ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ: ಶೈಕ್ಷಣಿಕ ದತ್ತು ಸ್ವೀಕಾರ 


Team Udayavani, Aug 9, 2018, 4:43 PM IST

0808mum04.jpg

ಮುಂಬಯಿ: ಹಿರಿಯರು ಪಟ್ಟ ಶ್ರಮ ದಿಂದ ಇಂದು ಬಂಟರ ಸಂಘವು ಸಮಾಜಕ್ಕೆ ಅರ್ಪಿತ ವಾಗಿದ್ದು, ಅವರ ಪರಿಶ್ರಮವನ್ನು ಎಂದಿಗೂ ನಾವು ಮರೆಯಬಾರದು. ಅಂದು ದೇಣಿಗೆ ನೀಡಿದ ದಾನಿಗಳನ್ನು ಇಂದು ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೇಣಿಗೆ ನೀಡಲು ಇಂದು ಸಮಾಜದ ಹಲವಾರು ದಾನಿಗಳು ಮುಂದೆ ಬರುತ್ತಿರುವುದು ಅಭಿನಂದನೀಯ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಆ. 5 ರಂದು ಸಿಬಿಡಿಯ ಹೊಟೇಲ್‌ ಅಶ್ವಿ‌ತ್‌ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಾವು ಪಡೆದ ಶೈಕ್ಷಣಿಕ ನೆರವನ್ನು ಎಂದಿಗೂ ಮರೆಯಬಾರದು. ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸಂಸ್ಥೆಯ ಋಣ ತೀರಿಸುವ ಕಾರ್ಯವನ್ನು ಮಾಡಬೇಕು. ಸಮಿತಿಯು ಆಯೋಜಿಸಿರುವ ಇಂದಿನ ಎಲ್ಲಾ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಕಾಲೇಜು ನಿರ್ಮಾಣ ಯೋಜನೆ
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಮತ್ತು ಅವರ ತಂಡವು ಪ್ರಸ್ತುತ ವರ್ಷ ಬೃಹತ್‌ ಮೊತ್ತದ ನಿಧಿಯನ್ನು ಆರ್ಥಿಕ ನೆರವಿಗಾಗಿ ದಾನಿಗಳಿಂದ ಪಡೆದು ವಿನಿಯೋಗಿಸಿರುವುದು ಅಭಿನಂದನೀಯ. ಬಂಟರ ಸಂಘದಿಂದ ಸದ್ಯಕ್ಕೆ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ಮೊಟಕುಗೊಳಿಸಿ ಆಯ್ದ ವಿದ್ಯಾರ್ಥಿಗಳ ಒಂದನೇ ತರಗತಿಯಿಂದ ಸಂಪೂರ್ಣ ಖರ್ಚನ್ನು  ಭರಿಸುವ ಯೋಜನೆಯನ್ನು ಹೊಂದಿದ್ದೇವೆ. ಆರಂಭದಲ್ಲಿ ಸುಮಾರು 300-350 ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ದತ್ತು ಸ್ವೀಕರಿಸುವ ಯೋಜನೆ ನಮ್ಮ ಮುಂದಿದೆ. ಅಲ್ಲದೆ ನವಿಮುಂಬಯಿಯಲ್ಲಿ 3 ಸಾವಿರದಿಂದ 4 ಸಾವಿರ ಚದರಡಿಯ ಜಾಗ ಲಭ್ಯವಿದ್ದಲ್ಲಿ ನಾವು ಕಾಲೇಜನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ನವಿಮುಂಬಯಿ ಪ್ರಾದೇಶಿಕ ಸಮಿತಿಗೆ ಸ್ವಂತ ಕಚೇರಿಯ ಅಗತ್ಯವಿದ್ದು, ಪ್ರಸ್ತುತ ಕಾರ್ಯಾಧ್ಯಕ್ಷರ ಅವಧಿಯಲ್ಲಿ  ಪೂರ್ಣಗೊಳ್ಳಬೇಕಿದೆ ಎಂದರು. 

ಗಣ್ಯರು ಹಾಗೂ ಸಮಿತಿಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಅವರು ಸ್ವಾಗತಿಸಿ ಮಾತನಾಡಿ, ಮಹಿಳಾ ವಿಭಾಗದ ಆಟಿಡೊಂಜಿ ಕಾರ್ಯಕ್ರಮ, ಚಂದ್ರಕಾಂತ್‌ ಆಚಾರ್ಯ ಪಡುಬಿದ್ರೆ ಅವರ ರಸಮಂಜರಿ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿದೆ. ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯೆಯರು ಅಭಿನಂದನಾರ್ಹರು. ಮುಖ್ಯವಾಗಿ ಎಲ್ಲಾ ಒಂಭತ್ತು ಪ್ರಾದೇಶಿಕ ಸಮಿತಿಗಳು ಸ್ವಂತ ಕಚೇರಿಯನ್ನು ಹೊಂದಿರಬೇಕು ಎಂಬ ನಮ್ಮ ಅಧ್ಯಕ್ಷರ ದೊಡ್ಡ ಕನಸಾಗಿದೆ. ನಮಗೂ ಕೂಡಾ ಸ್ವಂತ ಕಚೇರಿಯ ಅಗತ್ಯತೆಯಿದೆ. ನಮ್ಮ ಮಾಜಿ ಕಾರ್ಯಾಧ್ಯಕ್ಷರು ಮತ್ತು ಸಲಹೆಗಾರರ ನೇತೃತ್ವದಲ್ಲಿ ಈ ಕಾರ್ಯವನ್ನು ನನ್ನ ಕಾರ್ಯಾವಧಿಯಲ್ಲಿ ಪೂರೈಸುವಲ್ಲಿ ಎಲ್ಲರ ಸಹಕಾರವಿರಲಿ ಎಂದರು.

