ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷರಾಗಿ ಚಂದ್ರಶೇಖರ ಎಸ್‌


Team Udayavani, Jul 20, 2018, 3:33 PM IST

5889.jpg

ಮುಂಬಯಿ: ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ 26 ನೇ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಎಸ್‌. ಪೂಜಾರಿ ಇವರು ಅವಿರೋಧವಾಗಿ ನೇಮಕಗೊಂಡಿದ್ದಾರೆ.

ಇತ್ತೀಚೆಗೆ ನಡೆದ ಅಸೋಸಿಯೇಶನ್‌ನ 86ನೇ ಮಹಾಸಭೆಯಲ್ಲಿ ಮುಂದಿನ 2018-2021ನೇ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಜು. 16 ರಂದು ಸಾಂತಾಕ್ರೂಜ್‌ ಪೂರ್ವ ಬಿಲ್ಲವ  ಭವನದ ಸಮಾಲೋಚನಾ ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾರ್ಗದರ್ಶನದಲ್ಲಿ ಮತ್ತು ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಜಯಂತಿ ವಿ. ಉಳ್ಳಾಲ್‌ ಹಾಗೂ ಯುವಾಭ್ಯುದಯ ಉಪ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಾಗೇಶ್‌ ಎಂ. ಕೋಟ್ಯಾನ್‌ ಆಯ್ಕೆಯಾದರು.

ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾಗಿ ಶಂಕರ ಡಿ. ಪೂಜಾರಿ, ಹರೀಶ್‌ ಜಿ. ಅಮೀನ್‌, ದಯಾನಂದ್‌ ಆರ್‌. ಪೂಜಾರಿ ಕಲ್ವಾ, ಶ್ರೀನಿವಾಸ ಆರ್‌. ಕರ್ಕೇರ,  ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಎಸ್‌. ಕೋಟ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿಯಾಗಿ  ರಾಜೇಶ್‌ ಜೆ. ಬಂಗೇರ, ಗೌರವ  ಜೊತೆ ಕಾರ್ಯದರ್ಶಿಗಳಾಗಿ ಹರೀಶ್‌ ಜಿ. ಸಾಲ್ಯಾನ್‌, ಹರೀಶ್‌ ಹೆಜ್ಮಾಡಿ, ಕೇಶವ ಕೆ. ಕೋಟ್ಯಾನ್‌, ಧರ್ಮೇಶ್‌ ಎಸ್‌. ಸಾಲ್ಯಾನ್‌, ಜೊತೆ ಕೋಶಾಧಿಕಾರಿಗಳಾಗಿ ಶಿವರಾಮ ಕೆ. ಸಾಲ್ಯಾನ್‌, ಜಯ ಎಸ್‌. ಸುವರ್ಣ, ಮೋಹನ್‌ ಡಿ. ಪೂಜಾರಿ, ಬಬಿತಾ ಜೆ. ಕೋಟ್ಯಾನ್‌, ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಸುಮಿತ್ರಾ ಎಸ್‌. ಬಂಗೇರ, ಯುವಾಭ್ಯುದಯ ಸಮಿತಿಯ ಕಾರ್ಯದರ್ಶಿಯಾಗಿ ಉಮೇಶ್‌ ಎಂ. ಕೋಟ್ಯಾನ್‌, ಸೇವಾ ದಳದ ದಳಪತಿಯಾಗಿ ಗೋಪಾಲ ಎಸ್‌. ಕೋಟ್ಯಾನ್‌ ಆಯ್ಕೆಯಾದರು.  

ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆಗೈದು ಸಮಾಜ ಬಾಂಧವರಿಗೆ ದಾರಿದೀಪವಾಗಿರುವ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಕಳೆದ ಸುಮಾರು ಎಂಟು ದಶಕಗಳಿಂದ ಸಮಾಜ ಬಾಂಧವರ ಕಣ್ಣೀರೊರೆಸುವಲ್ಲಿ ಯಶಸ್ವಿಯಾಗಿದೆ. ಅಂದಿನ ಕಾರ್ಯಕಾರಿ ಸಮಿತಿಯ ನಿಸ್ವಾರ್ಥ ಸೇವೆಯಿಂದಾಗಿ  ಮಹಾನಗರ ಮುಂಬಯಿ ಸೇರಿದಂತೆ ಜಾಗತಿಕವಾಗಿ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಬಿಲ್ಲವ ಶಿರೋಮಣಿ ಜಯ ಸಿ. ಸುವರ್ಣ
1991ರಿಂದ ಬಿಲ್ಲವರ ಶಿರೋಮಣಿ ಪ್ರಸಿದ್ಧಿಯ ಜಯ ಸಿ. ಸುವರ್ಣ ಅವರ ದಿಟ್ಟ ಮಾರ್ಗದರ್ಶನದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡ ಬಿಲ್ಲವರ  ಅಸೋಸಿಯೇಶನ್‌ ಸುವರ್ಣಯುಗವನ್ನು  ಕಂಡಿರುವು ದರಲ್ಲಿ ಸಂಶಯವಿಲ್ಲ. ಅಲ್ಲಲ್ಲಿ ಸಮನ್ವಯ ಸಮಿತಿ, ಸ್ಥಳೀಯ ಕಚೇರಿಗಳನ್ನು  ಸ್ಥಾಪಿಸಿ, ತನ್ಮೂಲಕ ಆ ಪರಿಸರದ ಜನರಿಗೆ ಅಸೋಸಿಯೇಶನ್‌ನ ಸವಲತ್ತು, ಸೇವೆಗಳನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಸಂಸ್ಥೆ ಸಫಲತೆ ಕಂಡಿದೆ.

ವಿವಿಧ ಯೋಜನೆಗಳು
ಅಮೃತ ವಿದ್ಯಾನಿಧಿ, ಆರೋಗ್ಯ ನಿಧಿ, ವಿಧವಾ ಮಾಶಾಸನ, ಪಡುಬೆಳ್ಳೆಯಲ್ಲಿ ನಾರಾಯಣ ಗುರು ವಿದ್ಯಾ ಸಂಕುಲ, ಮುಂಬಯಿಯಲ್ಲಿ ಗುರು ನಾರಾಯಣ ರಾತ್ರಿ ಶಾಲೆ, ಕೋಟಿ-ಚೆನ್ನಯ ಕ್ರೀಡೋತ್ಸವ, ನಾರಾಯಣ ಗುರು ನಾಟಕೋತ್ಸವ, ಹಾಗೂ ನವಿ ಮುಂಬಯಿಯಲ್ಲಿ ಗುರು ಮಂದಿರ ಮತ್ತು ಸಮುದಾಯ ಭವನದ ಶಂಕುಸ್ಥಾಪನೆ, ವರದಿ ವರ್ಷದಲ್ಲಿ ಕಾಂದಿವಲಿ ಹಾಗೂ ಮುಲುಂಡ್‌ನ‌ಲ್ಲಿ ಸ್ವಂತ ಕಚೇರಿಯ ಲೋಕಾರ್ಪಣೆ, ಇಂತಹ ಹತ್ತು ಹಲವು ಯೋಜನೆಗಳು ಸಹಕಾರಗೊಂಡಿವೆ.

