ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸಾಮರಸ್ಯದ ಬದುಕನ್ನು ನಡೆಸುತ್ತಾ ಬಂದಿರುವಂತಹ ಒಂದು ಮಾದರಿ ಗ್ರಾಮವದು

Team Udayavani, Dec 21, 2024, 3:37 PM IST

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಪ್ರಕೃತಿ ರಮಣೀಯ ಸೌಪರ್ಣಿಕಾ ನದಿ ಕಿನಾರೆಯ ತಟದಲ್ಲಿರುವ ಹಲವು ಗ್ರಾಮಗಳಲ್ಲಿ ಒಂದು ಸುಂದರ ಗ್ರಾಮ ಅದು “ಪಡುಬೆಟ್ಟು ಗ್ರಾಮ’. ದಾರಿ ದೀಪದ ಕಂಬಗಳಲ್ಲಿ ಈಗಿನ ಹೈಮಾಸ್ಟ್‌ ಲೈಟ್‌ಗಳ ಬದಲಿಗೆ ಕಬ್ಬಿಣದ ಏಣಿಯಂತಿರುವ ಕಂಬದ ತುದಿಯಲ್ಲಿ ನೇತಾಡುತ್ತಿದ್ದ ವೃತ್ತಾಕಾರದ ಬಿಳಿ ಬಟ್ಟಲಿನ ಮಧ್ಯೆ ಮಂದವಾಗಿ ಉರಿಯುತ್ತಿದ್ದ ಒಂದು ಬಲ್ಬ್. ಅದರ ಬೆಳಕಿನಲ್ಲಿ ಜನ ನಡೆದಾಡುತ್ತಿದ್ದ ಕಾಲವದು. ಜೀವನೋಪಾಯಕ್ಕಾಗಿ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿರುವ ಒಂದಷ್ಟು ಮೀನುಗಾರ ಸಮುದಾಯದ ಮನೆಗಳು, ಹೈನುಗಾರಿಕೆ, ಭತ್ತದ ಕೃಷಿ, ವ್ಯವಸಾಯ ಮಾಡುವ, ಹಂಚಿನ ಕಾರ್ಖಾನೆಗಳಲ್ಲಿ ದುಡಿಯುವ, ಮೇಸ್ತ್ರಿ ಗಾರೆ ಕೆಲಸ ಮುಂತಾದ ಇತರ ಕೂಲಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಇತರ ಸಮುದಾಯದ ಒಂದಷ್ಟು ಮನೆಗಳನ್ನು ಬಿಟ್ಟರೆ ಉಳಿದವುಗಳು ಕ್ಯಾಥೊಲಿಕ್‌ ಸಮುದಾಯದ ಮನೆಗಳು.

ಇಲ್ಲಿನ ವಿಶೇಷತೆ ಏನೆಂದರೆ ಹಿರಿಯರ ಕಾಲದಿಂದಲೂ ಇವರ ಮಧ್ಯೆ ಬೆಸೆದು ಬಂದಿರುವ ಪರಸ್ಪರ ಸಹೋದರ ಭಾವ, ಸುಮಧುರ ಬಾಂಧವ್ಯಕ್ಕೆ ಇವರು ಅನುಸರಿಸುತ್ತಾ ಬಂದಿರುವ ಧರ್ಮ, ಆಚರಣೆಗಳು ಯಾವತ್ತೂ ಅಡ್ಡ ಗೋಡೆಗಳಾಗಿ ನಿಂತಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ “ವಸುಧೈವ ಕುಟುಂಬಕಂ’ ಎಂಬರ್ಥದಲ್ಲಿ ನಿಷ್ಕಲ್ಮಶವಾದ ಮನಸ್ಸುಗಳೊಂದಿಗೆ ಶಾಂತಿ-ಸಾಮರಸ್ಯದ ಬದುಕನ್ನು ನಡೆಸುತ್ತಾ ಬಂದಿರುವಂತಹ ಒಂದು ಮಾದರಿ ಗ್ರಾಮವದು.

ಗಂಡಸರು ವಾರದ ಕೊನೆಯ ದಿನ ರವಿವಾರಗಳಲ್ಲಿ ಗ್ರಾಮದ ಸುತ್ತ ಮುತ್ತಲು ನಡೆಯುವ ಭಂಡಿ ಉತ್ಸವ, ಚೆಂಡು ಉತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ನಡೆಯುವ ಕೋಳಿ ಅಂಕದಲ್ಲಿ ತಾವು ಮನೆಯಲ್ಲಿ ಸಾಕಿದ ಅಂಕದ ಕೋಳಿಗಳೊಂದಿಗೆ ಸಂಭ್ರಮದಿಂದ ಭಾಗವಹಿಸುತ್ತಾರೆ. ಕೋಳಿ ಅಂಕದಲ್ಲಿ ಗೆದ್ದವರು ಎದುರಾಳಿಗಳ ಸೋತ ಕೋಳಿಗಳು ಮತ್ತು ಗಳಿಸಿದ ಹಣದೊಂದಿಗೆ ಬಿಂಕದಿಂದ ಬೀಗುತ್ತಾ ಮನೆಗೆ ಬಂದರೆ, ಸೋತವರು ಕೋಳಿ ಮತ್ತು ಹಣ ಎರಡನ್ನೂ ಕಳಕೊಂಡು ಸಪ್ಪೆ ಮುಖದೊಂದಿಗೆ ತಮ್ಮ ಮನೆ ಸೇರುತ್ತಾರೆ. ಆ ದಿನ ಮನೆಗಳಲ್ಲಿ ಮಹಿಳೆಯರು ಊಟಕ್ಕಾಗಿ ನಾಟಿ ಕೋಳಿಯ ಸಾರು ಮತ್ತು ತೋಟೆ ಸಿಡಿಸಿ ಹಿಡಿದು ತಂದ ದೊಡ್ಡ ಮೀನುಗಳಿಂದ ತಯಾರಿಸಿದ ಖಾದ್ಯ ಪದಾರ್ಥಗಳನ್ನು ಮನೆ ಮಂದಿಗೆಲ್ಲ ಉಣಬಡಿಸುತ್ತಾರೆ.

ಈ ನದಿಯ ಮಧ್ಯಭಾಗದಲ್ಲೊಂದು ಪುಟ್ಟ ದ್ವೀಪ. ಸ್ಥಳೀಯ ಭಾಷೆಯಲ್ಲಿ ಇದು “ಕುದುರು ಅಥವಾ ಕುದ್ರು’. ಕೆಲವೇ ಕೆಲವು ಬೆರೆಳೆಣಿಕೆಯಷ್ಟು ಕ್ರಿಶ್ಚಿಯನ್‌ ಕುಟುಂಬಗಳು ಇಲ್ಲಿನ ಮೂಲ ನಿವಾಸಿಗಳು. ತರಕಾರಿ ಬೆಳೆಸುವುದು, ಸಣ್ಣ ಮಟ್ಟದ ಬೇಸಾಯ, ಹಂದಿ ಸಾಕಣೆ, ತೆಂಗಿನ ಕಂಗಿನ ತೋಟ, ಇವರ ಆದಾಯದ ಮೂಲ.

ಈ ಪುಟ್ಟ ದ್ವೀಪದಲ್ಲಿ ಫೆಡ್ರಿಕ್‌ ಡಿ’ಸೋಜಾ ಅವರದು ಹೆಂಡತಿ ಮತ್ತು ಎರಡು ಹೆಣ್ಣು ಮಕ್ಕಳನ್ನೊಳಗೊಂಡ ಒಂದು ಪುಟ್ಟದಾದ ಚೊಕ್ಕ ಸಂಸಾರ. ಜೀವನ ನಿರ್ವಹಣೆಗಾಗಿ ಸಣ್ಣ ಮಟ್ಟಿನ ಬೇಸಾಯ ಮತ್ತು ಹಂದಿ ಸಾಕಾಣಿಕೆ ಮಾಡಿ ಕೊಂಡಿದ್ದವರು. ಹೆಂಡತಿ ಮೇರಿ ಮನೆವಾರ್ತೆ ಜತೆಯಲ್ಲಿ ಗಂಡನಿಗೆ ದಿನ ನಿತ್ಯದ ಕೆಲಸಗಳಲ್ಲಿ ನೆರವಾಗುತ್ತಿದ್ದವರು. ಅವರ ದೊಡ್ಡ ಮಗಳು ಪ್ಲೇವಿಯ ಡಿ’ಸೋಜಾ ನಗರದ ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಆಕೆಯ ತಂಗಿ ಫಿಲೋಮಿನ ಅದೇ ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿದ್ದಳು. ತನ್ನ ಇಬ್ಬರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಟ್ಟು ಅವರನ್ನು ಸರಕಾರಿ ನೌಕರಿಗೆ ಸೇರಿಸ ಬೇಕೆಂಬುವುದು ಫೆಡ್ರಿಕ್‌ ಡಿ’ಸೋಜಾರವರ ಜೀವನದ ಕನಸಾಗಿತ್ತು.

