ಪುಣೆಯಲ್ಲಿ ಜಾತಿ ಪ್ರಮಾಣ ಪತ್ರ ಅರಿವು ಕಾರ್ಯಾಗಾರ
Team Udayavani, Apr 15, 2018, 3:21 PM IST
ಮುಂಬಯಿ: ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮೋತ್ಸವ ನಿಮಿತ್ತ ಯುನಿಟಿ ಸಮಾಜ ವೆಲ್ಫೆàರ್ ಫೌಂಡೇಶನ್ ಪಿಂಪ್ರಿ ಕ್ಯಾಂಪ್ ಪುಣೆ ಸಂಸ್ಥೆಯ ವತಿಯಿಂದ ಜಾತಿ ಪ್ರಮಾಣ ಪತ್ರ ಅರಿವು ಮೂಡಿಸುವ ಕಾರ್ಯಕ್ರಮವು ಎ. 11 ರಂದು ಸಂಜೆ ಪುಣೆಯ ಪಿಂಪ್ರಿಯ ಸಂತ ತುಕರಾಮ ನಗರದ ಹೊಟೇಲ್ ದಕ್ಷಿಣ್ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲೋನ ವಾಲ ನಗರ ಪರಿಷತ್‌ನ ಉಪ ನಗರಾಧ್ಯಕ್ಷ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್. ಪೂಜಾರಿ ಮತ್ತು ಅಭ್ಯಾಗತರುಗಳಾಗಿ ಮಂಗಳೂರು ತಾಲೂಕು ಪಂಚಾಯತ್ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಕುಲಾಲ ಸಮುದಾಯದ ಸ್ಥಾನೀಯ ಮುಂದಾಳು ನ್ಯಾಯವಾದಿ ಅಪ್ಪು ಮೂಲ್ಯ, ಒಬಿಸಿ ಸ್ಪೆಷಲಿಸ್ಟ್ ರೋಹಿತ್ ಎಂ. ಸುವರ್ಣ, ಬಿಲ್ಲವ ಮುಂದಾಳುಗಳಾದ ಗಣೇಶ್ ಅಂಚನ್, ಶ್ರೀಧರ ಪೂಜಾರಿ ಉಪಸ್ಥಿತರಿದ್ದು ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲೋನವಾಲ ನಗರ ಪರಿಷತ್‌ನ ಉಪ ನಗರಾಧ್ಯಕ್ಷ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್. ಪೂಜಾರಿ ಇವರು ಮಾತನಾಡಿ, ಹಿಂದುಳಿದ ವರ್ಗಗಳು ಮುನ್ನಡೆಯುವ ಬಗ್ಗೆ ಚಿಂತಿಸಬೇಕು ಎಂದರು.
ಭವಿಷ್ಯವನ್ನು ರೂಪಿಸುವಲ್ಲಿ ಸರಕಾರಿ ಸ್ವಾಮ್ಯದ ಎಲ್ಲಾ ಪ್ರಯೋಜನಗಳನ್ನು ತನ್ನದಾಗಿಸಿಕೊಳ್ಳಬೇಕು. ವಿಶೇಷವಾಗಿ ಶೈಕ್ಷಣಿಕವಾಗಿ ಲಭಿಸುವ ಯಾವುದೇ ಸೌಲತ್ತುಗಳನ್ನು ಪಡೆಯುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಸಾಮಾನ್ಯ ಹಿಂದುಳಿದ ವರ್ಗ (ಒಬಿಸಿ) ದವರಿಗೆ ಲಭ್ಯವಿರುವ ಯಾವುದೇ ಅವಕಾಶ, ಸೌಲತ್ತುಗಳನ್ನು ತಮ್ಮದಾಗಿಸಬೇಕು. ಈ ನಿಟ್ಟಿನಲ್ಲಿ ಇಂದು ಆಯೋಜಿಸಿರುವ ಕಾರ್ಯಕ್ರಮವು ಅರ್ಥ ಪೂರ್ಣವಾಗಿದೆ. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಳನ್ನು ಎಲ್ಲಾ ಸಂಘಟನೆಗಳು ಆಯೋಜಿಸಿ ಸಮಾಜ ಬಾಂಧವರಿಗೆ ಸಹಕರಿಸಬೇಕು ಎಂದರು.
ಒಬಿಸಿಯಲ್ಲಿ ಸಿಗುವ ಸವಲತ್ತುಗಳನ್ನು ಪಡೆಯಲು ಹಿಂದೇಟು ಹಾಕ ಬಾರದು. ಕೆಲವರಲ್ಲಿ ಇದರ ಬಗ್ಗೆ ಕೀಳರಿಮೆಯಿದೆ. ಅದನ್ನು ಹೋಗಲಾಡಿಸುವಲ್ಲಿ ನಾವೆಲ್ಲರು ಮುಂದಾಗಬೇಕು ಎಂದರು.
ಬಿಲ್ಲವ, ಬೆಳ್ವಡ, ಬಂಜಾರ, ದೇವಾಡಿಗ, ಗಾಣಿಗ, ಕುಲಾಲ್, ಲಮಾನಿ, ಮೂಲ್ಯ ಪದ್ಮಶಾಲಿ ಸಫಲಿಗ ಸಮುದಾಯದವರು ಅನೇಕರು ಪಾಲ್ಗೊಂಡು ಕಾರ್ಯಕ್ರಮದ ಫಲಾನುಭವ ಪಡೆದರು. ಕಿರಣ್ ವೈ. ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಸುವರ್ಣ ವಂದಿಸಿದರು.
ಚಿತ್ರ -ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.