. ಮಂಡಳಿ ಯಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯಾಧ್ಯಕ್ಷನಾಗಿ ಶಕ್ತಿಮೀರಿ ದುಡಿದಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಸಹಕರಿಸಿದ ಹಿರಿಯರಾದ ಎಂ. ಡಿ. ಶೆಟ್ಟಿ ಅವರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ನೂತನ ಕಾರ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ರವೀಂದ್ರ ಎಂ. ಅರಸ ಅವರಲ್ಲಿ ಅತ್ಯುತ್ತಮ ಗುಣಧರ್ಮವಿದ್ದು, ಅವರೋರ್ವ ಯೋಗ್ಯ ವ್ಯಕ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿ ಮಂಡಳಿಯು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿ, ಬಂಟ್ಸ್‌ ನ್ಯಾಯ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅನುಭವಿ ಸಮಾಜ ಸೇವಕರಿರುವುದರಿಂದ ನ್ಯಾಯ ಸಮ್ಮತ ತೀರ್ಪು ಜನರಿಗೆ ಸಿಗುತ್ತದೆ ಎಂಬುವುದಕ್ಕೆ ಯಾವುದೇ ರೀತಿಯ ಅನುಮಾನವಿಲ್ಲ ಎಂದರು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ ಅವರು ಮಾತನಾಡಿ, ಬಂಟ್ಸ್‌  ನ್ಯಾಯಮಂಡಳಿ ಬೇರೆ ಸಮಾಜಕ್ಕೂ ಮಾದರಿಯಾಗಲಿ. ಈ ಸಂಸ್ಥೆಗೆ ಇತರ ಸಂಘ- ಸಂಸ್ಥೆಗಳಂತೆ ಪ್ರಚಾರ ಅಗತ್ಯವಾಗಿದೆ ಎಂದು ಹೇಳಿದರು.

ಸಭಿಕರ ಪರವಾಗಿ ಬಂಟರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಆರ್‌. ಸಿ. ಶೆಟ್ಟಿ ಅವರು ಮಾತನಾಡಿ, ಬಂಟರಿಂದ ನ್ಯಾಯಮಂಡಳಿಗೆ ಬರುವ ದೂರುಗಳಲ್ಲಿ ವಿವಾಹ ವಿಚ್ಛೇದನ, ಆಸ್ತಿ ಕಲಹಗಳು ಹಾಗೂ ಹಣದ ವ್ಯವಹಾರ ಇವು ಪ್ರಮುಖವಾದವುಗಳೆಂದು ವಿಷಾದ ವ್ಯಕ್ತ ಪಡಿಸಿದರು. ಬಂಟರಲ್ಲಿ ಯಾವುದೇ ಕಲಹ, ವೈಷಮ್ಯಗಳಿದ್ದರೆ ನ್ಯಾಯಮಂಡಳಿಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲು ಮುಂದೆ ಬರಬೇಕು ಎಂದರು.

ಬೋಂಬೇ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಬಾಬು ಎನ್‌. ಶೆಟ್ಟಿ ಮಾತನಾಡಿ, ಬಂಟರಲ್ಲಿ ಒಗ್ಗಟ್ಟಿದೆ ಎಂಬುದು ಈ ಸಭೆಯಿಂದ ವ್ಯಕ್ತವಾಗುತ್ತಿದೆ. ಬಂಟ ಸಂಘಟನೆಗಳು ಆಡಂಬರದ ಖರ್ಚುಗಳಿಗೆ ಕಡಿವಾಣ ಹಾಕಬೇಕು ಎಂದರು.

ಬಂಟರ ಸಂಘದ ಹಿರಿಯ ಸದಸ್ಯ, ಥಾಣೆ ಹೊಟೇಲ್‌ ಅಸೋಸಿಯೇಶನ್‌ ಮಾಜಿ 
ಅಧ್ಯಕ್ಷ ರವಿರಾಜ್‌ ಹೆಗ್ಡೆ ಮಾತನಾಡಿ, ನ್ಯಾಯ ಮಂಡಳಿ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರವೀಂದ್ರ ಅರಸರು ಶ್ರಮಿಸುವರೆಂಬ ವಿಶ್ವಾಸವಿದೆ ಎಂದರು.

