ಚಿತ್ರಮಂದಿರ, ಚಿಲ್ಲರೆ ವ್ಯಾಪಾರಕ್ಕೆ ನಿರ್ಬಂಧ ಬೇಡ
Team Udayavani, Apr 2, 2021, 10:44 AM IST
ಮುಂಬಯಿ: ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಗಮನದಲ್ಲಿಟ್ಟುಕೊಂಡು ಎರಡನೇ ಲಾಕ್‌ಡೌನ್ ಜಾರಿಗೆ ಬಂದರೆ ಚಿತ್ರಮಂದಿರ ಗಳು, ಚಿಲ್ಲರೆ ವ್ಯಾಪಾರ ಮತ್ತು ಶಾಪಿಂಗ್ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಂಎಐ) ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದೆ.
ಮತ್ತೂಮ್ಮೆ ಲಾಕ್‌ಡೌನ್ ಘೋಷಿಸಿದರೆ ಸಿನೆಮಾ ಉದ್ಯಮ ಮತ್ತು ಆಧುನಿಕ ಚಿಲ್ಲರೆ ವ್ಯಾಪಾರದ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಈ ವಿಭಾಗಗಳ ಚೇತರಿಕೆಯನ್ನು ಹಳಿ ತಪ್ಪಿಸಬಹುದು ಎಂದು ಎಂಎಐ ತಿಳಿಸಿದೆ.
2020ರ ಮಾರ್ಚ್ ಮತ್ತು ನವೆಂಬರ್ ನಡುವೆ ಎಂಟು ತಿಂಗಳವರೆಗೆ ಶೂನ್ಯ ಆದಾಯ ಮತ್ತು ಬಳಿಕ ಅಲ್ಪ ಆದಾಯದೊಂದಿಗೆ, ಸಿನೆಮಾ ಪ್ರದರ್ಶನ ಉದ್ಯಮವು ದಿವಾಳಿತನ ಎದುರಿಸುತ್ತಿದೆ. ಸಿನೆಮಾ ಪ್ರದರ್ಶನ ಕ್ಷೇತ್ರವು ಚಲನಚಿತ್ರೋದ್ಯಮದ ನಿರ್ಣಾ ಯಕ ಭಾಗವಾಗಿದ್ದು, ಲಕ್ಷಾಂತರ ಜನರಿಗೆ ನೇರವಾಗಿ ಉದ್ಯೋಗ ನೀಡುವುದಲ್ಲದೆ, ಲಕ್ಷಾಂತರ ಜನರಿಗೆ ಪರೋಕ್ಷ ಉದ್ಯೋಗಕ್ಕೆ ಕೊಡುಗೆ ನೀಡುತ್ತದೆ. ಮಹಾರಾಷ್ಟ್ರದಲ್ಲಿ ಎರಡನೇ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳಿಂದ ಈಗಾಗಲೇ ಸಾಕಷ್ಟು ಚಲನಚಿತ್ರಗಳು ಬಿಡುಗಡೆಯನ್ನು ಮುಂದೂಡಿವೆ. ಲಾಕ್‌ಡೌನ್ ಹೇರುವುದರಿಂದ ಎಲ್ಲ ಹಿಂದಿ ಚಲನಚಿತ್ರಗಳನ್ನು ಮತ್ತು ಇತರ ಭಾಷೆಗಳಲ್ಲಿರುವ ಅನೇಕ ಚಲನಚಿತ್ರಗಳನ್ನು ಮುಂದೂಡಲು ಕಾರಣವಾಗುತ್ತದೆ ಎಂದು ಎಂಎಐ ತಿಳಿಸಿದೆ.
ಎರಡನೇ ಲಾಕ್‌ಡೌನ್ ಆದರೆ ಸಿನೆಮಾ ಪ್ರದರ್ಶನ ಕ್ಷೇತ್ರಕ್ಕೆ ತೀವ್ರ ಹೊಡೆತ ಬೀಳಲಿದೆ. ಚಿತ್ರಮಂದಿರಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪ್ರೇಕ್ಷಕರ ನಿಯಂತ್ರಣದ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಚಿತ್ರಮಂದಿರಗಳು ಕೋವಿಡ್ ಪ್ರಸರಣಗೊಳಿಸುವ ಏಕ ಮೂಲವೆಂದು ಪರಿಗಣಿಸಲು ಯಾವುದೇ ಪುರಾವೆಗಳಿಲ್ಲ ಎಂದು ಎಂಎಐ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಶಾಪಿಂಗ್ ಕೇಂದ್ರಗಳು ಮತ್ತು ಮಾಲ್‌ಗಳಿಗೆ ಸಂಬಂಧಿಸಿದಂತೆ ಎರಡನೇ ಲಾಕ್‌ಡೌನ್ ಆದೇಶವನ್ನು ಹೊರಡಿಸಬಾರದು ಮತ್ತು ನಿಯಮಿತ ಕಾರ್ಯಾಚರಣೆಯ ಸಮಯದ ಪ್ರಕಾರ ಕಾರ್ಯನಿರ್ವಹಿಸಲು ಅವರಿಗೆ ಅವಕಾಶ ಮಾಡಿಕೊಡಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.