ವಿಶ್ವ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಲೋಚನ ಸಭೆ


Team Udayavani, Jan 28, 2018, 4:07 PM IST

2-ggg.jpg

ಮುಂಬಯಿ: ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷನಾಗಿ ಜನವರಿ 16 ರಂದು ನಿರ್ಗಮನ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅವರಿಂದ ಪದವಿ ವಹಿಸಿಕೊಂಡಿರುವ ನಾನು ವಿಶ್ವದ ಸಮಗ್ರ ಬಂಟ ಬಾಂಧವರನ್ನು ಒಂದುಗೂಡಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಂಟ ಬಾಂಧವರ ಏಳ್ಗೆಗಾಗಿ ಶ್ರಮಿಸಲು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡು ಕಾರ್ಯಾರಂಭಿಸುವುದಾಗಿ ಐಕಳ ಹರೀಶ್‌ ಶೆಟ್ಟಿ ಅವರು ಹೇಳಿದರು.

ಜ. 24 ರಂದು ಕುರ್ಲಾ ಪೂರ್ವದ ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಎನೆಕ್ಸ್‌ ಸಂಕೀರ್ಣದ ವಿಜಯಲಕ್ಷ್ಮೀ ಮಹೇಶ್‌ ಶೆಟ್ಟಿ ಬಾಬಾಸ್‌ ಗ್ರೂಪ್‌ ಸಭಾಗೃಹದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಮಹಾರಾಷ್ಟ್ರ ರಾಜ್ಯಮಟ್ಟದ ಬಂಟ ಸಂಘ-ಸಂಸ್ಥೆಗಳೊಂದಿಗೆ ಜರಗಿದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವ ಬಂಟರ ಸಂಘಗಳ ಒಕ್ಕೂಟದಲ್ಲಿ ಕೇವಲ ವಿಶ್ವದ ಎಲ್ಲಾ ಸಂಘ-ಸಂಸ್ಥೆಗಳ ಸದಸ್ಯತ್ವ ಪಡೆಯಬಹುದು. ಆದರೆ ವೈಯಕ್ತಿಕ ನೆಲೆಯಲ್ಲಿ ಸದಸ್ಯರಾಗುವಂತಿಲ್ಲ. ಈ ಸಂಸ್ಥೆಯು ಎಲ್ಲಾ ಸಂಸ್ಥೆಗಳ ನೇತೃತ್ವ ಪಡೆಯುವ ಅತ್ಯುಚ್ಚ ಸ್ಥಾನವಾಗಿದೆ. ಬಂಟರ ಯಾವುದೇ ಸಂಘ-ಸಂಸ್ಥೆ ಇದರ ಸದಸ್ಯತ್ವ ಪಡೆಯಬೇಕಾದರೆ ಆರಂಭದಲ್ಲಿ 2 ಸಾವಿರ ಸದಸ್ಯತನ ತುಂಬಿಸಬೇಕು. ಸುಮಾರು 1500 ಸದಸ್ಯರಿರುವ ಸಂಸ್ಥೆ ಕೇವಲ ಒಂದು ಸದಸ್ಯತ್ವ ಮಾತ್ರ ಪಡೆಯಬಹುದಾಗಿದೆ. ಸುಮಾರು 6 ಸಾವಿರ ಸದಸ್ಯರನ್ನು ಹೊಂದಿರುವ ಸಂಘ-ಸಂಸ್ಥೆ 6 ಸದಸ್ಯತ್ವವನ್ನು ಪಡೆಯಲು ಅವಕಾಶವಿದೆ. ಪ್ರತಿಯೊಂದು ಸಂಘ-ಸಂಸ್ಥೆಗಳ ಅಧ್ಯಕ್ಷರು ಇದರ ಸದಸ್ಯರಾಗಿರುತ್ತಾರೆ. ಬಂಟ ಸಂಘ-ಸಂಸ್ಥೆಗಳ ಸಲಹೆ-ಸೂಚನೆಯಗಳನ್ನು ಒಕ್ಕೂಟವು ಸದಾ ಸ್ವೀಕರಿಸುತ್ತದೆ. ವಿಶ್ವದ ಎಲ್ಲಾ ಬಂಟ ಸಂಘಗಳಿಗೆ ಸಹಕಾರ ನೀಡುತ್ತದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸಂಘ-ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸಿ ಅಲ್ಲಿ ತೀರಾ ತೊಂದರೆಯಲ್ಲಿರುವ ಬಂಟರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಒಕ್ಕೂಟವನ್ನು ಬಲಪಡಿಸಲು, ಮಹಾಪೋಷಕರನ್ನು ನೇಮಿಸಿಕೊಳ್ಳಲು ಚಿಂತನೆ ನಡೆಯುತ್ತಿದ್ದು, ಒಟ್ಟು ಐದು  ಕೋ. ರೂ. ಗಳ ನಿಧಿಯೊಂದನ್ನು ಆರಂಭದಲ್ಲಿ ಸಂಗ್ರಹಿಸಲಾಗುವುದು. 