ಕರ್ನಾಟಕದ ಕರಾವಳಿ ಜನ ಚತುರರು: ಐ.ಆರ್. ಶೆಟ್ಟಿ
Team Udayavani, Nov 3, 2019, 6:09 PM IST
ಮುಂಬಯಿ, ನ. 2: ದಕ್ಷಿಣ ಭಾರತೀಯರಲ್ಲಿ ಅದರಲ್ಲೂ ಕರ್ನಾಟಕದ ಕರಾವಳಿ ಜನತೆ ಅಸಾಮಾನ್ಯ ಬುದ್ಧಿವಂತರು ಮತ್ತು ಅಪ್ರತಿಮ ಚತುರರು. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ವಿಶ್ವಪ್ರಿಯವಾಗಿದ್ದರೂ ಅದರ ವ್ಯವಸ್ಥೆ ಅಭಿವೃದ್ಧಿ ಸರಿಯಾಗಿ ಕಾರ್ಯಗತವಾಗದಿರುವುದರಿಂದ ದೇಶದ ಜನಸಂಖ್ಯೆಯ ಶೇ. 50ರಷ್ಟು ಸುಶಿಕ್ಷಿತರಿದ್ದರೂ ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ನಮ್ಮವರ ಅರಿವಿನ ಸದುಪಯೋಗ ಸರಿಯಾಗಿ ಆಗುತ್ತಿಲ್ಲ ಅನ್ನುವುದನ್ನು ಇದರಿಂದ ತಿಳಿಯಬಹುದಾಗಿದೆ. ಭಾರತೀಯರಲ್ಲಿ ಸಾವಿರಾರು ಮೇಧಾವಿಗಳು ವಿಶ್ವದ ಶ್ರೇಷ್ಠ ಉದ್ಯಮಶೀಲರಾಗಿದ್ದಾರೆ. ಅಂದರೆ ವಿದ್ಯೆಯೊಂದಿದ್ದರೆ ಉದ್ಯಮಶೀಲರಾಗಲು ಬಂಡವಾಳದ ಅಗತ್ಯವೂ ಇಲ್ಲ ಅನ್ನುವುದಕ್ಕೆ ಇವರೇ ಸಾಕ್ಷಿ ಎಂದು ಮುಂಬಯಿ ಪ್ರತಿಷ್ಠಿತ ಲೆಕ್ಕ ಪರಿಶೋಧಕ, ಜುಹೂ ಅಂಧೇರಿ ವಸೋವಾ ವಿಲೇಪಾರ್ಲೆ ಅಸೋಸಿಯೇಶನ್ ಆಫ್ ಬಂಟ್ಸ್ ಅಧ್ಯಕ್ಷ ಸಿ ಎ ಐ.ಆರ್. ಶೆಟ್ಟಿ ನುಡಿದರು.
ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆಯು ಶನಿವಾರ ಸಂಜೆ ಸಾಂತಕ್ರೂಜ್‌ನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಆಯೋಜಿಸಿದ್ದ ಟ್ರಸ್ಟ್‌ನ ವಿದ್ಯಾನಿಧಿ ಯೋಜನಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ-ವಿದ್ಯಾರ್ಥಿ ವೇತನ ಪ್ರದಾನ ತ್ರಿವಳಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೂರ್ವಜರು
ಪಾರಂಪರಿಕವಾಗಿ ನಂಬಿ ಶ್ರದ್ಧಾಭಕ್ತಿಯಿಂದ ನಡೆಸಿಬಂದ ಗರೋಡಿಗಳಂತಹ ಧಾರ್ಮಿಕ ಸ್ಥಾನಗಳನ್ನು ಮುನ್ನಡೆಸುವುದು ನಮ್ಮ ಕರ್ತವ್ಯ ಆಗಬೇಕು ಎಂದರು.
ಗರೋಡಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ. ಅಮೀನ್‌ಉಪಸ್ಥಿತರಿದ್ದು ಟ್ರಸ್ಟ್‌ನ ವಿದ್ಯಾನಿಧಿ ಯೋಜನೆಗೆ ಚಾಲನೆಯನ್ನಿತ್ತರು. ಅತಿಥಿವರ್ಯರು ಹಿರಿಯ ಸಾಧಕರಾದ ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ತೋನ್ಸೆಯ ಸಾಧಕರಾದ ಎಂಟಿಎನ್‌ಎಲ್‌ನ ನಿವೃತ್ತ ಅಧಿಕಾರಿ ಗೋಪಾಲ್ ಪಾಲನ್ ಕಲ್ಯಾಣುರ ಮತ್ತು ಸರಸ್ವತಿ ಗೋಪಾಲ್, ಆರ್‌ಬಿಐನ ನಿವೃತ್ತ ಅಧಿಕಾರಿ ವಿ.ಸಿ. ಪೂಜಾರಿ ಮತ್ತು ಗಿರಿಜಾ ವಿ. ಪೂಜಾರಿ, ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಿನೆಮಾ ವಿಭಾಗದ ಅಧಿಕಾರಿ ಭಾರತಿ ಎಸ್. ಸುವರ್ಣ ಮತ್ತು ಸುಧೀರ್ ಎಸ್. ಸುವರ್ಣ ದಂಪತಿಯನ್ನು ಸಮ್ಮಾನಿಸಿದರು ಹಾಗೂ ಗತ ಎಸ್ ಎಸ್‌ಸಿ-ಎಚ್‌ಎಸ್ ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನಿಸಿದರು. ಪುರಸ್ಕೃತರು ಸಂದಭೋಚಿತವಾಗಿ ಮಾತನಾಡಿ ಅಭಿವಂದಿಸಿದರು.
