ಚಿಣ್ಣರ ಬಿಂಬ ವಾರ್ಷಿಕ ಮಕ್ಕಳ್ಳೋತ್ಸವದಲ್ಲಿ ಗುರುವಂದನೆ
Team Udayavani, Dec 29, 2017, 4:39 PM IST
ಮುಂಬಯಿ: ಚಿಣ್ಣರ ಬಿಂಬದ ಇಂದಿನ ಮಕ್ಕಳ್ಳೋತ್ಸವವನ್ನು ಕಂಡು ಸಂತೋಷವಾಗುತ್ತಿದೆ. ಕಳೆದ 10 ವರ್ಷಗಳಿಂದ ಚಿಣ್ಣರ ಬಿಂಬದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಉತ್ಸವದಲ್ಲಿ ನಾಡಿನ ಸಂಸ್ಕೃತಿ-ಸಂಸ್ಕಾರಗಳು ಮೇಳೈಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮಕ್ಕಳ ಶಿಸ್ತು, ಸಂಯಮ, ಸಮಯಪ್ರಜ್ಞೆಯನ್ನು ಕಂಡಾಗ ಆನಂದವಾಗುತ್ತಿದೆ. ಈ ಮಕ್ಕಳಿಂದ ದೊಡ್ಡವರು ಕಲಿಯುವಂಥದ್ದು ಬಹಳಷ್ಟಿದೆ. ಪ್ರಕಾಶ್ ಭಂಡಾರಿ ಅವರ ಈ ಸೇವೆಗೆ ನನ್ನ ಸಹಕಾರ ಸದಾಯಿದೆ ಎಂದು ಉದ್ಯಮಿ ಎನ್. ಬಿ. ಶೆಟ್ಟಿ ಅವರು ನುಡಿದರು.
ಡಿ. 24ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಚಿಣ್ಣರ ಬಿಂಬದ 15ನೇ ವಾರ್ಷಿಕ ಚಿಣ್ಣರ ಉತ್ಸವದಲ್ಲಿ ಮಧ್ಯಾಹ್ನ ಆಯೋಜಿಸಲಾಗಿದ್ದ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳಿಗೆ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಕಲಿಸಿಕೊಡುವುದರೊಂದಿಗೆ ಅವರಲ್ಲಿ ಕ್ರೀಡಾಸಕ್ತಿ ಯನ್ನು ಬೆಳೆಸುವ ಕಾರ್ಯದಲ್ಲೂ ಪ್ರಕಾಶ್ ಭಂಡಾರಿ ಅವರು ತೊಡಗಬೇಕು. ಇದರಿಂದ ಮಕ್ಕಳ ಬೆಳವಣಿಗೆಯಾಗಲು ಸಾಧ್ಯವಿದೆ ಎಂದರು.
ಚಿಣ್ಣರ ಲೋಕವನ್ನೇ ಸೃಷ್ಟಿಸಿದೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಚಿಣ್ಣರ ಬಿಂಬವು ಇಂದು ಚಿಣ್ಣರ ಲೋಕವನ್ನೇ ಸೃಷ್ಟಿಸಿದೆ. ಇದೊಂದು ಪ್ರಕಾಶ್ ಭಂಡಾರಿ ಅವರ ಸಂಸ್ಥೆಯಲ್ಲ. ನಮ್ಮೆಲ್ಲರ ಸಂಸ್ಥೆಯಾಗಿದೆ. ಅವರ ನಾಡು-ನುಡಿ ಸೇವೆಗೆ ನಾವೆಲ್ಲರು ಕೈಜೋಡಿಸಬೇಕು ಎಂದು ನುಡಿದರು.