5 ಲಕ್ಷ ರೂ. ಗಳನ್ನು ನೀಡುವ ದಾನಿಗಳು ಇದರ ಮಹಾಪೋಷಕರಾಗಿ ಶಾಶ್ವತ ಸ್ಥಾನ ಪಡೆಯುತ್ತಾರೆ. 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡಿದವರು ಶಾಶ್ವತ ವಿಶ್ವಸ್ಥರಾಗಿ ಸಮಿತಿಯಲ್ಲಿರುತ್ತಾರೆ. ಈಗಾಗಲೇ ತಲಾ 5 ಲಕ್ಷ ರೂ. ಗಳಂತೆ ಒಂದು ಕೋ. ರೂ. ಮೊತ್ತದ ಆಶ್ವಾಸನೆ ದೊರಕಿದೆ. ಒಕ್ಕೂಟವನ್ನು ಶಕ್ತಿಶಾಲಿಯನ್ನಾಗಿಸಲು ಫೆಬ್ರವರಿ 24 ರಂದು ಮುಂಬಯಿಯಲ್ಲಿ ಒಂದು ದಿನದ ವಿಶ್ವ ಬಂಟರ ಸಮಾವೇಶನ್ನು ಬಂಟರ ಸಂಘದಲ್ಲಿ ಆಯೋಜಿಸಲಾಗಿದೆ. ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಇದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಬಂಟರ ಸಮಸ್ಯೆಗಳ ಬಗೆಗಿನ ಸಂವಾದ ಕಾರ್ಯಕ್ರಮ, ಹಿರಿಯ ಸಾಧಕ ಬಂಟರಿಗೆ ಸಮ್ಮಾನ ನೀಡಲಾಗುವುದು. ವಿಶ್ವ ಬಂಟ ಮಹಿಳಾ ವೇದಿಕೆ, ವಿಶ್ವ ಯುವ ವೇದಿಕೆಗೆ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಯು ಅಂದು ನಡೆಯಲಿದೆ. 10 ಲಕ್ಷ ರೂ. ಗಳಿಂದ 25 ಲಕ್ಷ ರೂ. ನೀಡಿದ ದಾನಿಗಳ ಮೊತ್ತವನ್ನು ಠೇವಣಿಯನ್ನಾಗಿಸಿ ಅದರಿಂದ ಬರುವ ಬಡ್ಡಿಯನ್ನು ವೈದ್ಯಕೀಯ, ಕ್ರೀಡೆ, ವಿವಾಹ ಸಂಬಂಧಿತ ಚಟುವಟಿಕೆಗಳಿಗೆ ವಿನಿಯೋಗಿಸಲಾಗುವುದು ಎಂದು ನುಡಿದು ದೂರದಿಂದ ಆಗಮಿಸಿದ ಸಂಘ-ಸಂಸ್ಥೆಗಳ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರ ಸಹಕಾರ ಬಯಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಮಾತನಾಡಿ, ಬಂಟರ ಸಂಘದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಂಘದ ಅಧ್ಯಕ್ಷರಾಗಿ ಸಂಘದ ಹೆಸರನ್ನು ವಿಶ್ವಮಟ್ಟಕ್ಕೇರಿಸಿದ ಐಕಳ ಹರೀಶ್‌ ಶೆಟ್ಟಿ ಅವರಿಗೆ ಪ್ರತಿಷ್ಠಿತ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕಷ ಪದವಿ ದೊರೆತಿರುವುದು ಸಮಸ್ತ ಬಂಟ ಬಾಂಧವರಿಗೆ ಸಂತಸ ತಂದ ವಿಚಾರವಾಗಿದೆ. ಬಂಟ ಬಾಂಧವರ ಕ್ಲಿಷ್ಟ ಸಮಸ್ಯೆಗಳನ್ನು ಸರಕಾರದ ಮುಂದಿರಿಸಲು ಒಕ್ಕೂಟದಂತಹ ವಿಶ್ವ ಮಟ್ಟದ ಸಂಘಟನೆಯ ಅಗತ್ಯತೆ ನಮಗಿದೆ. ಐಕಳರಲ್ಲಿ ಸಂಘಟನಾತ್ಮಕ ವಿಶೇಷ ಗುಣ ಇರುವುದರಿಂದ ಇದು ಸಾಧ್ಯ ಎಂದು ತಿಳಿಸಿ, ಒಕ್ಕೂಟದ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ನಾಸಿಕ್‌ ಬಂಟರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರಲ್ಲಿ ಸಂಘಟನೆಯ ಯೋಗ್ಯ ಗುಣವಿದೆ. ಒಕ್ಕೂಟದ ಘನತೆ, ಗೌರವ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಒಕ್ಕೂಟದ ಕೀರ್ತಿ ಪತಾಕೆ ವಿಶ್ವದೆತ್ತರಕ್ಕೆ ಹಾರಲೆಂದು ಶುಭಹಾರೈಸಿ ಬೆಂಬಲ ವ್ಯಕ್ತಪಡಿಸಿದರು.

