ಬಂಟರ ಸಂಘ ಮುಂಬಯಿ 32ನೇ ವಾರ್ಷಿಕ ಕ್ರೀಡೋತ್ಸವ ಸಮಾರೋಪ
Team Udayavani, Jan 22, 2019, 2:39 PM IST
ಮುಂಬಯಿ: ಬಂಟರ ಸಂಘದ ಯಾವುದೇ ಕಾರ್ಯಕ್ರಮಗಳಿಗಿಂತ ಸಂಘದ ಕ್ರೀಡಾ ಸಮಿತಿಯ ವಾರ್ಷಿಕ ಕ್ರೀಡಾಕೂಟವು ಆಕರ್ಷಣೀಯವಾಗಿ ಕಂಡು ಬರುತ್ತದೆ. ಕಳೆದ 32 ವರ್ಷಗಳಿಂದ ನಡೆಯುತ್ತಿರುವ ಕ್ರೀಡೋತ್ಸವವು ಬಂಟರ ಸ್ನೇಹ ಸಂಬಂಧವನ್ನು ಉಳಿಸಲು ಅವಕಾಶವಾಗಿದ್ದು, ಸೌಹಾರ್ದತೆಯ ಸಂಕೇತವೂ ಆಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಜ. 21 ರಂದು ಸಂಜೆ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮಾVನದ ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರೀಡಾಂಗಣದ ರಮಾನಾಥ ಪಯ್ಯಡೆ ವೇದಿಕೆಯಲ್ಲಿ ಸಂಘದ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಜರಗಿದ 32 ನೇ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅತ್ಯಂತ ಸರಳವಾಗಿ ನಡೆಯುತ್ತಿದ್ದ ಕ್ರೀಡೋತ್ಸವವು ಐಕಳ ಹರೀಶ್ ಶೆಟ್ಟಿ ಅವರು ಕ್ರೀಡಾ ಕಾರ್ಯಾಧ್ಯಕ್ಷರಾದ ಬಳಿಕ ಪರಿವರ್ತನೆ ಕಂಡು, ವೈವಿಧ್ಯಮಯವಾಗಿ ಜರಗಲು ಕಾರಣವಾಯಿತು, ಅನಂತರದ ವರ್ಷಗಳಲ್ಲಿ ಡಾ| ಪ್ರಭಾಕರ ಶೆಟ್ಟಿ ಬಿ., ಮಹೇಶ್ ಎಸ್. ಶೆಟ್ಟಿ, ವಿಟuಲ್ ಎಸ್. ಆಳ್ವ, ಗೌತಮ್ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿ ಪ್ರಸ್ತುತ ಮತ್ತೆ ವಿಠಲ್ ಎಸ್. ಆಳ್ವ ಎರಡನೇ ಬಾರಿ ನಿಯುಕ್ತಿಗೊಂಡು ಅತ್ಯಂತ ಉತ್ಸಾಹ ಹಾಗೂ ಪರಿಶ್ರಮದೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದಾರೆ. ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ ಅವರ ಸಹಕಾರವನ್ನು ಸಂಘ ಸದಾ ಸ್ಮರಿಸುತ್ತದೆ ಎಂದರು.
