ಕೋ-ವಿದಾಯ ಕೋವಿಡ್‌ ಲಸಿಕೆ ವೆಬಿನಾರ್‌


Team Udayavani, Feb 20, 2021, 4:10 PM IST

ಕೋ-ವಿದಾಯ ಕೋವಿಡ್‌ ಲಸಿಕೆ ವೆಬಿನಾರ್‌

ನ್ಯೂಜರ್ಸಿ :  ಬೃಂದಾವನ ಕನ್ನಡ ಸಂಘದ ಆರೋಗ್ಯ ಬೃಂದಾವನದ ವತಿಯಿಂದ ಫೆ.7ರಂದು ಭಾನುವಾರ ಕೋವಿಡಾ(ದಾ)ಯ ಕೋವಿಡ್‌ ಬಗೆಗಿನ ಹೊಸ ಮಾಹಿತಿಗಳ ವಿಚಾರ ವಿನಿಮಯ ಕಾರ್ಯಕ್ರಮ ಆನ್‌ಲೈನ್‌ ಮೂಲಕ ಆಯೋಜಿಸಲಾಗಿತ್ತು.

ಕೋವಿಡ್‌ ತನ್ನ ಕಬಂಧ ಬಾಹುಗಳನ್ನು ಚಾಚಲು ಪ್ರಾರಂಭಿಸಿದ ದಿನಗಳಿಂದಲೂ ಅಂದರೆ ಕಳೆದ ಮಾರ್ಚ್‌ ತಿಂಗಳಿಂದಲೂ  ನಿರಂತರವಾಗಿ ನ್ಯೂಜೆರ್ಸಿಯ ಕನ್ನಡ ಸಮುದಾಯದ ಜತೆಗಿದ್ದು, ಸೂಕ್ತ ಸಲಹೆ, ಮಾರ್ಗದರ್ಶನ, ವೈದ್ಯಕೀಯ ಸಹಾಯಗಳನ್ನು ಕೊಟ್ಟು, ಕನ್ನಡಿಗರಲ್ಲಿ ಧೈರ್ಯ ತುಂಬುತ್ತಿರುವ ನ್ಯೂಜರ್ಸಿಯ ಎಡಿಸನ್‌ ಪ್ರದೇಶದ ಹಿರಿಯ ವೈದ್ಯ, ಪಲ್ಮೊನರಿ ಹಾಸ್ಪೈಸ್‌ ಪ್ಯಾಲಿಯೇಟಿವ್‌ ಕೇರ್‌ ಮತ್ತು ಸ್ಲಿàಪ್‌ ಮೆಡಿಸಿನ್‌ ತಜ್ಞರಾದ ಡಾ| ರಾಮ್‌ ಬೆಂಗಳೂರು ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಕೋವಿಡ್‌ ಮೇಲೆ ಜಯ ಸಾಧಿಸುವ ದಿನಗಳು ಬರುತ್ತಿವೆ. ಆ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎನ್ನುವ ಕುರಿತು ಕಾರ್ಯಕ್ರಮದಲ್ಲಿ ಡಾ| ರಾಮ್‌ ಮಾಹಿತಿ ಹಂಚಿಕೊಂಡರು.

ಪ್ರಗತಿ ತಂಡದ ಅಧ್ಯಕ್ಷೆ ಪದ್ಮಿನಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರ್ಚನಾ ಆಚಾರ್ಯ ವಿಚಾರ ವಿನಿಮಯದ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ  ಡಾ| ರಾಮ್‌ ಬೆಂಗಳೂರ್‌ ಅವರು, ಕೋವಿಡ್‌ ರಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಲ್ಲದೆ, ವ್ಯಾಕ್ಸಿನ್‌ಗಳ ರಚನೆ, ಅಭಿವೃದ್ಧಿ ಮತ್ತು ಅವು ಕೆಲಸ ಮಾಡುವ ಬಗೆಯನ್ನೂ ತಿಳಿಸಿಕೊಟ್ಟರು. ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಎಲ್ಲರ ಪ್ರಶ್ನೆಗೂ ಸೂಕ್ತ ಸಲಹೆ, ಉತ್ತರಗಳನ್ನು ನೀಡಿದರು.