ಕಳೆದ ಹಲವು ದಶಕಗಳಿಂದ ಜಯ ಸಿ. ಸುವರ್ಣರ ಮಾರ್ಗದರ್ಶನದಲ್ಲಿ ಅಸೋಸಿಯೇಶನ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ನನ್ನ ಕೈಯಿಂದಾದಷ್ಟು ಸಮಾಜಪರ ಕಾರ್ಯಗಳನ್ನು ನಡೆಸಿದ ಆತ್ಮ ತೃಪ್ತಿ ನನಗಿದೆ. ನನ್ನ ಅಧಿಕಾರವಧಿಯಲ್ಲಿ ಬಹಳಷ್ಟು ಯೋಜನೆಗಳು ಕಾರ್ಯಗತಗೊಂಡಿವೆ. ಅದರಲ್ಲೂ ಅಸೋಸಿಯೇಶನ್‌ ಮತ್ತು ಬಿಲ್ಲವ ಜಾಗೃತಿ ಬಳಗ ಒಂದಾಗಿರುವುದು ಬಹಳಷ್ಟು ಖುಷಿ ತಂದಿದೆ. ಇದು ಸಮಾಜದ ಅಭಿವೃದ್ಧಿಗೆ ಮುನ್ನುಡಿ ಎಂದು ಹೇಳಬಹುದು.  ಕಾರ್ಯಕಾರಿ ಸಮಿತಿ, ಸ್ಥಳೀಯ ಕಚೇರಿಗಳು-ಸಮಿತಿಗಳು ಅದರಲ್ಲೂ ಮುಂಬಯಿಯ ತುಳು-ಕನ್ನಡಿಗರ ಪ್ರೋತ್ಸಾಹ-ಸಹಕಾರವನ್ನು ನಾನು ಎಂದಿಗೂ ಮರೆಯುಂತಿಲ್ಲ. ನೂತನ ಅಧ್ಯಕ್ಷರಾಗಿ ನೇಮಕಗೊಂಡ ಚಂದ್ರಶೇಖರ ಎಸ್‌. ಪೂಜಾರಿ ಅವರು ಸಮಾಜ ಸೇವೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಯುವಕರನ್ನು ಒಂದುಗೂಡಿಸಿಕೊಂಡು ಪ್ರಸ್ತುತ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ಅಸೋಸಿಯೇಶನ್‌ ಇನ್ನಷ್ಟು ಅಭಿವೃದ್ಧಿಯನ್ನು ಕಾಣಬೇಕು ಎಂಬುದು ನನ್ನ ಆಶಯ. ನೂತನ ಸಮಿತಿಗೆ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ಮುಂದೆಯೂ ಲಭಿಸಲಿದೆ 
– ನಿತ್ಯಾನಂದ ಡಿ. ಕೋಟ್ಯಾನ್‌ 
(ನಿರ್ಗಮನ ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

ಬಿಲ್ಲವರ ಅಸೋಸಿಯೇಶನ್‌ ಈಗಾಗಲೇ ಬೃಹತ್‌ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಮಾಜ ಬಾಂಧವರು ಒಗ್ಗಟ್ಟು-ಒಮ್ಮತದಿಂದ ಸಮಾಜವನ್ನು ಬೆಳೆಸುವಲ್ಲಿ ಸಹಕಾರ ನೀಡಬೇಕು. ಯುವಪೀಳಿಗೆಗೆ ಹೆಚ್ಚಿನ ಪ್ರಾಶಸ್ತÂವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆ. ಬಿಲ್ಲವ ಸಮಾಜ ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂಬ ದೃಷ್ಟಿಯಿಂದ  ಹೊಸ ಬೇರು – ಹಳೆ ಚಿಗುರು ಎಂಬಂತೆ ಉತ್ತಮವಾದ ಸಮಿತಿಯೊಂದು ರಚನೆಯಾಗಿದೆ. ಇಲ್ಲಿ ಯಾರು ಕೀಳೂ ಅಲ್ಲ, ಮೇಲೂ ಅಲ್ಲ. ಇಲ್ಲಿ ಎಲ್ಲರು ಸಮಾನರು ಎಂಬ ಭಾವನೆ ಮುಖ್ಯವಾಗಿರಬೇಕು. ನಾವೆಲ್ಲರು ಒಂದಾಗಿ  ಭವಿಷ್ಯದಲ್ಲಿ ಉನ್ನತ ಶಿಕ್ಷಣ ಯೋಜನೆ ಮತ್ತು ನವಿಮುಂಬಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ-ಗುರುಮಂದಿರದ ಗುರಿಯನ್ನು ಸಾಧಿಸಬೇಕು. ಬಿಲ್ಲವರ ಅಸೋಸಿಯೇಶನ್‌ನ ಎಲ್ಲಾ ಸಮಾಜಪರ ಕಾರ್ಯಗಳಿಗೆ ಸಮಾಜ ಬಾಂಧವರ, ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ 
– ಜಯ ಸಿ. ಸುವರ್ಣ (ಅಧ್ಯಕ್ಷರು : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ).

 ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

4-uv-fusion

Childhood Times: ಕಳೆದು ಹೋದ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.