ಕರಾವಳಿ ಮಾರ್ಗದ ಸುರಂಗ ಕಾಮಗಾರಿ ಶೇ. 25 ಪೂರ್ಣ
Team Udayavani, Mar 3, 2021, 12:29 PM IST
ಮುಂಬಯಿ: ಕರಾವಳಿ ಮಾರ್ಗಕ್ಕಾಗಿ ಸುರಂಗವನ್ನು ಕೊರೆಯುವ ಕಾರ್ಯವು ಜ. 11ರಂದು ಆರಂಭವಾದಾಗಿನಿಂದ ಈ ವರೆಗೆ 90 ಮೀಟರ್ ಸುರಂಗವನ್ನು ಕೊರೆಯುವುದರ ಮೂಲಕ ಒಟ್ಟು ಯೋಜನೆಯ ಶೇ. 25ರಷ್ಟು ಪೂರ್ಣಗೊಂಡಿದೆ.
ಆದರೆ 21 ಹೆಕ್ಟೇರ್ ಹೆಚ್ಚುವರಿ ಭರ್ತಿ ಮಾಡಲು ಮಹಾರಾಷ್ಟ್ರ ಸಾಗರ ಪ್ರದೇಶ ನಿರ್ವಹಣ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೂ ಕೇಂದ್ರ ಸರಕಾರದಿಂದ ಇನ್ನೂ ಅನುಮತಿ ಸಿಗದ ಕಾರಣ ಹೆಚ್ಚುವರಿ ಭರ್ತಿ ಮಾಡುವ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.ಪುರಸಭೆಯು ಪ್ರಿನ್ಸಸ್ ಸ್ಟ್ರೀಟ್‌ನಿಂದ ಬಾಂದ್ರಾ ವರ್ಲಿ ಸೀ ಲಿಂಕ್ ದಕ್ಷಿಣ ತುದಿಗೆ 10.58 ಕಿ. ಮೀ. ಕರಾವಳಿ ರಸ್ತೆಯನ್ನು ನಿರ್ಮಿಸುತ್ತಿದೆ.
ಮಾವ್ಲಾ ಸುರಂಗ ಯಂತ್ರದ ಬಳಕೆ :
2018ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಈ ಯೋಜನೆಗೆ ಸುರಂಗ ಮಾರ್ಗದ ಕೆಲಸ ಜ. 11ರಂದು ಪ್ರಾರಂಭವಾಯಿತು. ಈ ಸುರಂಗಗಳು ಪ್ರಿಯದರ್ಶಿನಿ ಪಾರ್ಕ್‌ನಿಂದ ನೇತಾಜಿ ಸುಭಾಷ್ ಮಾರ್ಗ ಮರೀನ್ ಡ್ರೈವ್‌ವರೆಗೆ, ಮಲಬಾರ್ ಬೆಟ್ಟದ ಕೆಳಗಿರುವ ಛೋಟಾ ಚೌಪಟ್ಟಿಯವರೆಗೆ ಸಾಗಲಿವೆ. ಸುರಂಗಗಳ ಉದ್ದ ತಲಾ 2.7 ಕಿ. ಮೀ. ಇದ್ದು, ಕಾಮಗಾರಿಗಾಗಿ ಮಾವ್ಲಾ ಎಂಬ ಯಂತ್ರವನ್ನು ಬಳಸಲಾಗುತ್ತಿರುವುದು ವಿಶೇಷತೆಯಾಗಿದೆ.
ದಿನಕ್ಕೆ 5 ಮೀ. ಕೊರೆಯುವ ಸಾಮರ್ಥ್ಯ :
ಈ ಯಂತ್ರವು ಒಂದೂವರೆ ತಿಂಗಳಲ್ಲಿ 90 ಮೀ. ಸುರಂಗವನ್ನು ಕೊರೆದಿದೆ. ಯಂತ್ರವು ಆರಂಭ ದಲ್ಲಿ ವೇಗವನ್ನು ತೆಗೆದುಕೊಳ್ಳಲಿಲ್ಲ ಈಗ ಯಂತ್ರ ವೇಗವಾಗಿ ಚಲಿಸುತ್ತಿದೆ. ಇದು ಎರಡೂ ಸುರಂಗಗಳಿಗೆ 20 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಪುರಸಭೆ ಅಧಿಕಾರಿ ತಿಳಿಸಿದ್ದಾರೆ.
ಅನುಮತಿಯಲ್ಲಿ ವಿಳಂಬ :
ಮೂಲ ಯೋಜನೆಯ ಪ್ರಕಾರ ಯೋಜನೆ ಗಾಗಿ 90 ಹೆಕ್ಟೇರ್‌ವರೆಗೆ ಭರ್ತಿ ಮಾಡಲು ಈಗಾಗಲೇ ಅನುಮತಿ ಪಡೆಯಲಾಗಿದೆ. ಇನ್ನೂ 21 ಹೆಕ್ಟೇರ್ ಭರ್ತಿ ಮಾಡಬೇಕಾಗಿದ್ದು, ಸುಮಾರು 111 ಹೆಕ್ಟೇರ್ ಭೂಮಿಯನ್ನು ರಚಿಸಲಾಗುವು ದು. ಇದು ಮಹಾರಾಷ್ಟ್ರ ಸಾಗರ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದು, ಭೂ ವಿಜ್ಞಾನ ಸಚಿವಾಲಯದ ಅನುಮೋದನೆಗಾಗಿ ಕಾಯುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಯಾವುದೇ ಸಭೆ ನಡೆದಿಲ್ಲವಾದ್ದರಿಂದ ಅನುಮತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಕರಾವಳಿ ಮಾರ್ಗದ ಮುಖ್ಯ ಎಂಜಿನಿಯರ್ ವಿಜಯ್ ನಿಘೋಟ್ ಹೇಳಿದ್ದಾರೆ.
ಒಟ್ಟು 11 ಸುರಂಗಗಳ ನಿರ್ಮಾಣ :
ಮಾವ್ಲಾ ಯಂತ್ರ ಮತ್ತು ಇತ್ತೀಚೆಗಿನ ತಂತ್ರಜ್ಞಾನದ ಸಹಾಯದಿಂದ ಭೂಗರ್ಭದಲ್ಲಿ 10 ಮೀಟರ್‌ನಿಂದ 70 ಮೀಟರ್ ಆಳದಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗುವುದು. ಸುರಂಗದ ಒಟ್ಟು ವ್ಯಾಸವು 12.19 ಮೀಟರ್ ಮತ್ತು ನಿರ್ಮಾಣ ಪೂರ್ಣಗೊಂಡ ಬಳಿಕ ಸುರಂಗದ ಆಂತರಿಕ ವ್ಯಾಸವು 11 ಮೀಟರ್ ಆಗಿರಲಿದೆ. ಎರಡು ಸುರಂಗಗಳನ್ನು ಸಂಪರ್ಕಿಸುವ ಒಟ್ಟು 11 ಸುರಂಗಗಳು ಇರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.