ಚಾರ್‌ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ 18ನೇ ವಾರ್ಷಿಕೋತ್ಸವ 


Team Udayavani, Sep 28, 2017, 11:57 AM IST

26-Mum02a.jpg

ಮುಂಬಯಿ: ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವುದು  ಪ್ರಸಕ್ತ ಕಾಲಘಟ್ಟದಲ್ಲಿ ಅಸಾಧರಣ ಕೆಲಸ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮರಾಠಿ ಮಣ್ಣಿನಲ್ಲಿ ಚಾರ್‌ಕೋಪ್‌ ಕನ್ನಡಿಗರ ಬಳಗದ ಕನ್ನಡ ಸೇವೆ ಅಭಿನಂದನೀಯ. ಕರ್ನಾಟಕದಲ್ಲಿಯ ಕನ್ನಡ ಕಾರ್ಯಕ್ರಮಗಳಿಗಿಂತಲೂ ಮಹಾನಗರದಲ್ಲಿ ಅವಿರತವಾಗಿ ನಡೆಯುವ ಕನ್ನಡ ಕಾರ್ಯಕ್ರಮಗಳು ಮೆಚ್ಚುವಂಥದ್ದು. ಕನ್ನಡ ಭಾಷೆಯನ್ನು ನಾವು ಗೌರವಿಸುವ ಮೂಲಕ ನಾಡು-ನುಡಿಯ ಉಳಿವಿಗಾಗಿ ನಾವೆಲ್ಲರು ಪಣತೊಡಬೇಕು. ಎಲ್ಲರು ಕನ್ನಡ ಕಲಿಯುವ ಮೂಲಕ ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು  ಹೇಳಿದರು.

ಸೆ. 24 ರಂದು ಕಾಂದಿವಲಿಯ ಸೆಕ್ಟರ್‌ 6 ಹರ್ಯಾಣ ಭವನದಲ್ಲಿ ನಡೆದ ಚಾರ್‌ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ ಇದರ 18 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಿಸ್ವಾರ್ಥ ಭಾವನೆಯಿಂದ ಕಾರ್ಯನಿರ್ವಹಿಸಿದಾಗ ಸ್ವತ್ಛ ಸಮಾಜದ ನಿರ್ಮಾಣ ಸಾಧ್ಯ. ಮಹಾನಗರದಲ್ಲಿ ಎಲ್ಲರು ಒಗ್ಗಟ್ಟಾಗಿ ಕನ್ನಡವನ್ನು ಉಳಿಸಿ-ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಈ ಸಂಸ್ಥೆಯಿಂದ ಪರಿಸರದಲ್ಲಿ ಒಂದು ಶಿಕ್ಷಣ ಸಂಸ್ಥೆ ನಿರ್ಮಾಣವಾಗಬೇಕು. ಇದರಿಂದ ವಿಧ್ಯೆಯಿಂದ ವಂಚಿರಾದವರಿಗೆ ಸಹಕಾರಿ ಯಾಗಬೇಕು ಎಂದು ನುಡಿದರು.

ಸಂಸ್ಥೆಯ ಬಿಡುವಿಲ್ಲದ ನಾಡು-ನುಡಿ ಸೇವೆಯೇ ಸಾಕ್ಷಿ
ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಅಧ್ಯಕ್ಷ  ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಬಳಗವು ಇಂದು ಹತ್ತನೇ ವರ್ಷದ ಬಾಲ್ಯಾವಸ್ಥೆಯನ್ನು ಮೀರಿ 18ರ ಯೌವನಾವಸ್ಥೆಗೆ ಕಾಲಿಟ್ಟಿದೆ ಎಂದರೆ ಈ ಸಂಸ್ಥೆಯ ಬಿಡುವಿಲ್ಲದ ನಾಡು-ನುಡಿ ಸೇವೆಯೇ ಸಾಕ್ಷಿಯಾಗಿದೆ. ಚಾರ್‌ಕೋಪ್‌ನಲ್ಲಿ ಭಾರತ್‌ ಬ್ಯಾಂಕ್‌ ಶಾಖೆ ಪ್ರಾರಂಭವಾದ ಸಮಯದಲ್ಲಿ ಶಾಖೆಯಲ್ಲಿ 29 ಕೋ. ರೂ. ಜಮಾವಣೆಗೊಂಡ ಕಾರ್ಯಸಾಧನೆಯಲ್ಲಿ ಬಳಗದ ಸೇವೆ ಅನನ್ಯವಾಗಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ವಿಶಿಷ್ಟ ಸಾಧನೆ ಎಂದು ಹೇಳಬಹುದು. ಈ ಒಗ್ಗಟ್ಟು ಇನ್ನಷ್ಟು ಇಮ್ಮಡಿಗೊಳ್ಳಬೇಕು. ನಾಡು-ನುಡಿಯ ಪ್ರೀತಿಯನ್ನು ಎತ್ತರಕ್ಕೆ ನಾವೆಲ್ಲರೂ ಕೊಂಡೊಯ್ಯುವ ಎಂದು ಹೇಳಿದರು.