ಮೀರಾ–ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರ ಪ್ರವೇಶದಿಂದ ಬಂಟರ ಸಂಘ ಮುಂಬಯಿ ಉತ್ತರೋತ್ತರ ಅಭಿವೃದ್ಧಿ ಸಾಧಿಸಿದೆ. ಅವರ ಸಂಘಟನಾ ಶಕ್ತಿ, ಛಲ, ಒಕ್ಕೂಟದ ಬೆಳವಣಿಗೆಗೆ ಕಾರಣವಾಗಲೆಂದು ಹಾರೈಸಿ, ತಾನೂ ಮಹಾಪೋಷಕನಾಗುವ ಇಚ್ಚೆಯನ್ನು ವ್ಯಕ್ತಪಡಿಸಿ ಶುಭಹಾರೈಸಿದರು.

ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪ್ಪಾಡಿ ಅವರು ಮಾತನಾಡಿ, ಕಾಲು ಎಳೆಯುವವರನ್ನು ಕೈ ಕೈ ಮಿಲಾಯಿಸುವ ಕಾರ್ಯ ಐಕಳರಿಂದ ಆರಂಭವಾಗಲೆಂದು ಆಶಿಸಿ ಅಭಿನಂದಿಸಿದರು.

ವಿಶ್ವ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರನ್ನು ಬಹಳ ಸಮೀಪದಿಂದ ಬಲ್ಲವನಾಗಿದ್ದೇನೆ. ಗ್ರಾಮೀಣ ಪ್ರದೇಶದ, ಹಳ್ಳಿಗಾಡು ಪ್ರದೇಶಗಳಲ್ಲಿ ನೀಡುವವರಿಗಿಂದ ಪಡೆಯುವವರೆ ಹೆಚ್ಚು. ಗ್ರಾಮೀಣ ಪ್ರದೇಶದ ಬಂಟರ ಬೇಡಿಕೆ ನಮ್ಮ ಮುಂದಿರುವ ಬಹುದೊಡ್ಡ ಯೋಜನೆಯಾಗಬೇಕು ಎಂದು ನುಡಿದರು.

