ಪ್ರತಿಭಾನ್ವೇಷಣೆಗೆ ಕ್ರೀಡಾಕೂಟ ಸೂಕ್ತ ವೇದಿಕೆ: ಉದಯ ಶೆಟ್ಟಿ ಮುನಿಯಾಲ್‌


Team Udayavani, Apr 5, 2022, 11:15 AM IST

ಪ್ರತಿಭಾನ್ವೇಷಣೆಗೆ ಕ್ರೀಡಾಕೂಟ ಸೂಕ್ತ ವೇದಿಕೆ: ಉದಯ ಶೆಟ್ಟಿ ಮುನಿಯಾಲ್‌

ಮುಂಬಯಿ: ಬಂಟ ಬಂಧುಗಳ ಕ್ರೀಡಾ ಸ್ಫೂರ್ತಿಯನ್ನು ಕಂಡಾಗ ಅಭಿಮಾನ ಮೂಡಿ ಬರುತ್ತದೆ. ಸಮಾಜದ ಬಂಧುಗಳು ಕುಶಲೋಪರಿ ವಿಚಾರಿಸಿ ಕಷ್ಟ-ಸುಖಗಳ ವಿನಿಮಯಕ್ಕೂ ಇದೊಂದು ಸುಸಂದರ್ಭ. ಬಂಧುತ್ವದ ಬಲಾಡ್ಯತೆಗೆ ಕ್ರೀಡೆಯು ಪೂರಕವಾಗಿದ್ದು, ಸಮುದಾಯದೊಳಗಿನ ಕ್ರೀಡಾ ಪ್ರತಿಭಾನ್ವೇಷಣೆಗೂ ಸೂಕ್ತ ವೇದಿಕೆಯಾಗುತ್ತದೆ. ಬಂಟರ ಈ ಕ್ರೀಡೋತ್ಸವ ಭವಿಷ್ಯದಲ್ಲೂ ಇನ್ನೂ ವಿಜೃಂಭಣೆಯಿಂದ ಜರಗುತ್ತಾ, ಬಂಟರ ಪಾಲಿನ ಪ್ರತಿಷ್ಠಿತ ಕಾರ್ಯಕ್ರಮವಾಗಿ ಮೂಡಿ ಬರಲಿ ಎಂದು ಬಂಟ್ಸ್‌ ಸಂಘ ಹೆಬ್ರಿ ಅಧ್ಯಕ್ಷ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲ್‌ ತಿಳಿಸಿದರು.

ಬಂಟ್ಸ್‌ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ವತಿಯಿಂದ, ಸಂಘದ ವಸಾಯಿ -ಡ‌ಹಾಣು ಪ್ರಾದೇಶಿಕ ಸಮಿತಿಯ ಸಹಕಾರ ದೊಂದಿಗೆ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಎ. 4 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮ್ಖಾನದ ಕ್ರೀಡಾಂಗಣದಲ್ಲಿ ದಿನಪೂರ್ತಿ ಆಯೋಜಿಸಲಾಗಿದ್ದ ಸಂಘದ 2022ನೇ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಬಂಟರ ಸಂಘದ ಸಾಧನೆಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.

