ಪುಣೆ: 3,521 ಮಂದಿಗೆ ಸೋಂಕು, 78 ಸಾವು
Team Udayavani, Sep 26, 2020, 8:11 PM IST
ಪುಣೆ, ಸೆ. 25: ಪುಣೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 3,521 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,65,204ಕ್ಕೆ ತಲುಪಿದೆ. ಕೋವಿಡ್ ಸೋಂಕಿಗೆ 78 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 6,032ಕ್ಕೆ ತಲುಪಿದೆ ಎಂದವರು ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,328 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ 3,521 ಪ್ರಕರಣಗಳ ಪೈಕಿ 1,512 ಪ್ರಕರಣಗಳು ಪುಣೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಇದರೊಂದಿಗೆ ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,37,330ಕ್ಕೆ ಏರಿದೆ. ಹೊಸ 784 ಪ್ರಕರಣಗಳೊಂದಿಗೆ ಪಿಂಪ್ರಿ-ಚಿಂಚ್‌ವಾಡ್‌ನ ಸಂಖ್ಯೆ 73,260ಕ್ಕೆ ಏರಿದೆ. ಗ್ರಾಮೀಣ ಮತ್ತು ಪುಣೆ ಕಂಟೈನ್‌ಮೆಂಟ್ ಬೋರ್ಡ್ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 54,614ಕ್ಕೆ ಏರಿದೆ ಎಂದವರು ತಿಳಿಸಿದ್ದಾರೆ.
ಥಾಣೆ: 1,749 ಸೋಂಕಿತರು :
ಥಾಣೆ, ಸೆ. 25: ಜಿಲ್ಲೆಯಲ್ಲಿ ಮತ್ತೆ 1,749 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಒಟ್ಟು ಸೋಂಕಿನ ಸಂಖ್ಯೆ 1,65,343ಕ್ಕೆ ಏರಿದೆ. ಗುರುವಾರ 35 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 4,269ಕ್ಕೆ ತಲುಪಿದೆ ಎಂದವರು ಹೇಳಿದ್ದಾರೆ.
ಕಲ್ಯಾಣ್-ಡೊಂಬಿವಲಿಯಿಂದ ಗರಿಷ್ಠ 481 ಹೊಸ ಪ್ರಕರಣಗಳು ದಾಖಲಾಗಿದ್ದು, ಥಾಣೆ ನಗರದಲ್ಲಿ 389 ಮತ್ತು ನವಿಮುಂಬಯಿಯಲ್ಲಿ 325 ಪ್ರಕರಣಗಳು ದಾಖಲಾಗಿವೆ ಎಂದವರು ತಿಳಿಸಿದ್ದಾರೆ.
ಸಾವುಗಳ ಪೈಕಿ 10 ಕಲ್ಯಾಣ್-ಡೊಂಬಿವಲಿ ಪರಿಸರದಿಂದ ವರದಿಯಾಗಿವೆ. ಕಲ್ಯಾಣ್ -ಡೊಂಬಿವಲಿಯಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 40,412ಕ್ಕೆ ತಲುಪಿದ್ದರೆ, ಥಾಣೆ ನಗರದಲ್ಲಿ 34,379, ನವಿಮುಂಬಯಿಯಲ್ಲಿ 34,499 ಮತ್ತು ಮೀರಾ ಭಯಾಂದರ್‌ನಲ್ಲಿ 17,309ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.