ಮಾಜಿ ಕಾರ್ಯಾಧ್ಯಕ್ಷ ಸಂಜೀವ ಎನ್‌. ಶೆಟ್ಟಿ ಮಾತನಾಡಿ, ಸಭಾ ಭವನದ ಕಾರ್ಯದಲ್ಲಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸೋಣ ಎಂದು ನುಡಿದರು. ಸಮಿತಿಯ ಸಲಹೆಗಾರ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ಈ ಸಮಿತಿಯು ಉತ್ತಮ ಕಾರ್ಯಕ್ರಮಗಳ ಮೂಲಕ ಎಲ್ಲರ ಮನ-ಮನೆಗಳನ್ನು ಗೆದ್ದಿದೆ. ಸಭಾಭವನದ ಕಾರ್ಯದಲ್ಲಿ ಧೃಡ ಸಂಕಲ್ಪ ಮಾಡೋಣ. ತಾಯಿ ಮೂಕಾಂಬಿಕೆಯ ಅನುಗ್ರಹ ಸದಾಯಿದೆ ಎಂದರು.

ಹಿರಿಯ ಉದ್ಯಮಿ ಸದಾಶಿವ ಶೆಟ್ಟಿ ಅವರು ಮಾತನಾಡಿ, ನಾವಿಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ್ದೇವೆ. ಕಚೇರಿಯ ಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಇವರು ಮಾತನಾಡಿ, ವಿದ್ಯಾನಿಧಿಗಾಗಿ ಬರುವ ಮನವಿ ಪತ್ರವನ್ನು ಸ್ಥಳೀಯ ಸಮಿತಿಗಳು ಪರಿಶೀಲಿಸಿ ಆನಂತರ ಸಂಘಕ್ಕೆ ನೀಡಬೇಕು. ಇಂದಿನ ಮಹಿಳಾ ವಿಭಾಗದ ಕಾರ್ಯ ಅಭಿನಂದನೀಯ. ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ ಮತ್ತು ಅವರ ತಂಡದವರ ಸೇವೆ ಶ್ಲಾಘನೀಯ ಎಂದರು.

ಬಂಟರ ಸಂಘದ ಮಧ್ಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ ಇವರು ಮಾತನಾಡಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯು ಎಲ್ಲಾ ವಿಧಗಳಿಂದಲೂ ಮುಂದಿದೆ. ನಾವೆಲ್ಲರು ಸೇರಿ ಒಂದು ಸಭಾಭವನವನ್ನು ನಿರ್ಮಿಸೋಣ. ಸಮಿತಿಯ ವಿಶೇಷತೆ ಎಂದರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾಜಿ ಕಾರ್ಯಾಧ್ಯಕ್ಷರುಗಳ ಉಪಸ್ಥಿತಿ ಎನ್ನಬಹುದು. ಇದು ಈ ಸಮಿತಿಯ ಏಕತೆಯನ್ನು ಬಿಂಬಿಸುತ್ತದೆ.

ವಿಜಯಲಕ್ಷಿ³à ಆರ್‌. ಶೆಟ್ಟಿ ಪ್ರಾರ್ಥನೆಗೈದರು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಯಿತು. ರಸಮಂಜರಿ ಕಾರ್ಯಕ್ರಮವನ್ನು ನೀಡಿದ ಚಂದ್ರಕಾಂತ್‌ ಆಚಾರ್ಯ ಪಡುಬಿದ್ರೆ ಇವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿದರು. ಇತ್ತೀಚೆಗೆ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯಿಂದ ನಡೆದ ಫುಟ್ಬಾಲ್‌ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ವಂದಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ  ಚಂದ್ರಹಾಸ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ ಹಾಗೂ ಪ್ರಾದೇಶಿಕ ಸಮಿತಿಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಕೋಶಾಧಿಕಾರಿ ಭಾಸ್ಕರ್‌ ಶೆಟ್ಟಿ, ಕಾರ್ಯದರ್ಶಿ ದಯಾನಂದ ಶೆಟ್ಟಿ ಶಿಮಂತೂರು ಬಾವ, ಜತೆ ಕೋಶಾಧಿಕಾರಿ ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಜತೆ ಕಾರ್ಯದರ್ಶಿ ರವೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಯ್‌ ಶೆಟ್ಟಿ ಉಪಸ್ಥಿತರಿದ್ದರು.

