ಚಿಣ್ಣರಬಿಂಬ ಮುಂಬಯಿ: ಘೋಡ್‌ಬಂದರ್‌ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ


Team Udayavani, Sep 28, 2018, 4:56 PM IST

2709mum12a.jpg

ಮುಂಬಯಿ: ಚಿಣ್ಣರಬಿಂಬ ಮುಂಬಯಿ ಇದರ ಘೋಡ್‌ಬಂದರ್‌ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆಯು ಸೆಪ್ಟಂಬರ್‌ 22ರಂದು ರುತ್‌ ಎನ್‌ಕ್ಲೇವ್‌ನ ಚಿನ್ಮಯ ಮಿಶನ್‌ನಲ್ಲಿ ಜರುಗಿತು. ಚಿಣ್ಣರ ಭಜನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ  ಮಕ್ಕಳಿಗಾಗಿ ಶ್ಲೋಕ, ಭಾವಗೀತೆ, ಏಕಪಾತ್ರಾಭಿ ನಯ, ಚರ್ಚಾ ಸ್ಪರ್ಧೆಗಳು ನಡೆಯಿತು. ಆನಂತರ ಅತಿಥಿ- ಞಗಣ್ಯರ ದೀಪಪ್ರಜ್ವಲನೆ ಹಾಗೂ ಚಿಣ್ಣರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ನೆರವೇರಿತು.

ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್‌ ಭಂಡಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಚಿಣ್ಣರ ಬಿಂಬದ ಮುಖ್ಯ ಉದ್ದೇಶ ಕೇವಲ ಕನ್ನಡ ಕಲಿಸುವುದು ಮಾತ್ರವಲ್ಲ  ಅದರೊಟ್ಟಿಗೆ ಮುಖ್ಯವಾಗಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸು ವುದು. ಮಕ್ಕಳಿಗೆ ಜೀವನದಲ್ಲಿ ಶಿಸ್ತಿನ ಮಹತ್ವಗೊತ್ತಿರಬೇಕು. ಆವಾಗಲೇ ಅವರ ಬಾಳ್ವೆ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿ ವರ್ಷ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನು ಪ್ರತಿ ಶಿಬಿರದಲ್ಲಿ ನೀಡಲಾಗುತ್ತದೆ. ಆದರೆ ಇಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ. ಪಾಲಕರು ಆಸಕ್ತಿ ವಹಿಸಿ ಮಕ್ಕಳಿಗೆ ಮನವರಿಕೆ ಮೂಡಿಸಿ ಅಭ್ಯಾಸ ಮಾಡಿಸಬೇಕು. ಸ್ಪರ್ಧೆಯಲ್ಲಿ  ಭಾವಹಿಸುವಾಗ ಕೇವಲ ಕಂಠಪಾಠ ಮಾಡಿ ಹೇಳುವುದಕ್ಕಿಂತ ವಿಷಯದ ಅರ್ಥವನ್ನು ತಿಳಿದುಕೊಂಡು ಕಲಿತರೆ ಅಂತಹ ಮಕ್ಕಳು ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಬಲ್ಲರು.  ದಿ| ಪ್ರೊ. ಸೀತಾರಾಮ ಶೆಟ್ಟಿಯವರಿಂದ ಆರಂಭಗೊಂಡ ಘೋಡ್‌ಬಂದರ್‌ ಶಿಬಿರವು ಈ ಪರಿಸರದ ಎಲ್ಲಾ ಕನ್ನಡಿಗರಿಂದಾಗಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಈ ಶಿಬಿರದಲ್ಲಿ ಇನ್ನಷ್ಟು ಹೆಚ್ಚು ಮಕ್ಕಳು ಸೇರ್ಪಡೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸು ವಂತಾಗಲಿ ಎಂದು ಹಾರೈಸಿ ಮಕ್ಕಳ ಜೊತೆ ಸಂವಾದವನ್ನು ನಡೆಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಉದ್ಯಮಿ ರವೀಂದ್ರ ಶೆಟ್ಟಿಯವರು ಮಾತ ನಾಡಿ, ಮುಂಬಯಿಯಂತಹ ಮಹಾ ನಗರದಲ್ಲಿ ಇಂದು ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಸಂಸ್ಥೆಯೇ ಚಿಣ್ಣರ ಬಿಂಬ. ಇದರ ಹಿಂದೆ ನಿಸ್ವಾರ್ಥ ಭಾವನೆಯಿಂದ ದುಡಿಯುವ ಪ್ರಕಾಶ್‌ ಭಂಡಾರಿ, ಶಿಕ್ಷಕರು ಹಾಗೂ ಇತರ ಕಾರ್ಯಕರ್ತರು ಅಭಿನಂದಾನರ್ಹರು. ಇಲ್ಲಿ ಪಾಲಕರ ಸ್ವಯಂ ಸ್ಪೂರ್ತಿ ತುಂಬಾ ಮುಖ್ಯ. ಶಾಲಾ ಒತ್ತಡದ ನಡುವೆಯೂ ಮಕ್ಕಳಿಗೆ ಕನ್ನಡದ ಭಾಷೆ, ಭಜನೆ ಇತ್ಯಾದಿ ಇತರ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸುವುದು ಹೆಮ್ಮೆ ಪಡುವಂತಹ ವಿಷಯ. ಇಂದು ಮಕ್ಕಳ ವಿವಿಧ ಸ್ಪರ್ಧೆಗಳನ್ನು ನೋಡಿ ಮನಸ್ಸಿಗೆ ತುಂಬಾ ಹಿತವಾಯಿತು. ಇಂತಹ ಸ್ಪರ್ಧೆಗಳಿಂದ ಮಕ್ಕಳ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು. ಹಾಗೆಯೇ ಮಕ್ಕಳಿಗೆ ಸ್ಪರ್ಧೆಗೆ  ಯಾವ ರೀತಿ ಸಿದ್ಧತೆಗಳನ್ನು ಮಾಡಬೇಕು ಮತ್ತು ವೇದಿಕೆಯಲ್ಲಿ ಹೇಗೆ ಪ್ರಸ್ತುತಪಡಿಸಬೇಕು. ಈ ಶಿಬಿರದ ಮಕ್ಕಳಿಗೆ ತನ್ನಿಂದ ಆದಷ್ಟು ಸಹಕಾರ ನೀಡುತ್ತಿರುತ್ತೇನೆ. ಚಿಣ್ಣರ ಉಜ್ವಲ ಭವಿಷ್ಯಕ್ಕೆ ಚಿಣ್ಣರ ಬಿಂಬವು ದಾರಿದೀಪವಾಗಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿ ಘೋಡ್‌ ಬಂದರ್‌ ಕನ್ನಡ ಸಂಘದ ಅಧ್ಯಕ್ಷರಾದ ವಿಕ್ರಮಾನಂದ ಶೆಟ್ಟಿಯವರು ಮಾತ ನಾಡಿ, ಘೋಡ್‌ಬಂದರ್‌ ಚಿಣ್ಣರ ಬಿಂಬವು ಕಳೆದ ಆರು ವರ್ಷಗಳಿಂದ ಬಹಳ  ಒಳ್ಳೆಯ  ರೀತಿಯಲ್ಲಿ ನಡೆಯುತ್ತಾ ಬಂದಿದೆ.  ಇದರ ಏಳಿಗೆಗಾಗಿ ಶ್ರೀಯುತ  ಪ್ರಕಾಶ ಭಂಡಾರಿಯವರ ಸಹಿತ ಇಲ್ಲಿಯ ಶಿಕ್ಷಕರು, ಪದಾಧಿಕಾರಿಗಳು, ಪಾಲಕರು ಶ್ರಮಿಸುತ್ತಿದ್ದಾರೆ. ಇಂತಹ ಒಂದು ಉತ್ತಮ ಕೆಲಸ ಮಾಡುವ ಈ ಸಂಸ್ಥೆಗೆ ಈ ಪರಿಸರದ ಕನ್ನಡಿಗರು  ಆದಷ್ಟು ತಮ್ಮ ಮಕ್ಕಳನ್ನು ಚಿಣ್ಣರಬಿಂಬಕ್ಕೆ  ಕಳುಹಿಸಿ ಇದರ ಸದುಪಯೋಗವನ್ನು ಪಡೆಯ ಬೇಕೆಂದು ಸಭಿಕರಲ್ಲಿ ಕೇಳಿಕೊಂಡರು. ಚಿಣ್ಣರಬಿಂಬವು ಚಿನ್ನದಂತಹ ಮಕ್ಕಳನ್ನು ಸೃಷ್ಟಿಸುತ್ತಿರಲಿ. ನಮ್ಮ ಸಹಕಾರ ಸದಾ ಈ ಸಂಸ್ಥೆಗೆ ಇದೆ ಎಂದು ಆಶ್ವಾಸನೆಯಿತ್ತರು.

ತೀರ್ಪುಗಾರಗಾಗಿ ಆಗಮಿಸಿದ ಡಾ| ಕರುಣಾಕರ ಶೆಟ್ಟಿಯವರು ಮಾತನಾಡಿ,  ಕನ್ನಡಕ್ಕೆ ಉಳಿವಿಲ್ಲ, ಮರಾಠಿ ಮಣ್ಣಿನಲ್ಲಿ ಕನ್ನಡಕ್ಕೆ ಭವ್ಯ ಭವಿಷ್ಯವಿದೆ. ಚಿಣ್ಣರ ಬಿಂಬದಂತಹ ಸಂಸ್ಥೆ ಇಂದು ಪ್ರಕಾಶ್‌ ಭಂಡಾರಿಯವರ ನೇತೃತ್ವದಲ್ಲಿ  ಮಾಡುತ್ತಿರುವ ಕೆಲಸ ಇದಕ್ಕೆ ಸಾಕ್ಷಿಯಾಗಿದೆ. ಚಿಣ್ಣರ ಬಿಂಬದ ಮಕ್ಕಳು ಉತ್ತಮ ಪ್ರಜೆಗಳಾಗಿ  ಭವ್ಯ ಭವಿಷ್ಯವನ್ನು ಹೊಂದಲಿ ಎಂದು ಆಶೀರ್ವದಿಸಿದರು.