ನ್ಯಾಯವಾದಿ ಕೆ. ಪಿ. ಪ್ರಕಾಶ್‌ ಎಲ್‌. ಶೆಟ್ಟಿ ಅವರು ಮಾತನಾಡಿ, ನ್ಯಾಯಮಂಡಳಿಯ ಕಾರ್ಯಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಕಳೆದೆರಡು ವರ್ಷಗಳ ಕಾರ್ಯ ಅಭಿನಂದನೀಯ. ನೂತನ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸ ನ್ಯಾಯಮಂಡಳಿಯ ಆರಂಭವಾದ ದಿನದಿಂದ ವ್ಯಕ್ತಿಗತವಾಗಿ ಕಾರ್ಯನಿರ್ವಹಿಸಿದವರಲ್ಲಿ ಒಬ್ಬರೆಂದು ನುಡಿದ ಅವರು ಅರಸರು ನ್ಯಾಯಮಂಡಳಿಯ ಅನ್ನದಾತರೆಂದು ಬಣ್ಣಿಸಿದರು.

ನ್ಯಾಯವಾದಿ ಆನಂದ ವಿ. ಶೆಟ್ಟಿ ಅವರು ಮಾತನಾಡಿ, ಜನರಿಗೆ ಮಂಡಳಿಯ ಬಗ್ಗೆ ವಿಶ್ವಾಸ ಹುಟ್ಟುವಂತಾಗಬೇಕು. ಕೋರ್ಟ್‌ ಕಚೇರಿಗೆ ಅಲೆಯುವುದಕ್ಕಿಂತ ನ್ಯಾಯ ಮಂಡಳಿಯ ತೀರ್ಮಾನವೇ ಸೂಕ್ತ ಎಂಬುದರ ಅರಿವಾಗಬೇಕು ಎಂದರು.

ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ನ್ಯಾಯಕ್ಕಾಗಿ ದೂರು ನೀಡಿದವರು ನ್ಯಾಯದ ಕಟ್ಟೆಗೆ ಬರುತ್ತಾರೆ ಹೊರತು ಎದುರು ಪಾರ್ಟಿ ಬಾರದಿರುವುದಕ್ಕೆ ಪರಿಹಾರ ಹುಡುಕುವ ಅಗತ್ಯವಿದೆ ಎಂದರು.

ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಕಾರ್ಯಾಧ್ಯಕ್ಷೆ ಆಶಾ ಎಸ್‌. ಶೆಟ್ಟಿ, ನ್ಯಾಯ ಮಂಡಳಿಯಲ್ಲಿ ಮಹಿಳೆಯರ ಪಾತ್ರವನ್ನು ವಿವರಿಸಿದರು. ಬಂಟರ ಸಂಘ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ ಕುಟುಂಬವೊಂದರ ಕಲಹದ ಬಗ್ಗೆ ಇತ್ತೀಚೆಗೆ ತಾನು ಮಾಡಿದ ಕಾರ್ಯಗಳ ಬಗ್ಗೆ ವಿವರಿಸಿದರು.

