ಬಂಟರ ಸಂಘ ಭಿವಂಡಿ-ಬದ್ಲಾಪುರ: ಅಟಿಲ್ದ ಪಂಥೋ
Team Udayavani, Aug 12, 2018, 3:22 PM IST
ಮುಂಬಯಿ: ಬಂಟರು ಶ್ರಮ ಜೀವಿಗಳು. ಕೃಷಿಕರಾಗಿದ್ದ ಬಂಟರು ಸದಾ ಕ್ರಿಯಶೀಲರಾಗಿದ್ದು, ಸಂಸ್ಕೃತಿ-ಸಂಸ್ಕಾರಗಳ ಉದ್ದೀಪನಕ್ಕೆ ಪ್ರೇರಕ ಶಕ್ತಿಯಾಗಿದ್ದರು. ಆಟಿ ತಿಂಗಳ ಬಗ್ಗೆ ಮುಂಬಯಿಯಲ್ಲಿ ನೆಲೆಸಿರುವ ಯುವಪೀಳಿಗೆಗೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಭಿನಂದನೀಯ ವಾಗಿದೆ. ಮಕ್ಕಳಿಗೆ ನಾಡಿನ ಆಚಾರ, ವಿಚಾರಗಳ ಬಗ್ಗೆ ತಿಳಿಸಿದಾಗ ಬಂಟರ ಹಬ್ಬ ಹರಿದಿನಗಳಿಗೆ ಮಹತ್ವ ಬರುತ್ತದೆ. ಇಂದಿನ ಕಾರ್ಯಕ್ರಮವು ನನಗೆ ತಾಯ್ನಾಡಿನ ನೆನಪುಗಳನ್ನು ಮರುಕಳಿಸಿದೆ ಎಂದು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರು ನುಡಿದರು.
ಕಲ್ಯಾಣ್‌ನ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇ ಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನಡೆದ ಮರಿಯಲದ ಪೊರ್ಲು ಅಟಿಲ್ದ ಪಂಥೋ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಸಮಿತಿಯ ಮಹಿಳಾ ವಿಭಾಗದ ಒಗ್ಗಟ್ಟು, ಉತ್ಸಾಹ ಇತರರಿಗೆ ಮಾದರಿಯಾಗಿದೆ ಎಂದರು.
ಅತಿಥಿ ಲತಾ ಜಯರಾಮ ಶೆಟ್ಟಿ ಮಾತನಾಡಿ, ಆಷಾಢ ತಿಂಗಳಲ್ಲಿ ಬರುತ್ತಿರುವ ಮಳೆಯಿಂದಾಗಿ ನಮ್ಮ ತಾಯ್ನಾಡಿನಲ್ಲಿ ಅಂದಿನ ದಿನಗಳಲ್ಲಿ ಜೀವನವು ಬಹಳಷ್ಟು ಕಷ್ಟಕರವಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಆದರೆ ಮಳೆಗಾಲದ ತಿಂಡಿ-ತಿನಸುಗಳಿಗೆ ತನ್ನದೇ ಆದ ವೈಶಿಷ್ಟÂವಿದೆ. ಅಡುಗೆ ಸ್ಪರ್ಧೆಯಿಂದ ಮಹಿಳೆಯಲ್ಲಿ ಆತ್ಮಸ್ಥೈರ್ಯ ಲಭಿಸುತ್ತದೆ. ಬಂಟರ ಸಂಘದ ಮುಖಾಂತರ ಇಂದು ಮಹಿಳೆಯರಿಗಾಗಿ ಒಂದೇ ವೇದಿಕೆಯಡಿಯಲ್ಲಿ ಸೇರುವ ಕಾಲಾವಕಾವ ಒದಗಿ ಬಂದಿದೆ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವಂತಾಗಬೇಕು ಎಂದು ನುಡಿದು ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಅತಿಥಿಯಾಗಿ ಪಾಲ್ಗೊಂಡ ಮಾಜಿ ನಗರ ಸೇವಕಿ ಶಶಿಲತಾ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಮಹಿಳೆ ಯರಲ್ಲಿ ಅಡುಗೆ ಕಲೆ ಅಡಗವಾಗಿದೆ. ಇದು ಎಲ್ಲರಿಗೂ ದಕ್ಕುವುದಿಲ್ಲ. ನಾವು ಶ್ರದ್ಧೆಯಿಂದ, ಪ್ರೀತಿಯಿಂದ ಅಡುಗೆ ಮಾಡಿದಾಗ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಪ್ರಾದೇಶಿಕ ಸಮಿತಿಯಿಂದಾಗಿ ಇಂತಹ ಕಾರ್ಯಕ್ರಮ ಮಾಡುವ ಅವಕಾಶ ಮಹಿಳೆಯರಿಗೆ ಲಭಿಸುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ ಅವರು ಮಾತನಾಡಿ, ನಮ್ಮ ಆಚಾರ, ವಿಚಾರ, ತಿಂಡಿ-ತಿನಸುಗಳ ಪದ್ಧತಿ, ಹಿರಿಯರಿಗೆ ಗೌರವ ಕೊಡುವ ರೀತಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಉದ್ಧೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಮ್ಮ ಮಳೆಗಾಲದ ಅಂದಿನ ತಿಂಡಿ-ತಿನಸುಗಳು ಇಂದು ಕಾಣಸಿಗುವುದು ಅಪರೂಪ. ಈ ತಿಂಡಿ ತಿನಸುಗಳು ನಮ್ಮ ಮಕ್ಕಳಿಗೆ ತಿಳಿಯಬೇಕೆನ್ನುವ ಉದ್ಧೇಶದಿಂದ ಮಹಿಳಾ ವಿಭಾಗದವರು ಅಡುಗೆ ಸ್ಪರ್ಧೆಯನ್ನು ಆಯೋಜಿಸಿರುವುದು ಅಭಿನಂದನೀಯ. ಇಂತಹ ಕಾರ್ಯಕ್ರಮಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರಕಾಶ್ ಕುಂಠಿನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡುಗೆ ಸ್ಪರ್ಧೆಯ ತೀರ್ಪುಗಾರರು, ದಾನಿಗಳನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನು ವಿಶೇಷವಾಗಿ ಗೌರವಿಸಲಾಯಿತು. ಪ್ರವೀಣಾ ಶೆಟ್ಟಿ, ಶೋಭಾ ಶೆಟ್ಟಿ, ವಿನೋದಾ ಶೆಟ್ಟಿ, ಪ್ರೇಮಾ ಶೆಟ್ಟಿ, ಜಯಶ್ರೀ ಶೆಟ್ಟಿ, ಮಹಾಲಕ್ಷಿ¾à ಶೆಟ್ಟಿ, ಶೈಲಾ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.