ಗೌರವ ಅತಿಥಿಯಾಗಿ ಆಗಮಿಸಿದ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಮಾತನಾಡಿ, ಚಿಣ್ಣರ ಬಿಂಬದೊಂದಿಗೆ ಕಳೆದ ಅನೇಕ ವರ್ಷಗಳಿಂದ ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ. ಬಿಲ್ಲವರ ಭವನದಿಂದ ಎಲ್ಲಾ ರೀತಿಯ ಸಹಕಾರಗಳು ಚಿಣ್ಣರ ಬಿಂಬಕ್ಕೆ ಲಭಿಸುತ್ತಿದೆ. ಮಕ್ಕಳ ಶಿಸ್ತು, ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಚಿಣ್ಣರ ಬಿಂಬವು ಇಂದು ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು.
ಉದ್ಯಮಿ, ಕನ್ನಡಿಗ ಪತ್ರಕರ್ತರ ಸಂಘ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಅವರು ಮಾತನಾಡಿ, ಚಿಣ್ಣರ ಪ್ರತಿಮೆಯನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಪ್ರಕಾಶ್ ಭಂಡಾರಿ ಅವರ ಕುಟುಂಬವೇ ಚಿಣ್ಣರ ಬಿಂಬಕ್ಕೆ ಅರ್ಪಿಸಿಕೊಂಡಿರುವುದು ಹೆಮ್ಮೆಯಾಗುತ್ತಿದೆ. ಚಿಣ್ಣರ ಬಿಂಬದ ಮೂಲಕ ಇನ್ನಷ್ಟು ಮಕ್ಕಳು ಬೆಳೆದು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.
ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು ಮಾತನಾಡಿ, ಎಲ್ಲಾ ವಲಯಗಳಲ್ಲಿ ಕನ್ನಡ ತರಗತಿಗಳು ನಡೆಯುತ್ತಿದ್ದು, ಮಕ್ಕಳ ಭಾಷಾಭಿಮಾನವನ್ನು ಬಿಂಬಿಸುತ್ತಿದೆ. ಮಕ್ಕಳ ಸಂಸ್ಕಾರ ಇತರರಿಗೆ ಮಾದರಿಯಾಗಿದೆ. ಚಿಣ್ಣರ ಬಿಂಬದ ಯಶಸ್ಸಿಗೆ ಹಿಂದೆ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನ, ಶ್ರಮ ಎದ್ದು ಕಾಣುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಕೃಷ್ಣ ವೈ. ಶೆಟ್ಟಿ, ವಿಶಾಲ ಜೆ. ಪಿ. ಶೆಟ್ಟಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ಸುರೇಂದ್ರ ಕುಮಾರ್ ಹೆಗ್ಡೆ, ವಿನೋದಿನಿ ಎಸ್. ಹೆಗ್ಡೆ, ಶುಭಲಕ್ಷಿ¾à ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಸಂಜೀವ ಪೂಜಾರಿ ತೋನ್ಸೆ, ಜಯಪ್ರಕಾಶ್ ಶೆಟ್ಟಿ, ವಿಜಯ ಕೋಟ್ಯಾದ್, ಗೀತಾ ಹೇರಳ, ವಿನಯ ಶೆಟ್ಟಿ, ಸಬಿತಾ ಆಳ್ವ, ಪ್ರತಿಭಾ ಶೆಟ್ಟಿ, ಶೋಭಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಸುಕನ್ಯಾ ಸಫಲಿಗ ಮೊದಲಾದವರು ಉಪಸ್ಥಿತರಿದ್ದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ, ವಿಕ್ರಂ ಪಾಟ್ಕರ್, ಪವಿತ್ರಾ ದೇವಾಡಿಗ ಅವರು ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಚಿಣ್ಣರ ಬಿಂಬದ ವಿವಿಧ ಶಿಬಿರಗಳ ಕನ್ನಡ ಶಿಕ್ಷಕರು, ಸಂಗೀತ ಗುರುಗಳು, ಭಜನ ಶಿಕ್ಷಕರು, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ ಪಡೆದ ಚಿಣ್ಣರ ಬಿಂಬದ ಮಕ್ಕಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕ ಮಕ್ಕಳನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.