ಮಕ್ಕಳಿಗೆ ಲಲಿತ ಕಲೆಯ ಬಗ್ಗೆ ಅರಿವು ಮೂಡಿಸಬೇಕು: ನರೇಂದ್ರ
Team Udayavani, Dec 6, 2019, 5:41 PM IST
ಮುಂಬಯಿ, ಡಿ. 4: ಹೊರನಾಡ ಕನ್ನಡ ಸಂಘಟನೆಗಳಲ್ಲಿ ಹಿರಿಯರ ದಂಡೇ ಹೆಚ್ಚಾಗಿರುವಾಗ ಯುವಕ–ಯುವತಿಯರೇ ತುಂಬಿದ ಪಲವಾ ಕನ್ನಡಿಗರ ಸಂಘ ಯುವ ಪಡೆಯ ಕನ್ನಡಾಭಿಮಾನವನ್ನು ಕಂಡಾಗ ಹೆಮ್ಮೆಯಾಗುತ್ತಿದೆ. ಈ ಯುವಕರ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದು ರಂಗಭೂಮಿಯ ಹಿರಿಯ ನಟ, ನಿರ್ದೇಶಕ ಸುಭಾಷ್ ನರೇಂದ್ರ ಅವರು ನುಡಿದರು.
ಡಿ. 1ರಂದು ಸಂಜೆ ಡೊಂಬಿವಲಿಯ ಹೊರವಲಯದ ಪಲವಾ ಸಿಟಿಯ ಪಲವಾ ಕನ್ನಡಿಗರ ಸಂಘದ ವತಿಯಿಂದ ಸ್ಥಳೀಯ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮೂರು ಲಕ್ಷಕ್ಕೂ ಅಧಿಕ ಕನ್ನಡಿಗರು ವಾಸಿಸುತ್ತಿರುವ ಡೊಂಬಿವಲಿ ಪರಿಸರದಲ್ಲಿ 32ಕ್ಕೂ ಹೆಚ್ಚು ಕನ್ನಡಪರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡಾಗ ನಾಡು– ನುಡಿಯ ಬಗ್ಗೆ ಕನ್ನಡಿಗರಿಗೆ ಇರುವ ಅಭಿಮಾನವನ್ನು ಸೂಚಿಸುತ್ತದೆ.ಭಾರತೀಯ ನಾಗರಿಕತೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದು, ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಯ ಇತಿಹಾಸವನ್ನು ಗಮನಿಸಿದಾಗ ನಮ್ಮ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇರುವುದು ಕಂಡು ಬರುತ್ತದೆ. ನಮ್ಮನ್ನು ಅನೇಕ ಅರಸರು ಆಳಿ ಹೋಗಿದ್ದು, ಅವರೆಲ್ಲರೂ ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ವಿಜಯ ನಗರದ ಅರಸರು ವಿಶ್ವದ ಅತ್ಯಂತ ಶ್ರೀಮಂತರೆನಿಸಿದರೆ, ಶ್ರೀ ಕೃಷ್ಣದೇವರಾಯರ ಕಾಲಘಟ್ಟದಲ್ಲಿ ಕನ್ನಡಿಗರ ಪಾಲಿಗೆ ಸುವರ್ಣ ಯುಗ ವಾಗಿತ್ತು. ಅನೇಕ ಸಂಸ್ಕೃತಿಗಳ ಆಗರವಾದ ನಮ್ಮ ಕರ್ನಾಟಕದ ಕನ್ನಡ ಭಾಷೆ ಬರೆದಂತೆ ಮಾತನಾಡುವ, ಮಾತನಾಡಿದಂತೆ ಬರೆಯುವ ಏಕೈಕ ಭಾಷೆಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕ ಬೇಕೆಂದರೆ ನಮ್ಮ ಮಕ್ಕಳಿಗೆ ಲಲಿತ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ನುಡಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಡಾ| ಸುಮಾ ದ್ವಾರಕಾನಾಥ್ ಅವರು, ಅನೇಕ ವರ್ಷ ಗಳಿಂದ ಕನ್ನಡಪರ ಚಟುವಟಿಕೆ ಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ನನಗೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ
ಹಿರಿಯರೇ ಕಂಡು ಬರುತ್ತಿರುವುದರಿಂದ ನಮ್ಮ ಪೀಳಿಗೆಯ ಜತೆಗೆ ಹೊರನಾಡಿನಲ್ಲಿ ಕನ್ನಡ ಮಾಯವಾಗುತ್ತದೊ ಎಂಬ ಆತಂಕವಿತ್ತು. ಆದರೆ ಪಲವಾ ಕನ್ನಡಿಗರ ಕನ್ನಡಾಭಿಮಾನ ಯುವಕರ ಕಾರ್ಯವೈಖರಿ ಕಂಡು ಕನ್ನಡ ಭಾಷೆಗೆ ಅಳಿವಿಲ್ಲ, ಕನ್ನಡ ಭಾಷೆ ನಿತ್ಯ ನಿರಂತರ ಎಂಬ ವಿಶ್ವಾಸ ಮೂಡುತ್ತಿದೆ. ಕೇವಲ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯ. ಸಂಸ್ಥೆಯು ನೂರಾರು ವರ್ಷಗಳ ಕಾಲ ಕನ್ನಡದ ಕಂಪನ್ನು ಬೀರುತ್ತಿರಲಿ ಎಂದು ನುಡಿದು ಶುಭಹಾರೈಸಿದರು.
ಇದೇ ಸಂದರ್ಭ ಗಣ್ಯರನ್ನು ಶಾಲುಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಂಘದ ಪದಾಧಿಕಾರಿಗಳು ಗೌರವಿಸಿದರು.
ಕವಿತಾ ದೇಶಪಾಂಡೆ ಮತ್ತು ಪ್ರತಿಭಾ ಜೋಶಿ ತಂಡದವರು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು. ಸುಹಾಸ್ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಪರಿಚಯಿಸಿದರು. ಡಾ| ಸೌಮ್ಯಾ ರಾವ್, ಮೋಹನ್ ಸಿ. ಜಿ. ಕಾರ್ಯಕ್ರಮ ನಿರ್ವಹಿಸಿದರು. ವರುಣ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಅವಿನಾಶ್ ಸಿದ್ಧಯ್ಯ ವಂದಿಸಿದರು.
ಕನ್ನಡ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದ ರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಏಕಪಾತ್ರಾಭಿನಯ, ಭರತನಾಟ್ಯ, ಯಕ್ಷಗಾನ ನೃತ್ಯ ರೂಪಕ, ಅಂತ್ಯಾಕ್ಷರಿ, ಮಕ್ಕಳಾದ ಖುಷಿ ನಾಯಕ್, ಸ್ವಪ್ನಾ ನಾಯಕ್ ಅವರಿಂದ ನೃತ್ಯ, ಭರತ್ ಶೆಟ್ಟಿ ಅವರಿಂದ ಏಕಪಾತ್ರಾಭಿನಯ ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪ್ರತಿಭೆಗಳನ್ನು ಗಣ್ಯರು ಗೌರವಿಸಿದರು. ನೂರಾರು ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಂತಾರಾಮ್ ಶೆಟ್ಟಿ, ಚರಣ್ ಶೆಟ್ಟಿ, ವರುಣ್, ಸಂದೀಪ್, ಮೋಹನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.