ಬಂಟರ ಸಂಘ ಮುಂಬಯಿ: 90ನೇ ವಾರ್ಷಿಕ ಮಹಾಸಭೆ


Team Udayavani, Oct 2, 2018, 4:26 PM IST

0110mum15.jpg

ಮುಂಬಯಿ: ಮುಂಬಯಿ ಮತ್ತು ಉಪನಗರಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯಲು ಸಂಘದ ನೂತನ ಶಿಕ್ಷಣ ಯೋಜನ ಸಮಿತಿ ಮುಂಡಪ್ಪ ಎಸ್‌. ಪಯ್ಯಡೆ ಅವರ ಕಾರ್ಯಾಧ್ಯಕ್ಷತೆಯಲ್ಲಿ ಈಗಾಗಲೇ ಕಾರ್ಯೋನ್ಮುಖ ವಾಗಿದೆ. ಇದಕ್ಕೆ ಅಗತ್ಯ ವಿರುವ ಸ್ಥಳದ ಪರಿಶೀಲನೆ ನಡೆಯುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಅದನ್ನು ಕಾರ್ಯಗತಗೊಳಿಸಲು ಸರ್ವರೀತಿಯಲ್ಲಿ ಪ್ರಯತ್ನಿಸುವುದಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಸೆ. 30 ರಂದು ಪೂರ್ವಾಹ್ನ  ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಸಂಘದ 90 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರ ಭವನದ ಮುಂಭಾಗದಲ್ಲಿರುವ ಶಶಿಮನ್‌ಮೋಹನ್‌ ಶೆಟ್ಟಿ ಸಂಕೀರ್ಣದ ಉನ್ನತ ಶಿಕ್ಷಣ ಯೋಜನೆಯ ಕಾಲೇಜುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಇನ್ನೂ ಸುಮಾರು 26 ಕೋ. ರೂ. ಗಳ ವೆಚ್ಚದಲ್ಲಿ ಸಂಕೀರ್ಣವನ್ನು ಸುಂದರಗೊಳಿಸಿ ಅತ್ಯುತ್ತಮ ಸೌಲಭ್ಯಗಳನ್ನು ನೀಡುವತ್ತ ಸಂಘ ಹಾಗೂ ಉನ್ನತ ಶಿಕ್ಷಣ ಯೋಜನಾ ಸಮಿತಿ ಯೋಜನೆ ಹಾಕಿಕೊಂಡಿದೆ. ಉನ್ನತ ಶಿಕ್ಷಣ ಕಾಲೇಜು ಸಂಘದ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಮಾದರಿಯಲ್ಲೇ ನಡೆಸಲು ತೀರ್ಮಾನಿಸಿದೆ. ಸಂಘದ ಸದಸ್ಯತ್ವ ಸಂಗ್ರಹವನ್ನು ಹೆಚ್ಚಿಸುವುದು ಈಗಿನ ಧ್ಯೇಯವಾಗಿದೆ. ಈ ಸಮಿತಿಯು ಎನ್‌. ಸಿ. ಶೆಟ್ಟಿ ಅವರ ನೇತೃತ್ವದಲ್ಲಿ ಕೈಗೊಂಡಿರುವ ಕಾರ್ಯ ಅಭಿನಂದನೀಯ. ಈ ವರ್ಷ ಅತೀ ಹೆಚ್ಚು ಸದಸ್ಯತ್ವ ಸಂಗ್ರಹಿಸಿದ 8 ಮಂದಿ ಸದಸ್ಯರು ಈ ಮಹಾಸಭೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವುದು ಅವರ ಪರಿಶ್ರ ಮದ ಸಂಕೇತವಾಗಿದೆ. ಉನ್ನತ ಶಿಕ್ಷಣ ಯೋಜನಾ ಸಮಿತಿಯ ಡಾ| ಪಿ. ವಿ. ಶೆಟ್ಟಿ ಕಾನೂನು ಕಾಲೇ ಜೊಂದನ್ನು ತೆರೆಯಲು ನಿರ್ಧರಿಸಿದ್ದು, ಈ ಕಾರ್ಯ ಶೀಘ್ರದಲ್ಲಿ ಕೈಗೂಡುವುದೆಂಬ ವಿಶ್ವಾಸವಿದೆ. ಈ ಬಾರಿ ಮ್ಯಾರೆಜ್‌ ಸೆಲ್‌ ಕಾರ್ಯಾಧ್ಯಕ್ಷ ಸುರೇಶ್‌ ಎನ್‌. ಶೆಟ್ಟಿ ನೇತೃತ್ವದಲ್ಲಿ ವಧು-ವರರ ಚಾವಡಿ-2018  ಕಾರ್ಯಕ್ರಮ ಆಯೋಜಿಸಲಾಗಿದೆ. 

ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಮಂದಿ ತುಂಬಿದ್ದ  ಈ ಕಾರ್ಯಕ್ರಮದಲ್ಲಿ ಸುಮಾರು 250 ಮಂದಿ ನೆಂಟಸ್ಥಿಕೆಗಾಗಿ ಅರ್ಜಿ ಸಲ್ಲಿಸಿದ್ದರು. ಬಂಟರು ಸ್ವಾಭಿಮಾನವನ್ನು ಬದಿಗಿಟ್ಟು ಸಾಮೂಹಿಕ ವಿವಾಹಕ್ಕೆ ಸಿದ್ಧರಾದರೆ ಸಂಘವು ಸಂಪೂರ್ಣ ವೆಚ್ಚವನ್ನು ನಿಭಾಯಿಸಲು ಸಿದ್ಧವಿದೆ. ಮಹಾಸಭೆಯಲ್ಲಿ ಪ್ರಶಸ್ತಿ, ಬಹುಮಾನ ಪಡೆದ ಎಲ್ಲರನ್ನು ಅಭಿನಂದಿಸುತ್ತಿದ್ದೇನೆ ಎಂದುರು.

ಸಂಘದ ಮಾಜಿ ಅಧ್ಯಕ್ಷ ಆರ್‌.ಸಿ. ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಕಾರ್ಯವೈಖರಿ ಪ್ರಶಂಸನೀಯ. ಸಂಘದ ಅಭಿವೃದ್ಧಿಯಲ್ಲಿ ಪೂರ್ವಜರ ಕೊಡುಗೆ ಯನ್ನು ಸ್ಮರಿಸಬೇಕು. ಬಂಟರ ಸಂಘದ ಇತ್ತೀಚೆಗಿನ ಅಭಿವೃದ್ಧಿಗೆ ಕಾರಣಕರ್ತರಾದ ಮಹಾದಾನಿಗಳನ್ನು, ಅಧ್ಯಕ್ಷರುಗಳನ್ನು ನೆನಪಿಸಿ ಕೊಳ್ಳವುದು ಆದ್ಯ ಕರ್ತವ್ಯ ಎಂದರು. 

ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ ಮಾತನಾಡಿ, ಮಹಾದಾನಿ ಎಸ್‌. ಶೆಟ್ಟಿ ಅವರ ಉದಾರತೆ, ಸಹೃದಯದಿಂದಾಗಿ ಬಂಟರ ಸಂಘದ ಚರಿತ್ರೆಯೇ ಬದಲಾಗಿದೆ. ಸಂಘದ ಆಧಾರ ಸ್ತಂಭಗಳಾದ ದಾನಿಗಳನ್ನು ಒಂದೇ ವೇದಿಕೆಗೆ ತಂದು ಗೌರವಿಸುವ ಕಾರ್ಯ ನಡೆಯಬೇಕು ಎಂದರು.

ಡಾ| ಪ್ರಭಾಕರ ಬಿ. ಶೆಟ್ಟಿ  ಮಾತನಾಡಿ, ವಿಜಯ ಬ್ಯಾಂಕಿನ ಕಾರ್ಯಾ ಧ್ಯಕ್ಷರಾಗಿದ್ದ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಅವರ ಮೂರ್ತಿಯನ್ನು ಬಂಟರ ಭವನದಲ್ಲಿ ಇಡುವ ಅಗತ್ಯವಿದೆ. ಈ ಮಹಾಸಭೆಯಲ್ಲಿ ಸದಸ್ಯರ ಅನುಮತಿ ಪಡೆದು ಈ ಸಂಬಂಧವಾಗಿ ಹೊಸ ಠರಾವೊಂದನ್ನು ಸೂಚಿಸುವ ಅಗತ್ಯವನ್ನು ತಿಳಿಸಿದರು.
ಸದಾನಂದ ಶೆಟ್ಟಿ ವರ್ಲಿ ಇವರು ಮಾತ ನಾಡಿ, ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ನಿರ್ವ ಹಿಸುತ್ತಿರುವುದು ಸಂತಸದ ಸಂಗತಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಉಡುಪಿಯಲ್ಲಿ ಯಶಸ್ವಿಯಾಗಿ ಜರಗಿದ ವಿಶ್ವ ಬಂಟರ ಸಮ್ಮಿಲನ-2018 ರೂವಾರಿ ಐಕಳ ಹರೀಶ್‌ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ದರು. ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಸಮ್ಮಾನಿತರನ್ನು ಪರಿಚಯಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಸಮ್ಮಾನದ ಬಗ್ಗೆ ಘೋಷಿಸಿದರು.

ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ, ಸ್ಮರಣಿಕೆ ಮತ್ತು ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ ವಿದ್ಯಾರ್ಥಿಗಳ ಯಾದಿಯನ್ನು ಪ್ರಕಟಿಸಿದರು. ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ನೀಡುವ ನಗದು ಹಣವನ್ನು ವಿತರಿಸಲಾಯಿತು. ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಸಮಿತಿಯ ಸಮನ್ವಯಕ ಕಿಶೋರ್‌ ಕುಮಾರ್‌ ಕುತ್ಯಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಹಿತಿ ಡಾ| ಸಂಜೀವ ಶೆಟ್ಟಿ ಸ್ಮರಣಾರ್ಥ ಅವರ ಅಭಿಮಾನಿ ಬಳಗ ತುಳು-ಕನ್ನಡದ ವಿದ್ಯಾರ್ಥಿಗಳಿಗಾಗಿ ಬಂಟರ ಸಂಘದ ಮೂಲಕ ನೀಡುವ ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಬಂಟರ ಸಂಘದ ಮೂಲಕ ನೀಡುವ ಆರ್‌. ಆಚಾರ್ಯ ಎಜುಕೇಶನ್‌ ಫೌಂಡೇಷನ್‌ ಶೈಕ್ಷಣಿಕ ಸ್ಕಾಲರ್‌ಶಿಪ್‌ನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಜೊತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿದರು. ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಮಾಜಿ ಪ್ರಾಂಶುಪಾಲ ಕೆ. ಆರ್‌. ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸಿದರು.

ಸರೋಜಾ ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯನ್ನು ಮೊಳಗಿಸಲಾಯಿತು. ಸಂಘದ ಗೌರವ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಅವರು ಗತ ವರ್ಷದ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಅನುಮೋದಿಸಿಕೊಂಡರು. 2017-2018 ನೇ ವಾರ್ಷಿಕ ವರದಿ ಸಭೆಯ ಮುಂದಿಟ್ಟ ಬಳಿಕ ಅದನ್ನು ಅನುಮೋದಿಸಲಾಯಿತು. ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ ಮಂಡಿಸಿದರು.

ಇದೇ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರು, ಆಂತರಿಕ ಲೆಕ್ಕಪರಿಶೋಧಕರು, ಟ್ಯಾಕ್ಸ್‌ ಆಡಿಟರ್ಗಳ ನೇಮಕ, ಗೌರವ ಧನದ ಬಗ್ಗೆ, ವಾರ್ಷಿಕ ಬಜೆಟ್‌ ಹಾಗೂ ವಿವಿಧ ಸೌಲಭ್ಯYಳಿಗೆ ಹೆಸರಿಡುವ ಪ್ರಮುಖರ ಠರಾವುಗಳನ್ನು ಸಭೆಯಲ್ಲಿ ಮಂಡಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಭಾಸ್ಕರ ವೈ. ಶೆಟ್ಟಿ ಕಾಂದೇಶ್‌, ಪೊವಾಯಿ ಶಿಕ್ಷಣ ಸಮಿತಿಯ ವರದಿಯನ್ನು ಉಪ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ, ಸಂಘದ ಉನ್ನತ ಶಿಕ್ಷಣ ಸಮಿತಿ ವರದಿಯನ್ನು ಸಮಿತಿಯ ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ಸಂಘದ ನೂತನ ಶಿಕ್ಷಣ ಯೋಜನೆಯ ವರದಿಯನ್ನು ಕಾರ್ಯದರ್ಶಿ ಜಯ ಎ. ಶೆಟ್ಟಿ ವಾಚಿಸಿದರು. ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ವಂದಿಸಿದರು. 