ಲತಾ ಪ್ರಭಾಕರ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಸ್ವಾಗತಿಸಿದರು. ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ, ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ಬಳಿಕ 2016-2017 ರ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿ ಅನುಮೋದಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. 
ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಬಿ., ಜೊತೆ ಕಾರ್ಯದರ್ಶಿ ನ್ಯಾಯವಾದಿ ರಾಮಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.  ಗೌರವ ಪ್ರಧಾನ ಕಾರ್ಯದರ್ಶಿ ಡಾ| ಪ್ರಭಾಕರ ಶೆಟ್ಟಿ ಬಿ. ವಂದಿಸಿದರು. ಗೌರವ ಕೋಶಾಧಿಕಾರಿ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಂಟ್ಸ್‌ ನ್ಯಾಯಮಂಡಳಿ ಮುಂಬಯಿಯ ಎರಡು ಪ್ರತಿಷ್ಠಿತ ಬಂಟರ ಸಂಘಟನೆಗಳಿಂದ ಆದ ಸಂಸ್ಥೆಯಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಸಂತೋಷ್‌ ಹೆಗ್ಡೆ ಅವರ ಪರಿಕಲ್ಪನೆಯಲ್ಲಿ ಉದಯಗೊಂಡ  ಈ ಮಂಡಳಿಯ ಬಗ್ಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್‌. ಎಂ. ಕೃಷ್ಣ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಡಳಿಯು ನಮಗೆಲ್ಲರಿಗೂ ಹೈಕೋರ್ಟ್‌ ಇದ್ದಂತೆ. ಕಾರ್ಯಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಅವಧಿ ಕಾರ್ಯ ಶ್ಲಾಘನೀಯ. ನೂತನ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸರೂ ಇದಕ್ಕೆ ಹೊರತಲ್ಲ. ಹೆಚ್ಚಿನ ಅನುಭವವುಳ್ಳ ಅರಸರು ನ್ಯಾಯಮಂಡಳಿಯ ಸಭೆಗಾಗಿ ತನ್ನ ಕಚೇರಿಯಲ್ಲಿ ಸ್ಥಳವಾಕಾಶ ಮಾಡಿಕೊಟ್ಟು ಸಹಕರಿಸಿದ್ದಾರೆ. ಅವರಿಂದ ಮಂಡಳಿಯು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ 
– ಎಂ. ಡಿ. ಶೆಟ್ಟಿ (ಗೌರವ ಕಾರ್ಯಾಧ್ಯಕ್ಷರು : ಬಂಟ್ಸ್‌  ನ್ಯಾಯ ಮಂಡಳಿ).

ಬಂಟ ಸಮಾಜದ ಒಳಿತಿಗಾಗಿ, ನಮ್ಮವರಿಗಾಗಿ, ನಮ್ಮವರಿಂದಲೇ ಸ್ಥಾಪನೆಗೊಂಡ ಸಂಸ್ಥೆ ಇದಾಗಿದೆ. ಸಮಾಜ ಬಾಂಧವರ ಆಂತರಿಕ ಕಲಹಗಳನ್ನು ಕೋರ್ಟ್‌ ಕಚೇರಿಯಿಲ್ಲದೆ ನಮ್ಮ ನಮ್ಮೊಳಗೆ ಸುಲಭ ಮಾರ್ಗದಲ್ಲಿ ಬಗೆಹರಿಸುವ ಬಂಟರದೇ ಆದ ಕೋರ್ಟ್‌ ಇದಾಗಿದೆ. ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಿದ ಮಾರ್ಗದರ್ಶಕರೂ, ಹಿತಚಿಂತಕರೂ ಆದ ಎಂ. ಡಿ. ಶೆಟ್ಟಿ, ಪದ್ಮನಾಭ ಎಸ್‌. ಪಯ್ಯಡೆ, ಆರ್‌. ಸಿ. ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು. ಸಮಾಜದ ಏಳ್ಗೆಗಾಗಿ ತಾನು ಶ್ರಮಿಸುತ್ತೇನೆ 
– ರವೀಂದ್ರ ಎಂ. ಅರಸ (ನೂತನ ಕಾರ್ಯಾಧ್ಯಕ್ಷರು : ಬಂಟ್ಸ್‌ ನ್ಯಾಯಮಂಡಳಿ).

ನಿರ್ಗಮನ-ಆಗಮನ ಕಾರ್ಯಾಧ್ಯಕ್ಷರಾದ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ರವೀಂದ್ರ ಎಂ. ಅರಸ ಇವರಿಬ್ಬರಲ್ಲೂ ಸಮರ್ಥ ನಾಯಕತ್ವದ ಗುಣವಿದೆ. ಸಮಾಜಕ್ಕಾಗಿ ಸೇವೆ ಸಲ್ಲಿಸುವ ಹೃದಯವಂತಿಕೆ ಇದೆ. ಅವರೀರ್ವರನ್ನೂ  ಈ ಸಂದರ್ಭದಲ್ಲಿ ಅಭಿನಂದಿಸುತ್ತಿದ್ದೇನೆ. ಹಿರಿಯರಾದ ಎಂ. ಡಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನ್ಯಾಯ ಮಂಡಳಿ ಹೆಸರುವಾಸಿಯಾಗಿ ಮನೆಮಾತಾಗಲಿ 
– ಐಕಳ ಹರೀಶ್‌ ಶೆಟ್ಟಿ (ಉಪಾಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ).

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು.

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.