ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ: ಅಭಿನಂದನ ಸಮಾರಂಭ
Team Udayavani, Nov 25, 2017, 2:59 PM IST
ಮುಂಬಯಿ: ನ್ಯಾಯಾಲಯದ ರೀತಿ- ನೀತಿಗಳ ವಿಫಲತೆಯಿಂದಾಗಿ ಇಂದು ಯಾವುದೇ ವ್ಯಾಜ್ಯ ತೀರ್ಮಾನ ಅಂತಿಮ ಹಂತಕ್ಕೆ ತಲುಪಲು ಕಡೇ ಪಕ್ಷ 50 ವರ್ಷಗಳಷ್ಟು ಕಾಯಬೇಕಾದ ಪರಿಸ್ಥಿತಿ ಬಂದೊಂದಗಿದೆ. ಜನರಿಗೆ ನ್ಯಾಯಾಲಯದ ಬಗೆಗಿರುವ ನಂಬಿಕೆ, ವಿಶ್ವಾಸಗಳು ದೂರವಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ, ಕರ್ನಾಟಕ ಮಾಜಿ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ನುಡಿದರು.
ನ. 22ರಂದು ಸಂಜೆ ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಎನೆಕ್ಸ್ ಸಂಕೀರ್ಣದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಕಿರು ಸಭಾಗೃಹದಲ್ಲಿ ಜರಗಿದ ಬಂಟ್ಸ್ ನ್ಯಾಯಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನ್ಯಾಯಮಂಡಳಿಯ ನೂತನ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಹಾಗೂ ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಬಿ. ಶೆಟ್ಟಿ ಅವರನ್ನು ಅಭಿನಂದಿಸುವ ಹಾಗೂ ನ್ಯಾಯ ಮಂಡಳಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನ್ಯಾಯಾಂಗದಲ್ಲಿ ಸುಮಾರು 50 ವರ್ಷಗಳ ಅನುಭವ ಪಡೆದು ಈ ಮಾತನ್ನು ಆಡುತ್ತಿದ್ದೇನೆ. ನ್ಯಾಯ ತೀರ್ಮಾನದ ವಿಳಂಬದಿಂದ ಒಂದು ಪಕ್ಷಕ್ಕೆ ಮಾತ್ರ ಲಾಭವಾಗುತ್ತಿದೆ. ಗೆದ್ದವನು ಸೋಲುತ್ತಾನೆ, ಸೋತವನು ಸಾಯುತ್ತಾನೆ ಎಂಬ ಫಲಿತಾಂಶ ಕೊನೆಗೆ ದೊರಕುತ್ತದೆ. ಇದು ವಿಷಾದನೀಯ ಸಂಗತಿಯಾಗಿದೆ. ಹಿಂದೆ ನಮ್ಮ ಸಮಾಜದಲ್ಲಿ ಪಂಚಾಯತ್ ಮೂಲಕ ನ್ಯಾಯ ತೀರ್ಮಾನವಾಗುತ್ತಿತ್ತು. ಆ ಸಂದರ್ಭದಲ್ಲಿ ವಾದ-ವಿವಾದಗಳ ಇತ್ಯರ್ಥ ಕ್ಷಣ ಮಾತ್ರದಲ್ಲೇ ಆಗುತ್ತಿತ್ತು. ಮುಂದೆ ಇಂತಹ ಸಂಪ್ರದಾಯಗಳ ಬಗ್ಗೆ ಜನರು ಹೆಚ್ಚು ನಂಬಿಕೆ ಇಡುವ ಕಾಲ ದೂರವಿಲ್ಲ. ಸುಮಾರು 16 ವರ್ಷಗಳ ಹಿಂದೆ ನನ್ನ ಸಲಹೆಯಂತೆ ಆರಂಭಗೊಂಡ ಬಂಟ್ಸ್ ನ್ಯಾಯ ಮಂಡಳಿಯು ಇದುವರೆಗೆ ಸುಮಾರು 500 ದಾವೆಗಳನ್ನು ಇತ್ಯರ್ಥಗೊಳಿಸಿರುವುದನ್ನು ಕೇಳಿ ಸಂತಸವಾಗುತ್ತಿದೆ. ಯಾವುದೇ ವಿವಾದವನ್ನು ನಿಷ್ಪಕ್ಷಪಾತದಿಂದ ಬಗೆಹರಿಸುವಂತಿರಬೇಕು. ಜನರಿಗೆ ಇದರ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಲು ಪ್ರಯತ್ನಿಸಿದರೆ ಮೊಕದ್ದಮೆಗಳು ಕೋರ್ಟಿನ ಕಟ್ಟೆ ಏರದೆ ನ್ಯಾಯ ಮಂಡಳಿಯಂತಹ ಜನತಾ ಸೇವೆ ಮಾಡುವ ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತವೆ. ಹಿರಿಯರು, ಗೌರವಾನ್ವಿತರೂ ಆದ ಎಂ. ಡಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬಂಟ್ಸ್ ನ್ಯಾಯಮಂಡಳಿಯ ಇದುವರೆಗಿನ ಕಾರ್ಯಾಧ್ಯಕ್ಷರೆಲ್ಲರೂ ಉತ್ತಮ ಸೇವೆ ಮಾಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಂಟ್ಸ್ ನ್ಯಾಯ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ರವೀಂದ್ರ ಎಂ. ಅರಸ, ಬಂಟರ ಸಂಘದ ನೂತನ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬೋಂಬೆ ಬಂಟ್ಸ್ ಅಸೋಸಿಯೇಶನ್ ನೂತನ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಬಿ. ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಅಭಿನಂದಿಸಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ನ್ಯಾಯಮಂಡಳಿಯ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸ ಅವರು ಜಸ್ಟೀಸ್ ಸಂತೋಷ್ ಹೆಗ್ಡೆ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ಸ್ ನ್ಯಾಯ ಮಂಡಳಿಯ ಅಧ್ಯಕ್ಷ ರವೀಂದ್ರ ಎಂ. ಅರಸ ಅವರು, ಜಸ್ಟೀಸ್ ಸಂತೋಷ್ ಹೆಗ್ಡೆ ಅವರ ಆಗಮನದಿಂದ ಬಂಟ್ಸ್ ನ್ಯಾಯಮಂಡಳಿಯ ಸ್ಪೂರ್ತಿ ಮತ್ತಷ್ಟು ಹೆಚ್ಚಾಗಿದೆ. ಸುಮಾರು 16 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಸ್ಥೆಯು 500 ಮೊಕದ್ದಮೆಗಳನ್ನು ಇದುವರೆಗೆ ಇತ್ಯರ್ಥಗೊಳಿಸಿದ್ದು, ಬಂಟ ಬಾಂಧವರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸುತ್ತಾ ಬಂದಿದೆ. ಬಂಟ ಬಾಂಧವರಿಗೆ ನ್ಯಾಯ ಮಂಡಳಿಯ ಬಗ್ಗೆ ವಿಶ್ವಾಸ ಹೆಚ್ಚಾಗಿದೆ. ಈ ಕಾರಣದಿಂದಲೇ ಮೊಕದ್ದಮೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಮಿತಿಯು ಪಕ್ಷಪಾತವಿಲ್ಲದೆ, ನಿಸ್ವಾರ್ಥವಾಗಿ ಸೇವೆಯಲ್ಲಿ ತೊಡಗಿದೆ. ಇದರ ಸದುಪಯೋಗವನ್ನು ಬಂಟ ಬಾಂಧವರು ಪಡೆಯಬೇಕು. ಎಂ. ಡಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಬಹಳ ಉತ್ಸಾಹದಿಂದ ಸೇವಾ ನಿರತರಾಗಿರುವುದಕ್ಕೆ ಕೃತಜ್ಞತೆಗಳು ಎಂದು ನುಡಿದರು.
