ಚಿಣ್ಣರ ಬಿಂಬ ನಾರ್ಥ್-ಈಸ್ಟ್‌ ವಲಯ: ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ

Team Udayavani, Nov 29, 2018, 5:47 PM IST

2811mum01.jpg

ಮುಂಬಯಿ: ಹದಿನಾರು ವರ್ಷಗಳ ಹಿಂದೆ ಜನ್ಮತಾಳಿದ ಈ ಸಂಸ್ಥೆ ಇಂದು ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಅಲ್ಲಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಂಡು ಮುನ್ನಡೆಯು ತ್ತಿರುವುದು ಅಭಿಮಾನದ ಸಂಗತಿ. ಇದು ಅಷ್ಟೊಂದು ಸುಲಭದ ಕೆಲಸವಲ್ಲ. ಇದರ ಹಿಂದೆ ಪ್ರಕಾಶ್‌ ಭಂಡಾರಿ ಮತ್ತು ಅವರ ತಂಡದ ಹಾಗೂ ಮಕ್ಕಳ ಪಾಲಕ-ಪೋಷಕರ ಪರಿಶ್ರಮ ಬಹಳಷ್ಟಿದೆ. ಇಂದಿನ ಮಕ್ಕಳೇ ಭಾಗ್ಯವಂತರು. ತಮ್ಮ ಪ್ರತಿಭೆಯನ್ನು ಹೊರತರಲು ಅದಕ್ಕೆ ತಕ್ಕಂತೆ ವೇದಿಕೆ ಒದಗುತ್ತಿದೆ. ನಮಗೆ ಸಿಗದ ಸೌಲಭ್ಯಗಳು ಇಂದಿನ ಮಕ್ಕಳಿಗೆ ಚಿಣ್ಣರ ಬಿಂಬದ ಮುಖಾಂತರ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಭವಾನಿ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ನುಡಿದರು.

ಈ ಸಂಸ್ಥೆಯು ದೇಶಕ್ಕೆ ಭವ್ಯ ಪ್ರಜೆಗಳನ್ನು ನಿರ್ಮಿಸಿ ಕೊಡುತ್ತಿದೆ. ಹಾಗಾಗಿ ಮುಂಬಯಿ ಮಾತ್ರವಲ್ಲ ಮಹಾರಾಷ್ಟ್ರದಾದ್ಯಂತ ಎಲ್ಲೆಲ್ಲಿ ತುಳು-ಕನ್ನಡಿಗರು ನೆಲೆಸಿದ್ದಾರೋ ಅಲ್ಲಲ್ಲಿ ಚಿಣ್ಣರ ಬಿಂಬದ ಶಾಖೆಗಳು ಸ್ಥಾಪನೆಯಾಗಬೇಕು. ಆಗ ಮಾತ್ರ ಚಿಣ್ಣರ ಬಿಂಬದ ಶ್ರಮ ಸಾರ್ಥಕವಾಗುತ್ತದೆ ನ. 25 ರಂದು ಸಂಜೆ ಐರೋಲಿಯ ಜ್ಞಾನ ವಿಕಾಸ ಮಂಡಳ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ನಾರ್ಥ್-ಈಸ್ಟ್‌ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ರೂವಾರಿಗಳ ಜೊತೆ ಕಾರ್ಯಕರ್ತರು, ಪಾಲಕರು, ಪೋಷಕರು, ಹಳೆವಿದ್ಯಾರ್ಥಿಗಳು ಒಟ್ಟಾಗಿ ಒಮ್ಮತದಿಂದ ಕೈಜೋಡಿಸಿ, ಸಹಕಾರ, ಪ್ರೋತ್ಸಾಹ ನೀಡಿದಾಗ ಸಂಸ್ಥೆಯ ಮುಖಾಂತರ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಿದೆ ಎಂದು ನುಡಿದು ಶುಭಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ರಾಮ್‌ ಪ್ರಸಾದ್‌ ಮುಧೋಳಿ ಅವರು ಮಾತನಾಡಿ, ಜನ್ಮಭೂಮಿಯನ್ನು ಬಿಟ್ಟು ಕರ್ಮಭೂಮಿಯಲ್ಲಿ ನೆಲೆಸಿದರೂ ತಮ್ಮ ಮಕ್ಕಳಿಗೆ ಹುಟ್ಟೂರಿನ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಲು ಪ್ರೇರೇಪಿಸುವ ಪಾಲಕರ ಉತ್ಸಾಹವನ್ನು ಕಂಡು ಸಂತೋಷವಾಗುತ್ತಿದೆ. ಪ್ರಕಾಶ್‌ ಭಂಡಾರಿ ಮತ್ತು ಅವರ ಕುಟುಂಬ ಕೂಡಾ ಚಿಣ್ಣರ ಬಿಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿನಂದನೀಯ. ಇಂದು ಈ ಮಕ್ಕಳ ಉತ್ಸವದಲ್ಲಿ ಭಾಗಿಯಾಗಿರುವುದು ತನ್ನ ಭಾಗ್ಯ ಎಂದು ನುಡಿದು ಸಂತಸ ವ್ಯಕ್ತಪಡಿಸಿದರು.

