ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡಿ: ಪದ್ಮನಾಭ ಪಯ್ಯಡೆ
ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ
Team Udayavani, Mar 30, 2019, 6:20 AM IST
ಮುಂಬಯಿ: ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸಮಾಜ ಬಾಂಧವರನ್ನು ಒಂದುಗೂಡಿಸುವಂತೆ ಮಾಡುತ್ತಿವೆ. ಈ ಪ್ರಾದೇಶಿಕ ಸಮಿತಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿ ಸಮಾಜ ಬಾಂಧವರಿಗೆ ವಿವಿಧ ರೀತಿಯ ಯೋಜನೆಗಳು ತಲುಪುವಂತೆ ಮಾಡುತ್ತಿವೆ. ಬಂಟರ ಸಂಘದಲ್ಲಿ ಹಲವಾರು ಯೋಜನೆಗಳು ಪ್ರಚಲಿತದಲ್ಲಿದ್ದು, ಅದರ ಪ್ರಯೋಜನವನ್ನು ಸಮಾಜ ಬಾಂಧವರು ಪಡೆಯಬೇಕು. ಪ್ರತೀ ಪ್ರಾದೇಶಿಕ ಸಮಿತಿಯ ಸ್ವಂತ ಕಚೇರಿಗೆ ಶೇ. 25ರಷ್ಟು ನಗದು ಸಂಘ ನೀಡುತ್ತದೆ. ಈ ಪ್ರಾದೇಶಿಕ ಸಮಿತಿಯ ಅದರ ಸದುಪಯೋಗ ಪಡೆದು ಸ್ವಂತ ಕಚೇರಿ ಹೊಂದಬೇಕು. ಸಣ್ಣ ಕಚೇರಿಯಾದರೂ ಅಡ್ಡಿಯಿಲ್ಲ. ನಮ್ಮ ಸಮಾಜದ ಹೆಣ್ಮಕ್ಕಳಿಗೆ ಕೇವಲ ಉನ್ನತ ಶಿಕ್ಷಣ ನೀಡಿದರೆ ಸಾಲದು, ಅವರಿಗೆ ಸಂಸ್ಕಾರ ನೀಡುವ ಹೊಣೆ ಪಾಲಕರದ್ದಾಗಿದೆ. ತುಳು ಭಾಷೆಯ ಬಗ್ಗೆ ಅಭಿಮಾನವಿರಬೇಕು. ನಮ್ಮ ಭಾಷೆಯಲ್ಲಿ ಸಂಸ್ಕಾರ-ಸಂಸ್ಕೃತಿಯಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ನುಡಿದರು.
ಮಾ. 23ರಂದು ವಸಾಯಿ ಸಾಯಿ ನಗರ ರಂಗಮಂಚಮದಲ್ಲಿ ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಸಮಿತಿಗಳು ಆಯಾಯ ಪರಿಸರದಲ್ಲಿ ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಮಾತನಾಡಿ, ಮಹಿಳೆ ಪುರುಷನ ಯಶಸ್ಸಿಗೆ ಸ್ಫೂರ್ತಿಯನ್ನು ತುಂಬಿದವಳು. ಮಹಿಳೆಯರ ಯಶಸ್ಸಿಗೆ ಪತಿಯ ಸಹಕಾರ ಅಗತ್ಯವಿದೆ. ಪುರುಷರಿಗಿಂತ ಮಹಿಳೆ ಯರು ಹೆಚ್ಚು ಶ್ರಮವಹಿಸುವ ಜವಬ್ದಾರಿ ಹೊಂದಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಎಲ್ಲಾ ಮಹಿಳೆಯರು ವಿದ್ಯಾವಂತರಾಗಿ ತಿಳಿವಳಿಕೆ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಬೇಕು ಎಂದು ನುಡಿದರು.
ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಇವರು ಮಾತನಾಡಿ, ಪುರುಷ ಪ್ರಧಾನವಾಗಿರುವ ಸಮಾಜದಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯದಿಂದ ಸಾಧನೆಗೈದವರು. ಅವಳೊಂದು ಸ್ವರ್ಣ ಸೇತುವೆಯಾಗಿ ಕುಟುಂಬವನ್ನು ಮುನ್ನಡೆಸುವವಳು. ನಮ್ಮ ಸಾಧನೆಯ ಹಿಂದೆ ಪುರುಷರು ವಿವಿಧ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ ಅವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರದೆ, ವರ್ಷಪೂರ್ತಿ ಆಚರಿಸಿಕೊಂಡವಳು ಮಹಿಳೆ. ಸಂಸಾರದ ಜವಾಬ್ದಾರಿಯೊಂದಿಗೆ ಸಾಮಾಜಿಕವಾಗಿ ಬೆಳೆದವಳು ಮಹಿಳೆ. ನಮ್ಮ ನಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಮನೆಯ ಜವಾಬ್ದಾರಿಯ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಫಲತೆ ಕಂಡವರು. ಸಮಾಜದಲ್ಲಿ ನಾವು ವ್ಯಕ್ತಿಗಳನ್ನು ಉಡುಗೆ – ತೊಡುಗೆಯಿಂದ ತುಲನೆ ಮಾಡಬಾರದು. ನನ್ನ ಬದುಕಿನಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಒಂದು ಕಡೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ, ಇನ್ನೊಂದೆಡೆ ದೇವರು ಅದಕ್ಕೆ ಪ್ರತಿಫಲ ನೀಡುತ್ತಾನೆ. ಇದು ನನ್ನ ಅನುಭವ. ಸಂಘದಲ್ಲಿ ಬಹಳಷ್ಟು ಅನುದಾನ ನೀಡುವ ಯೋಜನೆಗಳಿದ್ದು, ಯಾರಿಗೆ ಇದರ ಅಗತ್ಯವಿದೆಯೋ ಅವರು ಅದನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಿಭಾಗದ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಇವರು ಮಾತನಾಡಿ, ಬಂಟರ ಸಂಘ ಸಮಾಜ ಬಾಂಧವರ ಆಶೋತ್ತರಗಳಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಪ್ರಾದೇಶಿಕ ಸಮಿತಿಗಳ ಎಲ್ಲಾ ಸದಸ್ಯರು ಇದನ್ನು ಸಮಾಜ ಬಾಂಧವರಿಗೆ ತಲುಪಿಸಬೇಕು. ಬಹಳ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು, ಮಹಿಳೆಯರ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ. ಸಂಘದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ನುಡಿದರು.
ವೇದಿಕೆಯಲ್ಲಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಸ್ಥಳೀಯ ಸಮಾಜ ಸೇವಕಿ ರೂಪಾಲಿ ರೂಪೇಶ್ ಜಾಧವ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಅಶೋಕ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ಉಮಾ ಎಸ್. ಶೆಟ್ಟಿ, ಕೋಶಾಧಿಕಾರಿ ವೀಣಾ ಶೆಟ್ಟಿ, ಜತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಜತೆ ಕೋಶಾಧಿಕಾರಿ ಸುಜಾತಾ ಶೆಟ್ಟಿ, ಸಲಹೆಗಾರ ಹರೀಶ್ ಶೆಟ್ಟಿ ಗುರ್ಮೆ, ಸಲಹೆಗಾರ್ತಿ ಉಷಾ ಎಸ್. ಶೆಟ್ಟಿ ಕರ್ನಿರೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯೆ ಶಶಿಕಲಾ ಶಶಿಧರ ಶೆಟ್ಟಿ, ರೂಪಾ ಜಯಂತ್ ಪಕ್ಕಳ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿದರು. ಜಯಾ ಎ. ಶೆಟ್ಟಿ ಸ್ವಾಗತಿಸಿದರು. ಮಮತಾ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ವಿಜಯ ಶೆಟ್ಟಿ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿಯ ಮಹಿಳಾ ವಿಭಾಗದವರಿಂದ ವಿವಿಧ ವಿನೋದಾವಳಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರಿಂದ ಮೋಕೆ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಸಮಾರಂಭದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಪರಿಸರದ ಸಮಾಜ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಮಗೆ ಜನ್ಮ ನೀಡಿದವಳು ತಾಯಿ. ನಮ್ಮನ್ನು ರಕ್ಷಿಸುವವಳು ಭೂಮಿತಾಯಿ. ಮನೆಯ ಜವಾಬ್ದಾರಿ ವಹಿಸಿಕೊಂಡು ಪತಿ, ಮಕ್ಕಳ, ಪರಿವಾರವನ್ನು ಸಲಹುವವಳು ಹೆಣ್ಣು. ಪ್ರತೀ ಪುರುಷನ ಶಕ್ತಿಯ ಹಿಂದೆ ನಾರಿಯ ಶಕ್ತಿಯಿಲ್ಲದಿದ್ದರೆ ಪ್ರಯೋಜನವಿಲ್ಲ. ಸಮಾಜದ ರಥವನ್ನು ಎಳೆಯವವಳು ನಾರಿ. ನನ್ನ ಸಾಮಾಜಿಕ ಚಟುವಟಿಕೆಗಳ ಹಿಂದೆ ಸ್ಫೂರ್ತಿಯ ಸೆಲೆಯಾದವಳು ನನ್ನ ಪತ್ನಿ. ಸಮಾಜದ ಕೆಲಸ ನಾನು ಮಾಡಿದರೆ, ಮನೆಯ ವ್ಯವಸ್ಥೆಯನ್ನು ನನ್ನ ಪತ್ನಿ ನೋಡಿಕೊಳ್ಳುತ್ತಾಳೆ. ಆದ್ದರಿಂದ ನನಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ವಸಾಯಿ ಪರಿಸರದಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೂ ಎಲ್ಲಾ ಜಾತಿಯವರು ಒಗ್ಗಟ್ಟಿನಿಂದ ಸಹಕಾರ ನೀಡುತ್ತಾರೆ. ಎಲ್ಲಾ ಸಮಾಜಕ್ಕೂ ಗೌರವ ನೀಡುವ ಅಭಿಮಾನವನ್ನು ಬೆಳೆಸಿಕೊಳ್ಳೋಣ.
– ಐಕಳ ಹರೀಶ್,ಅಧ್ಯಕ್ಷರು, ವಿಶ್ವ ಬಂಟರ ಸಂಘಗಳ ಒಕ್ಕೂಟ
ಸಮಾಜವನ್ನು ಬೆಳೆಸೋಣ
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ ಅವರು ಮಾತನಾಡಿ, ಪ್ರಾದೇಶಿಕ ಸಮಿತಿ ಇಷ್ಟೊಂದು ರೀತಿಯಲ್ಲಿ ಬಲಿಷ್ಠಗೊಳ್ಳಲು ಮಹಿಳಾ ವಿಭಾಗದ ವರು ಉತ್ತಮ ರೀತಿಯಲ್ಲಿ ಸೇವಾ ನಿರತರಾಗಿ ರುವುದೇ ಕಾರಣವಾಗಿದೆ. ಸಂಘದ ಪ್ರತೀ ಕಾರ್ಯಕ್ರಮಗಳಲ್ಲೂ ಈ ಸಮಿತಿ ಭಾಗವಹಿಸಿ ಜನ ಮೆಚ್ಚುಗೆಗಳಿಸುವಂತೆ ಸಾಧನೆಗೈದಿದೆ. ನಾವೆಲ್ಲರು ಒಗ್ಗಟ್ಟಿನಿಂದ ಸಮಾಜವನ್ನು ಬೆಳೆಸೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.