ಗ್ರಾಹಕರು ಸೊಸೈಟಿಯ ಸದುಪಯೋಗ ಪಡೆಯಬೇಕು: ರಂಗಪ್ಪ ಗೌಡ

ಜಯಲಕ್ಷ್ಮೀ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ 19ನೇ ವಾರ್ಷಿಕ ಮಹಾಸಭೆ

Team Udayavani, Aug 20, 2019, 5:48 PM IST

mumbai-tdy-1

ಮುಂಬಯಿ, ಆ. 19: ಸೊಸೈಟಿಯನ್ನು ಅಭಿವೃದ್ಧಿ ಪಥಕ್ಕೆ ಸಾಗಿಸಲು ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯವಿದೆ. ನಾವೂ ಮನೆಯನ್ನು ಖರೀದಿ ಮಾಡುವವರಿಗೆ ನ್ಯಾಷನಲ್ ಬ್ಯಾಂಕ್‌ನಲ್ಲಿ ಕೊಡುವಷ್ಟು ದೊಡ್ಡ ಮೊತ್ತದಲ್ಲಿ ಸಾಲವನ್ನು ನೀಡುತ್ತೇವೆ. ನಿಮ್ಮ ಮನೆ ಅಥವಾ ಫ್ಲ್ಯಾಟ್ ಬೆಲೆಯ ಶೇ. 80ರಷ್ಟು ಮೊತ್ತದಷ್ಟು ಸಾಲವನ್ನು ಶೇ. 14ರಷ್ಟು ಬಡ್ಡಿಯಲ್ಲಿ ನೀಡಲಾಗುವುದು. ಇದರ ಸದುಪಯೋಗವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕು ಎಂದ‌ು ಜಯಲಕ್ಷ್ಮೀ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿ ನಿಯಮಿತ ಕಾರ್ಯಾಧ್ಯಕ್ಷ ರಂಗಪ್ಪ ಸಿ. ಗೌಡ ತಿಳಿಸಿದರು.

ಆ. 18ರಂದು ಅಂಧೇರಿ ಪೂರ್ವದ ಜೆ. ಬಿ. ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನ‌ದ‌ಲ್ಲಿ ನಡೆದ ಶ್ರೀ ಜಯಲಕ್ಷ್ಮೀ ಪಥಸಂಸ್ಥೆಯ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯ ಶೇರುದಾರರಿಗೆ ಲಾಭಾಂಶದ ಶೇ. 9ರಷ್ಟು ಡಿವಿಡೆಂಡ್‌ ಘೋಷಿಸಿದರು.

ಕರ್ನಾಟಕ ಮಂಡ್ಯದ ಕೆ. ಆರ್‌. ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿಯ ಸ್ಥಾಪಕ ನಿರ್ದೇಶಕ ಡಾ| ನಾರಾಯಣ ಆರ್‌. ಗೌಡ ಸೊಸೈಟಿಯ ನಿರ್ದೇಶಕರನ್ನು ಒಳಗೊಂಡು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‌ಮಾರ್ಗ್‌ ಅವರು ಒಕ್ಕಲಿಗರ ಧೀಶಕ್ತಿ ದೈವೈಕ್ಯ ಮಹಾಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಧನಲಕ್ಷ್ಮೀ ಮಾತೆಗೆ ಪೂಜೆ ನೆರವೇರಿಸಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ಬೆಳಗಿಸಿ ಸಭೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ನಾರಾಯಣ ಗೌಡ ಮಾತನಾಡಿ ಮುಂದಿನ ವರ್ಷದಲ್ಲಿ ಜಯಲಕ್ಷ್ಮೀ ಸೊಸೈಟಿಯನ್ನು ಅಭಿವೃದ್ಧಿ ಮಟ್ಟಕ್ಕೆ ಬೆಳೆಸುವ ಯೋಜನೆಯನ್ನು ಕೈಗೊಂಡಿದ್ದೇವೆ. ಎರಡು ಹೊಸ ಕಚೇರಿಗಳ ವಿಸ್ತರಣೆಯನ್ನು ಹಮ್ಮಿಕೊಂಡಿದ್ದೇವೆ. ಬೆಳವಣಿಗೆಗೆ ಸದಸ್ಯರ ಗ್ರಾಹಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಸದಸ್ಯರು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ನಮ್ಮೊಡನೆ ಸಹಕರಿಸಬೇಕು. ಸಾಲ ತೆಗೆದುಕೊಂಡ ಮೇಲೆ ಅದರ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸುವುದರ ಜತೆಗೆ ಸಾಲವನ್ನು ಮರು ಪಾವತಿಸಬೇಕು. ಇಲ್ಲವಾದರೆ ಸಂಸ್ಥೆಯ ಉನ್ನತಿ ಅಸಾಧ್ಯ ಎಂದು ಕಾರ್ಯದರ್ಶಿ ಕೆ. ರಾಜೇ ಗೌಡ ತಿಳಿಸಿದರು.