ಆಕಾಶಕ್ಕೆ ಮುಖ ಮಾಡಿದ ಸುರುಳಿಯಾಕಾರದ ಘಾಟಿ ಮೀಸೆಯ ಫೆಡ್ರಿಕ್‌ ಡಿ’ಸೋಜಾ ಪರಿಸರದಲ್ಲಿ ಎಲ್ಲರಿಂದಲೂ “ಫೆಡ್ಡಿ’ ಎಂದು ಕರೆಸಲ್ಪಡುತ್ತಿದ್ದರೆ, ಕಿರಿಯರೆಲ್ಲರಿಗೂ ಅಕ್ಕರೆಯ :”ಫೆಡ್ಡಿ ಮಾಮು’. ಗ್ರಾಮ ಸೇವಾ ಸಮಿತಿಯ ವತಿಯಿಂದ ಪ್ರತೀ ವರ್ಷ ನಡೆಯುತ್ತಿದ್ದ ಚೌತಿಯ ಗಣೇಶೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರಂತೆ ಕ್ರಿಯಾಶೀಲರಾಗಿ ದುಡಿದವರು.

ಬೆಳಗ್ಗೆ ಮೂಡಣ ದಿಗಂತದಲ್ಲಿ ಉದಯಿಸಿ ಜಗವ ಬೆಳಗಿಸಿದ ಸೂರ್ಯ ಸಂಜೆಯಾಗುತ್ತಲೇ ಪಡುವಣ ಸಮುದ್ರದಲ್ಲಿ ಅಸ್ತಂಗತನಾಗಿ ಅದಾಗಲೇ ಮಾಯವಾಗಿದ್ದ. ಹೊಟ್ಟೆಪಾಡಿಗಾಗಿ ಕಳ್ಳಭಟ್ಟಿ ಸಾರಾಯಿ ಮಾರಿ ಬದುಕು ಕಟ್ಟಿ ಕೊಂಡಿದ್ದ ನೀಲಮಕ್ಕ ತನ್ನ ಗಂಡ ಕುದುರಿನಿಂದ ತಂದ ಕಳ್ಳಭಟ್ಟಿ ಸಾರಾಯಿಯನ್ನು ಚಿಮಿಣಿಯ ಮಂದ ಬೆಳಕಿನಲ್ಲಿ ಕುಪ್ಪಿಯಿಂದ ಸುರಿಸಿ ಕೊಡಲು ಆರಂಭಿಸಿದ ತತ್‌ಕ್ಷಣವೇ ಹಂಚಿನ ಕಾರ್ಖಾನೆಯಲ್ಲಿ ದಿನವಿಡೀ ಕೂಲಿ-ನಾಲಿ ಮಾಡಿ ದುಡಿಯುವ ದಣಿದ ಜೀವಗಳು ಮನದ ಚಿಂತೆ, ದೇಹದ ಬಳಲಿಕೆಯನ್ನು ಕಂಟ್ರಿಯ ನಶೆಯಲ್ಲಿ ಮರೆಯಲು ಸಾಲು ಸಾಲಾಗಿ ಬಂದು ಆಕೆಯ ಮನೆಯಂಗಳದಲ್ಲಿ ಸೇರುತ್ತಿದ್ದರು.

ನೀಲಮಕ್ಕ ಸುರಿಸಿ ಕೊಟ್ಟ ಸಾರಾಯಿಯ ಗ್ಲಾಸನ್ನು ಹಲ್ಲಿನಲ್ಲಿ ಕಚ್ಚಿ, ಕಣ್ಣು ಮುಚ್ಚಿ ಗಂಟಲೊಳಗೆ ಇಳಿಸಿ ಚಕ್ಕುಲಿಯನ್ನು ಜಗಿಯುತ್ತಾ, ಉಪ್ಪಿನ ಕಾಯಿಯ ರುಚಿಯನ್ನು ಚಪ್ಪರಿಸುತ್ತಾ, ನಶೆಯನ್ನು ತಲೆಗೇರಿಸಿ ಒಂದು ರೀತಿಯ ಖುಷಿಯಲ್ಲಿ ತೇಲಾಡುತ್ತಾ ತಮ್ಮ ತಮ್ಮ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು.