ಹೊಟೇಲ್‌ ಉದ್ಯಮಿ ಸತೀಶ್‌ ಶೆಟ್ಟಿ ಅವರು ಮಾತನಾಡಿ, ಅಡುಗೆಯಲ್ಲಿ ಸ್ವಾದ ಬರಬೇಕಾದರೆ ಒಗ್ಗರಣೆ ಮುಖ್ಯ. ಹಾಗೆಯೇ ಮಕ್ಕಳು ಒಳ್ಳೆಯ ನಾಗರಿಕರಾಗಬೇಕಾದರೆ ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಲಿಸಬೇಕು. ಕಳೆದ 16 ವರ್ಷಗಳಿಂದ ಚಿಣ್ಣರ ಬಿಂಬ ಸಂಸ್ಥೆಯು ಈ ಕಾರ್ಯವನ್ನು ಮಾಡುತ್ತಿದೆ. ಮಕ್ಕಳನ್ನು ಆದರ್ಶ ಪ್ರಜೆಗಳಾಗಿ ರೂಪಿಸುವ ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.

ಮತ್ತೋರ್ವ ಅತಿಥಿ ವರ್ತಕ್‌ ನಗರ ಕನ್ನಡ ಸಂಘದ ಗೌರವ ಕಾರ್ಯದರ್ಶಿ ಶೇಖರ್‌ ಶೆಟ್ಟಿ ಇವರು ಮಾತನಾಡಿ, ನಮ್ಮೂರಿನ ಮಕ್ಕಳಿಗೆ ಮಹಾರಾಷ್ಟ್ರದಲ್ಲಿ ಸ್ಥಾಪನೆಗೊಂಡ ಈ  ಚಿಣ್ಣರ ಬಿಂಬವು ಕಳೆದ ಹದಿನಾರು ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ಎಲ್ಲಾ ಕಡೆ ಪಸರಿಸುತ್ತಿರುವುದು ಸಂತೋಷದ ವಿಷಯ. ಭಾಷೆ, ಕಲೆ, ಸಂಸ್ಕೃತಿಯನ್ನು ಕಲಿಸಿ ಮಕ್ಕಳ ಏಳ್ಗೆಗಾಗಿ ದುಡಿಯುವ ಈ ಸಂಸ್ಥೆ ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆಯಲಿ ಎಂದು ನುಡಿದು ಮಕ್ಕಳಿಗೆ ಶುಭಹಾರೈಸಿದರು.

ತೀರ್ಪುಗಾರರಾಗಿ ಆಗಮಿಸಿದ ರಮಾ ಉಡುಪ ಅವರು ಮಾತನಾಡಿ, ಇಂದು ರಜಾದಿವಾದರೂ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲಿ  ಯಾವುದೇ ರೀತಿಯ ಆಯಾಸವಿಲ್ಲದೆ ಲವಲವಿಕೆಯಿಂದ ಮಕ್ಕಳು ಸ್ಪರ್ಧಿಸಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದರಲ್ಲೂ ಭಜನೆ, ಶ್ಲೋಕಗಳನ್ನು ಸ್ಪಷ್ಟವಾಗಿ ಯಾವುದೇ ರೀತಿಯ ತಪ್ಪಿಲ್ಲದೆ ಹಾಡಿದ್ದನ್ನು ಕೇಳಿ ಆನಂದವಾಯಿತು ಎಂದರು.

ಇನ್ನೋರ್ವೆ ತೀರ್ಪುಗಾರ್ತಿ ತಾರಾ ಬಂಗೇರ ಅವರು ಮಾತನಾಡಿ, ಮಕ್ಕಳು ಕನ್ನಡವನ್ನು ಕಲಿತು ಇಂದು ಸ್ಪರ್ಧೆಯಲ್ಲಿ ಸ್ಪಷ್ಟವಾದ ಉಚ್ಚಾರದೊಂದಿಗೆ ಉತ್ತಮ ಅಭಿನಯದೊಂದಿಗೆ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಣ್ಣ ಸಣ್ಣ ಮಕ್ಕಳ ಉತ್ಸಾಹವನ್ನು ಕಂಡು ಸಂತೋಷವಾಯಿತು ಎಂದು ನುಡಿದರು.