ಅತಿಥಿ ಅಭ್ಯಾಗತರಾಗಿ ರಾಕೇಶ್‌ ಸಿಂಗ್‌, ಅಶೋಕ್‌ ಗೌಡ, ಕಾಂಗ್ರೆಸ್‌ ನೇತಾರ ಚಂದ್ರ ಶೆಟ್ಟಿ, ಸಿಎ ಮಂಜುನಾಥ ಕೆ. ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೊಸೈಟಿಯ ಉನ್ನತಿಗೆ ಶುಭ ಹಾರೈಸಿದರು. ಕಾರ್ಯಾಧ್ಯಕ್ಷರು ಮತ್ತು ನಿರ್ದೇಶಕರು ಸೊಸೈಟಿಯ ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು.

ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಉದ್ಯಮಿಗಳಾದ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ. ಕೆಂಪೇಗೌಡ, ಕಾರ್ಯದರ್ಶಿ ಕೆ. ರಾಜೇ ಗೌಡ, ಕೋಶಾಧಿಕಾರಿ ಮುತ್ತೇ ಎಸ್‌. ಗೌಡ, ನಿರ್ದೇಶಕರಾದ ಅನಸೂಯ ಆರ್‌. ಗೌಡ, ದೇವಕಿ ನಾರಾಯಣ ಗೌಡ, ಸುನಂದಾ ಆರ್‌. ಗೌಡ, ರಾಹುಲ್ ಯು. ಲಗಡೆ, ಭಾರತಿ ಎಸ್‌. ಗಾಯಕ್ವಾಡ್‌, ಸುನೀಲ್ ಕೆ.ಅವØಡ್‌, ಸುರತ್‌ ಎನ್‌. ಯಾದವ್‌ ವೇದಿಕೆಯಲ್ಲಿ ಆಸೀನರಾಗಿದ್ದರು. ಸೊಸೈಟಿಯ ಪ್ರಬಂಧಕ ಪರಶುರಾಮ್‌ ಕೆ. ದೌಂಡ್‌ ಸ್ವಾಗತಿಸಿ ಸಭಾ ಕಲಾಪ ನಡೆಸಿ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯು ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ ‘ಎ’ ದರ್ಜೆ ಸ್ಥಾನದೊಂದಿಗೆ ದೃಢೀಕೃತಗೊಂಡಿದೆ ಎಂದರು. ಸೊಸೈಟಿಯ ಗ್ರಾಹಕರು, ಶೇರುದಾರರು, ಹಿತೈಷಿಗಳು, ಸೊಸೈಟಿಯ ಸಿಬಂದಿಗಳು, ಪಿಗ್ಮಿ ಸಂಗ್ರಹದಾರರು ಸಭೆಯಲ್ಲಿ ಹಾಜರಿದ್ದರು.

ಎ. ಕೆಂಪೇಗೌಡ ಅವರು ಸ್ವಾಗತಿಸಿದರು. ಕಚೇರಿಯ ಅಧಿಕಾರಿಗಳಾದ ಆಶಾರಾಣಿಬಿ. ಗೌಡ ಅವರು ಗತ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪರಶುರಾಮ್‌ ಕೆ. ದೌಂಡ್‌ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಬಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್‌ ಮಾಂಡವ್ಕಾರ್‌ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವಕುಮಾರ್‌ ಎಚ್. ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ. ರಾಜೇ ಗೌಡ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿ, ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.

ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.