ಇನ್ನೋರ್ವ ತೀಫುìಗಾರರಾದ ಸೂರಪ್ಪ ಕುಂದರ್‌ ಅವರು ಇಂಗ್ಲೀಷ್‌  ಮೀಡಿಯಂನಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡಭಾಷೆಯಲ್ಲಿ ಹಾಡಿ, ಅಭಿನಯಿಸಿ, ಚರ್ಚಿ ಸುವುದನ್ನು ನೋಡಿ ತುಂಬಾ ಸಂತೋಷ ವಾಯಿತು. ಮಕ್ಕಳಿಗೆ  ಇಂತಹ  ವೇದಿಕೆಯನ್ನು  ಒದಗಿಸಿ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ  ಚಿಣ್ಣರ ಬಿಂಬ ಮತ್ತು ಅದರ ರೂವಾರಿ ಪ್ರಕಾಶ್‌ ಭಂಡಾರಿಯವರ ಕಾರ್ಯ ಶ್ಲಾಘನೀಯವಾದುದು. ಚಿಣ್ಣರ
ಬಿಂಬವು ಇನ್ನಷ್ಟು ಯಶಸ್ಸನ್ನು  ಪಡೆ ಯಲಿ ಎಂದು ಶುಭಕೋರಿದರು.

ಉದ್ಯಮಿ  ಲಕ್ಷ್ಮಣ ಮಣಿಯಾನಿ, ವಸಂತ ಸಾಲ್ಯಾನ್‌, ವಲಯ ಮುಖ್ಯಸ್ಥೆ ನೀತಾ ಆರ್‌. ಶೆಟ್ಟಿ, ಮುಖ್ಯಸ್ಥೆ ಸುಮತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಜಯಲಕ್ಷಿ¾à ಶೆಟ್ಟಿ, ಹರೀಶ್‌ ಸಾಲ್ಯಾನ್‌, ಪ್ರಶಾಂತ್‌ ನಾಯಕ್‌, ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು.  ಹಳೆ ವಿದ್ಯಾರ್ಥಿ ಶಿಖಾ ಕೆ. ಆಳ್ವರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶೂಲ್‌ ಶೆಟ್ಟಿ ಮತ್ತು ಸಾಯಿ ನಿಶಾಂತ್‌ ಸಾಲ್ಯಾನ್‌ ಅವರು ಅತಿಥಿಗಳನ್ನು ಪರಿಚಯಿಸಿದರು. 

ಸುಮಲತಾ ಶೆಟ್ಟಿ ಮತ್ತು ಜಯಲಕ್ಷ್ಮೀ  ಶೆಟ್ಟಿ ತೀರ್ಪುಗಾರರನ್ನು ಪರಿಚಯಿಸಿದರು. ಅನ್ಸಾ ಶೆಟ್ಟಿ, ವಿಶ್ವ ಶೆಟ್ಟಿ, ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಮುದಾ ಕೆ. ಆಳ್ವ, ಸುಮಲತಾ ಶೆಟ್ಟಿ, ರೂಪಾ ಪೂಜಾರಿ, ಮಾಯಾ ಮನೋಜ್‌, ನಿತ್ಯಾನಂದ ಬೆಳುವಾಯಿ, ಸೀತಾರಾಮ ಶೆಟ್ಟಿ, ಚಂದ್ರಕಲಾ ಬಂಗೇರ, ಶಾಲಿನಿ ಆಚಾರ್‌, ಅಮಿತಾ ರೈ, ಲತಾ ಶೆಟ್ಟಿ, ಜಯಶ್ರೀ ಶೆಟ್ಟಿ, ಪ್ರವೀಣ ಸಾಲ್ಯಾನ್‌, ಗೀತಾ, ಪ್ರವೀತಾ ಸಾಲ್ಯಾನ್‌, ಉಷಾ, ಸ್ವಪ್ನ ಭಟ್‌ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಬಿರ ಮುಖ್ಯಸ್ಥೆ  ಸುಮತಿ ಶೆಟ್ಟಿ ವಂದಿಸಿದರು.

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. Thumbay Moideen awarded with prestigious Global Visionary NRI Award

ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆಗಳು

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.