ಚಿಣ್ಣರ ಬಿಂಬ ಪೊವಾಯಿ:ಮಕ್ಕಳ ಸಾಂಸ್ಕೃತಿಕ ಉತ್ಸವ ಸಮಾರೋಪ


Team Udayavani, Oct 25, 2017, 11:22 AM IST

5.jpg

ಮುಂಬಯಿ: ಚಿಣ್ಣರ ಬಿಂಬವು ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸುವುದಲ್ಲದೆ ನಮ್ಮ ಊರಿನ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರದ ಕುರಿತಾದ ಚಿಂತನೆಯನ್ನು ತಿಳಿಹೇಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಬೇಕಾಗುವ ಎಲ್ಲಾ ತರಹದ ಶಿಕ್ಷಣವನ್ನು ಇಲ್ಲಿ ನೀಡುತ್ತಿರುವುದು ಒಳ್ಳೆಯ ಕಾರ್ಯ ಹಾಗೂ ಅದು ಇಂದಿನ ಅಗತ್ಯವೂ ಹೌದು. ಇಂತಹ ಮಹಾನ್‌ ಕಾರ್ಯವನ್ನು ಮಾಡುತ್ತಿರುವ ಚಿಣ್ಣರ ಬಿಂಬ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ದಿವ್ಯಾ ಸಾಗರ್‌ ಗ್ರೂಪ್‌ನ ಆಡಳಿತ ನಿರ್ದೇಶಕರಾದ ಮುದ್ರಾಡಿ ದಿವಾಕರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅ. 22ರಂದು ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ ಪೊವಾಯಿ ವಲಯದ ಚಿಣ್ಣರ ಸಾಂಸ್ಕೃತಿಕ ಉತ್ಸವದ ಸಮಾರೋಪ ಮತ್ತು ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ  ವಹಿಸಿ, ಹಿಂಗಾರ ಅರಳಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತಿದೆ. ಪ್ರಕಾಶ್‌ ಭಂಡಾರಿ ಅವರು ಚಿಣ್ಣರ ಬಿಂಬದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಸಹಕರಿಸ ಬೇಕಾದ ಅನಿವಾರ್ಯ  ಇದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುರೇಂದ್ರ ಕುಮಾರ್‌ ಹೆಗ್ಡೆ, ಚಿಣ್ಣರ ಬಿಂಬದಲ್ಲಿ ಮುಖ್ಯವಾಗಿ ಮಕ್ಕಳು ಜೀವನ ಮೌಲ್ಯವನ್ನು ಅರಿತುಕೊಳ್ಳಲು ಬೇಕಾದ ಜೀವನ ಪಾಠವನ್ನು ತಿಳಿಸುವುದೇ ನಮ್ಮ ಉದ್ದೇಶವಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮೌಲ್ಯಾಧಾರಿತ ತಳಕಟ್ಟನ್ನು ಭದ್ರಪಡಿಸಿಕೊಳ್ಳಬೇಕು. ಮಕ್ಕಳಿಗೆ ಅವರ ವ್ಯಕ್ತಿತ್ವವನ್ನು ರೂಪಿಸುವ ಕಲೆಯನ್ನು ಚಿಣ್ಣರ ಬಿಂಬ ಕಲಿಸಿಕೊಡುತ್ತಿದೆ ಎಂದರು.

ಬಂಟರ ಸಂಘದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜ್ಞಾನಮಂದಿರದ ಕಾರ್ಯಾಧ್ಯಕ್ಷರಾದ  ಚಂದ್ರಹಾಸ ರೈ ಬೊಳ್ನಾಡುಗುತ್ತು ಅವರು ಮಾತನಾಡಿ, ಚಿಣ್ಣರ ಬಿಂಬದ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ನೋಡಿಕೊಂಡು ಬಂದಿದ್ದೇನೆ. ಇಂದು ನಮ್ಮಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಕಾಣೆಯಾಗುತ್ತಿದೆ. ಚಿಣ್ಣರ ಬಿಂಬದಲ್ಲಿ ಕೂಡುಕುಟುಂಬದ ಅನುಭವವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚತಕ್ಕದ್ದು ಎಂದು ಅವರು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಘಾಟ್ಕೊàಪರ್‌ ವಲಯದ ಉಪಾಧ್ಯಕ್ಷರಾದ ಸುಧಾಕರ ಪೂಜಾರಿ ಅವರು ಜಗತ್ತಿನಾದ್ಯಂತ ಈ ಸಂಸ್ಥೆಯ ಹೆಸರು ರಾರಾಜಿಸಬೇಕು. ಈ ಸಂಸ್ಥೆಯ ಮಕ್ಕಳ, ಪಾಲಕರ ಉತ್ಸಾಹವನ್ನು ಕಂಡು ಬೆರಗಾಗಿದ್ದೇನೆ. ನಮ್ಮ ಪರಿಸರದ ಅನೇಕ ಮಕ್ಕಳು ಚಿಣ್ಣರ ಬಿಂಬದಿಂದ ಬೆಳಕಿಗೆ ಬಂದಿದ್ದಾರೆ. ಇಲ್ಲಿ ಮೇಲು-ಕೀಳು ಎಂಬ  ಭೇದಭಾವ ಇಲ್ಲದೆ ಏಕತೆ ಮೈಗೂಡಿಸಿಕೊಂಡಿರು ವುದು  ವಿಶಿಷ್ಟವಾದುದು ಎಂದು ನುಡಿದರು.