ಊರಿನ ಅಬಕಾರಿ ಕಂಟ್ರಾಕ್ಟರ್‌ ಅಪ್ಪಣ್ಣ ಚೆಟ್ಟಿಯಾರ್‌ನ ಅಳಿಯ ಗಜಪತಿಯ ಪಟಲಾಂ ಮತ್ತು ಖಾಕಿ ತೊಟ್ಟ ಅಬಕಾರಿ ಪೊಲೀಸರ ತಂಡ ಒಂದು ಕೈಯಲ್ಲಿ ದೊಡ್ಡ ಟಾರ್ಚ್‌ ಲೈಟ್‌ ಮತ್ತೊಂದು ಕೈಯಲ್ಲಿ ಲಾಠಿ, ಕೆಲವರು ಉದ್ದನೆಯ ಕಬ್ಬಿಣದ ಸಲಾಕೆಗಳನ್ನು ಹಿಡಿದು ದಂಡಯಾತ್ರೆಗೆ ಹೊರಟವರಂತೆ ಸಾಲಾಗಿ ಬಂದು ಕಂಟ್ರಿ ಹಿಡಿಯುವ ಕಾರ್ಯಾಚರಣೆ ಸಲುವಾಗಿ ನೀಲಮಕ್ಕನ ಮನೆಯಂಗಳಕ್ಕೆ ಅದಾಗಲೇ ಹೆಜ್ಜೆಗಳನ್ನು ಇರಿಸಿದ್ದರು.

ಅಲ್ಲೇನೂ ಸಿಗದೇ ಬರಿಗೈಯಲ್ಲಿ ವಾಪಸಾದ ತಂಡ ಮುಂದಿನ ಬೇಟೆಗೆ ಅಲ್ಲಿಂದ ಪಕ್ಕದ ನದಿ ತೀರದತ್ತ ತೆರಳಿತ್ತು. ಅಷ್ಟರಲ್ಲಿ ಆಕಾಶದಲ್ಲಿ ಕವಿದಿದ್ದ ದಟ್ಟ ಮೋಡಗಳಿಂದ ಒಂದೇ ಸಮನೆ ಸುರಿದು ಬರುತ್ತಿದ್ದ ಧಾರಾಕಾರ ಮಳೆ ರಾತ್ರಿಯ ಕತ್ತಲೆಯ ಗಾಢತೆಯನ್ನು ಮತ್ತಷ್ಟು ಹೆಚ್ಚಿಸಿತು. ಸುಮಾರು 8.00 ಗಂಟೆ ಸಮಯ. ನದಿ ಬದಿಯಲ್ಲಿ ತನ್ನ ಚಿಕ್ಕ ದೋಣಿಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರುತ್ತಿದ್ದ ಶೀನಣ್ಣನಿಗೆ ಪೊಲೀಸರು ಬಂದದ್ದು ಅರಿವಿಗೆ ಬರುವಾಗ ತುಂಬಾ ತಡವಾಗಿತ್ತು.

ಟ್ಯೂಬ್‌ನಲ್ಲಿ ತುಂಬಿಸಿಟ್ಟಿದ್ದ ಸಾರಾಯಿಯನ್ನು ದೋಣಿಯಲ್ಲೇ ಬಿಟ್ಟು ಶೀನಣ್ಣ ಒಂದೇ ಸಮನೆ ಓಟಕ್ಕಿತ್ತಾಗ ರಭಸದಿಂದ ಬೀಸಿ ಬಂದ ಲಾಠಿಯೊಂದು ಶೀನಣ್ಣನ ಕಾಲುಗಳೆರಡ ಮಧ್ಯೆ ಸಿಲುಕಿ ಶೀನಣ್ಣ ಅದಾಗಲೇ ನೆಲಕ್ಕೆ ಕವಚಿ ಬಿದ್ದಿದ್ದ. ಆದರೂ ಅದೇ ವೇಗದಲ್ಲಿ ಮೇಲೆದ್ದು ಮುಖವಿಡೀ ಮೆತ್ತಿದ್ದ ಕೆಸರನ್ನು ಕೈಯಲ್ಲಿ ಒರಸುತ್ತಾ ಬದುಕಿದರೆ ಸಾಕು ಬಡ ಜೀವ ಎಂದು ಹೆದರಿಕೆಯಿಂದ ಎದ್ದು ಬಿದ್ದು ಓಡುತ್ತಾ ತನ್ನ ಪರಿಚಿತ ಜಾಗದಲ್ಲಿ ಕತ್ತಲೆಯ ಅನುಕೂಲ ಪಡೆದು ಅಲ್ಲಿಂದ ಕಣ್ಮರೆಯಾಗಿದ್ದ.