ಆರಂಭದಲ್ಲಿ ಬಂಟ್ಸ್ ನ್ಯಾಯ ಮಂಡಳಿಯ ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಕಡಂದಲೆ ಪ್ರಕಾಶ್ ಎಲ್. ಶೆಟ್ಟಿ ಸ್ವಾಗತಿಸಿ, ಮಂಡಳಿಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಡಾ| ಪ್ರಭಾಕರ ಶೆಟ್ಟಿ ಬಿ. ವಂದಿಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ನ್ಯಾಯವಾದಿ ಅಶೋಕ್ ಶೆಟ್ಟಿ, ಜತೆ ಕಾರ್ಯದರ್ಶಿ ಪಿ. ಧನಂಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಯಾವುದೇ ಸಂಘಟನೆಗೆ ಶಕ್ತಿ ತುಂಬಬೇಕಾದರೆ ಅದನ್ನು ಮುಂದುವರಿಸಿಕೊಂಡು ಹೋಗುವ ಸೇವಾಕರ್ತರ ಆವಶ್ಯಕತೆ ಅಗತ್ಯವಿದೆ. ಬಂಟ್ಸ್ ನ್ಯಾಯಮಂಡಳಿಯು ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನುಭವೀ ನ್ಯಾಯವಾದಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಸುಮಾರು 500 ವ್ಯಾಜ್ಯಗಳನ್ನು ತೀರ್ಮಾನಿಸಿರುವುದು ಅಭಿನಂದನೀಯ. ಕಳೆದ ಎರಡು ವರ್ಷ ನನಗೂ ಈ ಸಂಸ್ಥೆಯಲ್ಲಿ ಸೇವೆಗೈಯುವ ಅವಕಾಶ ಒದಗಿಸಿರುವುದಕ್ಕೆ ಮಂಡಳಿಯ ಪದಾಧಿಕಾರಿಗಳು, ಸದಸ್ಯರಿಗೆ ಕೃತಜ್ಞತೆಗಳು. ರವೀಂದ್ರ ಎಂ. ಅರಸ ಅವರಂತಹ ಯೋಗ್ಯ ವಿಶೇಷ ಕಳಕಳಿಯ ವ್ಯಕ್ತಿ ನ್ಯಾಯಮಂಡಳಿಯ ಕಾರ್ಯಾಧ್ಯಕ್ಷರಾಗಿ ದೊರೆತಿರುವುದು ಸಮುದಾಯದ ಭಾಗ್ಯವಾಗಿದೆ. ಜಸ್ಟೀಸ್ ಸಂತೋಷ್ ಹೆಗ್ಡೆ ಅವರ ಮಾರ್ಗದರ್ಶನ ಸದಾ ದೊರೆಯುತ್ತಿರಲಿ
-ಪದ್ಮನಾಭ ಎಸ್. ಪಯ್ಯಡೆ (ಅಧ್ಯಕ್ಷರು : ಬಂಟರ ಸಂಘ ಮುಂಬಯಿ).
ಬಂಟರ ಸಂಘ ಮತ್ತು ಬೋಂಬೆ ಬಂಟ್ಸ್ ಅಸೋಸಿಯೇಶನ್ ಒಗ್ಗೂಡಿ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ಸೌಹಾದìತೆಯ ಪ್ರತೀಕವಾಗಿದೆ. ಕೋರ್ಟಿಗೆ ಬರುವ ದಾವೆಗಳ ತೀರ್ಮಾನವಾಗುವುದಕ್ಕೆ ಎಷ್ಟೋ ವರ್ಷ ಕಾಯುವ ಪರಿಸ್ಥಿತಿ ಇರುವ ಈ ದಿನಗಳಲ್ಲಿ ಬಂಟ ಬಾಂಧವರು ಕೋರ್ಟಿನ ಮೆಟ್ಟಿಲೇರದೆ ದಾವೆಗಳನ್ನು ನ್ಯಾಯಮಂಡಳಿಯ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದು
– ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ (ಅಧ್ಯಕ್ಷರು : ಬೋಂಬೆ ಬಂಟ್ಸ್ ಅಸೋಸಿಯೇಶನ್).
ಜಸ್ಟೀಸ್ ಸಂತೋಷ್ ಹೆಗ್ಡೆ ಅವರ ಮಾರ್ಗದರ್ಶನದಂತೆ ಮುಂಬಯಿಯಲ್ಲಿ ಆರಂಭಗೊಂಡ ಬಂಟ್ಸ್ ನ್ಯಾಯಮಂಡಳಿ ಎಂಬ ಬಿತ್ತಿದ ಬೀಜವಿಂದು ಮೊಳಕೆಯೊಡೆದು ಸಸಿಯಾಗಿ ಸುಮಾರು 16 ವರ್ಷಗಳು ಸಂದಿವೆ. ಮುಂದೆ ನ್ಯಾಯಮಂಡಳಿಯು ಮರವಾಗಿ ಅದರ ಕೊಂಬೆಗಳು ಶಾಖೆಗಳಾಗಿ ವಿಶ್ವದಾದ್ಯಂತ ಪಸರಿಸಲಿ. ನೂತನ ಅಧ್ಯಕ್ಷರಿಗೆ ಹಾಗೂ ಎಲ್ಲರಿಗೂ ಅಭಿನಂದನೆಗಳು
– ಎಂ. ಡಿ. ಶೆಟ್ಟಿ (ಗೌರವ ಕಾರ್ಯಾಧ್ಯಕ್ಷರು : ಬಂಟ್ಸ್ ನ್ಯಾಯಮಂಡಳಿ ಮುಂಬಯಿ).
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.