ಚಿಣ್ಣರ ಬಿಂಬ:ಮಕ್ಕಳ ಉತ್ಸವ-2017 ಸಮಾರೋಪ


Team Udayavani, Nov 28, 2017, 12:21 PM IST

25-Mum01b.jpg

ಕಲ್ಯಾಣ್‌: ಚಿಣ್ಣರ ಬಿಂಬದ ಇಂದಿನ ಹಿಂದೆ ಮಕ್ಕಳ ಪಾಲಕರ ಪಾತ್ರ ಮೆಚ್ಚುವಂಥದ್ದು. ಪಾಲಕರೇ ಇದರ ಯಶಸ್ಸಿಗೆ ಕಾರಣವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರಗಳ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ಮಕ್ಕಳು ಇಂತಹ ಶಿಬಿರಗಳ ಮೂಕ ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಿದೆ ಎಂದು ಈಸ್ಟ್‌ ವೆಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಇದರ ಸಿಎಂಡಿ ಪ್ರಭಾಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.

ನ. 17ರಂದು ಕಲ್ಯಾಣ್‌ನ ಮಾತೋಶ್ರೀ ಸಭಾಗೃಹದಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಕಲ್ಯಾಣ್‌-ಡೊಂಬಿವಲಿ-ಭಿವಂಡಿ ಶಾಖೆಗಳ ಮಕ್ಕಳ ಉತ್ಸವ-2017 ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕಾಶ್‌ ಭಂಡಾರಿ ಅವರು ತಮ್ಮ ಕುಟುಂಬವನ್ನೇ ಚಿಣ್ಣರ ಬಿಂಬದ ಮೂಲಕ ತುಳು-ಕನ್ನಡಿಗರ ಮಕ್ಕಳ ಶ್ರೇಯೋಭಿವೃದ್ಧಿಗೆ ಮುಡಿಪಾಗಿಟ್ಟಿರುವುದು ಅಭಿನಂದನೀಯ. ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವ, ಮಕ್ಕಳನ್ನು ಸುಸಂಸ್ಕೃತಗೊಳಿಸುವ ಇಂತಹ ಕಾರ್ಯಗಳಿಗೆ ತನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನುಡಿದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡ ಕೆ. ಎನ್‌. ಪಾರ್ಕ್‌ನ ಸತೀಶ್‌ ಶೆಟ್ಟಿ ಅವರು ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಇಂತಹ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವುದು ಸಾಮಾನ್ಯದ ವಿಷಯವಲ್ಲ. ಇಂತಹ ಸಾಧನೆಯನ್ನು ಮಾಡಿದ ಚಿಣ್ಣರ ಬಿಂಬದ ರೂವಾರಿಗಳ ಕಾರ್ಯ ಅಭಿನಂದನೀಯವಾಗಿದೆ. ಚಿಣ್ಣರ ಬಿಂಬದ ನಾಡು-ನುಡಿ, ಆಚಾರ-ವಿಚಾರ ಇತ್ಯಾದಿ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಸದಾಯಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಸೆಂಟರ್‌ ಪಾಯಿಂಟ್‌ ಹೊಟೇಲ್‌ನ ಮಾಲಕ ದಿವಾಕರ ರೈ ಅವರು ಮಾತನಾಡಿ, ಚಿಣ್ಣರ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ನನಗೆ ಅತೀವ ಆನಂದವಾಗುತ್ತಿದೆ. ಇಂತಹ ಸಂಸ್ಥೆಗೆ ನಾನು ಮತ್ತು ನನ್ನ ಪರಿವಾರ ಋಣಿಗಳಾಗಿದ್ದೇವೆ. ಇದೊಂದು ಅಪೂರ್ವ ಸಂಸ್ಥೆಯಾಗಿದೆ. ಮಕ್ಕಳಿಗೆ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವುದರೊಂದಿಗೆ ಕನ್ನಡ ವನ್ನು ಕಲಿಸಿಕೊಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇದರಿಂದ ಮಕ್ಕಳಿಗೆ ಎಳವೆಯಲ್ಲೇ ಕನ್ನಡಾಭಿಮಾನ ಬೆಳೆಸಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಸ್ಮಿನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಮುಖ್ಯ ಆಡಳಿತ ನಿರ್ದೇಶಕ ಡಾ| ಸುರೇಂದ್ರ ಶೆಟ್ಟಿ ಅವರು ಮಾತನಾಡಿ, ನನಗೆ ಅಸೌಖ್ಯವಿದ್ದರೂ ಸಹ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಚಿಣ್ಣರ ಬಿಂಬದ ಮಕ್ಕಳಲ್ಲಿರುವ ಕನ್ನಡಾಭಿಮಾನವನ್ನು ನೋಡುವಾಗ ಹೃದಯ ತುಂಬಿ ಬರುತ್ತಿದೆ. ಚಿಣ್ಣರ ಬಿಂಬದಲ್ಲಿ ಮಕ್ಕಳೊಂದಿಗೆ ಪಾಲಕರು ಮತ್ತು ಪೋಷಕರು ಕೂಡಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷತೆಯಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಚಿಣ್ಣರ ಬಿಂಬದ ಪಾತ್ರ ಮಹತ್ತರವಾಗಿದ್ದು, ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ಚಿಣ್ಣರ ಬಿಂಬದ ಸತೀಶ್‌ ಸಾಲ್ಯಾನ್‌ ಅವರು ಮಾತನಾಡಿ, ಮುಂಬರುವ ಚಿಣ್ಣರ ಬಿಂಬದ 15ನೇ ವಾರ್ಷಿಕೋತ್ಸವ ಸಂಭ್ರಮದ ವಿವರಣೆ ನೀಡಿ, ವಿಜೇತ ಮಕ್ಕಳ ಹೆಸರನ್ನು ಘೋಷಿಸಿದರು. ವೇದಿಕೆಯಲ್ಲಿ ಚಿಣ್ಣರ ಬಿಂಬದ ಭಾಸ್ಕರ್‌ ಶೆಟ್ಟಿ ತಾಳಿಪಾಡಿಗುತ್ತು, ಕಲ್ಯಾಣ್‌ ಮತ್ತು ಡೊಂಬಿವಲಿ ಶಿಬಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಚರ್ಚಾಸ್ಪರ್ಧೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅತಿಥಿಗಳನ್ನು ಶ್ರದ್ಧಾ ಬಂಗೇರ ಮತ್ತು ತೃಶಾ ಶೆಟ್ಟಿ ಅವರು ಪರಿಚಯಿಸಿದರು. ವಿಕ್ರಮ್‌ ಪಾಟ್ಕರ್‌ ಮತ್ತು ಪವಿತ್ರಾ ದೇವಾಡಿಗ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳಿಗೆ ಛದ್ಮವೇಷ, ಭಾಷಣ, ಸಂಗೀತ, ಏಕಪಾತ್ರಾಭಿನಯ, ಪಾಲಕರಿಗೆ ಚರ್ಚಾ ಕಾರ್ಯಕ್ರಮ ನಡೆದಿದ್ದು, ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಡೊಂಬಿವಲಿ ಶಿಬಿರದ ಮುಖ್ಯಸ್ಥೆಯರಾದ ಮಂಜುಳಾ ಎಸ್‌. ಶೆಟ್ಟಿ, ಶಿಕ್ಷಕಿ ಸಂಧ್ಯಾ ಜೈನ್‌, ದೀಪಾ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆಯರಾದ ಶಾಂತಾ ಅಮೀನ್‌, ಸುನೀತಾ ಶೆಟ್ಟಿ, ಶಶಿ ಶೆಟ್ಟಿ, ಕಲ್ಯಾಣ್‌ ಶಿಬಿರದ ಮುಖ್ಯಸ್ಥೆ ರೇಖಾ ಆಚಾರ್ಯ, ಶಿಕ್ಷಕಿ ಮಂಗಳಾ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆ ಶುಭಲಕ್ಷ್ಮೀ ಕೊಪ್ಪಲ್‌, ಭಜನ ಮುಖ್ಯಸ್ಥೆ ಆಶಾ ನಾಯ್ಕ, ವಿಭಾಗದ ಮುಖ್ಯಸ್ಥರಾದ ಗೋಪಾಲ್‌ ಶೆಟ್ಟಿ, ಸವಿತಾ ಶೆಟ್ಟಿ, ಕಾರ್ಯಕತೆರ್ಯರಾದ ಗೌರಿ ಶೆಟ್ಟಿ, ಆಶಾ ಶೆಟ್ಟಿ, ಸುಧೀರ್‌ ಭಂಡಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಮಕ್ಕಳ ಈ ಸಾಧನೆಯಲ್ಲಿ ನಿಜವಾದ ವಿಜೇತರು ಮಕ್ಕಳ ಪಾಲಕರಾಗಿದ್ದಾರೆ. ಪಾಲಕರ ಸಹಾಯವಿಲ್ಲದೆ ನಾವು ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ. ಸಂಸ್ಥೆಯನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಲು ಸಹಕರಿಸಿದ ಎಲ್ಲರಿಗೂ ವಂದನೆಗಳು. ಎಲ್ಲಾ ಶಾಖೆಗಳಲ್ಲಿ ಮಕ್ಕಳಸಂಖ್ಯೆಯನ್ನು ಇನ್ನಷ್ಟು ವೃದ್ಧಿಸುವ ಕಾರ್ಯದಲ್ಲಿ ನಾವು ತೊಡಗಬೇಕು. ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವುದರಿಂದ ಸಮಾಜ ಸುಸಂಸ್ಕೃತವಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಲ್ಲಿ ಮಕ್ಕಳು ಉತ್ಸಾಹದಿಂದ ಆಗಮಿಸಿ ಕನ್ನಡ ಕಲಿಯುವಂತೆ ನಾವು ಮಾಡಬೇಕು. ಎಳವೆಯಿಂದಲೇ ಮಕ್ಕಳಲ್ಲಿ ನಾಡು-ನುಡಿ, ಸಂಸ್ಕೃತಿಯ ಅಭಿಮಾನ ಹೆಚ್ಚಾದಾಗ ಮಾತ್ರ ಅವರು ಆದರ್ಶ ಪ್ರಜೆಗಳಾಗಿ ಬಾಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗಬೇಕು 
-ಪ್ರಕಾಶ್‌ ಭಂಡಾರಿ 
   (ಚಿಣ್ಣರ ಬಿಂಬದ ರೂವಾರಿ).

ಟಾಪ್ ನ್ಯೂಸ್

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.