ಚೆಂಬೂರು ಕರ್ನಾಟಕ ಹೈಸ್ಕೂಲ್: ಸ್ವಾತಂತ್ರ್ಯ ದಿನಾಚರಣೆ
Team Udayavani, Aug 23, 2018, 4:30 PM IST
ಮುಂಬಯಿ: ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಆವರಣದಲ್ಲಿ ಆ. 15ರಂದು ಸ್ವಾತಂತ್ರ್ಯ ದಿನಾಚರಣೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಧ್ವಜವಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ| ಎಂ. ಜಿ. ಶಿರಹಟ್ಟಿಯವರು ಧ್ವಜಾ ರೋಹಣಗೈದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು, ಅತಿಥಿ-ಗಣ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡರು. ಧ್ವಜಾರೋಹಣದ ಅನಂತರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ದೇಶಭಕ್ತಿಗೀತೆ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಭಾಷಣಗೈದರು.
ಒಂದನೆಯ ತರಗತಿಯಿಂದ 9ನೇ ತರಗತಿಯವರೆಗೆ, ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಕ್ಕಳಿಗೆ ವಿವಿಧ ರೀತಿಯ ಪುರಸ್ಕಾರಗಳನ್ನು ನೀಡಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಬೋದತ್ ಹರಿಪ್ರಿಯಾ ಮತ್ತು ಜಾನರ್ ಉಷಾ ಅವರಿಗೆ ಸಂಘದ ವತಿಯಿಂದ ಚಿನ್ನದ ನಾಣ್ಯಗಳನ್ನು ನೀಡಿ ಪುರಸ್ಕರಿಸಲಾಯಿತು.
ಇಂಗ್ಲಿಷ್ ಮಾಧ್ಯಮದಲ್ಲಿ ದ್ವಿತೀಯ ಸ್ಥಾನ ಪಡೆದ ಮಿಲಿಂದ್ ಸಾಮಂತ್ ಮತ್ತು ತೃತೀಯ ಸ್ಥಾನ ಪಡೆದ ಸ್ನೇಹಲ್‌ರಾಜ್ ಉಹಾರ್ ಮತ್ತು ದ್ವಿತೀಯ ಸ್ಥಾನ ಪಡೆದ ಗಗನ್ ಗೌಡ ಮತ್ತು ತೃತೀಯ ಸ್ಥಾನ ಪಡೆದ ನಮ್ರತಾ ಶೆಟ್ಟಿಯವರನ್ನು ಪುರಸ್ಕರಿಸ
ಲಾಯಿತು.
ಗೌರವಾನ್ವಿತ ಅತಿಥಿ ಡಾ| ಎಂ. ಜಿ. ಶಿರಹಟ್ಟಿಯವರು ಸಭೆಯನ್ನು ಉದ್ದೇ ಶಿಸಿ ಮಾತನಾಡುತ್ತಾ, ವಿದ್ಯಾರ್ಥಿ ಗಳಿಗೆ ಒಂದು ಗುರಿ ಇರಬೇಕು. ಇಂದು ಚಿನ್ನದ ನಾಣ್ಯಗಳನ್ನು ಬಹು ಮಾನದ ರೂಪದಲ್ಲಿ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ನೀವೂ ಅನುಕರಿಸಬೇಕು ಎಂದು ನುಡಿ ಯುತ್ತಾ, ತಾನು ಕೂಡಾ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ಎಂದು ನುಡಿದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಅವರು ಮಾತನಾಡಿ, ನಮ್ಮ ಸ್ವಾತಂತ್ರÂ ಹೋರಾಟಗಾರರು ದೇಶಕ್ಕಾಗಿ ಮಾಡಿದ ತ್ಯಾಗ ನಿಜಕ್ಕೂ ಶ್ಲಾಘನೀಯ ಎಂದರು.
ನಾವಿಂದು ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ನಾವು ಭಾರತೀಯರು ಎನ್ನಲು ಹೆಮ್ಮೆಯೆನಿಸುತ್ತದೆ. ನಾವೆಲ್ಲರೂ ದೇಶದ ಒಳಿತಿಗೋಸ್ಕರ ದುಡಿಯಬೇಕು ಎಂದು ನುಡಿದರು.
ವೇದಿಕೆಯಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಗೌರವಾನ್ವಿತ ಅತಿಥಿ ಡಾ| ಎಂ. ಜಿ. ಶಿರಹಟ್ಟಿ , ಲಾ ಕಾಲೇಜಿನ ಪ್ರಾಂಶುಪಾಲ ಡಾ| ದಿನಕರ್ ಪವಾರ್, ಸಂಘದ ಉಪಾಧ್ಯಕ್ಷ ಪ್ರಭಾಕರ ಬೋಳಾರ್, ಗೌರವಾನ್ವಿತ ಕಾರ್ಯದರ್ಶಿ ದೇವದಾಸ ಶೆಟ್ಟಿಗಾರ್, ಕೋಶಾಧಿಕಾರಿ ಟಿ. ಆರ್. ಶೆಟ್ಟಿ, ಮಾಧ್ಯಮಿಕ ಹೈಸ್ಕೂಲಿನ ಮುಖ್ಯ ಅಧ್ಯಾಪಕಿ ಶ್ರೀಮತಿ ಮನ್‌ಜಿàತ್ ಕೌರ್ ಸೈನಿ, ಪ್ರಾಥಮಿಕ ಹೈಸ್ಕೂಲಿನ ಮುಖ್ಯ ಅಧ್ಯಾಪಕಿ ಶಿವಿಸಿತಾ ಖೀರ್ ಮತ್ತು ಸುಜಯಾ ಅಂಚನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.