ವೇದಿಕೆಯಲ್ಲಿ  ಪ್ರಕಾಶ್‌ ಭಂಡಾರಿ, ರೇಣುಕಾ ಭಂಡಾರಿ, ರಮೇಶ್‌ ರೈ, ಸವಿತಾ ಕೆ. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಪ್ರೇಮಾ ಶೆಟ್ಟಿ, ಅನಿತಾ ಎಸ್‌. ಶೆಟ್ಟಿ, ಆಶಾ ಶೆಟ್ಟಿ,  ವಿಜಯ ಕೋಟ್ಯಾನ್‌, ಜಯಪ್ರಕಾಶ್‌ ಶೆಟ್ಟಿ, ಅಮಿತ್‌ ಶೆಟ್ಟಿ ಉಪಸ್ಥಿತರಿದ್ದರು.

ಈ ಪ್ರತಿಭಾ ಸ್ಪರ್ಧೆಯಲ್ಲಿ ಚಿಣ್ಣರಿಗಾಗಿ ಛದ್ಮವೇಷ ಸ್ಪರ್ಧೆ, ಏಕಪಾತ್ರಾಭಿನಯ, ಚರ್ಚಾಸ್ಪರ್ಧೆ, ಭಾವಗೀತೆ, ಜಾನಪದಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಡಾ| ಕರುಣಾಕರ ಶೆಟ್ಟಿ, ಪಣಿಯೂರು,  ಗೀತಾ ಎಲ್‌. ಭಟ್‌, ನಾಗರಾಜ ಗುರುಪುರ ಹಾಗೂ ಬಾಬಾ ಪ್ರಸಾದ್‌ ಅರಸ ಅವರು ತೀರ್ಪುಗಾರರಾಗಿ ಸಹಕರಿಸಿದರು.

ಉಮಾಮಹೇಶ್ವರಿ ಹಾಗೂ ಎಸ್‌. ಎಂ. ಶೆಟ್ಟಿ ಶಿಬಿರದ ಕಳೆದ ಶೆ„ಕ್ಷಣಿಕ ವರ್ಷದ ಎಸ್‌ಎಸ್‌ಸಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಚಿಣ್ಣರ ಬಿಂಬದ ಹಳೆ ವಿದ್ಯಾರ್ಥಿಗಳಾದ ಕುಮಾರಿ ಅಂಕಿತಾ ರಮೆಶ್‌ ರೈ ಹಾಗೂ ಅಶ್ವಿ‌ನಿ ಸಂಜೀವ ಪೂಜಾರಿ ಅವರ ನಿರ್ದೇಶನದಲ್ಲಿ ಎಸ್‌. ಎಂ. ಶೆಟ್ಟಿ ಶಿಬಿರ ಹಾಗೂ ಉಮಾಮಹೇಶ್ವರಿ ಶಿಬಿರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಏರ್ಪಟ್ಟಿತು. ಚಿಣ್ಣರಾದ ಶ್ರೀಕೃಷ್ಣ ಉಡುಪ ಹಾಗೂ ಅಂಕಿತಾ ಪೂಜಾರಿ ಅವರು ಅಭಿನಯಿಸಿದ ರಾವಣನ ಜನ್ಮ ರಹಸ್ಯ ಎಂಬ ಪ್ರಹಸನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿಶೇಷ ಆಕರ್ಷಣೆಯಾಗಿ ಪಾಲಕರಿಗಾಗಿ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚರ್ಚೆಯ ಸಮನ್ವಯಕರಾಗಿ ಸತೀಶ್‌ ಸಾಲ್ಯಾನ್‌ ಅವರು ಸಹಕರಿಸಿದರು.

