ಚಿಣ್ಣರ ಬಿಂಬ ಮಾಜಿವಾಡಾ ಆದಿಶಕ್ತಿ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ
Team Udayavani, Nov 11, 2018, 5:18 PM IST
ಮುಂಬಯಿ: ಮಾತೃ ಭಾಷೆಯಲ್ಲಿ ಕಲಿಸುವುದರಿಂದ ಮಕ್ಕ ಳಲ್ಲಿ ಸಂಸ್ಕೃತಿ-ಸಂಸ್ಕಾರಗಳ ಅರಿವು ಹೆಚ್ಚುತ್ತದೆ. ಇದರಿಂದಾಗಿ ಮಕ್ಕಳು ಪ್ರಬುದ್ಧರಾದಾಗ ಅವರಿಂದ ನಮ್ಮ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸುವುದ ರಲ್ಲಿ ಸಂಶಯವೇ ಇಲ್ಲ. ಚಿಕ್ಕ ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿದ್ದು, ಅರೆ ಗಳಿಗೆಯಲ್ಲಿ ಯಾವುದೇ ವಿಷಯಗಳನ್ನು ಅರ್ಥೈಯಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಇಂದು ಪಾಲ ಕರು ಮಾಡಬೇಕಾದ ಕಾರ್ಯವನ್ನು ಚಿಣ್ಣರ ಬಿಂಬವು ಮಾಡುತ್ತಿರುವುದು ಅಭಿನಂದನೀಯ ಎಂದು ಥಾಣೆ ಮಾಜಿವಾಡಾದ ಶ್ರೀ ಆದಿಶಕ್ತಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ನುಡಿದರು.
ಇತ್ತೀಚೆಗೆ ಆದಿಶಕ್ತಿ ಕನ್ನಡ ಶಾಲಾ ಸಭಾಗೃಹದಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಆದಿಶಕ್ತಿ ಮಾಜಿವಾಡಾ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಮೆಚ್ಚಿ, ಹಿತವಚನವನ್ನಿತ್ತು ಶುಭಹಾರೈಸಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಶಿಮಂತೂರು ಮಾತನಾಡಿ, ಚಿಣ್ಣರ ಬಿಂಬದ ಮೂಲಕ ಭಾಷೆ, ಸಂಸ್ಕೃತಿಯ ಅರಿವನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಚಿಣ್ಣರ ಬಿಂಬದ ಕಾರ್ಯವನ್ನು ಶ್ಲಾ ಸಿದರು.
ಪ್ರತಿಭಾ ಸ್ಪರ್ಧೆಯ ನಿರ್ಣಾಯಕ ರಾಗಿ ಆಗಮಿಸಿದ ಚಿಣ್ಣರ ಬಿಂಬದ ಕೇಂದ್ರ ಸಮಿತಿಯ ಗೀತಾ ಹೇರಾಳ ಮಾತನಾಡಿ, ಶಿಬಿರದ ಮಕ್ಕಳ ಶಿಸ್ತನ್ನು ಕಂಡು ಸಂತೋಷವಾಯಿತು. ಹೊಸ ಶಿಬಿರ ಎನ್ನುವುದು ಗೊತ್ತಾಗುವುದಿಲ್ಲ. ಪ್ರತಿಭಾ ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ ಎಂದರು.
ಇನ್ನೋರ್ವ ನಿರ್ಣಾಯಕರಾದ ನೆರೂಲ್ ಶಿಬಿರದ ಮುಖ್ಯಸ್ಥೆ ಭಾರತಿ ಹೆಗ್ಡೆ ಮಾತನಾಡಿ, ಮುಂದೆ ಅಡಿ ಇಟ್ಟಾಗ ವ್ಯಕ್ತಿ ಗುರಿ ತಲುಪಲು ಸಾಧ್ಯ ವಾಗುತ್ತದೆ. ಪಾಲಕರು ಮಕ್ಕಳ ಕನಸಿಗೆ ಪೂರಕವಾಗುವಂತೆ ಪ್ರೋತ್ಸಾಹಿಸಿದಾಗ ಮಾತ್ರ ವಿದ್ಯಾರ್ಥಿಗಳು ಗುರಿ ತಲು ಪಲು ಸಾಧ್ಯವಾಗುತ್ತದೆ ಎಂದರು.
ಶಿಬಿರದ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಶಿಬಿರವು ಪ್ರಾರಂಭಗೊಂಡು ಕೇವಲ ಎರಡು ತಿಂಗಳಾಗಿದ್ದು, ಸ್ವಲ್ಪ ಸಮಯದಲ್ಲೇ ಇಷ್ಟೊಂದು ಚಂದದ ಕಾರ್ಯಕ್ರಮ ಸಂಪನ್ನಗೊಳಿಸುವುದಕ್ಕೆ ಇಲ್ಲಿನ ಪಾಲಕ, ಪೋಷಕರೇ ಕಾರಣ. ಜತೆಗೆ ಚಿಣ್ಣರ ಬಿಂಬದ ಎಲ್ಲರ ಮಾರ್ಗದರ್ಶನ ಕಾರಣವಾಗಿದೆ ಎಂದು ಹೇಳಿದರು.
ಘೋಡ್ ಬಂದರ್ ರೋಡ್ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಇದರ ಸ್ಥಾಪಕ ಪ್ರಶಾಂತ್ ನಾಯಕ್, ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಸೀತಾರಾಮ ಶೆಟ್ಟಿ, ಅಶೋಕ್ ಮೂಲ್ಯ, ನವೋದಯ ಕನ್ನಡ ಸೇವಾ ಸಂಘದ ಜತೆ ಕೋಶಾಧಿಕಾರಿ ದಯಾನಂದ ಹೆಗ್ಡೆ, ಥಾಣೆ ಶಿಬಿರದ ಶಿಕ್ಷಕಿ ಜ್ಯೋತಿ ಶೆಟ್ಟಿ, ಮಾಜಿವಾಡಾ ಥಾಣೆ, ವಿಕ್ರೋಲಿ ವಿಭಾಗದ ಮುಖ್ಯಸ್ಥೆ ವಿನಯಾ ಶೆಟ್ಟಿ, ಶಿಬಿರದ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ, ಶಿಬಿರದ ಶಿಕ್ಷಕಿ ರೇಣುಕಾ ಬಿರಾದಾರ್, ಸಾಂಸ್ಕೃತಿಕ ಮುಖ್ಯಸ್ಥೆ ಸುನೀತಾ ಹೆಗ್ಡೆ, ಭಜನಾ ಶಿಕ್ಷಕಿ ಶೋಭಾ ಕೋಟ್ಯಾನ್ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸ್ಪರ್ಧೆಯನ್ನು ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಇಂದು ಶಿಬಿರದ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತಿದೆ. ಮಕ್ಕಳ ಉತ್ಸಾಹ, ಹುಮ್ಮಸ್ಸು, ಶ್ರದ್ಧೆ ಮನಸಿಗೆ ಆನಂದವನ್ನುಂಟು ಮಾಡುತ್ತಿದೆ. ಶಿಬಿರವು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ನುಡಿದು ಶುಭಹಾರೈಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.