ಇತರ ತೀರ್ಪುಗಾರರಾದ ಸುಜಾತಾ ಶೆಟ್ಟಿ, ಶೋಭಾ ಶೆಟ್ಟಿ, ಜಗದೀಶ್‌ ರೈ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಹೊಟೇಲ್‌ ಉದ್ಯಮಿಗಳಾದ ಅರುಣ್‌ ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಗೀತಾ ಹೇರಾಳ, ಬಾಲಕೃಷ್ಣ ಆದ್ಯಪಾಡಿ, ಹರೀಶ್‌ ಪಡುಬಿದ್ರೆ, ರಾಜೇಶ್ವರಿ ಶೆಟ್ಟಿ, ಶಾಂತಾ ಅಮೀನ್‌, ದೀಪಾ ಶೆಟ್ಟಿ, ಶಶಿಕಲಾ ಶೆಟ್ಟಿ, ಅನಿತಾ ಶೆಟ್ಟಿ, ಉಷಾ ಶೆಟ್ಟಿ, ವೀಣಾ ಭಟ್‌, ಸುಮತಿ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರನ್ನು ದೀಪಾ ಶೆಟ್ಟಿ ಪರಿಚಯಿಸಿದರು.
ಚಿಣ್ಣರ ಬಿಂಬದ ವಿನಯಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಜ್ಯೋತಿ ಶೆಟ್ಟಿ, ವಿಜಯಾ ಕೋಟ್ಯಾನ್‌ ಅವರು ತೀರ್ಪುಗಾರರನ್ನು ಗೌರವಿಸಿದರು. ಎಚ್‌ಎಸ್‌ಸಿ, ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಚಿಣ್ಣರ ಬಿಂಬದ ಮಕ್ಕಳನ್ನು ಗೌರವಿಸಲಾಯಿತು. ಪ್ರತಿಭಾವಂತ ಮಕ್ಕಳ ಯಾದಿಯನ್ನು ಕುಮುದಾ ಕೆ. ಆಳ್ವ ವಾಚಿಸಿದರು.

ಶೀರ್ಷಿಕಾ ಶೆಟ್ಟಿ, ದೀಕ್ಷಿತಾ ಶೆಟ್ಟಿ, ಅದಿತಿ ಶೆಟ್ಟಿ, ಮಂಥನ್‌ ಶೆಟ್ಟಿ, ಶ್ರೇಯಾ ಕಾಂಚನ್‌, ನಿಧಿ ಶೆಟ್ಟಿ, ವೈಷ್ಣವಿ ಶೆಟ್ಟಿ, ಹಂಸಿರಿ ರಾವ್‌, ಸಾಥ್ವಿಶ್ರೀ ಭಟ್‌, ಪ್ರಶೂಲ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಸನತ್‌ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ನೆರೂಲ್‌ ಶಿಬಿರದ ಮಕ್ಕಳು ಪ್ರಾರ್ಥನೆಗೈದರು. ನವ್ಯಶ್ರೀ ಭಟ್‌, ಪ್ರತೀಕ್ಷಾ ಭಟ್‌, ಶ್ರೇಯಸ್‌ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿತರಣ ಕಾರ್ಯಕ್ರಮವನ್ನು ಹರೀಶ್‌ ಪಡುಬಿದ್ರೆ ಅವರು ನೆರವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ಗೌರವಿಸಲಾಯಿತು. ಮಕ್ಕಳು-ಪಾಲಕರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿಣ್ಣರ ಬಿಂಬದ ಮಕ್ಕಳು ಪ್ರತಿಭಾನ್ವಿತರು. ಚಿಣ್ಣರ ಬಿಂಬದ ಮಕ್ಕಳಿಗೆ ಪ್ರತೀ ವರ್ಷ ದಕ್ಷಿಣ ಕನ್ನಡ ಸಾಧಕ ಪ್ರತಿಭಾ ಪುರಸ್ಕಾರ ಸಿಗುತ್ತಿರು ವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಪಾಲಕರು ಕೆಲಸನ ನಿಮಿತ್ತ ತಲ್ಲೀನರಾದರೂ ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಈ ಸಂಸ್ಥೆಗೆ ಕಳುಹಿಸಿಕೊಡುತ್ತಿರುವುದು 
ಸಂತೋಷದ ವಿಷಯ. 
– ಡಾ| ಶಿವ ಮೂಡಿಗೆರೆ, 
ಕಾರ್ಯಾಧ್ಯಕ್ಷರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ  ಕಟ್ಟಡ ಸಮಿತಿ

ಚಿಣ್ಣರ ಬಿಂಬ ಸ್ಥಾಪನೆಯಾಗಿ 16 ವರ್ಷಗಳು ಕಳೆದಿವೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಬಹುಮಾನ ಗಳಿಸುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಚಿಣ್ಣರ ಬಿಂಬ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಪಾಲಕರು ಕಾರಣ. ಮಕ್ಕಳನ್ನು ಒಳ್ಳೆಯ ನಾಗರಿ ಕರನ್ನಾಗಿ ಮಾಡುವ ಕೆಲಸವನ್ನು ಪಾಲಕರು ಮಾಡುತ್ತಿರುವುದು ಸಂತೋಷವಾಗುತ್ತಿದೆ.
– ಪ್ರಕಾಶ್‌ ಭಂಡಾರಿ, 
ಚಿಣ್ಣರ ಬಿಂಬದ ರೂವಾರಿ

ಟಾಪ್ ನ್ಯೂಸ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.