ಡಾ| ರಾಮ್‌ ಅವರು ತಿಳಿಸಿದ ಮುಖ್ಯಾಂಶಗಳು : 

  • – ಕೋವಿಡ್‌ ಒಂದು ರೆಸ್ಪಿರೇಟರಿ ವೈರಸ್‌. ಈ ರೋಗದ ಲಕ್ಷಣಗಳು- ಸೋರುವ ಮೂಗು, ಜ್ವರ, ಕೆಮ್ಮು, ಮೈಕೈ ನೋವು ಮತ್ತು ಕೆಲವೊಮ್ಮೆ ಅತಿಸಾರ.
  •  ಕೋವಿಡ್‌ ವ್ಯಾಕ್ಸಿನ್‌ ಜೀವಂತ ವೈರಸ್‌ ಅಲ್ಲ. ಇದು ನಮ್ಮ ಶರೀರದ ರಕ್ಷಣಾ ವ್ಯವಸ್ಥೆ antibody ಗಳನ್ನು ಉತ್ಪಾದಿಸಲು ಪ್ರೇರೇಪಿಸುವ ಮೆಸೆಂಜರ್‌ RNA . ಇದನ್ನು Antigen  ಎಂದು ಕರೆಯುತ್ತಾರೆ.
  • ಅಮೆರಿಕ ದೇಶದಲ್ಲಿ ಈಗ ಎರಡು ವ್ಯಾಕ್ಸಿನ್‌ಗಳು ಲಭ್ಯವಿವೆ. ಫೈಜರ್‌ ಮತ್ತು ಮಡೋರ್ನಾ. ಫೈಜರ್‌ ವ್ಯಾಕ್ಸಿನ್‌ನ ಮೊದಲ ಡೋಸ್‌ ತೆಗೆದುಕೊಂಡ 21 ದಿನಗಳಿಗೆ ಎರಡನೇ ಡೋಸ್‌ ತೆಗೆದುಕೊಳ್ಳಬೇಕು. ಮಡೋರ್ನಾ ವ್ಯಾಕ್ಸಿನ್‌ನ ಮೊದಲ ಡೋಸ್‌ ತೆಗೆದುಕೊಂಡ 28 ದಿನಗಳಿಗೆ ಎರಡನೇ ಡೋಸ್‌ ಪಡೆಯಬೇಕು. ತೀರಾ ತುರ್ತುಪರಿಸ್ಥಿತಿ ಇಲ್ಲದಿದ್ದಲ್ಲಿ,  ಈ ಶೆಡ್ನೂಲ್‌ ಅನ್ನು  ಖಂಡಿತವಾಗಿ ಪಾಲಿಸಬೇಕು.
  •  ಮೊದಲ ಡೋಸ್‌ನ ಅನಂತರ ಕೋವಿಡ್‌ ವಿರುದ್ಧ ಶೇ. 50ರಷ್ಟು ರೋಗ ನಿರೋಧಕ ಶಕ್ತಿಯೂ, ಎರಡನೇ ಡೋಸ್‌ನ ಅನಂತರ ಶೇ.  90- 95ರಷ್ಟು ರೋಗ ನಿರೋಧಕ ಶಕ್ತಿಯೂ ಬರುತ್ತದೆ.
  • ಡಬ್ಲ್ಯುಎಚ್‌ಒ ಮತ್ತು ಸಿಡಿಸಿ ನಿಯಮಿತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲ ಅಮೆರಿಕ ನಿವಾಸಿಗಳಿಗೂ ಕೋವಿಡ್‌ ವ್ಯಾಕ್ಸಿನ್‌ ನೀಡಲಾಗುತ್ತದೆ. ಅವರು ಯಾವುದೇ ರೀತಿಯ ವೀಸಾದಲ್ಲಿದ್ದರೂ ಈ ವ್ಯಾಕ್ಸಿನ್‌ ಲಭ್ಯವಿದೆ ಮತ್ತು ಇದು ಎಲ್ಲರಿಗೂ ಸಂಪೂರ್ಣವಾಗಿ ಉಚಿತ. ನಿಯಮಿತ ಸಂಸ್ಥೆಗಳಲ್ಲಿ ವ್ಯಾಕ್ಸಿನ್‌ಗಾಗಿ ನೋಂದಾಯಿಸಿಕೊಳ್ಳಬೇಕು.