ತೀರ್ಪುಗಾರರಾಗಿ ಕೃಷಿ¡ ಶೆಟ್ಟಿ, ಸತೀಶ್ ಶೆಟ್ಟಿ, ಡಾ| ಜ್ಯೋತಿ ಆರ್. ಎನ್. ಶೆಟ್ಟಿ ಅವರು ಸಹಕರಿಸಿದರು. ಸುಜಾತಾ ಶೆಟ್ಟಿ, ಪ್ರವೀಣಾ ಶೆಟ್ಟಿ, ಜಯಶ್ರೀ ಶೆಟ್ಟಿ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ರಂಜನಿ ಸುಧಾಕರ ಹೆಗ್ಡೆ, ಲತಾ ಜಯರಾಮ ಶೆಟ್ಟಿ, ಶಶಿಲತಾ ಶೆಟ್ಟಿ, ಜ್ಯೋತಿ ಪ್ರಕಾಶ್ ಕುಂಠಿನಿ, ಸತೀಶ್ ಎನ್. ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಸುಬ್ಬಯ್ಯ ಎ. ಶೆಟ್ಟಿ, ಸತೀಶ್ ಶೆಟ್ಟಿ, ಪ್ರವೀಣಾ ಪ್ರಕಾಶ್ ಶೆಟ್ಟಿ, ಶೈಲಾ ಎಂ. ಶೆಟ್ಟಿ, ಶೋಭಾ ಶೆಟ್ಟಿ, ಉಮಾ ಶೆಟ್ಟಿ, ಜಯಶ್ರೀ ಹರೀಶ್ ಶೆಟ್ಟಿ, ಡಾ| ಜ್ಯೋತಿ ಆರ್. ಎನ್. ಶೆಟ್ಟಿ, ಕೃಷಿ¡ ಶೆಟ್ಟಿ ಉಪಸ್ಥಿತರಿದ್ದರು. ರೂಪಾ ಡಿ. ಶೆಟ್ಟಿ ವಿಜೇತರ ಯಾದಿಯನ್ನು ಘೋಷಿಸಿದರು. ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಶೆಟ್ಟಿ ವಂದಿಸಿದರು. ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯಿಂತ ಕೂಡು ಕುಟುಂಬದ ಕಾರ್ಯಕ್ರಮವನ್ನು ಕಂಡು ಬಹಳಷ್ಟು ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ನಮ್ಮ ಸಹಕಾರ ಸದಾಯಿದೆ. ಮಹಿಳೆಯರು ಒಗಟ್ಟಾಗಿ ಇನ್ನಷ್ಟು ಸಮಿತಿಯನ್ನು ಸಂಘಟಿಸಬೇಕು .
-ಸುಬ್ಬಯ್ಯ ಶೆಟ್ಟಿ ,
ಸಂಚಾಲಕರು : ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ
ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು. ಪ್ರಾದೇಶಿಕ ಸಮಿತಿಯ ವಿಹಾರಕೂಟವು ಒಂದು ವಿಶೇಷ ಅನುಭವ ನೀಡಿದೆ. ಅಂತಹ ವಿಹಾರಕೂಟವು ಸದಾ ನಡೆಯುತ್ತಿರಲಿ. ಸಮಿತಿಯ ಮಹಿಳಾ ವಿಭಾಗದ ಕಾರ್ಯ ಅಭಿನಂದನೀಯ .
-ಇಂದ್ರಾಳಿ ದಿವಾಕರ ಶೆಟ್ಟಿ ,
ಸಮನ್ವಯಕರು : ಕೇಂದ್ರ ಮಧ್ಯ ವಲಯ ಪ್ರಾದೇಶಿಕ ಸಮಿತಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.