ಸಮಾರಂಭದಲ್ಲಿ ಕ್ರೀಡಾ ಸಮಿತಿಯ ಪರವಾಗಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಮುಖ್ಯ ಅತಿಥಿ ಡಾ| ಪಿ. ವಿ. ಶೆಟ್ಟಿ, ಗೌರವ್ ಪಯ್ಯಡೆ ಅವರನ್ನು ಸಮಿತಿಯ ಕಾರ್ಯಾಧ್ಯಕ್ಷ ವಿಟuಲ್ ಎಸ್. ಆಳ್ವ, ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಗೌರವಿಸಿದರು. ಕ್ರೀಡಾಕೂಟದ ಯಶಸ್ಸಿಗಾಗಿ ಕಾರ್ಯಾಧ್ಯಕ್ಷ ವಿಟuಲ್ ಎಸ್. ಆಳ್ವ ಮತ್ತು ಸುನಂದಾ ಆಳ್ವ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಪೊಯಿಸಾರ್ ಜಿಮಾVನದ ವ್ಯವಸ್ಥೆಗೈದ ಜಿಮಾVನದ ಉಪಾಧ್ಯಕ್ಷ ಕರುಣಾಕರ್ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪ್ರಧಾನ ಪ್ರಾಯೋಜಕರಾಗಿ ಉಪಾಹಾರ- ಊಟ-ಚಹಾ-ತಿಂಡಿಯ ವ್ಯವಸ್ಥೆ ಮಾಡಿರುವ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ, ಕ್ರೀಡಾ ಪ್ರಾಯೋಜಕರಾಗಿ ವಿಶೇಷ ಸಹಕಾರ ನೀಡಿದ ವಿ. ಕೆ. ಗ್ರೂಪ್ ಕಂಪೆನಿಯ ಸಿಎಂಡಿ ಕೆ. ಎಂ. ಶೆಟ್ಟಿ ಅವರ ಪರವಾಗಿ ಮಹೇಶ್ ಎಸ್. ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರಾಯೋಜಕ ಡಾ| ಪಿ. ವಿ. ಶೆಟ್ಟಿ, ಸಹ ಪ್ರಾಯೋಜಕರಾದ ಸಂಘದ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ, ಶಂಕರ್ ಬಿ. ಶೆಟ್ಟಿ ವಿರಾರ್, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ, ತುಂಗಾ ಗ್ರೂಪ್‌ನ ಸುಧಾಕರ ಎಸ್. ಹೆಗ್ಡೆ, ಸಾಯಿಪ್ಯಾಲೇಸ್ ರವಿ ಎಸ್. ಶೆಟ್ಟಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಕ್ಯಾಪ್ ಪ್ರಾಯೋಜಕ ಸಿಎ ಐ. ಆರ್. ಶೆಟ್ಟಿ, ಸಹ ಪ್ರಾಯೋಜಕರಾದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ ಐಕಳ, ರಘುರಾಮ ಶೆಟ್ಟಿ ಅವೆನ್ಯೂ, ಅಪ್ಪಣ್ಣ ಎಂ. ಶೆಟ್ಟಿ, ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ, ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಜೀವ ಎನ್. ಶೆಟ್ಟಿ ಅಶ್ವಿತ್, ಸಿಎ ಸದಾಶಿವ ಶೆಟ್ಟಿ, ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ, ಶಿವರಾಮ ಎಸ್. ಶೆಟ್ಟಿ ಡೆಲ್ಟಾ, ಬಂಟರ ಸಂಘ ಉನ್ನತ ಶಿಕ್ಷಣ ಸಮಿತಿ, ಮಿನರಲ್ ವಾಟರ್ ಪ್ರಾಯೋಜಕರಾದ ವಿಜಯ ಆರ್. ಭಂಡಾರಿ, ಆಫೀಸಿಯಲ್ ಪ್ರಾಯೋಜಕರಾದ ವಿಶ್ವನಾಥ ಪಿ. ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ, ಲಾಜಿಸ್ಟಿಕ್ ಪ್ರಾಯೋಜಕರಾದ ಭಾಸ್ಕರ ಕೆ. ಶೆಟ್ಟಿ, ಅತ್ಯುತ್ತಮ ಪುರುಷ-ಮಹಿಳಾ ಕ್ರೀಡಾಪಟು ನಗದು ಬಹುಮಾನ ನೀಡಿದ ಮುಂಡಪ್ಪ ಎಸ್. ಪಯ್ಯಡೆ, ಅತ್ಯುತ್ತಮ ಪ್ರಾದೇಶಿಕ ಸಮಿತಿ ನಗದು ಬಹುಮಾನ ನೀಡಿದ ಐಕಳ ಹರೀಶ್ ಶೆಟ್ಟಿ, ಸರ್ಟಿಫಿಕೇಟ್ ಮತ್ತು ಆಮಂತ್ರಣ ಪತ್ರಿಕೆ ಪ್ರಾಯೋಜಕರಾದ ಎರ್ಮಾಳ್ ಹರೀಶ್ ಶೆಟ್ಟಿ, ರಾಜೇಂದ್ರ ಎಸ್. ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ ವಸಾಯಿ, ಹರೀಶ್ ಶೆಟ್ಟಿ, ಪವರ್ ಪಾರ್ಟನರ್ ಪ್ರಾಯೋಜಕರಾದ ದಿನಕರ ಎನ್. ಶೆಟ್ಟಿ ಮತ್ತು ಹರೀಶ್ ಶೆಟ್ಟಿ ರಮಡಾ, ಕ್ರೀಡಾಂಗಣದ ಪ್ರಾಯೋಜಕರಾದ ರತ್ನಾಕರ ಶೆಟ್ಟಿ ಮುಂಡ್ಕೂರು, ಲೈವ್ ಟೀವಿ ಮೀಡಿಯಾ ಪ್ರಾಯೋಜಕರಾದ ಮನೋಹರ್ ಎನ್. ಶೆಟ್ಟಿ, ಲೈಟ್-ಸೌಂಡ್ ಪ್ರಾಯೋಜಕರಾದ ಶಾಂತಾರಾಮ ಬಿ. ಶೆಟ್ಟಿ, ವಿ. ಎಸ್. ಗ್ರೂಪ್ ಉಪಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ದಿವ್ಯಾ ಸಾಗರ್ ಗ್ರೂಪ್ ಇದರ ಸಿಎಂಡಿ ದಿವಾಕರ ಶೆಟ್ಟಿ ಮುದ್ರಾಡಿ, ಸೈಂಟ್ ಆ್ಯಗ್ನೇಸ್ ಸ್ಕೂಲ್‌ನ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ, ಫೋಟೋ ಮತ್ತು ವೀಡಿಯೋ ಪ್ರಾಯೋಜಕರಾದ ರವೀಂದ್ರ ಎಂ. ಅರಸ, ಉದ್ಯಮಿ ಶಶಿಧರ ಕೆ. ಶೆಟ್ಟಿ, ಸ್ಟೇಷನರಿ ಪ್ರಾಯೋಜಕರಾದ ನ್ಯಾಯವಾದಿ ದಯಾನಂದ ಶೆಟ್ಟಿ, ಟೆಂಡರ್ ಕೋಕನಟ್ ಪ್ರಾಯೋಜಕ ಗಂಗಾಧರ ಎ. ಶೆಟ್ಟಿ, ಮೆಡಲ್ಸ್ ಮತ್ತು ಮೊಮೆಂಟೋ ಪ್ರಾಯೋಜಕರುಗಳಾದ ಭಾಸ್ಕರ ವೈ. ಶೆಟ್ಟಿ ಖಾಂದೇಶ್, ಉದ್ಯಮಿಗಳಾದ ಸಂತೋಷ್ ಕುಮಾರ್ ವಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಪುಷ್ಪರಾಜ್ ವಿ. ಶೆಟ್ಟಿ, ಜಾಹೀರಾತು ಪ್ರಾಯೋಜಕರಾದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಕೋಶಾಧಿಕಾರಿ ಆಶಾ ವಿ. ರೈ, ಜತೆ ಕಾರ್ಯದರ್ಶಿ ಮನೋರಮಾ ಎನ್. ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ, ಪ್ರಕಾಶ್ ಹೆಗ್ಡೆ ಕುಂಠಿನಿ, ಮೆಡಿಕಲ್ ಪ್ರಾಯೋಜಕ ಡಾ| ರಾಜೇಶ್ ಶೆಟ್ಟಿ ತುಂಗಾ ಆಸ್ಪತ್ರೆ, ಮೈದಾನದ ಮೇಲ್ವಿಚಾರಕ ಜಯ ಎ. ಶೆಟ್ಟಿ, ಕಾರ್ಯಕ್ರಮದ ಉದ್ಘೋಷಕರಾದ ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ಹರೀಶ್ ವಾಸು ಶೆಟ್ಟಿ, ತ್ರೋಬಾಲ್ ಮುಖ್ಯಸ್ಥರಾದ ಪ್ರಕಾಶ್ ಟಿ. ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ, ಕೇಶವ ಆಳ್ವ, ರಾಷ್ಟ್ರೀಯ ಗೇಮ್ಸ್‌ಗೆ ಆಯ್ಕೆಯಾದ ಅಕ್ಷಯ್ ಎ. ಶೆಟ್ಟಿ, ಕ್ರೀಡಾ ಅಫೀಶಿಯಲ್ ವಿಜಯ್ ಶೆಟ್ಟಿ, ಸಂತೋಷ್ ಕ್ಯಾಟರರ್ನ ಸಂತೋಷ್ ಆರ್. ಶೆಟ್ಟಿ, ಸಂಘದ ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಡೆಕೋರೆಟರ್ ಶ್ರೀವಾತ್ಸವ, ಆಮಂತ್ರಣ ಪತ್ರಿಕೆಯ ಮುದ್ರಕ ನಾರಾಯಣ ಶೆಟ್ಟಿ, ಲೆಡ್ ವ್ಯವಸ್ಥೆ ಕಲ್ಪಿಸಿದ ಪ್ರವೀಣ್ ಶೆಟ್ಟಿ ವರಂಗ, ಸ್ಕೋರ್ ಇನ್‌ಚಾರ್ಜರ್ ಸುಕುಮಾರ್ ಶೆಟ್ಟಿ, ಸ್ಟೇಜ್ ಸಹಕಾರ ನೀಡಿದ ದಿವಾಕರ ಶೆಟ್ಟಿ ಅಡ್ಯಾರ್, ವೇಣುಗೋಪಾಲ್ ಶೆಟ್ಟಿ, ಇತರ ಸಹಕಾರ ನೀಡಿದ ನವೀನ್ ಶೆಟ್ಟಿ ಇನ್ನಬಾಳಿಕೆ ಇವರನ್ನು ಗೌರವಿಸಲಾಯಿತು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಗುಣಪಾಲ್ ಶೆಟ್ಟಿ ಐಕಳ ಅವರು ಸಹಕರಿಸಿದವರ ಹೆಸರು ವಾಚಿಸಿದರು. ಸಂಘದ ಉಪಸಮಿತಿ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗ, ವಿಶ್ವಸ್ಥರು ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಆರಂಭದಲ್ಲಿ ಮಹಿಳಾ ವಿಭಾಗದ ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠಲ್ ಎಸ್. ಆಳ್ವ ಸ್ವಾಗತಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.
ನಮ್ಮ ಬದುಕಿಗೆ ಬೇಕಾದ ಅಗತ್ಯಗಳಲ್ಲಿ ಕ್ರೀಡೆಯೂ ಒಂದಾಗಿದೆ. ಬಂಟರ ಸಂಘ ಆಯೋಜಿಸುತ್ತಿರುವ ಕ್ರೀಡಾಕೂಟವು ಸ್ನೇಹ ಸಮ್ಮಿಲನದ ರೂಪದಲ್ಲಿ ನಡೆಯುತ್ತಿದ್ದು, ಇಲ್ಲಿ ಯಾವುದೇ ಘರ್ಷಣೆಗೆ ಸಂಘವು ಅವಕಾಶ ಕಲ್ಪಿಸುವುದಿಲ್ಲ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದವರು ತರಬೇತಿಗಾಗಿ ಸಂಪರ್ಕಿಸಬಹುದು .- ಡಾ| ಪಿ. ವಿ. ಶೆಟ್ಟಿ ,
ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ : ಮುಂಬಯಿ ಕ್ರಿಕೆಟ್ ಅಸೋ.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.