ಮಾಜಿ ಕಾರ್ಯಾಧ್ಯಕ್ಷರೊಂದಿಗೆ ಮಹಿಳಾ ವಿಭಾಗದ ರೇಣುಕಾ ರೈ, ವೀಣಾ ಎ. ಶೆಟ್ಟಿ, ಗುಣವತಿ ವೈ. ಶೆಟ್ಟಿ, ಸಲಹೆಗಾರರಾದ ಶಿವರಾಮ್‌ ಜೆ. ಶೆಟ್ಟಿ ಹಾಗೂ ರವಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಕ್ಕಳ ಶೈಕ್ಷಣಿಕ ದತ್ತಿನಿಧಿಗೆ ಸಹಕರಿಸಿದ ಎಲ್ಲಾ ದಾನಿಗಳನ್ನು ಹಾಗೂ ವಿಶೇಷ ರೀತಿಯಲ್ಲಿ ಅಡುಗೆ ತಯಾರಿಸಿ ಪ್ರದರ್ಶಿಸಿದ ಮಹಿಳಾ ಸದಸ್ಯೆಯರನ್ನು ಸತ್ಕರಿಸಲಾಯಿತು. ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.

 ಸಮಾಜಪರ ಕಾರ್ಯವನ್ನು ಮಾಡುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ನಾವು ಕಚೇರಿ ಅಥವಾ ಸಭಾಗೃಹ ನಿರ್ಮಿಸುವಲ್ಲಿ ದೇಣಿಗೆ ಸಂಗ್ರಹದ ಅಗತ್ಯವಿದೆ. ಇದನ್ನು ಸಂಗ್ರಹಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು. ಎಲ್ಲಾ ಉತ್ತಮ ಕಾರ್ಯಗಳು ನವಿಮುಂಬಯಿ ಸಮಿತಿಯಿಂದಲೇ ಪ್ರಾರಂಭಗೊಳ್ಳಬೇಕು. ಸಭಾಭವನದ ಕಾರ್ಯ ಶೀಘ್ರದಲ್ಲಿ ಆರಂಭವಾಗಿ ಯಶಸ್ಸನ್ನು ಹೊಂದಲಿ.
ಸಂತೋಷ್‌ ಡಿ. ಶೆಟ್ಟಿ  , 
ಮಾಜಿ ಕಾರ್ಯಾಧ್ಯಕ್ಷರು : ನವಿಮುಂಬಯಿ ಪ್ರಾದೇಶಿಕ ಸಮಿತಿ.

 ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು, ಸಲಹೆಗಾರರ ಕೊಡುಗೆ ಅಪಾರವಾಗಿದೆ. ಮುಂದೆಯೂ ಅವರ ಮುಂದಾಳತ್ವದಲ್ಲಿ ನಮಗೆ ಕಚೇರಿಯ ಸ್ಥಾಪನೆಯಾಗಬೇಕು. ನನ್ನ ಕಾರ್ಯಾವಧಿಯಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕಾರದ ಯೋಜನೆಯು ಆರಂಭಗೊಂಡು ಇಂದು ಎಲ್ಲಾ ಪ್ರಾದೇಶಿಕ ಸಮಿತಿಗಳಲ್ಲೂ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಖಾಂದೇಶ್‌ ಭಾಸ್ಕರ್‌ ಶೆಟ್ಟಿ , 
ಸಮನ್ವಯಕರು, ನವಿಮುಂಬಯಿ 
ಪ್ರಾದೇಶಿಕ ಸಮಿತಿ.

 ನಮಗೆ  300 ಮಂದಿ ಆಸೀನರಾಗುವಂತಹ  ಸಭಾಭವ ನದ ಅಗತ್ಯವಿದೆ. ಅದಕ್ಕೆ ಕಡಿಮೆಯೆಂದರೂ 300-400 ಚದರ ಮೀಟರ್‌ನ ಜಾಗ ಖರೀದಿಸಬೇಕಾಗಿದೆ. ಪ್ರಸಕ್ತ ಕಾರ್ಯಾಧ್ಯಕ್ಷರ ಕಾಲಾವಧಿಯಲ್ಲಿ ಈ ಯೋಜನೆ ಪೂರ್ಣ ಗೊಳ್ಳಬೇಕು. ಇದಕ್ಕೆ ನನ್ನ ಸಹಕಾರ ಇದೆ. ತಮ್ಮ ನಿರ್ಮಾಣದ ಶ್ರೀದೇವಿ ಚರಿತ್ರೆ ಧಾರವಾಹಿಯು ಚಂದನ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ತಾವೆಲ್ಲರೂ ಅದನ್ನು  ಪ್ರೋತ್ಸಾಹಿಸಬೇಕು .
ಕೆ. ಡಿ. ಶೆಟ್ಟಿ , 
ಸ್ಥಾಪಕ ಕಾರ್ಯಾಧ್ಯಕ್ಷರು : ನವಿಮುಂಬಯಿ ಪ್ರಾದೇಶಿಕ ಸಮಿತಿ

ಟಾಪ್ ನ್ಯೂಸ್

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.