ಬಂಟರ ಸಂಘ ಅಂಧೇರಿ-ಬಾಂದ್ರಾ:ನೂತನ ಪದಾಧಿಕಾರಿಗಳ ಪದಗ್ರಹಣ
Team Udayavani, Jan 28, 2018, 4:04 PM IST
ಮುಂಬಯಿ: ಶತಮಾನಗಳ ಹಿಂದೆ ಜೀವನೋಪಾಯ ಕ್ಕಾಗಿ ಕರಾವಳಿಯಿಂದ ಅಥವಾ ತುಳುನಾಡಿನಿಂದ ಹೊರನಾಡು ಮುಂಬಯಿಗೆ ಬಂದು ಶ್ರಮಜೀವಿಗಳಿಗಾಗಿ ಬದುಕು ಕಟ್ಟಿದ ನಮ್ಮ ಹಿರಿಯರು ಸಮಾಜವನ್ನು ಒಂದುಗೂಡಿಸುವ ಹಾಗೂ ಸಮಾಜದ ಅಭಿವೃದ್ಧಿಯನ್ನು ಬಲಪಡಿಸುವ ದೃಷ್ಟಿಯಿಂದ ಇಲ್ಲಿ ಸ್ಥಾಪಿಸಿದ ಬಂಟರ ಸಂಘ ಮುಂಬಯಿಗೆ ಈಗ 90 ವರ್ಷಗಳು ಸಂದರೂ ಹಿರಿಯರ ದೂರದೃಷ್ಟಿತ್ವದಲ್ಲಿನ ಹೊಸತನ ಇಂದಿಗೂ ಮಾಸಿಲ್ಲವೆಂದು ಬಂಟರ ಸಂಘ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ನುಡಿದರು.
ಜ. 24ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದ ಸತ್ಕಾರ್ ಶಿವರಾಮ ಶೆಟ್ಟಿ ವೇದಿಕೆಯಲ್ಲಿ ಜರಗಿದ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟ ಸಮಾಜದ ನಮ್ಮ ಹಿರಿಯರ ಕನಸಿಂದು ನನಸಾಗಿದೆ. ಸಂಘದಲ್ಲಿಂದು ಸಮಾಮುಖೀ ಕಾರ್ಯಗಳು ಭರದಿಂದ ಸಾಗುತ್ತಿದೆ. ಸಂಘವು ಬಂಟರ ಅಭಿಮಾನದ ಸಂಘಟನೆಯಾಗಿ ಬೆಳೆದು ನಿಂತಿದೆ. ನಮ್ಮ ಹಿರಿಯರು ಕಟ್ಟಿದ ಸಂಘವಿಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಸಂಘದ ಪ್ರತಿಷ್ಠೆಗೆ ಎಳ್ಳಷ್ಟೂ ಧಕ್ಕೆಬಾರದಂತೆ ಕಾಪಿಡುವ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಸಿದ್ಧರಾಗಬೇಕು ಎಂದು ಕರೆನೀಡಿದರು. ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನಮ್ಮ ಸಂಘದ ಸಾರಥ್ಯ ವಹಿಸಿ ಸಂಘದ ಹೆಸರನ್ನು ವಿಶ್ವವಿಖ್ಯಾತಿಗೊಳಿಸಿ ಅವರಿಂದು ವಿಶ್ವಜ್ಯೋತಿಯಾಗಿ ಬೆಳಗುತ್ತಿದ್ದಾರೆ. ವಿಶ್ವ ಮಟ್ಟದಲ್ಲಿರುವ ಬಂಟರಿಗೆ, ಬಂಟ ಸಂಘಟನೆಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಮುಂದಾಗಿರುವ ಐಕಳರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು. ಸಂಘದ ಅಂಧೇರಿ-ಬಾಂದ್ರಾ ಸಮಿತಿಯ ನೂತನ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಮತ್ತು ತಂಡವನ್ನು ಅಭಿನಂದಿಸಿ, ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಮತ್ತು ತಂಡದ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘದ ಪ್ರತಿಯೊಂದು ಪ್ರಾದೇಶಿಕ ಸಮಿತಿಯೂ ಸ್ಪರ್ಧಾ ಕಣಕ್ಕಿಳಿದಲ್ಲಿದ್ದಂತೆ ಕಾಣುತ್ತಿದೆ. ಸ್ಪರ್ಧೆ ಎಂಬುವುದು ಸಾಮಾ ಜಿಕ ಸೇವಾ ಕಾರ್ಯಚಟುವಟಿಕೆಗಳಲ್ಲಿ ನಡೆಯಬೇಕೆ ವಿನಃ ನಮ್ಮ ನಮ್ಮಲ್ಲಿ ಸ್ಪರ್ಧೆ ಬೇಡ. ಸಂಘದ ಪ್ರಾದೇಶಿಕ ಸಮಿತಿಗಳ ಪದಗ್ರಹಣದ ರಥ ಇಂದು ಬಂಟರ ಸಂಘದಲ್ಲಿ ನಿಂತಿದೆ. ಮುಂದೆ ಎಲ್ಲಾ ಸಮಿತಿಗಳು ಸಂಘದ ಸೇವಾ ಕಾರ್ಯಗಳಲ್ಲಿ ತೊಡಗಬೇಕು. ಪರಿಶ್ರಮ ಇಲ್ಲದೆ ಯಶಸ್ಸು ಸಾಧ್ಯವಿಲ್ಲ. ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪರಿಶ್ರಮವನ್ನು ಕೊಂಡಾಡಿದರು. ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಶೆಟ್ಟಿ ಐಕಳ, ಕಾರ್ಯಾಧ್ಯಕ್ಷೆ ಸುಜಾತಾ ಗುಣಪಾಲ್ ಶೆಟ್ಟಿ ದಂಪತಿ ಜೊತೆಗೂಡಿ ಉತ್ತಮ ಕಾರ್ಯಕ್ರರಮಗಳನ್ನು ನಡೆಸಿ ಸಮಿತಿಗೆ ಕೊಡುಗೆ ನೀಡಿದ್ದಾರೆ. ನೂತನ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಕಾರ್ಯಾಧ್ಯಕ್ಷರಾಗಿ ದೊರೆತಿರುವುದು ಸಮಿತಿಯ ಭಾಗ್ಯ ಎಂದು ನುಡಿದು ಶುಭಹಾರೈಸಿದರು.
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಎಸ್. ಹೆಗ್ಡೆ ಮಾತನಾಡಿ, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳಲ್ಲಿ ಇದು ಕೊನೆಯ ಪದಗ್ರಹಣವಾಗಿದ್ದು, ಎಲ್ಲಾ ಸಮಿತಿಗಳ ಅದಮ್ಯ ಉತ್ಸಾಹ, ಅಭಿಮಾನವನ್ನು ಕಂಡು ಅತ್ಯಂತ ಸಂತೋಷವಾಗಿದೆ ಎಂದು ನುಡಿದು ಡಾ| ಆರ್. ಕೆ. ಶೆಟ್ಟಿ ಮತ್ತು ವಿಶ್ವಬಂಟರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಗೊಂಡ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಮಿತಿಯ ನೂತನ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಡಾ| ಆರ್. ಕೆ. ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಐಕಳ ಹರೀಶ್ ಶೆಟ್ಟಿ ಅವರು ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಪದವಿ ಪ್ರದಾನಗೈದರು. ಬಳಿಕ ಡಾ| ಆರ್. ಕೆ. ಶೆಟ್ಟಿ ದಂಪತಿ ಮತ್ತು ಮಕ್ಕಳು ಹಾಗೂ ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳ ಸಮಕ್ಷಮದಲ್ಲಿ ಸಮ್ಮಾನಿಸಲಾಯಿತು.
ನಿರ್ಗಮನ ಸದಸ್ಯರನ್ನು ಡಾ| ಆರ್. ಕೆ. ಶೆಟ್ಟಿ ಗೌರವಿಸಿದರು. ಸಮಿತಿಯ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ವನಿತಾ ನೋಂಡಾ ಅವರನ್ನು ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತಾ ಜಿ. ಶೆಟ್ಟಿ ಅವರು ಗೌರವಿಸಿದರು. ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ ಅವರು ಸಮ್ಮಾನಿಸಿದರು.
ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಐಕಳ ಇವರನ್ನು ಅಧ್ಯಕ್ಷರು ಮತ್ತು ಡಾ| ಆರ್. ಕೆ. ಶೆಟ್ಟಿ ಗೌರವಿಸಿದರು. ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತಾ ಆರ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ ಅವರನ್ನು ಡಾ| ಆರ್. ಕೆ. ಶೆಟ್ಟಿ ಸಮ್ಮಾನಿಸಿದರು.
ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಬಿ. ಶೆಟ್ಟಿ ಅವರು ಮಾತನಾಡಿ, ಹಿಂದೆ ಪ್ರಾದೇಶಿಕ ಸಮಿತಿಗಳಲ್ಲಿ ಪದಗ್ರಹಣದ ಕ್ರಮ ಇರಲಿಲ್ಲ. ಇದಕ್ಕಾಗಿ ಸಮಿತಿಗಳು ಹುಚ್ಚು ಖರ್ಚು ಮಾಡುವುದು ಸರಿಯಲ್ಲ. ಮುಂದಿನ ವರ್ಷಗಳಿಂದ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸಮಿತಿಗಳು ಮಾಡುವ ಕೆಲಸ ಬಹಳಷ್ಟಿದೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಶೀಲರಾಗೋಣ ಎಂದರು.
ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ನಿರ್ಗಮನ ಕಾರ್ಯಾಧ್ಯಕ್ಷ ಐಕಳ ಗುಣಪಾಲ್ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಕಳೆದ ಮೂರು ವರ್ಷ ಸಾಧನೆಗಳನ್ನು ವಿವರಿಸಿದರು. ಸಮಿತಿಯ ಎಲ್ಲಾ ಸದಸ್ಯರೂ ಒಮ್ಮತದಿಂದ ಕಾರ್ಯನಿರ್ವಹಿಸಿದ ಪರಿಣಾಮ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಪ್ರಶಸ್ತಿಗೆ ಪಾತ್ರವಾಗಲು ಕಾರಣವಾಯಿತು ಎಂದರು.
ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಎಲ್ಲಾ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಅಶೋಕ್ ಪಕ್ಕಳ ಕಾರ್ಯನಿರ್ವಹಿಸಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿಯ ಸಂಚಾಲಕ ಡಿ. ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿ, ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ಕೆ. ವಿ. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸವಿತಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮ್ಯಾರೇಜ್‌ಸೆಲ್‌ನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸಮಿತಿಯ ನಿರ್ಗಮನ ಕಾರ್ಯದರ್ಶಿ ಸಿಎ ಗಣೇಶ್ ಶೆಟ್ಟಿ, ನಿರ್ಗಮನ ಕೋಶಾಧಿಕಾರಿ ಸಿಎ ಸುನಿಲ್ ಶೆಟ್ಟಿ ಹಾಗೂ ಉಪಸಮಿತಿಗಳ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ದೇವಾಡಿಗ ಅವರಿಂದ ಸ್ಯಾಕೊÕಫೋನ್‌ವಾದನ ನಡೆಯಿತು. ನಿಖೀತಾ ಅಮೀನ್ ಬಳಗದವರಿಂದ ನೃತ್ಯ, ಹರೀಶ್ ಶೆಟ್ಟಿ ಅವರಿಂದ ರಸಮಂಜರಿ, ಅಂಕಿತಾ ರಮೇಶ್ ರೈ, ರಿತಿಕಾ ಆರ್. ಜಿ. ಶೆಟ್ಟಿ ಅವರಿಂದ ನೃತ್ಯ, ಮಹಿಳಾ ಸದಸ್ಯೆಯರಿಂದ ಸಮೂಹಗೀತೆ ನಡೆಯಿತು. ಕಾರ್ಯದರ್ಶಿ ರವಿ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಮನುಷ್ಯನಾಗಿ ಹುಟ್ಟಿದವರಿಗೆ ಸಮಾಜದ ಬಹುದೊಡ್ಡ ಋಣವಿರುತ್ತದೆ. ಈ ಋಣವನ್ನು ಸಮಯಾವಕಾಶ ಒದಗಿದಾಗ ತೀರಿಸುವ ಹೊಣೆ ನಮ್ಮದಾಗಿದೆ. ಅಂತೆಯೇ ಕಾರ್ಯಾಧ್ಯಕ್ಷನಾಗಲು ಕೊನೆಯ ಕ್ಷಣದಲ್ಲಿ ಒಪ್ಪಿಗೆ ನೀಡಬೇಕಾಯಿತು. ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಐಕಳ ಬೆಂಬಿಡದ ರೀತಿಯಲ್ಲಿ ನನ್ನನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಕೃತಜ್ಞತೆಗಳು. ಸಮಾಜದಲ್ಲಿ ಸಂಕಷ್ಟದಲ್ಲಿರುವ ಜನರ ತೊಂದರೆಗಳನ್ನು ನಿವಾರಿಸುವುದು ನಮ್ಮ ಕರ್ತವ್ಯವಾಗಿದೆ. ಶಿಕ್ಷಣ, ಆರೋಗ್ಯ, ವಯಸ್ಕರಿಗೆ ಸಹಾಯ ಮಾಡುವುದು, ಬಡತನ ರೇಖೆಯಲ್ಲಿರುವ ಕುಟುಂಬಗಳ ಕಣ್ಣೀರೊರೆಸುವ ಕಾಯಕದಲ್ಲಿ ತೊಡಗುವುದು ಇನ್ನಿತರ ಮುಖ್ಯ ಧ್ಯೇಯಗಳನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡುತ್ತೇನೆ. ಸಂಘದ ಕಾನೂನಿನ ನಿಯಮಗಳನ್ನು ಸದಾ ಪರಿಪಾಲಿಸುತ್ತೇನೆ
– ಡಾ| ಆರ್. ಕೆ. ಶೆಟ್ಟಿ (ಕಾರ್ಯಾಧ್ಯಕ್ಷರು : ಬಂಟರ ಸಂಘ ಅಂಧೇರಿ-ಬಾಂದ್ರಾ).
ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ನಾವೆಲ್ಲರೂ ಶ್ರಮವಹಿಸಿ ದುಡಿದ ಪರಿಣಾಮ ಸಮಿತಿಗೆ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ಲಭಿಸಿದೆ. ನಮ್ಮಲ್ಲಿ ಎಂದಿಗೂ ಭಿನ್ನಾಭಿಪ್ರಾಯ ಬಂದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದ್ದೇವೆ. ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತಾ ಗುಣಪಾಲ್ ಶೆಟ್ಟಿ ಅವರು ಸಮಿತಿಯ ಸೇವೆಗಾಗಿ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿರುವ ವಯಸ್ಸಾದ ಹೆಣ್ಮಕ್ಕಳ ವಿವಾಹಕ್ಕೆ ತಾವು ಐಕಳ ಹರೀಶ್ ಶೆಟ್ಟಿ ಅವರೊಂದಿಗಿದ್ದು, ಸಹಾಯ ಮಾಡುತ್ತೇವೆ
– ವನಿತಾ ನೋಂಡಾ (ನೂತನ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ : ಅಂಧೇರಿ-ಬಾಂದ್ರಾ).
ಸಮಿತಿಗೆ ಈಗಾಗಲೇ 12 ವರ್ಷಗಳ ಸಂದಿದ್ದು, ಕಳೆದ 9 ವರ್ಷಗಳಿಂದ ಎಲ್ಲರೊಡಗೂಡಿ ಕಾರ್ಯನಿರ್ವಹಿಸಿದ್ದೇನೆ. ನಾಯಕರೆನಿಸಿಕೊಳ್ಳುವವರು ಮತ, ಭೇದ ಮರೆತು ತಾಳ್ಮೆಯಿಂದ ಇರುವ ಅಗತ್ಯವಿದೆ. ಹಿರಿಯ ಮಹಿಳೆಯರ ಮಾರ್ಗದರ್ಶನದೊಂದಿಗೆ ಕೆಲಸ ಮಾಡಿದ್ದೇವೆ. ರಥಸಪ್ತಮಿಯ ದಿನವಾದ ಇಂದು ಪದವಿ ಪ್ರದಾನವಾಗಿದೆ. ಸಮಿತಿಯು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೇರಲಿ
– ಸುಜಾತಾ ಗುಣಪಾಲ್ ಶೆಟ್ಟಿ (ನಿರ್ಗಮನ ಕಾರ್ಯಾಧ್ಯಕ್ಷೆ : ಅಂಧೇರಿ-ಬಾಂದ್ರಾ).
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.