22 ವಾಡ್‌ಗಳಲಿ 1 ಸಾವಿರಕ್ಕಿಂತ ಕಡಿಮೆ ಪ್ರಕರಣ
Team Udayavani, Aug 22, 2020, 6:40 PM IST
ಮುಂಬಯಿ, ಆ. 21: ನಗರದ 24 ವಾರ್ಡ್ ಗಳ ಪೈಕಿ 22ರಲ್ಲಿ 1 ಸಾವಿರಕ್ಕಿಂತ ಕಡಿಮೆ ಸಕ್ರೀಯ ಕೋವಿಡ್ ಪ್ರಕರಣಗಳಿವೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಆರ್ ಸೆಂಟ್ರಲ್ ವಾರ್ಡ್‌ನಲ್ಲಿ 1,158, ಆರ್-ಸೌತ್ ವಾರ್ಡ್‌ನಲ್ಲಿ 1,006 ಸಕ್ರಿಯ ಪ್ರಕರಣಗಳಿವೆ.
ಅಂಧೇರಿ ಪೂರ್ವಕ್ಕೆ ಅನುಗುಣವಾಗಿ ಕೆ ಈಸ್ಟ್ ವಾರ್ಡ್‌ನಲ್ಲಿ 940 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಚೇತರಿಕೆ ಪ್ರಮಾಣವು ಶೇ. 82.81ರಷ್ಟಿದೆ. ಭೆಂಡಿ ಬಜಾರ್, ಮೊಹಮ್ಮದ್ ಅಲಿ ರಸ್ತೆ, ಡೊಂಗ್ರಿ, ಮತ್ತು ಪೈಧೋನಿ ಪ್ರದೇಶಗಳನ್ನೊಳಗೊಂಡ ಬಿ ವಾರ್ಡ್‌ನಲ್ಲಿ 213ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದಿದೆ.
ಬಿಎಂಸಿಯ ಉಪ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ದಕ್ಷ ಷಾ ಅವರು ಮಾತನಾಡಿ, ಉತ್ತರದ ಎರಡು ವಾರ್ಡ್ ಗಳು ಹೆಚ್ಚಿನ ಸಂಖ್ಯೆಯ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಏಕೆಂದರೆ ತುಲನಾತ್ಮಕವಾಗಿ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳು ಉತ್ತರ ಮುಂಬಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಿವೆ. ಸಾಮಾನ್ಯ ಪ್ರವೃತ್ತಿ ಏನೆಂದರೆ, ವೈರಸ್ ದಕ್ಷಿಣ ಮುಂಬಯಿಯಿಂದ ಉತ್ತರ ಮುಂಬಯಿಗೆ ಸ್ಥಳಾಂತರಗೊಳ್ಳುತ್ತಿದೆ. ಈ ಮೊದಲು ದ್ವೀಪ ನಗರಗಳಾದ ವರ್ಕುಲಿ, ಧಾರಾವಿ ಮತ್ತು ಬೈಕುಲ್ಲಾದ ಇ ವಾರ್ಡ್ ಪ್ರದೇಶದಂತಹ ಅನೇಕ ಹಾಟ್ ಸ್ಪಾಟ್‌ಗಳು ಇದ್ದವು. ಆ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಬಿಎಂಸಿ ಈಗ ಹೆಚ್ಚಿನ ಪ್ರಕರಣಗಳನ್ನು ತೋರಿಸುತ್ತಿರುವ ವಾರ್ಡ್ ಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.