ವಿದ್ಯಾದಾನವು ಒಂದು ಪುಣ್ಯಾಧಿಕಾಯಕ ಅದಕ್ಕಾಗಿನ ವಿದ್ಯಾನಿಧಿ ಕಾರ್ಯಕ್ರಮ ಪೂರಕವಾದುದು. ಮಕ್ಕಳು
ಎಷ್ಟು ಶಿಕ್ಷಿತರಾಗಿರುತ್ತಾರೋ ಅಷ್ಟು ದೇಶ ಅಭಿವೃದ್ಧಿಯಾಗುವುದು. ಆದುದರಿಂದ ಶಿಕ್ಷಣ ಪ್ರೋತ್ಸಾಹವನ್ನು ನೀಡಬೇಕು. ಈ ದೃಷ್ಟಿಯಲ್ಲಿ ಶ್ರಮಿಸುವ ತೋನ್ಸೆ ಬ್ರಹ್ಮ ಬೈದರ್ಕಳ ಗರೋಡಿ ಮುಂಬಯಿ ಸಂಸ್ಥೆ ನಿತ್ಯಾನಂದ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹರೀಶ್ ಅಮೀನ್ ನುಡಿದರು.
ಒಂದು ಸಂಸ್ಥೆ ನಡೆಸಲು ಒಬ್ಬರುಯಾ ಇಬ್ಬರಿಂದ ಸಾಧ್ಯವಿಲ್ಲ ಎಲ್ಲರ ಪ್ರೋತ್ಸಾಹವಿದ್ದಾಗಲೇ ಸಂಸ್ಥೆಯ ಮುನ್ನಡೆ ಸಾಧ್ಯವಾಗುವುದು. ಒಗ್ಗಟ್ಟಿನಿಂದ ಐಕ್ಯತೆಯಿಂದ ಸೇವಾನಿರತವಾಗಿ ಶ್ರಮಿಸುವ ಉತ್ಸಾಹವೇ ತುಂಬಾ ತೃಪ್ತಿ ತರುವಂತದು. ನಮ್ಮೆಲ್ಲರ ಸಹೃದಯ ಬಂಧು ವಿಟಲ್ ಎಸ್. ಪೂಜಾರಿ ಉಪಸ್ಥಿತಿ ಇಂದು ಅಸಾಧ್ಯವಾದರೂ ಅವರ ಪ್ರೋತ್ಸಾಹಕ್ಕೆ ಮತ್ತು ವಿದ್ಯಾನಿಧಿಗೆ ಪ್ರೋತ್ಸಾಹಿಸಿದ ಎಲ್ಲಾ ದಾನಿಗಳಿಗೆ ವಂದಿಸುತ್ತೇವೆ. ಮುಂದೆಯೂ ಎಲ್ಲರೂ ಜೊತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮಾಜಸೇವೆಯೊಂದಿಗೆ ಮುನ್ನಡೆಯೋಣ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಅತಿಥಿವರ್ಯರು ಮತ್ತು ಸಮ್ಮಾನಿತರು ಸಂದಭೋಚಿತವಾಗಿ ಮಾತನಾಡಿ ಟ್ರಸ್ ನ ಸೇವೆ ಪ್ರಶಂಸನೀಯ ಎಂದರು. ಸಚಿನ್ ಪೂಜಾರಿ ಭಿವಂಡಿ ಮತ್ತು ಚಿಣ್ಣರ ಬಳಗವು ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ರಂಗ್‌ದ ರಾಜೆ ಲ| ಸುಂದರ್ ರೈ ಮಂದಾರ ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯ ಮತ್ತು ಕುಸಲ್ದರಸೆ ನವೀನ್ ಡಿ. ಪಡೀಲ್ ಸಹಕಾರದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಬಳಗವು “ಗಿರ್‌ಗಿಟ್ ಗಿರಿಧರೆ’ ತುಳು ನಾಟಕ ಪ್ರದರ್ಶಿಸಿ ಮನೋರಂಜನೆ ನೀಡಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣುರ, ಜೊತೆ ಕಾರ್ಯದರ್ಶಿ ಕರುಣಾಕರ ಬಿ. ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ. ಕೋಟ್ಯಾನ್, ಆನಂದ್ ಜತ್ತನ್, ಸುರೇಶ್ ಅಂಚನ್, ಸದಾನಂದ ಬಿ. ಪೂಜಾರಿ, ವಿಜಯ್ ಪಾಲನ್, ಕೃಷ್ಣ ಪಾಲನ್, ಸಮಿತಿಯ ಹಿರಿಯರಾದ ಶಂಕರ್ ಸುವರ್ಣ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಕು| ಸಾಯಿಮಯಿ ಕೋಟ್ಯಾನ್ ಸ್ವಾಗತ ನೃತ್ಯಗೈದರು. ಕು| ವಿಭೂತಿ ಕಲ್ಯಾಣುರ್ ಪ್ರಾರ್ಥನೆ ಗೈದರು. ವಿಠಲ ಎಸ್. ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಡಿ.ಬಿ. ಅಮೀನ್ ಮತ್ತು
ರೂಪ್‌ಕುಮಾರ್ ಕಲ್ಯಾಣುರ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಡಿ.ಬಿ. ಅಮೀನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದನಾರ್ಪಣೆಗೈದರು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.