ಸಭಿಕರ ಪರವಾಗಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ನಿಧಿಗೆ ಪ್ರಾಧಾನ್ಯತೆ ನೀಡುವಂತೆ ವಿನಂತಿಸಿದರು. ರಂಜನಿ ಸಧಾಕರ ಹೆಗ್ಡೆ ಅವರು ನಿಮ್ಮ ನಿರೀಕ್ಷೆಯಂತೆ ಯಶಸ್ಸು ಹರಿದು ಬರಲೆಂದು ಆಶಿಸಿದರು. ರತ್ನಾಕರ ಶೆಟ್ಟಿ ಮುಂಡ್ಕೂರು ಮಂಗಳೂರಿನಲ್ಲಿ ನಡೆದ ಒಕ್ಕೂಟದ ಸಭೆಯ ಬಗ್ಗೆ ಮಾತನಾಡಿ, ಸುಮಾರು 60 ಬಂಟ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೆರೆದಿದ್ದ ಪದವಿ ಹಸ್ತಾಂತರ ಕಾರ್ಯಕ್ರಮದಲ್ಲಿ ಎಲ್ಲರ ಬೆಂಬಲ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಡಾ| ಸತ್ಯಪ್ರಕಾಶ್‌ ಶೆಟ್ಟಿ ಮಾತನಾಡಿ, ನಾವೆಲ್ಲರೂ ವ್ಯಕ್ತಿಯಾಗಿ ಬೆಳೆದಿದ್ದೇವೆ ಹೊರತು ಶಕ್ತಿಯಾಗಿ ಬೆಳೆದಿಲ್ಲ. ಒಗ್ಗಟ್ಟಿನ ನ್ಯೂನ್ಯತೆ ನಮ್ಮಲ್ಲಿದೆ. ಸಮಾಜದಲ್ಲಿರುವ ಶೋಷಣೆ ನಿಲ್ಲಲಿ. ಐಕಳ ಹರೀಶ್‌ ಶೆಟ್ಟಿ ಅವರು ಬಂಟರ ಆಶಾಕಿರಣವಾಗಿದ್ದಾರೆ. 23 ಲಕ್ಷ ಬಂಟರು ನಿಮ್ಮ ಜೊತೆಗಿದ್ದಾರೆ ಎಂದು ನುಡಿದು ಹಾರೈಸಿದರು.

ಗಿರೀಶ್‌ ತೆಳ್ಳಾರ್‌ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಬಂಟರ ಸಂಘದ ಅಭಿವೃದ್ಧಿಗೆ ಪೂರಕವಾದಂತೆ ಒಕ್ಕೂಟವನ್ನು ಚೆನ್ನಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕರ್ನೂರು ಮೋಹನ್‌ ರೈ, ಪ್ರವೀಣ್‌ ಶೆಟ್ಟಿ ವರಂಗ ಸಹಕರಿಸಿದರು. 

ಐಕಳ ಹರೀಶ್‌ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾಗಿರುವುದು ಮುಂಬಯಿಗರಿಗೆ ಸಂತಸ ಹಾಗೂ ಅಭಿಮಾನದ ವಿಷಯವಾಗಿದೆ. ಬಂಟರ ಒಗ್ಗಟ್ಟು ತೋರಿಸಲು ಇದೊಂದು ಮಹಾನ್‌ ವೇದಿಕೆಯಾಗಲಿ. 
– ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ  (ಅಧ್ಯಕ್ಷರು : ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ಬಂಟರ ಏಕತೆ ಹಾಗೂ ಶಕ್ತಿಯನ್ನು ಪ್ರದರ್ಶಿಸಲು ಫೆಡರೇಶನ್‌ನ ಅಗತ್ಯವಿದೆ. ಐಕಳ ಹರೀಶ್‌ ಶೆಟ್ಟಿ ಅವರ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವಿದೆ. ನಿಮ್ಮ ಹಿಂದೆ ನಾವು ಸದಾ ಇದ್ದೇವೆ 
– ಪ್ರಕಾಶ್‌ ಶೆಟ್ಟಿ (ಅಧ್ಯಕ್ಷರು : ಮುಲುಂಡ್‌ ಬಂಟ್ಸ್‌).