ಗೌರವ ಅತಿಥಿಗಳಾಗಿ ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಧ್ಯಾನ್‌ಚಂದ್‌ ಪ್ರಶಸ್ತಿ ಪುರಸ್ಕೃತ ಮನ್‌ಪ್ರೀತ್‌ ಸಿಂಗ್‌, ಅತಿಥಿಗಳಾಗಿ ಪೊಯಿಸರ್‌ ಜಿಮ್ಖಾನದ ಅಧ್ಯಕ್ಷ ಮುಕೇಶ್‌ ಭಂಡಾರಿ, ಉಪಾಧ್ಯಕ್ಷ ಕರುಣಾಕರ ಎಸ್‌. ಶೆಟ್ಟಿ, ಏಷ್ಯನ್‌ ಗೇಮ್ಸ್‌ ಕಬಡ್ಡಿ ಸ್ವರ್ಣ ಪದಕ ವಿಜೇತ ನೀರ್‌ ಗುಲಿಯಾ, ಸಂಘದ ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಪ್ರಧಾನ ಪ್ರಾಯೋಜಕ ಹರೀಶ್‌ ಪಾಂಡು ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಜಯ ಎ. ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್‌ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ದಿವಾಕರ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌, ಪ್ರವೀಣ್‌ ಶೆಟ್ಟಿ ವಾರಂಗ, ವಿಟuಲ್‌ ಎಸ್‌. ಆಳ್ವ  ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅಂತಾರಾಷ್ಟ್ರಿಯ ಕ್ರೀಡಾಪಟು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಹಿತ್‌ ಕುಮಾರ್‌ ಕಟೀಲು ಅವರನ್ನು ಸಮ್ಮಾನಿ ಸಲಾಯಿತು. ಮನ್‌ಪ್ರೀತ್‌ ಸಿಂಗ್‌, ನೀರ್‌ ಗುಲಿಯಾ, ಹರೀಶ್‌ ಪಾಂಡು ಶೆಟ್ಟಿ, ಮುಕೇಶ್‌ ಭಂಡಾರಿ, ಕರುಣಾಕರ ಶೆಟ್ಟಿ, ಜಯ ಎ. ಶೆಟ್ಟಿ, ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌ ಹಾಗೂ ಬಂಟರ ಸಂಘದ ಪ್ರಧಾನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಮನ್‌ಪ್ರೀತ್‌ ಸಿಂಗ್‌ ಮಾತನಾಡಿ, ನನ್ನನ್ನು ಪಂಜಾಬ್‌ನಿಂದ ಇಲ್ಲಿಗೆ ಆಹ್ವಾನಿಸಿ ನೀವು ನೀಡಿದ ಗೌರವಕ್ಕೆ ಆಭಾರಿಯಾಗಿದ್ದೇನೆ. ಜಯಣ್ಣ ಮತ್ತು ತೆಳ್ಳಾರ್‌ ಗಿರೀಶಣ್ಣನವರು ನನ್ನೊಂದಿಗೆ ಹಲವು ವರ್ಷಗಳಿಂದ ಬಾಂಧವ್ಯ ಹೊಂದಿದವರು. ಇವ ರಿಂದ ನಾನು ಬಂಧುತ್ವದ ಪ್ರೀತಿ ಗಳಿಸಿದ್ದೇನೆ. ಆದ್ದ ರಿಂದ ಕರ್ನಾಟಕದ ಜನತೆಯ ಮಮತೆಯೂ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಇದೇ ವಾತ್ಸಲ್ಯ ನನ್ನ ಪಾಲಿಗೆ ವರವಾಗಿ, ಪ್ರೇರಣೆಯಾಗಿ ನನ್ನ ಮನೋಶಕ್ತಿ ವೃದ್ಧಿಸಿ ಪ್ರೇರೇಪಿಸಿದೆ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು ಮಾತನಾಡಿ, ಬಾಲ್ಯದಿಂದಲೂ ಕ್ರೀಡಾಸಕ್ತನಾಗಿದ್ದೆ. ಕ್ರೀಡಾಪಟುವಾಗಿಸಿ ಸಾಧಿಸಿದ ಸಾಧನೆಗೆ ಕರ್ನಾಟಕ ಸರಕಾರ ರಾಜೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಗೌರವಾರ್ಥ ತಾವು ಈ ವೇದಿಕೆಯಲ್ಲಿ ಕೊಡಮಾಡಿದ ಅಭಿನಂದನ ಗೌರವಕ್ಕೆ ಕೃತಜ್ಞನಾಗಿರುವೆ. 1982 ರಿಂದ ಕ್ರೀಡೆಯಲ್ಲಿ ನಿರತನಾಗಿದ್ದೇನೆ. 6-7 ವರ್ಷಗಳಲ್ಲೇ ರಾಜ್ಯ ಮಟ್ಟ ದಲ್ಲಿ ಗುರುತಿಸಿಕೊಂಡೆ. ರಾಷ್ಟ್ರ ಪ್ರತಿನಿಧಿಸಲು 16 ವರ್ಷಗಳೇ ತಗಲಿದವು. ನಮ್ಮ ಕ್ರೀಡಾ ಸ್ಥಿತಿಗತಿ, ಚರಿತ್ರೆ ನೋಡಿದರೆ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವುದು ಕನಸಾಗಿದ್ದು, ಪ್ರೋತ್ಸಾಹದ ಕೊರತೆಯಿಂದ ನನಗೆ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಕ್ರೀಡೆಗಿಂತ ಬದುಕು ನಿರ್ವಹಿಸುವುದೇ ಬಹಳಷ್ಟು ಕಷ್ಟವಿತ್ತು. ಆದರೆ ಇಂದು ಪ್ರಧಾನಿಮೋದಿ ಅವರ ಕ್ರೀಡಾಪ್ರೋತ್ಸಾಹ ಜಗತ್ತಿಗೆ ಮಾದರಿಯಾಗಿದೆ. ವಾರ್ಷಿಕವಾಗಿ ಸಾವಿರಾರು ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗಿದೆ. ಯುವಜನತೆ ಸಾಧ್ಯವಾದಷ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಕ್ರೀಡಾಪಟುವಾಗಲು ಆರೋಗ್ಯದ ಕಾಳಜಿ ವಹಿಸಬೇಕು. ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ ರೂಢಿಸಿ ವಿಶ್ವಮಾನ್ಯ ಕ್ರೀಡಾಪಟುಗಳಾಗಿ ಎಂದು ತಿಳಿಸಿ ಶುಭ ಹಾರೈಸಿದರು.