ಕುಮಾರಿ ಜೀವಿಕಾ ಶೆಟ್ಟಿ, ಶೈನಿ ಶೆಟ್ಟಿ, ಭೂಮಿಕಾ ಸಾಲ್ಯಾನ್‌ ಅತಿಥಿಗಳನ್ನು ಪರಿಚಯಿಸಿದರು.  ಆಯುಷ್‌ ಶೆಟ್ಟಿ, ಮಾನಸ ದೇವಾಡಿಗ, ನಿರೀûಾ ರಾವ್‌ ಹಾಗೂ ಜೀವಿಕಾ ಶೆಟ್ಟಿ ಪ್ರಾರ್ಥನೆಗೈದರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್‌ ಸಾಲ್ಯಾನ್‌ ಸ್ಪರ್ಧಾ ವಿಜೇತರ ಯಾದಿಯನ್ನು ಓದಿ ವಂದಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಪ್ರಕಾಶ್‌ ಭಂಡಾರಿ ಅವರ ನೇತೃತ್ವದಲ್ಲಿ ಸಂಜೀವ ಪೂಜಾರಿ ತೋನ್ಸೆ, ಅನಿತಾ ಯು. ಶೆಟ್ಟಿ, ಸರಸ್ವತಿ ದೇವಾಡಿಗ, ಪದ್ಮಿನಿ ಶೆಟ್ಟಿ, ಸರೋಜಾ ಶೆಟ್ಟಿ, ಅನಿತಾ ಎಸ್‌. ಶೆಟ್ಟಿ, ಸವಿತಾ ಶೆಟ್ಟಿ, ಅರುಣಾ ಶೆಟ್ಟಿ, ಪ್ರಶಾಂತಿ ಶೆಟ್ಟಿ, ಶಾಂತಿಲಕ್ಷ್ಮಿ ಉಡುಪ, ಶೋಭಾ ಶೆಟ್ಟಿ, ಕವಿತಾ ಶೆಟ್ಟಿ, ಶ್ವೇತಾ ಶೆಟ್ಟಿ, ಪೇತ್ರಿ ವಿಶ್ವನಾಥ ಶೆಟ್ಟಿ, ಭಾಸ್ಕರ ಸುವರ್ಣ ಸಸಿಹಿತ್ಲು, ರವಿ ಹೆಗ್ಡೆ, ವಿಜಯ  ಸಂಜೀವ ಪೂಜಾರಿ, ಶೋಭಾ ರಮೇಶ್‌ ರೈ,  ಪ್ರವೀಣಿ ಸಾಲ್ಯಾನ್‌, ಪುಷ್ಪಾ ಶೆಟ್ಟಿ, ಪ್ರೇಮಾ ಶೆಟ್ಟಿ, ರೇಖಾ ಶೆಟ್ಟಿ, ಚಿತ್ರಾ ಪೇತ್ರಿ ವಿಶ್ವನಾಥ ಶೆಟ್ಟಿ, ಶಕುಂತಳಾ ಶೆಟ್ಟಿ, ಕುಮಾರಿ ಸುವರ್ಣ, ಶೈಲಜಾ ಪೂಜಾರಿ, ಶೈಲಾ ಶೆಟ್ಟಿ, ಅಮಿತ್‌ ಶೆಟ್ಟಿ, ನಾರಾಯಣ ದೇವಾಡಿಗ, ಮಂಜುನಾಥ್‌ ದೇವಾಡಿಗ, ಉಮೇಶ್‌ ದೇವಾಡಿಗ, ರಾಜೇಶ್‌ ಶೆಟ್ಟಿ, ನಾಗರಾಜ್‌ ಪೂಜಾರಿ ಮೊದಲಾದವರು ಸಹಕರಿಸಿದರು.

ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯನ್ನು ಕಂಡು ಆನಂದವಾಗಿದೆ. ನಾವು ಚಿಕ್ಕವರಿದ್ದಾಗ ನಮಗೆ ಇಂತಹ ಯಾವುದೇ ಶಿಕ್ಷಣ ದೊರೆತಿರಲಿಲ್ಲ. ನಮ್ಮಲ್ಲಿ ಪ್ರತಿಭೆ ಇತ್ತೋ ಇಲ್ಲವೋ ಅದನ್ನು ತೋರ್ಪ ಡಿಸಲು ನಮಗೆ ವೇದಿಕೆ ದೊರೆತಿರಲಿಲ್ಲ. ಶಾಲಾ ಕಾಲೇಜಿನಲ್ಲಿ ದೊರೆಯದ ಅವಕಾಶಗಳು ಚಿಣ್ಣರಿಗೆ ಇಲ್ಲಿ ದೊರೆಯುತ್ತಿವೆೆ. ಒಳ್ಳೆಯ ವೇದಿಕೆಗಳನ್ನು ಪ್ರಕಾಶ್‌ ಭಂಡಾರಿ ಅವರು ಕಲ್ಪಿಸಿಕೊಡುತ್ತಿದ್ದಾರೆ. ಚಿಣ್ಣರ ಬಿಂಬ ಸಂಸ್ಥೆ  ಎಲ್ಲಾ ಸಂಸ್ಥೆಗಳಿಗಿಂತ ಒಂದು ಭಿನ್ನವಾದ  ಸಂಸ್ಥೆ. ಅದರ ಸದುಪಯೋಗವನ್ನು ಎಲ್ಲ ತುಳು-ಕನ್ನಡಿಗರು ಪಡೆದುಕೊಳ್ಳಬೇಕು. ಮಕ್ಕಳು ಇಂತಹ ಶಿಬಿರಗಳ ಪ್ರಯೋಜನವನ್ನು ಪಡೆದುಕೊಂಡು ಸುಸಂಸ್ಕೃತರಾಗಿ ಬೆಳೆಯಬೇಕು 
–  ಸತೀಶ್‌ ಶೆಟ್ಟಿ  (ಆಡಳಿತ ನಿರ್ದೇಶಕರು,  ಹೊಟೇಲ್‌ ಪೆನಿನ್‌ಸುಲಾ ಗ್ರ್ಯಾಂಡ್‌ ).

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.