ಕೋವಿಡ್: ಆರಕ್ಷಕರ ಸಾವಿನ ಸಂಖ್ಯೆ 247ಕ್ಕೆ ಏರಿಕೆ
Team Udayavani, Oct 2, 2020, 8:21 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಅ. 1: ಮಹಾರಾಷ್ಟ್ರದಲ್ಲಿ ಇದುವರೆಗೆ ಸುಮಾರು 23,548 ಪೊಲೀಸರಿಗೆ ಕೋವಿಡ್ ಸೋಂಕು ತಗಲಿದ್ದು, ಸಾವಿನ ಸಂಖ್ಯೆ 247ಕ್ಕೆ ಏರಿದೆ ಎಂದು ಸರಕಾರದ ಮೂಲಗಳು ಗುರುವಾರ ತಿಳಿಸಿವೆ.
ದೇಶದ ಅತೀ ದೊಡ್ಡ ಪೊಲೀಸ್ ಇಲಾಖೆ ಎಂದೇ ಖ್ಯಾತಿ ಪಡೆದ ಮಹಾರಾಷ್ಟ್ರ ಖಾಕಿ ಪಡೆಯ ಶೇ. 10 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಸಾವನ್ನಪ್ಪಿದ 247 ಮಂದಿಯಲ್ಲಿ 25 ಅಧಿಕಾರಿಗಳು, ಇತರ ಮಂದಿ ಕಾನ್ಸ್ಟೆಬಲ್ಗಳೆಂದು ಸರಕಾರ ಗುರುತಿಸಿದೆ. ರಾಜ್ಯ ಪಡೆಯಲ್ಲೇ ಮುಂಬಯಿ ಪೊಲೀಸ್ಗೆ ಕೋವಿಡ್ ತೀವ್ರ ಆಘಾತ ನೀಡಿದ್ದು, ಸುಮಾರು 84 ಪೊಲೀಸರು ಸಾವನ್ನಪ್ಪಿದ್ದಾರೆ. ಇದರಲ್ಲಿ 10 ಮೇಲಧಿಕಾರಿಗಳು ಸೇರಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸೋಂಕಿತ ಪೊಲೀಸರಲ್ಲಿ 20,345 ಮಂದಿ ಚೇತರಿಸಿಕೊಂಡಿದ್ದು, 2,956 ಪೊಲೀಸರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 10,892 ಪೊಲೀಸ್ ಸಿಬಂದಿಗೆ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ತಿಳಿಸಿವೆ.
ಥಾಣೆಯಲ್ಲಿ ಸೋಂಕು ಹೆಚ್ಚಳ : ಥಾಣೆಯಲ್ಲಿ ಕೋವಿಡ್ ಮುಂದುವರಿದಿದ್ದು, ಗುರುವಾರ 1,938 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,75,012ಕ್ಕೆ ಏರಿದೆ. 32 ಹೊಸ ಪ್ರಕರಣಗಳೊಂದಿಗೆ ಒಟ್ಟು ಸಾವಿನ ಸಂಖ್ಯೆ 4,458ರ ಗಡಿ ದಾಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.