ಇತ್ತ ಇದ್ಯಾವುದರ ಪರಿವೆಯೇ ಇಲ್ಲದೆ ಪೇಟೆಗೆ ಹೋಗಿದ್ದ ತನ್ನ ಹೆಂಡತಿ ಮತ್ತು ಮಕ್ಕಳ ಬರುವಿಕೆಗಾಗಿ ದೋಣಿಯಲ್ಲಿ ಕುಳಿತು ದಾರಿ ಕಾಯುತ್ತಿದ್ದ ಫೆಡ್ರಿಕ್‌ ಬಹಿರ್ದೆಶೆಗಾಗಿ ಕೆಳಗಿಳಿದು ನಿಸರ್ಗ ಕ್ರಿಯೆ ಮುಗಿಸಿ ಎದ್ದು ನಿಲ್ಲಬೇಕೆನಿಸುವಷ್ಟರಲ್ಲಿ ಅವರನ್ನು ಸುತ್ತುವರಿದ ಮೂವರಲೊಬ್ಬ ತನ್ನ ಬೂಟು ಕಾಲಿನಿಂದ ಫೆಡ್ರಿಕ್‌ ಸೊಂಟಕ್ಕೆ ಹಿಂದಿನಿಂದ ಒದ್ದರೆ, ಚೆಟ್ಟಿಯ ಅಳಿಯ ಗಜಪತಿ ಕೊಟ್ಟ ಮತ್ತೊಂದು ಬಲವಾದ ಬೂಟಿನ ಒದೆತ ಅವರ ಮರ್ಮಾಂಗಕ್ಕೆ ಬಿದ್ದು “ಯನನು ಕೆರಿಯೆರಪ್ಪೋ ಕೆರಿಯೆರ್‌’ ಎಂದು ಬೊಬ್ಬೆ ಹಾಕುತ್ತಾ ನೋವಿನಿಂದ ವಿಲವಿಲನೆ ಒದ್ದಾಡುತ್ತಿರುವಾಗಲೇ ಅ ಮುಗ್ಧ ಜೀವದ ಪ್ರಾಣಪಕ್ಷಿ ಅಲ್ಲಿಂದ ಹಾರಿ ಹೋಗಿತ್ತು.

ಬೊಬ್ಬೆ ಕೇಳಿ ಓಡೋಡಿ ಬಂದ ಪಕ್ಕದ ದೊಂಪದ ಜನಮಂದಿ ಸತ್ತು ಬಿದ್ದ ಫೆಡ್ಡಿಯ ಮೃತದೇಹ ನೋಡಿ ಇದ್ದಕ್ಕಿದ್ದಂತೆ ಬೆಂಕಿಯ ಕುಲುಮೆಯಾಗಿದ್ದರು. ಪರಿಸ್ಥಿತಿಯ ತೀವ್ರತೆ ಮತ್ತು ಪ್ರಾಣ ಭಯದಿಂದ ಹೆದರಿ ತಮ್ಮ ಜೀಪಿನತ್ತ ಓಡುತ್ತಿದ್ದವರನ್ನು ಬೆನ್ನಟ್ಟಿ, ಕಾಲರ್‌ಪಟ್ಟಿ ಹಿಡಿದು ಜೀಪಿನಿಂದ ಕೆಳಗೆ ಇಳಿಸಿ ನೆಲಕ್ಕೆ ಉರುಳಿಸಿ ತಮ್ಮ ಸಿಟ್ಟುಇಳಿಯುವ ತನಕ ಅಟ್ಟಾಡಿಸಿ ಹೊಡೆದು, ಎಳ್ಕೊಂಡು ಬಂದು ಗ್ರಾಮದ ಪಂಚಾಯತ್‌ ಕಟ್ಟೆಯ ದಂಡೆಯ ಮೇಲೆ ಸುರಿವ ಮಳೆಯಲ್ಲಿ ಸಾಲಾಗಿ ಕುಳ್ಳಿರಿಸಿದ್ದರು. ಸುದ್ದಿ ಕಿವಿಯಿಂದ ಕಿವಿಗೆ ಹಬ್ಬಿ ಅಲ್ಲಿಗೆ ಊರಿಗೆ ಊರೇ ಸೇರಿತ್ತು.