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಸಂಚಾಲಕ ಮನೋಹರ್‌ ಎನ್‌. ಶೆಟ್ಟಿ ಅವರು ಮಾತನಾಡಿ, ಬಳಗವು ಹಿರಿಯ ಹಾಗೂ ಪ್ರಸಕ್ತ ಪದಾಧಿಕಾರಿಗಳ ನಿಸ್ವಾರ್ಥ ಸೇವಾ ಮನೋಭಾವನೆ ಕಳೆದ 18 ವರ್ಷಗಳ ಸೇವೆ ಕಾಂದಿವಲಿ ಪರಿಸರದಲ್ಲಿ ಒಂದು ಉತ್ತಮ ಜಾತ್ಯತೀತ ಸಂಸ್ಥೆಯಾಗಿ ಬೆಳೆದಿದೆ. ಏಕತೆಯ ವಾತಾವರಣ ಈ ಬಳಗದಲ್ಲಿ ಕಾಣುತ್ತಿದ್ದು, ಇದಕ್ಕೆ ಕಾರ್ಯಕರ್ತರ ಸೇವಾ ವೈಖರಿ ಕಾರಣವೇ ಸಾಕ್ಷಿಯಾಗಿದೆ. ಸಾಮಾಜಿಕವಾಗಿ ನಾವು ನಮ್ಮನ್ನು ತೊಡಗಿಸಿಕೊಂಡಾಗ ಬದುಕಿನಲ್ಲಿ ಗೌರವಯುತವಾಗಿ ಬಾಳಬಹುದು ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌ ಅವರು ಮಾತನಾಡಿ, ಚಾರ್‌ಕೋಪ್‌ ಬಳಗದ ಇಂದಿನ ಕಾರ್ಯಕ್ರಮವು ನಮ್ಮ ರಾಷ್ಟÅದ ಜಾತ್ಯಾತೀತ ಮನೋಭಾವದ ಪ್ರತೀಕದಂತಿದೆ. ಬಳಗವು ಸೇವಾ ನಿರತ ಸದಸ್ಯರ ಪರಿಶ್ರಮದಿಂದ ಒಂದು ದೃಢ ಸಂಸ್ಥೆಯಾಗಿ ಮೂಡಿಬಂದಿದೆ. ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ಬಾಂದ್ರಾದ ಶ್ರೀ ಧರ್ಮಶಾಸ್ತ ಭಕ್ತವೃಂದದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ ಅವರು ಮಾತನಾಡಿ, ನವರಾತ್ರಿಯ ನಾಲ್ಕನೇ ದಿನವೇ ಸಮ್ಮಾನದ ದಿನ. 18 ವರ್ಷ ಪೂರೈಸಿದ ಈ ಬಳಗಕ್ಕೆ ಇಂದು ಪುಣ್ಯದಿನ. ಪರಶುರಾಮ ಸೃಷ್ಟಿಯಲ್ಲಿ 18 ಪುಣ್ಯಕ್ಷೇತ್ರಗಳಿದ್ದು, ಅದರಲ್ಲಿ ಶಬರಿಮಲೆ ಕೂಡಾ ಒಂದಾಗಿದೆ. ಅಂತಹ ದೈವಾಂಶ ದೇವಿ ಆರಾಧನೆಯ ಈ ಶುಭ ಸಮಯದಲ್ಲಿ ಸಂಘಕ್ಕೆ ಅಭಯ ಹಸ್ತ ನೀಡಿ ಕರುಣಿಸಲಿ ಎಂದು ಹಾರೈಸಿದರು.

ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದು, ಸ್ವಾಗತ ಗೀತೆ ಹಾಡಿದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಅವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗವು ಬಾಲ್ಯಾವಸ್ಥೆಯನ್ನು ಕಳೆದು 18 ರ ಯೌವನಾವಸ್ಥೆಗೆ ತಲುಪಿದ ಈ ಕಾಲಘಟ್ಟದಲ್ಲಿ ಪರಿಸರದಲ್ಲಿ ಸಾಧ್ಯವಾದಷ್ಟು ತುಳು-ಕನ್ನಡಿಗರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ. ಸುಮಾರು 1 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಬಳಗವು ಸ್ಥಳೀಯ ಕನ್ನಡಿಗರ ಆಶೋ ತ್ತರಗಳಿಗೆ ಸದಾಸ್ಪಂದಿಸುತ್ತಾ ಬಂದಿದೆ ಎಂದರು.

ವೇದಿಕೆಯಲ್ಲಿ ವಿಶ್ವಸ್ತರುಗಳಾದ ಜಯ ಸಿ. ಶೆಟ್ಟಿ, ಭಾಸ್ಕರ ಸರಪಾಡಿ, ಎಂ. ಎಸ್‌. ರಾವ್‌,  ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ, ಮಹಿಳಾ ವಿಭಾಗದ ಸಂಚಾಲಕಿ ಪದ್ಮಾವತಿ ಬಿ. ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಟಿ. ಅಮೀನ್‌, ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಹಾಗೂ ಸಮ್ಮಾನಿತರು ಉಪಸ್ಥಿತರಿದ್ದರು. ಅರ್ಚಕ ನಾಗೇಶ್‌ ಭಟ್‌ ಅವರಿಂದ ಶಾರದಾ ಪೂಜೆ ಹಾಗೂ ಮಹಿಳಾ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಗದ ಉಪಾಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ವಂದಿಸಿದರು. ಬಳಗದ ಸದಸ್ಯರು, ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರವೀಣ್‌ ಶೆಟ್ಟಿ ಮತ್ತು ಜಯಲಕ್ಷಿ¾à ಅವರು ನಿರ್ವಹಿಸಿದರು.  ಸದಸ್ಯ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಳಗದ ಯಶಸ್ವಿ ಕಾರ್ಯಕ್ರಮದ ಹೆಗ್ಗಳಿಕೆ ನನಗೋರ್ವನಿಗೆ ಸಲ್ಲುವುದಿಲ್ಲ. ಬಳಗದಲ್ಲಿ ಅವಿಶ್ರಾಂತವಾಗಿ ದುಡಿಯುವ ಸರ್ವ ಕಾರ್ಯಕಾರಿ  ಹಾಗೂ ಸದಸ್ಯರ ಸಂವೇದನಾಶೀಲ ಉತ್ಸಾಹ ಮನೋಭಾವ ಬಳಗದ ಯಶಸ್ಸಿಗೆ ಕಾರಣವಾಗಿದೆ. ಸಂಸ್ಥೆಯ ಅಭಿವೃದ್ದಿಯಲ್ಲಿ ಮಹಿಳಾ ವಿಭಾಗದ ಕೊಡುಗೆ ಅಪಾರವಾಗಿದೆ. ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ ಹಾಗೂ ಅವರ ಬಳಗದ ಸದಸ್ಯರ ಸೇವೆ ಅನನ್ಯವಾಗಿದೆ. ಈ ಹಿಂದಿನ ಪದಾಧಿಕಾರಿಗಳ ಯೋಚನೆ-ಯೋಜನೆಗಳು ಸಂಸ್ಥೆಯನ್ನು ಈ ಮಟ್ಟಕ್ಕೆ ತಂದಿದೆ. ಮುಂದೆಯೂ ಅವರ ಧ್ಯೇಯ-ಧೋರಣೆ ಮುಂದುವರಿಯಲ್ಲಿದ್ದು, ಇನ್ನೂ ಹಲವಾರು ಹೊಸ ಕಾರ್ಯಕ್ರಮಗಳ ಚಿಂತನೆ ಬಳಗಕ್ಕಿದೆ. ಈ ಸಂಸ್ಥೆಯ ಹಿಂದಿನ ಅಡಿಪಾಯದ ಹಿನ್ನಲೆ ನನ್ನನ್ನು ಬಳಗ ಈ ಮಟ್ಟಕ್ಕೆ ಬೆಳೆಸಿದೆ. ಬಳಗದ ಯಶಸ್ಸಿಗೆ ನಾನು ಬದ್ಧನಾಗಿರುತ್ತೇನೆ 
– ಮಂಜುನಾಥ ಜಿ. ಬನ್ನೂರು (ಅಧ್ಯಕ್ಷರು : ಚಾರ್‌ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ).

ಚಿತ್ರ-ವರದಿ : ರಮೇಶ್‌ ಉದ್ಯಾವರ
 

ಟಾಪ್ ನ್ಯೂಸ್

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.