ಐಕಳ ಹರೀಶ್‌ ಶೆಟ್ಟಿ ಅವರನ್ನು ಅಭಿನಂದಿಸಲು ಹೆಮ್ಮೆಯಾಗುತ್ತಿದೆ. ನಾಯಕತ್ವವನ್ನು ಹುಡುಕುವುದಕ್ಕಿಂದ ನಾಯಕತ್ವ ನಮ್ಮನ್ನು ಹುಡುಕಿಕೊಂಡು ಬರಬೇಕು. ಅದಕ್ಕೆ ಐಕಳ ಅವರು ಸಾಕ್ಷಿಯಾಗಿದ್ದಾನೆ. ವಿಶ್ವ ಬಂಟರ ಒಕ್ಕೂಟ ನಿಂತ ನೀರಾಗದೆ, ಸದಾ ಹರಿಯುತ್ತಿರಲಿ
 – ಕುಶಲ್‌ ಸಿ. ಭಂಡಾರಿ (ಅಧ್ಯಕ್ಷರು : ಥಾಣೆ ಬಂಟ್ಸ್‌ ಅಸೋಸಿಯೇಶನ್‌).

ವಿಶ್ವ ಬಂಟರ ಸಂಘಗಳ ಒಕ್ಕೂಟ ಜೀರ್ಣೋದ್ಧಾರವಾಗುವ ಸಮಯ ಬಂದಿರುವುದಕ್ಕೆ ಸಂತಸವಾಗುತ್ತಿದೆ. ಐಕಳ ಹರೀಶ್‌ ಶೆಟ್ಟಿ ಅವರಂತಹ ಮಹಾನ್‌ ನಾಯಕ ಒಕ್ಕೂಟದ ನೇತೃತ್ವ ವಹಿಸಿರುವುದು ನಮಗೆ ಹೆಮ್ಮೆ. ಪುಣೆ ಬಂಟರ ಸಹಕಾರ ಸದಾಯಿದೆ 
– ಇನ್ನಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ (ಅಧ್ಯಕ್ಷರು : ಪುಣೆ ಬಂಟರ ಸಂಘ).

ಬಂಟ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಸಮಾಜಮುಖೀ ಕಾರ್ಯಯೋಜನೆಗಳಿಗೆ ನಮ್ಮ ಬೆಂಬಲವಿದೆ. ಐಕಳ ಸಾರಥ್ಯದ ಒಕ್ಕೂಟದ ರಥ ಮುಂದೆ ಸಾಗಲಿ 
– ನಗ್ರಿಗುತ್ತು ವಿವೇಕ್‌ ಶೆಟ್ಟಿ (ಅಧ್ಯಕ್ಷರು : ಬಂಟ್ವಾಳ ಬಂಟರ ಸಂಘ).

ಹೂವಿನ ಹಾರ ಪೋಣಿಸಿ, ಮಾಲೆ ಕಟ್ಟುವ ತೆರದಿ ಎಲ್ಲಾ ಬಂಟ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಐಕಳ 
ಮಾಡುವರೆಂಬ ವಿಶ್ವಾಸ ನಮಗಿದೆ. ಹವೇಲಿ ಬಂಟ್ಸ್‌ ಅಸೋಸಿಯೇಶನ್‌ನ ಸಹಕಾರ ಸದಾಯಿದೆ 
– ನಾರಾಯಣ ಶೆಟ್ಟಿ (ಅಧ್ಯಕ್ಷರು : ಬಂಟ್ಸ್‌ ಅಸೋಸಿಯೇಶನ್‌ ಹವೇಲಿ).

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.