ಫೆಡ್ರಿಕ್‌ ಡಿ’ಸೋಜಾರ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಎರಡೂ ಕಡೆಗಳಿಂದಲೂ ಪೊಲೀಸ್‌ ದೂರು ದಾಖಲಾಯಿತು. ಮೃತ ದೇಹವನ್ನು ಹೊತ್ತೂಯ್ದ ವಾಹನವನ್ನು ಮತ್ತೊಂದು ವಾಹನದಲ್ಲಿ ಹಿಂಬಾಲಿಸಿ ಹೋದ ಬಿಸಿ ರಕ್ತದ ಬಲಿತ ರಟ್ಟೆಯ ಯುವಕರ ತಂಡ ಅಪ್ಪಣ್ಣ ಚೆಟ್ಟಿಯಾರ್‌ ಕಡೆಯವರಿಂದ ಆಗ ಬಹುದಾದ ಸಂಭವನೀಯ ದಾಳಿಯನ್ನು ಎದುರಿಸಲು ತಯಾರಾಗಿಯೇ ಹೊರಟ್ಟಿತ್ತು. ಆದರೆ ಅಪ್ಪಣ್ಣ ಚೆಟ್ಟಿಯಾರ್‌ ಮಾತ್ರ ಒಂದು ಕಡೆ ರಾಜಿ ಸಂಧಾನಕ್ಕೆ ತನ್ನವರನ್ನು ಆಸ್ಪತ್ರೆಗೆ ಕಳುಹಿಸಿ ಫೆಡ್ರಿಕ್‌ ಡಿ’ಸೋಜಾರ ಮಗಳಿಗೆ ಕೆಲಸ, ಇಬ್ಬರು ಮಕ್ಕಳ ಮದುವೆ ಮತ್ತು ಕುಟುಂಬದ ಜೀವನ ನಿರ್ವಹಣೆಗೆ ಒಂದು ದೊಡ್ಡ ಮೊತ್ತದ ಹಣವನ್ನು ಕೊಡುವ ಭರವಸೆ ಮೂಲಕ ಬಿಗುವಿನ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರೆ ಮತ್ತೊಂದು ಕಡೆ ತನ್ನ ರಾಜಕೀಯ ಮತ್ತು ಹಣದ ಪ್ರಭಾವದಿಂದ ರಾಜ್ಯ ಮೀಸಲು ಪೊಲೀಸ್‌ ಪಡೆಯನ್ನು ಬಳಸಿ ಗ್ರಾಮದ ಪ್ರತೀ ಮನೆಯನ್ನು ಬಲವಂತವಾಗಿ ಹೊಕ್ಕು ಮನೆಯವರೆಲ್ಲರನ್ನೂ ಥಳಿಸುವ ಒಂದು ದೊಡ್ಡದಾದ ಯೋಜನೆಯನ್ನೂ ಹಾಕಿದ್ದನು. ಇದನ್ನು ಕಾರ್ಯ ರೂಪಕ್ಕೆ ತರಲು ರಾಜ್ಯ ಮೀಸಲು ಪೊಲೀಸ್‌ ಪಡೆಯ ಒಂದು ತುಕಡಿ ಅಲ್ಲಿ ಅದಾಗಲೇ ತಯಾರಾಗಿ ನಿಂತಿತ್ತು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಪತ್ಭಾಂಧವನಂತೆ ಎಂಟ್ರಿ ಕೊಟ್ಟು ನಡೆಯ ಬಹುದಾಗಿದ್ದ ಮತ್ತೊಂದು ಸಂಭವನೀಯ ದೊಡ್ಡ ಎಡವಟ್ಟನ್ನು ತಪ್ಪಿಸಿ ಇಡಿಯ ಘಟನೆಗೆ ಒಂದು ನಿರ್ಣಾಯಕ ತಿರುವು ಕೊಟ್ಟು, ಗ್ರಾಮಸ್ಥರನ್ನು ಲಾಠಿಯ ಪೆಟ್ಟು ಮತ್ತು ಬೂಟಿನ ಒದೆತದಿಂದ ರಕ್ಷಿಸಿದ ಓರ್ವ ವ್ಯಕ್ತಿ ಅಲ್ಲಿನ ರಾಜಕೀಯ ನೇತಾರ ಹಾಗೂ ಖ್ಯಾತ ವಕೀಲ. ಆ ವ್ಯಕ್ತಿಯ ಫೋನ್‌ ಕರೆಯ ಒಂದು ಸಿಂಹ ಘರ್ಜನೆಗೆ ರಾಜ್ಯ ರಿಸರ್ವ್‌ ಪೊಲೀಸ್‌ ಪಡೆಯ ಜೀಪ್‌, ವ್ಯಾನ್‌ ಗಳ ಚಕ್ರಗಳು ಮುಂದೆ ಚಲಿಸಲಾಗದೆ ಅರ್ಥಾತ್‌ ಅಲ್ಲೇ ಸ್ತಬ್ಧವಾಗಿದ್ದವು.

