ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

ಕೋವಿಡ್‌ ಸಂಕಷ್ಟದ ಸಮಯದಲ್ಲೂ ವಾರ್ಷಿಕ ಪೂಜೆ, ಸಮಾಜಪರ ಕಾರ್ಯಕ್ರಮಗ ಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದೆ.

Team Udayavani, Oct 12, 2021, 12:22 PM IST

ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

ಚಾರ್ಕೋಪ್‌, ಅ. 11: ಶರನ್ನವರಾತ್ರಿಯ ಅಂಗವಾಗಿ ಚಾರ್ಕೋಪ್‌ ಕನ್ನಡಿಗರ ಬಳಗದ 22ನೇ ವಾರ್ಷಿಕ ಶಾರದಾ ಮಹಾಪೂಜೆ ಅ. 11ರಂದು ಚಾರ್ಕೋಪ್‌ ಕನ್ನಡಿಗರ ಬಳಗದ ಕನ್ನಡ ಭವನ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಜರಗಿತು.

ನಾಗೇಶ್‌ ಭಟ್‌ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನ ಕಾರ್ಯಕ್ರಮಗಳು ಜರಗಿದ ಬಳಿಕ ಬಳಗದ ಅಧಿದೇವತೆ ಶ್ರೀ ಶಾರದಾಂಬೆಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹೇಂದ್ರ ಕಾಂಚನ್‌ ಮತ್ತು ಸುಮಿತ್ರಾ ಕಾಂಚನ್‌ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬಳಗದ ಸದಸ್ಯರೊಂದಿಗೆ ಮಹಾಮಂಗಳಾರತಿ ಜರಗಿತು. ಧಾರ್ಮಿಕ ಕಾರ್ಯಕ್ರಮದ ಬಳಿಕ ತೀರ್ಥ ಪ್ರಸಾದ
ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ಮಾತನಾಡಿ, ಕೊರೊನಾ ವಾತಾವರಣದ ನಡುವೆಯೂ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ನಮ್ಮ ಬಳಗದ್ದಾಗಿದೆ. ಇದಕ್ಕೆಲ್ಲ ಬಳಗವು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದ ಶ್ರೀ ಶಾರದಾ ಮಾತೆಯ ಅನುಗ್ರಹ ಕಾರಣ ಎಂದೇ ಹೇಳಬಹುದು. ಮುಂದೆ ಬಳಗವು ಕೆಲವೊಂದು ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ಹಮ್ಮಿಕೊಂಡಿದ್ದು, ಬಳಗದ ಸದಸ್ಯರಾದ ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ವಿನಂತಿಸಿದರು.

ಬಳಗದ ಗೌರವ ಪ್ರಧಾನ ಕಾರ್ಯ ದರ್ಶಿ ರಘುನಾಥ ಎನ್‌. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರದಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆಯಾಗಿ ಜನರು ನೆಮ್ಮದಿಯತ್ತ ಸಾಗುತ್ತಿದ್ದಾರೆ. ಬಳಗವು ಕಳೆದ ಒಂದೂವರೆ ವರ್ಷಗಿಂತಲೂ ಹೆಚ್ಚು ಕಾಲದ ಕೋವಿಡ್‌ ಸಂಕಷ್ಟದ ಸಮಯದಲ್ಲೂ ವಾರ್ಷಿಕ ಪೂಜೆ, ಸಮಾಜಪರ ಕಾರ್ಯಕ್ರಮಗ ಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದೆ.

ಮುಂಬರುವ ದಿನಗಳಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕೆಲವೊಂದು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಬಳಗವು ಹೊಂದಿದ್ದು, ಸದಸ್ಯರೆಲ್ಲರೂ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದರು. ಬಳಗದ ಸಮಗ್ರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಬಳಗದ ಹಿರಿಯ ವಿಶ್ವಸ್ತ ಎಂ. ಎಸ್‌. ರಾವ್‌ ಅವರು ಪ್ರಸಕ್ತ ಅನಾರೋಗ್ಯದ ಲ್ಲಿದ್ದು, ಶ್ರೀ ಶಾರದಾಂಬೆಯ ಅನುಗ್ರಹ ದಿಂದ ಶೀಘ್ರವಾಗಿ ಗುಣಮುಖರಾಗಿ ಮತ್ತೆ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಶಕ್ತಿ, ಸಾಮರ್ಥ್ಯ, ಆರೋಗ್ಯ ಭಾಗ್ಯ ದೊರಕಲೆಂದು ನಮ್ಮೆಲ್ಲರ ಹಾರೈಕೆ ಎಂದು ಹೇಳಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ಸದಸ್ಯರಿಗೆ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ವಂದಿಸಿದರು.

ಬೆಳಗ್ಗೆ 8ರಿಂದ 11ರ ವರೆಗೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಗದ ಸದಸ್ಯರಿಂದ ಭಜನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಬಳಗದ ಗೌರವ ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ, ಉಪಾಧ್ಯಕ್ಷರಾದ ಕೃಷ್ಣ ಟಿ. ಅಮೀನ್‌, ಚಂದ್ರಶೇಖರ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ, ಜತೆ ಕೋಶಾಧಿಕಾರಿ ರಮೇಶ್‌ ಸಿ. ಕೋಟ್ಯಾನ್‌, ವಾರ್ಷಿಕೋತ್ಸವ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಚೇವಾರ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ, ವಿಶ್ವಸ್ತರಾದ ಜಯ ಸಿ. ಶೆಟ್ಟಿ, ರಶ್ಮಿ ಆಚಾರ್ಯ, ಯಮುನಾ ಸಾಲ್ಯಾನ್‌, ರಜನಿ ಆರ್‌. ಶೆಟ್ಟಿ, ಶುಭಾ ಸುವರ್ಣ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಶಾರದಾ ಪೂಜೆಯಲ್ಲಿ ಪಾಲ್ಗೊಂಡು ಸಹಕರಿಸಿದರು.

ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.