ಸಂಘವು ಕಳೆದ 15 ವರ್ಷಗಳಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶೀಘ್ರಗತಿಯ ಅಭಿವೃದ್ಧಿ ಹೊಂದಿರುವುದು ಅಭಿನಂದನೀಯ. ಸಂಘದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆರಂಭಗೊಂಡ ಉನ್ನತ ಶಿಕ್ಷಣ ಯೋಜನೆಯ ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಯನ್ನು ಸಂಘದ ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಮಟ್ಟದಲ್ಲಿ ಕೊಂಡೊಯ್ಯುವ ಆಗತ್ಯತೆ ಇದೆ. ಸಂಘದ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಮಹತ್ತರವಾಗಿದೆ. ದಾನಿಗಳ ನೆರವು ಬೇರೆ ಬೇರೆ ಕಡೆಗಳಲ್ಲಿ ಹರಿದು ಹೋಗದಂತೆ ಸಂಘವು ನಿಗಾ ವಹಿಸಬೇಕು. ದಾನಿಗಳ ದಿನವನ್ನು ಆಚರಿಸುವ ಮೂಲಕ ನೂತನ ಶಿಕ್ಷಣ ಯೋಜನೆಯಡಿಯಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಮುಂದಾಗಬೇಕುದೆ.
– ಬಿ. ವಿವೇಕ್‌ ಶೆಟ್ಟಿ, ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ

ಮಹಾಸಭೆಯ ಕಾರ್ಯಕಲಾಪ ತನಗೆ ಖುಷಿ ನೀಡಿದೆ. ನಾವೆಲ್ಲ ರೂ ಬಡವ-ಶ್ರೀಮಂತ ಭೇದ ತೊರೆದು ಒಂದಾಗಿದ್ದೇವೆ. ನಮ್ಮ ಸಂಬಂಧ ಇನ್ನಷ್ಟು ಬೆಳೆಯಲಿ. ಸಂಘದ ಪ್ರಾದೇಶಿಕ ಸಮಿತಿ ಗಳಿಗೆ ಕಚೇರಿ ಆರಂಭಿಸಲು ನಾವೆ ಲ್ಲರೂ ಸಹಕರಿಸುವ ಅಗತ್ಯವಿದೆ. ನವಿ ಮುಂಬಯಿ ಸಮಿತಿಯ ಕಚೇರಿ ಸ್ಥಾಪನೆಗೆ ತನ್ನ ಸಹಕಾರ ಸದಾಯಿದೆ. ದಾನಿಗಳೆ ನಮ್ಮ ದೇವರು. ದಾನಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಬಂಟರ ಭವನಕ್ಕೆ ಬರುವ ದಾರಿ ಯ ಸ್ವತ್ಛತೆಯ ಬಗ್ಗೆ ಗಮನಹರಿಸಬೇಕು.
-ಕೆ. ಡಿ. ಶೆಟ್ಟಿ,
ಕಾರ್ಯಾಧ್ಯಕ್ಷರು, ಆಡಳಿತ ನಿರ್ದೇಶಕರು, ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌

ನೂತನ ಶಿಕ್ಷಣ ಸಂಸ್ಥೆಗಳ ಯೋಜನೆಗಳ ಜೊತೆಗೆ ಆಸ್ಪತ್ರೆ ನಿರ್ಮಾಣ ಕಾರ್ಯವೂ ಆವಶ್ಯಕವಾಗಿದೆ. ಸಂಘವು  1927 ರಿಂದ ಮುಂಚೆಯೇ ಆರಂಭವಾಗಿತ್ತೆಂಬ ಮಾಹಿತಿಯನ್ನು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಹಿಂದಣ ಹೆಜ್ಜೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಪರಿಶೀಲನೆ ಅಗತ್ಯವಾಗಿದೆ. ಬಂಟರ ಭವನದ ಮಾರ್ಗ ಬೇರೆಯೇ ಹೆಸರಿನಲ್ಲಿದ್ದು, ಸಂಘದ ಭವನದ ಮಾರ್ಗವನ್ನಾಗಿಸಲು ಪ್ರಯತ್ನಿಸೋಣ.
– ಡಾ| ಸುನೀತಾ ಎಂ. ಶೆಟ್ಟಿ ,  ಹಿರಿಯ ಸಾಹಿತಿ

ಚಿತ್ರ-ವರದಿ : ಪ್ರೇಮನಾಥ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.