ಅಂತಹ ಕಠಿನ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ತೋರಿಸಿದ ಸಾಮರ್ಥ್ಯ ಮತ್ತು ರಾಜಕೀಯ ಪ್ರಭಾವ ಅಪಾರ ಜನಾಧರಣೆಗೆ ಪಾತ್ರವಾಗಿತ್ತು. ಇಡಿಯ ಗ್ರಾಮಕ್ಕೆ ಆವರಿಸಿದ್ದ ಸೂತಕದ ಛಾಯೆ ದಿನ ಕಳೆದಂತೆ ತಿಳಿಯಾಗುತ್ತಾ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಸಂಧಾನದ ರಾಜಿ ಸೂತ್ರದಂತೆ ಫೆಡ್ರಿಕ್‌ ಡಿ’ಸೋಜಾ ಅವರ ಹೆಣ್ಮಕ್ಕಳಿಗೆ ನೀಡ ಬೇಕಾಗಿದ್ದ ಉದ್ಯೋಗ ಮತ್ತು ದೊಡ್ಡ ಮೊತ್ತದ ಹಣದ ಭರವಸೆ ಎಷ್ಟು ದಿನ ಕಳೆದರೂ ಕಾರ್ಯರೂಪಕ್ಕೆ ಬಾರದೆ ಪೊಳ್ಳು ಭರಸೆಯಾಗಿಯೇ ಉಳಿಯಿತು. ಇತ್ತ ಸಂಸಾರಕ್ಕೆ ಆಧಾರ ಸ್ತಂಭವಾಗಿದ್ದ ಓರ್ವ ಸಜ್ಜನ ಅಮಾಯಕ ವ್ಯಕ್ತಿ ಫೆಡ್ರಿಕ್‌ ಡಿ’ಸೋಜಾರ ಕೊಲೆ ಮಾತ್ರ ಅವರ ಸಂಸಾರದ ಬದುಕನ್ನು ಕಿತ್ತುಕೊಂಡು ಇಡಿಯ ಸಂಸಾರ ಕಣ್ಣೀರಿನೊಂದಿಗೆ ಕತ್ತಲೆಯಲ್ಲಿ ಪರದಾಡುವಂತೆ ಮಾಡಿತು. ಆ ಹೆಣ್ಣು ಮಕ್ಕಳ ಭವಿಷ್ಯದ ಕನಸು ನುಚ್ಚುನೂರಾಗಿ ಕಮರಿ ಹೋಯಿತು ಹಣ ಬಲದ ಎದುರು ಸತ್ಯದ ಬಲ ಶಕ್ತಿಹೀನವಾಗಿ ಸೋತು ಹೋಯಿತು. ಅಲ್ಲಿ ಕುರುಡು ಕಾಂಚಾಣ ಕುಣಿಯುತ್ತಾ ಅಟ್ಟಹಾಸದೊಂದಿಗೆ ಗಹಗಹಿಸಿ ನಗುತ್ತಿತ್ತು.

