ಸ್ಪರ್ಧಾತ್ಮಕ ಯುಗದಲ್ಲಿಜ್ಞಾನಾರ್ಜನೆ ಬಹಳ ಮುಖ್ಯ: ಶಂಕರ್ ಬಿ. ಶೆಟ್ಟಿ
Team Udayavani, Aug 24, 2017, 2:51 PM IST
ಥಾಣೆ: ನವೋದಯ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಪ್ರಸ್ತುತ ವರ್ಷ ಪ್ರಾರಂಭವಾದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತರಗತಿಗಳ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.
ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಇವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ಇತರ ಪಠ್ಯೇತರ ವಿಷಯದ ಬಗ್ಗೆಯೂ ಜ್ಞಾನವನ್ನು ಅರ್ಜಿಸುವುದು ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಬಹಳ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಒಂದು ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನ ಪಟ್ಟರೆ ಯಶಸ್ಸು ಖಂಡಿತವಾಗಿಯೂ ಲಭಿಸುವುದು. ಒಳ್ಳೆಯ ವಿಷಯದ ಬಗ್ಗೆ ಪ್ರಾರಂಭಗೊಂಡ ಚಿಂತನೆಯನ್ನು ಸತತ ಪ್ರಯತ್ನದಿಂದ ಕಾರ್ಯರೂಪಕ್ಕೆ ತರುವುದು ಬಹಳ ಮುಖ್ಯ ಇದಕ್ಕೆ ಒಳ್ಳೆಯ ನಿದರ್ಶನ ನಮ್ಮ ನವೋದಯ ಕನ್ನಡ ಸೇವಾ ಸಂಘವಾಗಿದೆ ಎಂದು ನುಡಿದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ನವೋದಯ ಆಂಗ್ಲ ಮಾಧ್ಯಮ ಶಾಲೆಯ ಮಾಧ್ಯಮಿಕ ವಿಭಾಗದ ಮಕ್ಕಳ ಪ್ರಾರ್ಥನೆಯೊಂದಿಗೆ ಸಮಾರಂಭವು ಪ್ರಾರಂಭಗೊಂಡಿತು. ಡೆಲ್ಫಿನ್ ಆಂಡ್ರೆಡ್ ಕಾರ್ಯಕ್ರಮ ನಿರ್ವಹಿಸಿದರು. ಮಾಧ್ಯಮಿಕ ವಿಭಾಗದ ಶಿಕ್ಷಕಿಯಾದ ಅಂಬಿಲಿ ಪ್ರಭಾತ್ ಸ್ವಾಗತಿಸಿದರು. ನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ್ ಎಸ್. ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಚಾರಿಟೆಬಲ್ ಟ್ರಸ್ಟ್ ಆಗಿದ್ದು ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಸುರಕ್ಷತೆಯನ್ನು ನೀಡುವುದಾಗಿ ಭರವಸೆ ನೀಡಿದರು. ಕಾಲೇಜಿಗೆ ಬೇಕಾದ ಆಧುನಿಕ ಸೌಲಭ್ಯಗಳಲ್ಲಿ ಮುಖ್ಯವಾದ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರಗಳ ಸುಸಜ್ಜಿತವಾಗಿ ತಯಾರಾದ ಲ್ಯಾಬ್‌ಗಳ ಕಾರ್ಯವ್ಯವಸ್ಥೆಗೆ ನೀಡಿದ ಶಾಲಾ ಮುಖ್ಯೋಪಾಧ್ಯಾಯಿನಿಯರ ಸಹಕಾರವನ್ನು
ಶ್ಲಾಘಿಸಿದರು.
ನವೋದಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಅನುರಾಧಾ ಅರ್ಜುನ್ ವಾಡ್ಕರ್ ಅವರು ನವೋದಯ ಕನ್ನಡ ಸೇವಾ ಸಂಘದ ಸತತ ಪ್ರಯತ್ನದಿಂದ ನೂತನವಾಗಿ ಸ್ಥಾಪನೆಗೊಂಡ ಜೂನಿಯರ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮಾಧ್ಯಮಿಕ ಹಾಗೂ ಜ್ಯೂನಿಯರ್ ಕಾಲೇಜಿನ ಮುಖ್ಯ ಶಿಕ್ಷಕಿ ಅಜಿತಾ ಪ್ರದೀಪ್ ಕುಮಾರ್ ಅವರು ಮಾತನಾಡಿ, ಇವರು ನಮ್ಮ ಶಾಲೆಯು ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನು ಒದಗಿಸುತ್ತಿದ್ದು ಇನ್ನು ಮುಂದೆ ಜೂನಿಯರ್ ಕಾಲೇಜಿನಲ್ಲಿಯೂ ಇದೇ ರೀತಿಯ ಉತ್ತಮ
ಗುಣಮಟ್ಟದ ವಿದ್ಯೆಯನ್ನು ಒದಗಿಸುವುದಕ್ಕೆ ಶಿಕ್ಷಕರ ಹಾಗೂ ಸಂಘದ ಜೊತೆ ಪಾಲಕರ ಸಹಾಯವೂ ತುಂಬಾ ಮುಖ್ಯವಾಗಿರುವುದು ಎಂದು ತಿಳಿಸಿದರು.
ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಜಯ ಕೆ. ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿಸನ್‌ನಗರ ಪರಿಸರದಲ್ಲಿ ಮಧ್ಯಮ ವರ್ಗದ ಜನ ಸಮುದಾಯದೊಂದಿಗಿರುವ ನಮ್ಮ ಈ ನವೋದಯ ಆಂಗ್ಲ ಮಾಧ್ಯಮ ಶಾಲೆಯು ಗುಣಮಟ್ಟದ ವಿದ್ಯಾಭ್ಯಾಸವನ್ನು ಕನಿಷ್ಠ ಶುಲ್ಕದಲ್ಲಿ ಒದಗಿಸುತ್ತಾ ಬಂದಿದ್ದು, ಸಮಾಜದ ಗಣ್ಯರ ನೇತೃತ್ವದಲ್ಲಿ, ದಾನಿಗಳ ಹಾಗೂ ಪಾಲಕ ಪೋಷಕರ, ಶಿಕ್ಷಕರೆಲ್ಲರ ಸಹಕಾರ, ಪ್ರೋತ್ಸಾಹ ಇಂದು ಜೂನಿಯರ್ ಕಾಲೇಜನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ.
ಈ ಯಶಸ್ಸಿಗೆ ಸಹಕರಿಸಿದ ಕೊಡುಗೈ ದಾನಿಗಳನ್ನು ಮತ್ತು ಸಹಕರಿಸಿದ ಪಾಲಕ ಪೋಷಕರನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಶಿಕ್ಷಕಿ ರುಚಿ ಖರತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.