  • ಈ ವ್ಯಾಕ್ಸಿನ್‌ನಿಂದ ಯಾವುದೇ ಗಂಭೀರ ರೀತಿಯ ದುಷ್ಪರಿಣಾಮಗಳಿಲ್ಲ. ವ್ಯಾಕ್ಸಿನ್‌ ಕೊಟ್ಟ ಜಾಗದಲ್ಲಿ ಕೆಂಪಾಗಿದ್ದು, ನೋವು, ಸಣ್ಣಗೆ ಜ್ವರ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೀಲುನೋವು ಬರಬಹುದು. ಆದರೆ ತಂಕಕಾರಿಯಲ್ಲ.
  • ವ್ಯಾಕ್ಸಿನ್‌ ತೆಗೆದುಕೊಳ್ಳಲು ಬರಿ ಹೊಟ್ಟೆಯಲ್ಲಿ ಹೋಗುವ ಅವಶ್ಯಕತೆಯಿಲ್ಲ. ಕೊಟ್ಟ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನ್‌ ಕೇಂದ್ರಕ್ಕೆ ಹೋಗಬೇಕು. ಅಲ್ಲಿಯೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕು.
  • ವ್ಯಾಕ್ಸಿನ್‌ ತೆಗೆದುಕೊಂಡ ಅನಂತರವೂ ಆ ವ್ಯಕ್ತಿ ವೈರಸ್ಸನ್ನು ಹರಡುವ ಸಾಧ್ಯತೆ ಇದೆ. ಆದ್ದರಿಂದ ಶೇ. 70ರಷ್ಟು ಜನರಿಗೆ ವ್ಯಾಕ್ಸಿನ್‌ ಸಿಗುವವರೆಗೂ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು.
  • ವ್ಯಾಕ್ಸಿನ್‌ ತೆಗೆದುಕೊಂಡ ಅನಂತರವೂ ಕೋವಿಡ್‌ ತಗಲುವ ಸಾಧ್ಯತೆ ಇದೆ. ಆದರೆ ಅದು ತೀವ್ರ ಸ್ವರೂಪದಾಗಿರುವುದಿಲ್ಲ.
  • 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ವ್ಯಾಕ್ಸಿನ್‌ ನೀಡಲಾಗುವುದಿಲ್ಲ.
  •   ವ್ಯಾಕ್ಸಿನ್‌ ತೆಗೆದುಕೊಳ್ಳುವ ಸಮಯದಲ್ಲಿ, ಬೇರೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವನ್ನು ನಿಲ್ಲಿಸುವ ಅಗತ್ಯವಿಲ್ಲ. ಆದರೆ ಬೇರೊಂದು ವ್ಯಾಕ್ಸಿನ್‌ನ ಅಗತ್ಯವಿದ್ದರೆ ಕೋವಿಡ್‌ ವ್ಯಾಕ್ಸಿನಿಗೂ ಅದಕ್ಕೂ ಒಂದು ವಾರದ ಅಂತರವಿರಲಿ.
  • ಅಂತಾರಾಷ್ಟ್ರೀಯ  ಪ್ರಯಾಣ/ಪ್ರವಾಸ ಮಾಡುತ್ತಿದ್ದಲ್ಲಿ, ಆಯಾ ದೇಶಗಳ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು.

 

 

 

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.