ಕ್ರೀಡೋತ್ಸವದ ಯಶಸ್ಸಿಗೆ ವಿವಿಧ ಪ್ರಾಯೋಜಕ ತ್ವವನ್ನು ವಹಿಸಿ ಸಹಕರಿಸಿದ ಮುಖ್ಯ ಪ್ರಾಯೋಜಕರು, ಸಹ ಪ್ರಾಯೋಜಕರು, ಕ್ರೀಡಾ ಮೇಲ್ವಿಚಾರಕರು, ತೀರ್ಪುಗಾರರು, ವಿವಿಧ ಬಂಟ ಸಂಘಟನೆಗಳ ಅಧ್ಯಕ್ಷರು, ಪ್ರತಿನಿಧಿಗಳು, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಸಮನ್ವಯಕರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.

ವಿಜಯ್‌ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಗೈದರು. ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌ ಸ್ವಾಗತಿಸಿದರು. ಜಯ ಎ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ  ಸಮ್ಮಾನಿತರ ಸಮ್ಮಾನ ಪತ್ರ ವಾಚಿಸಿ ವಂದಿಸಿದರು.

ಕ್ರೀಡೋತ್ಸವದ ಫ‌ಲಿತಾಂಶ :

ಕ್ರೀಡೋತ್ಸವದ ಸಮಗ್ರ ಫಲಿತಾಂಶದಲ್ಲಿ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿ ಪ್ರಥಮ, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ದ್ವಿತೀಯ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ ತೃತೀಯ ಪ್ರಶಸ್ತಿಯನ್ನು ಪಡೆಯಿತು. ಅತಿಥಿಗಳು ಕ್ರೀಡೋತ್ಸವದ ವಿಜೇತರಿಗೆ ಪಾರಿತೋಷಕ, ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು.

ಎರಡು ವರ್ಷಗಳ ವಿಷಮಕಾಲಕ್ಕೆ ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ ಅಂದುಕೊಂಡಿದ್ದೇನೆ. ಮತ್ತೆ ಅವಕಾಶದ ಸದ್ಬಳಕೆ ಮಾಡಿ ಸೀಮಿತವಾದ ವ್ಯವಸ್ಥೆಯೊಂದಿಗೆ ಇಂದು ಗಿರೀಶ್‌ ಶೆಟ್ಟಿ ತೆಳ್ಳಾರ್‌ ಅವರ ಸಮರ್ಥ ಮುಂದಾಳತ್ವದಲ್ಲಿ ಈ ಕ್ರೀಡೋತ್ಸವ ಬಂಟರ ಸಂಘದ ನೂತನ ಮೈಲಿಗಲ್ಲಾಗಿ ಮೂಡಿಬಂದಿದೆ. ಡಾ| ಪಿ. ವಿ. ಶೆಟ್ಟಿ ಅವರ ತೆರೆಮರೆಯ ಶ್ರಮ, ಗಿರೀಶ್‌ ಶೆಟ್ಟಿ ಹಾಗೂ ತಂಡದ ಕೊಡುಗೆ ಸ್ಮರಣೀಯ. ಎಲ್ಲರ ಪ್ರಯತ್ನ ಹಾಗೂ ಉತ್ತಮ ವ್ಯವಸ್ಥೆಯಿಂದ ಈ ಕ್ರೀಡೋತ್ಸವ ಯಶಸ್ಸು ಕಂಡಿರುವುದಕ್ಕಾಗಿ ಅಭಿನಂದನೆಗಳು. ಮುಂದೆಯೂ ಈ ಸ್ಫೂರ್ತಿಯನ್ನು ಅನುಭವದ ಸ್ಪರ್ಧೆಯಾಗಿ ಸ್ವೀಕರಿಸಿ ಬಂಟರ ಏಕತೆಯನ್ನು ಜಾಗತಿಕವಾಗಿ ಪ್ರದರ್ಶಿಸೋಣ.ಚಂದ್ರಹಾಸ್‌ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ

 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.