
ಪ್ರಕಾಶ್ ಎನ್. ಬಿರಾಜ್‌ದಾರ್‌ಗೆ ಅಭಿನಂದನೆ
Team Udayavani, Feb 16, 2018, 10:02 AM IST

ಪಾಲ್ಘರ್ : ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬೊಯಿಸರ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ಎನ್. ಬಿರಾಜ್‌ದಾರ್ ಇವರನ್ನು ಸ್ಥಳೀಯ ಕನ್ನಡಪರ ಸಂಘಟನೆಗಳು ಅಭಿನಂದಿಸಿವೆ.
ಅಪರಾಧ ನಿಗ್ರಹ ದಳದ ಪ್ರಾಮಾಣಿಕ ಮತ್ತು ಶಿಸ್ತಿನ ಅಧಿಕಾರಿ ಎಂದೇ ಪ್ರಸಿದ್ಧರಾಗಿರುವ ಪ್ರಕಾಶ್ ಇವರು, ಥಾಣೆ ಗ್ರಾಮೀಣ, ಕಸಾರ, ಬೊಯಿಸರ್, ಪನ್ವೆಲ್, ಕುಡಾಳ್, ಮಣಿಕ್‌ಪುರ, ತುಳಿಂಜ್, ನಲಸೊಪರ, ವಸಾಯಿ ಮೊದಲಾದೆಡೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಬೊಯಿಸರ್‌ನಲ್ಲಿ ಸೀನಿಯರ್ ಪೊಲೀಸ್ ಇನ್ಸ್‌ಸ್ಪೆಕ್ಟರ್ ಆಗಿ ಸೇವೆಯಲ್ಲಿರುವ ಇವರ ದಕ್ಷತೆ, ಪ್ರಮಾಣಿಕತೆ, ಧೈರ್ಯ, ಸಾಹಸಕ್ಕೆ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅವರನ್ನು ಪಾಲ^ರ್ ತಾಲೂಕು ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲಕರ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು. ಹೊಟೇಲ್ ಉದ್ಯಮಿಗಳಾದ ಕೆ. ಭುಜಂಗ ಶೆಟ್ಟಿ, ಶ್ರೀನಿವಾಸ ಕೋಟ್ಯಾನ್, ಭಾಸ್ಕರ ಕೆ. ಶೆಟ್ಟಿ, ರಘುನಾಥ ರೈ, ವಿನಯ ಅಡಪ, ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ರಾಷ್ಟÅಪತಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಬಹಳಷ್ಟು ಸಂತೋಷವಾಗುತ್ತಿದೆ. ಇದು ನನ್ನ ಪ್ರಾಮಾಣಿಕತೆಯ ಸೇವೆಗೆ ಸಂದ ಗೌರವವಾಗಿದೆ. ಪಾಲ^ರ್ ಜಿಲ್ಲಾ ಎಸ್‌ಪಿ ಮಂಜುನಾಥ ಶಿಂಗೆ ಐಪಿಎಸ್ ಹಾಗೂ ಮಾಜಿ ಎಸ್‌ಪಿ ಶಾರದಾ ರಾವುತ್ ಐಪಿಎಸ್ ಇವರು ನನ್ನ ಪರಿಶ್ರಪ, ಪ್ರಾಮಾಣಿಕತೆ, ಸಾಹಸವನ್ನು ಮೆಚ್ಚಿ ನನ್ನ ಹೆಸರನ್ನು ಶಿಫಾರಸು ಮಾಡಿದ್ದರು. ಅವರಿಗೆ ಹಾಗೂ ತುಳು-ಕನ್ನಡಿಗರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಬಿರಾಜ್‌ದಾರ್ ತಿಳಿಸಿದ್ದಾರೆ. ರಾಯಘಡ್ ಜಿಲ್ಲೆಯ ಮಸಾಳಾ ಸೂಕ್ಷ¾ ಪ್ರದೇಶದಲ್ಲಿ ಹಿಂದು-ಮುಸ್ಲಿಂರಲ್ಲಿ ಅನ್ಯೋನ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸಿದ್ದರು. ಇವರ ದಕ್ಷತೆಯ ಕಾರ್ಯವೈಖರಿಯನ್ನು ಕಂಡು ರಾಷ್ಟÅಪತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.