ಹೆಣ್ಣು ಮಕ್ಕಳಿಬ್ಬರು ತಾಯಿ ಮೇರಿಯನ್ನು ಸಮಾಧಾನ ಪಡಿಸುತ್ತಾ ಸಂತೈಸುತ್ತಿದ್ದರು. ಶಾಲಾ ದಿನಗಳಲ್ಲಿ ಕಿವಿಗೆ ದೊಡ್ಡ ರಿಂಗ್‌ ಧರಿಸಿ ಬರುತ್ತಿದ್ದ ವಂದನೀಯ ಗುರುಗಳಾದ ಸಿಸ್ಟರ್‌ ಫ್ಲೋರಿನ್‌ ದಿನಾ ಬೆಳಗ್ಗೆ ವಿದ್ಯಾರ್ಥಿಗಳಿಂದ ವಾಚಿಸುತ್ತಿದ್ದ “ಪರಲೋಕದಲ್ಲಿರುವ ಓ ನಮ್ಮ ತಂದೆಯೇ ನಿಮ್ಮ ನಾಮವು ಸ್ತೋತ್ರವಾಗಲಿ, ನಿಮ್ಮ ರಾಜ್ಯವು ಬರಲಿ. ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ, ನಮ್ಮ ಅನುದಿನದ ಆಹಾರವನ್ನು ನಮಗೆ ದಯ ಪಾಲಿಸಿ, ನಮಗೆ ತಪ್ಪು ಮಾಡಿದವರನ್ನೂ ನಾವು ಕ್ಷಮಿಸುವ ಪ್ರಕಾರ ನಮ್ಮ ತಪ್ಪುಗಳನ್ನು ಕ್ಷಮಿಸಿ, ನಮ್ಮನ್ನು ಶೋಧನೆಗೆ ಒಳಪಡಿಸದೆ ಕರುಣೆಯಿಂದ ನಮ್ಮನ್ನು ರಕ್ಷಿಸಿ, ನಮ್ಮನ್ನು ರಕ್ಷಿಸಿರಿ, ತಂದೆ’ ಎಂಬ ಪ್ರಾರ್ಥನೆಯ ಆ ಸಾಲುಗಳು ಅವರಿಬ್ಬರ ಕಿವಿಗಳಲ್ಲೂ ಪ್ರತಿಧ್ವನಿಸುತ್ತಿದ್ದಂತೆ ಗೋಡೆಯ ಮೇಲೆ ಫೋಟೋದಲ್ಲಿದ್ದ ಏಸು ಪ್ರಭುವು “ಭಯ ಪಡದಿರಿ ಮಕ್ಕಳೇ ನಾನಿಲ್ಲವೇ..? ನಾ ನಿಮ್ಮನ್ನು ಸದಾ ಸಲಹುವೆ’ ಎಂದು ಆಲಿಂಗಿಸಿ ಸಾಂತ್ವಾನ ಹೇಳುತ್ತಿದ್ದಂತೆ ಭಾಸವಾಗುತ್ತಿತ್ತು.

ರಾತ್ರಿಯ ಪ್ರಾರ್ಥನೆಯ ಆ ಹಾಡುಗಳು ಅವರ ಮನಸ್ಸನ್ನು ಗಟ್ಟಿಗೊಳಿಸುತ್ತಾ ಭರವಸೆಯ ನಾಳೆಗಳಿಗೆ ಆತ್ಮ ಸ್ಥೈರ್ಯ ತುಂಬುತ್ತಿತ್ತು. ಹೊರಗೆ ಮನೆಯ ಅಂಗಳದಲ್ಲಿ ನಾಯಿಗಳು ಅಮಾವಾಸ್ಯೆಯ ಕಗ್ಗತ್ತಲ ರಾತ್ರಿಯ ನೀರವ ಮೌನದಲ್ಲಿ ತಮ್ಮ ಒಡೆಯನ ಅಗಲುವಿಕೆಗೆ ದುಃಖಿಸುತ್ತಾ ಚರಮಗೀತೆ ನುಡಿಸುತ್ತಿರುವಂತೆ. ಚಿತ್ರ-ವಿಚಿತ್ರ ಸ್ವರಗಳಲ್ಲಿ ವಿಕಾರವಾಗಿ ಊಳಿಡುತ್ತಿದ್ದವು.

*ಸುರೇಶ್‌ ಬೋಳೂರು, ದುಬಾೖ

ಟಾಪ್ ನ್ಯೂಸ್

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಬಹ್ರೈನ್‌: ಮದಿಮೆದ ಇಲ್ಲಡ್‌…ತುಳು ನಾಟಕಕ್ಕೆ ಮುಹೂರ್ತ

ಬಹ್ರೈನ್‌: ಮದಿಮೆದ ಇಲ್ಲಡ್‌…ತುಳು ನಾಟಕಕ್ಕೆ ಮುಹೂರ್ತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

1-reee

Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.