ನಾಲ್ವರು ಕನ್ನಡಿಗರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪ್ರಶಸ್ತಿ
Team Udayavani, Mar 3, 2017, 5:11 PM IST
ಮುಂಬಯಿ: ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ 2017 ಸಾಲಿನ ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪ್ರಶಸ್ತಿಗೆ ಆಯ್ಕೆಯಾದ 25 ಮಂದಿಯಲ್ಲಿ ನಾಲ್ವರು ಕನ್ನಡಿಗರು ಸ್ಥಾನಪಡೆದಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಮುಖಾಂತರ ಹೆಸರು ಪಡೆದ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಬಿ. ಎನ್. ಶ್ರೀಕೃಷ್ಣ, ಆಲ್‌ಕಾರ್ಗೋ ಲಾಜಿಸ್ಟಿಕ್ ಡಾ| ಶಶಿಕಿರಣ್ ಶೆಟ್ಟಿ, ಅನ್ನದಾನದಲ್ಲಿ ಹೆಸರು ಮಾಡಿದ ಅಜಂತಾ ಕ್ಯಾಟರರ್ನ ಜಯರಾಮ್ ಶೆಟ್ಟಿ ಇನ್ನ, ಟೂರ್ ಆ್ಯಂಡ್ ಟ್ರಾವೆಲ್ಸ್‌ನಲ್ಲಿ ಮತ್ತು ಹೊಟೇಲ್ ಉದ್ಯಮದಲ್ಲಿರುವ ಸಾಧನೆಗೈದ ಸದಾಶಿವ ಎಸ್. ಶೆಟ್ಟಿ ಅವರು ಪ್ರಶಸ್ತಿ ಪಟ್ಟಿಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಕನ್ನಡಿಗರಾಗಿರುವ ಇವರು ಬೋಂಬೆ ಹೈಕೋರ್ಟ್‌ನಲ್ಲಿ ಜಡ್ಜ್ ಆಗಿ, ಸುಪ್ರೀಂ ಕೋರ್ಟ್‌ನಲ್ಲಿ 2002ರಿಂದ 2006ರವರೆಗೆ ನ್ಯಾಯಾಧೀಶರಾಗಿ ಮುಂಬಯಿ ಸರಣಿ ಬಾಂಬ್ ಸ್ಫೋಟ ತೀರ್ಪಿನಲ್ಲಿ ಮಹತ್ವದ ಪಾತ್ರ
ವಹಿಸಿದ್ದರು. ಸಂಸ್ಕೃತ ಪಾಂಡಿತ್ಯವನ್ನು ಹೊಂದಿರುವ ಅವರು ಉತ್ತಮ ವಾಗ್ಮಿಯಾಗಿದ್ದು, ಹಲವು ಪದವಿಗಳನ್ನು ಪಡೆದಿದ್ದಾರೆ.
ಡಾ| ಶಶಿಕಿರಣ್ ಶೆಟಿ ಅವರು ಆಲ್‌ಕಾರ್ಗೋ ಲಾಜಿಸ್ಟಿಕ್ ಮತ್ತು ಇನ್ನಿತರ ಉದ್ಯಮಗಳನ್ನು ಹೊಂದಿದ್ದಾರೆ. ಅಜಂತಾ ಕ್ಯಾಟರರ್ನ ಜಯರಾಮ ಶೆಟ್ಟಿ ಅವರು ಕಳೆದ 25 ವರ್ಷಗಳಿಂದ ಮಹಾನಗರದಲ್ಲಿ ಕ್ಯಾಟರಿಂಗ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದು, ಮೂರು ತಾರಾ ಹೊಟೇಲ್‌ಗಳ ಮಾಲಕತ್ವವನ್ನು ಹೊಂದಿದ್ದಾರೆ. ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು, ಸಮಾಜ ಸೇವೆಯಲ್ಲೂ ಮುಂದಿದ್ದಾರೆ. ಸರಕಾರಿ ಸ್ವಾಮ್ಯದ ಕ್ಯಾಂಟೀನ್‌ಗಳ ಪಿಡಬ್ಲೂÂಟಿ ಹೊಂದಿದ್ದು, ಅವರ ಊಟೋಪಚಾರ ಉದ್ಯಮಕ್ಕೆ ಐಎಸ್‌ಒ ಮಾನ್ಯತೆ ದೊರೆತಿದೆ. ಇನ್ನಾ ಮುದ್ದಾಣುವಿನಲ್ಲೂ ಅನೇಕ ಸಮಾಜ ಸೇವೆಗಳಲ್ಲಿ ತೊಡಗಿದ್ದಾರೆ.
ಸದಾಶಿವ ಶೆಟ್ಟಿ ಅವರು ನವಿಮುಂಬಯಿ ಸಿಬಿಡಿಯ ಸೆಕ್ಟರ್ 15 ರಲ್ಲಿ ಕಾರ್ಪೋರೇಟ್ ಎಂಬ ತಾರಾ ಹೊಟೇಲ್ ಅಲ್ಲದೆ ವಾಹನಗಳ ಬಾಡಿ ವಿನ್ಯಾಸಗೊಳಿಸುವ ಭಾರತ್ ಕೋಚ್ ಕಂಪೆನಿಯನ್ನು ಹೊಂದಿದ್ದಾರೆ. ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಅಲ್ಲದೆ ಇನ್ನಿತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಮಾ. 5 ರಂದು ಸಂಜೆ 7 ಕ್ಕೆ ಅಂಧೇರಿ ಪೂರ್ವದ ಹೊಟೇಲ್ ಕೋಹಿನೂರ್ ಕಾಂಟಿನೆಂಟಮ್ ತಾರಾ ಹೊಟೇಲ್ ಎಮರಾಲ್ಡ್ ಹಾಲ್‌ನಲ್ಲಿ ಜರಗಲಿದೆ. ಅತಿಥಿಗಳಾಗಿ ಬೋಂಬೇ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರಕಾಶ್ ಡಿ. ನಾಯ್ಕ, ಹಿರಿಯ ಚಿತ್ರನಟ ವಿಜು ಕೋಟೆ, ಮುಂಬಯಿ ವಿಶ್ವವಿದ್ಯಾಲಯದ ಎಟಿಎ ನಿರ್ದೇಶಕ ಡಾ| ಮಂಗೇಶ್ ಬನ್ಸೊಡೆ, ಆಲ್ ಇಂಡಿಯಾ ಮರಾಠಿ ಛತ್ರಪತಿ ಮಹಾರಾಜ ಮಂಡಲ ಮಾಜಿ ಕಾರ್ಯಾಧ್ಯಕ್ಷ ವಿಜಯ್ ಕೊಂಡೆR ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.